For Quick Alerts
ALLOW NOTIFICATIONS  
For Daily Alerts

ಆಶಾಢ ಏಕಾದಶಿಯ ಮಹತ್ವ ಹಾಗೂ ಪೂಜಾ ಸಮಯ

|

ಭಾರತಕ್ಕೆ ಮಾನ್ಸೂನ್ ಆಗಮನವಾಗಿದೆ ಮತ್ತು ಇದು ಹಲವು ಹಬ್ಬಗಳನ್ನು ತರುತ್ತದರ ಮತ್ತು ವ್ರತಾಚರಣೆ, ಪೂಜೆ ಪುನಸ್ಕಾರಗಳು ಇಡೀ ದೇಶಾದ್ಯಂತ ನಡೆಯುವ ದಿನಗಳಾಗಿರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಜೂನ್ ಮತ್ತು ಜುಲೈ ತಿಂಗಳು ಪ್ರಮುಖವಾಗಿ ಆಷಾಢ ಮತ್ತು ಶ್ರಾವಣ ಮಾಸವಾಗಿರುತ್ತದೆ. ಹಾಗಾಗಿ ಈ ಸಮಯವು ಹಬ್ಬದ ಸಮಯವಾಗಿದೆ. ಶಿವ ಮತ್ತು ವಿಷ್ಣು ಆರಾಧಕರಿಗೆ ಈ ಸಮಯದಲ್ಲಿ ಹಬ್ಬಗಳು ಪ್ರಾರಂಭವಾಗುತ್ತದೆ.

Devshayani Ekadashi 2020: Time and Significance of Ekadashi

ದೇವಶಯನಿ ಏಕಾದಶಿಯನ್ನು ಪದ್ಮ ಏಕಾದಶಿ ಅಥವಾ ಆಶಾಢ ಏಕಾದಶಿ ಎಂದೂ ಕೂಡ ಕರೆಯಲಾಗುತ್ತದೆ.

ದೇವಶಯಾನಿ ಏಕಾದಶಿ ಎಂದರೇನು?

ದೇವಶಯಾನಿ ಏಕಾದಶಿ ಎಂದರೇನು?

ಆಶಾಢ ಮಾಸದ ಹುಣ್ಣಿಮೆಯ ತ್ರೈಮಾಸಿಕದಲ್ಲಿ ಹನ್ನೊಂದನೇ ದಿನವನ್ನು ದೇವಶಯಾನಿ ಏಕಾದಶಿ ಎಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ, ವಿಷ್ಣು ನಿದ್ರೆಗೆ ಹೋಗುತ್ತಾನೆ ಅಥವಾ ಆಳವಾದ ಧ್ಯಾನದಲ್ಲಿರುತ್ತಾನೆ ಮತ್ತು ಪ್ರಬೋಧಿನಿ ಏಕಾದಶಿಯ ನಂತರದ ನಾಲ್ಕು ತಿಂಗಳ ನಂತರ ಎಚ್ಚರಗೊಳ್ಳುತ್ತಾನೆ. ದೇವಶಯನಿ ಏಕಾದಶಿ ಹೆಚ್ಚಾಗಿ ಪ್ರತಿವರ್ಷ ಜಗನ್ನಾಥ್ ರಥಯಾತ್ರೆಯ ಸಂದರ್ಬದಲ್ಲಿ ಬರುತ್ತದೆ.

ದೇವಶಯಾನಿ ಏಕಾದಶಿ ಪೂಜಾ ಸಮಯ ಮತ್ತು ದಿನ

ದೇವಶಯಾನಿ ಏಕಾದಶಿ ಪೂಜಾ ಸಮಯ ಮತ್ತು ದಿನ

ಏಕಾದಶಿ ತಿಥಿ ಆರಂಭವಾಗುವ ಸಮಯ: ಜೂನ್ 30 ರಂದು 7:49 PM

ಏಕಾದಶಿ ತಿಥಿ ಅಂತ್ಯವಾಗುವ ಸಮಯ: ಜುಲೈ 1ಕ್ಕೆ 5:29 PM

ದೇವಶಯಾನಿ ಏಕಾದಶಿಯ ಮಹತ್ವ

ದೇವಶಯಾನಿ ಏಕಾದಶಿಯ ಮಹತ್ವ

ಹಿಂದೂ ಕ್ಯಾಲೆಂಡರ್ ನಲ್ಲಿ ನಾಲ್ಕು ತಿಂಗಳ ಪವಿತ್ರ ಅವಧಿ ಎಂದು ಇದನ್ನು ಕರೆಯಲಾಗುತ್ತದೆ. ಚಾತುರ್ಮಾಸ ಎಂದೂ ಕೂಡ ಹೇಳಲಾಗುತ್ತದೆ.ಶ್ರಾವಣ,ಭದ್ರಾ,ಅಶ್ವಿನಿ,ಕಾರ್ತೀಕ ಮಾಸ ಇದರಲ್ಲಿದೆ. (ಜುಲೈ,ಅಗಸ್ಟ್,ಸೆಪ್ಟೆಂಬರ್, ಅಕ್ಟೋಬರ್ ತಿಂಗಳು).ಎಲ್ಲಾ ಪ್ರಮುಖ ಹಿಂದೂ ಹಬ್ಬಗಳಾದ ಜನ್ಮಾಷ್ಠಮಿ, ಗಣೇಶ ಚತುರ್ಥಿ, ನವರಾತ್ರಿ, ದುರ್ಗಾ ಪೂಜಾ ಮತ್ತು ದೀಪಾವಳಿಗಳನ್ನು ಇದು ಸೂಚಿಸುತ್ತದೆ.

ದೇವಶಯಾನಿ ಏಕಾದಶಿಯಂದು ಹಲವು ಭಕ್ತರು ಉಪವಾಸ ಮಾಡುತ್ತಾರೆ ಮತ್ತು ವಿಷ್ಣು ದೇವರ ಆರಾಧನೆಯಲ್ಲಿ ತೊಡಗುತ್ತಾರೆ.

English summary

Devshayani Ekadashi 2020: Time and Significance of Ekadashi

Here we are discussing about Devshayani Ekadashi 2020: Time and Significance of Ekadashi. Devshayani Ekadashi is also known as Padma Ekadashi or Ashadhi Ekadashi. Read more.
X
Desktop Bottom Promotion