ರಾಮ ಮತ್ತು ಹನುಮಂತನ ನಡುವೆ ಇರುವ ಬಂಧನದ ಕಥೆ

Posted By: Divya pandit Pandit
Subscribe to Boldsky

ರಾಮಾಯಣ ಎಂದ ತಕ್ಷಣ ಮನಸ್ಸಿಗೆ ಮೊದಲು ಬರುವುದು ರಾಮ ಮತ್ತು ಹನುಮಂತನ ಚಿತ್ರಣ. ರಾಮನ ವನವಾಸದ ಸಂದರ್ಭದಲ್ಲಿ ಪರಿಚಯವಾದ ಹನುಮಂತ ರಾಮನ ಭಕ್ತನಾಗಿ ಹಾಗೂ ಅನುಯಾಯಿಯಾಗಿ ರಾಮಾಯಣದ ಉದ್ದಕ್ಕೂ ಕಾಣಿಸಿಕೊಳ್ಳುತ್ತಾನೆ. ರಾಮನ ಭಂಟನಾಗಿ ಸೀತೆಯ ಹುಡುಕಾಟದಲ್ಲಿ ನೆರವಾಗುತ್ತಾನೆ. ಸೀತೆಯನ್ನು ಹುಡುಕಲು ಹೋದ ಸಂದರ್ಭದಲ್ಲಿ ಬಾಲಕ್ಕೆ ಹಚ್ಚಿದ ಬೆಂಕಿಯಿಂದಲೇ ವಿಸ್ತಾರವಾದ ಲಂಕೆಯನ್ನು ಸುಡುತ್ತಾನೆ. ರಾಮನಿಗೆ ನಿಷ್ಠೆಯಿಂದ ಇರುವ ಹನುಮಂತ ರಾಮಾಯಣದ ಕಥೆಯಲ್ಲಿ ಕೆಲವು ತಮಾಷೆಯ ಸನ್ನಿವೇಶಗಳನ್ನು ಸೃಷ್ಟಿಸಿರುವುದನ್ನು ಸಹ ಮರೆಯುವಂತಿಲ್ಲ.

ಅಂದು ನಡೆದ ರಾಮಾಯಣದ ಕಥೆಯಿಂದಾಗಿ ಇಂದಿಗೂ ರಾಮ ಮತ್ತು ಹನುಮಂತ ಜನತೆಯ ಮನಸ್ಸಿನಲ್ಲಿ ದೇವತೆಗಳಾಗಿ ಉಳಿದಿದ್ದಾರೆ. ಈ ಭಾವನೆ ಹೀಗೆ ಮುಂದುವರಿಸುತ್ತದೆ ಕೂಡ. ದೈವಿಕ ಸಂಬಂಧದಲ್ಲಿ ದೇವರು ಮತ್ತು ಭಕ್ತರು ಅವಿನಾಭಾವ ಸಂಬಂಧದಲ್ಲಿ ಇರುವಂತಹ ಅನೇಕ ಕಥೆಗಳನ್ನು ಕೇಳಿದ್ದೇವೆ. ಅಂತಹ ಕಥೆಗಳಲ್ಲಿ ರಾಮ ಮತ್ತು ಹನುಮಂತನ ಕಥೆಯೂ ಒಂದು. ರಾಮ ಮತ್ತು ಹನುಮಂತನ ನಡುವಿನ ಬಂಧದ ಕಥೆಯನ್ನು ತಿಳಿಯಬೇಕೆ ಎನ್ನುವುದಾದರೆ ಮುಂದಿರುವ ಇನ್ನಷ್ಟು ವಿವರಣೆಯನ್ನು ಪರಿಶೀಲಿಸಿ.

Lord shiva

ಮೊದಲ ಭೇಟಿ

ನಮಗೆಲ್ಲಾ ತಿಳಿದಿರುವಂತೆ ವಿಷ್ಣು ಜಗತ್ ಪಾಲಕ. ಜಗತ್ತಿನಲ್ಲಿರುವ ಕೆಟ್ಟ ಶಕ್ತಿಯ ಸಂಹಾರ ಹಾಗೂ ಶಿಷ್ಟರ ರಕ್ಷಣೆಗಾಗಿ ವಿವಿಧ ಅವತಾರವನ್ನು ಎತ್ತಿ ಭೂಮಿಗೆ ಬರುತ್ತಾನೆ ಎಂದು. ಅಂತೆಯೇ ಭಗವಂತನಾದ ರಾಮನು ಸಹ ವಿಷ್ಣುವಿನ ಅವತಾರದ ಒಂದು ರೂಪ. ಒಮ್ಮೆ ವಿಷ್ಣು ರಾಮನ ರೂಪದಲ್ಲಿರುವುದನ್ನು ನೋಡಬೇಕೆನ್ನುವ ಕಾತುರ ಶಿವನಿಗಾಗುತಿತ್ತು. ಅದಕ್ಕಾಗಿಯೇ ಶಿವನು ಕೋತಿ ಆಡಿಸುವವನ ಮಾರುವೇಷದಲ್ಲಿ ಅಥವಾ ಮದಾರಿಯ ರೂಪದಲ್ಲಿ ಹೋದನು. ಆ ವೇಳೆ, ರಾಮನು ದಶರಥನ ಮಗನಾಗಿ ಜನಿಸಿದನು. ಬಳಿಕ ರಾಜಕುಮಾರನಾಗಿ ಕಿರೀಟ ಧರಿಸಿದನು.

ಬಳಿಕ ಶಿವನು ನೇರವಾಗಿ ಮಂಗನ ರೂಪದಲ್ಲಿ ಹೋಗಲು ನಿರ್ಧರಿಸಿದನು. ಅವನೇ ಹನುಮಂತ ಎನ್ನಲಾಗುವುದು. ಅಂಜಾನನ ಮಗನಾಗಿ ಶಿವನು ಹುಟ್ಟಿದನು. ಅಂಜಾನನು ತನ್ನ ಮಗನನ್ನು ಪಾಲನೆಗೆ ಸಂತೋಷದಿಂದ ನೀಡಿದನು. ಈ ಒಂದು ನಿರ್ದಿಷ್ಟ ಘಟನೆಯಿಂದ ರಾಮನು ಸಂಪೂರ್ಣವಾಗಿ ಪ್ರಭಾವಿತನಾಗಿದ್ದನು. ಅಲ್ಲದೆ ಸ್ವತಃ ಮಂಗನಿಗಾಗಿ ಬಯಸಿದನು(ಶಿವನನ್ನು ಅನುಸರಿಸಿದನು). ನಂತರದ ದಿನದಲ್ಲಿ ಶಿವನು ಹನುಮಾನ್ ರೂಪದಲ್ಲಿ ರಾಮನೊಂದಿಗೆ ಒಡನಾಡಿದನು. ರಾಮ ವಿಶ್ವಾಮಿತ್ರನ ಗುರುಕುಲಕ್ಕೆ ತೆರಳಿದಾಗ ಹನುಮಂತನು ಅಯೋಧ್ಯೆಯನ್ನು ಬಿಟ್ಟು ಕಿಶ್ಕಿಂದಾದ ವಲಿ ಮತ್ತು ಸುಗ್ರೀವ ಸೇನೆಯನ್ನು ಸೇರಿಕೊಂಡನು.

Lord Rama

ಕಿಶ್ಕಿಂಧದಲ್ಲಿ ಭೇಟಿಯಾದರು

ಸೀತೆಯ ಅಪಹರಣವಾದಾಗ ಶ್ರೀರಾಮನು ಸುಗ್ರೀವನನ್ನು ಹುಡುಕಿಕೊಂಡು ಲಕ್ಷ್ಮಣನೊಂದಿಗೆ ಕಿಶ್ಕಿಂಧಕ್ಕೆ ಹೋದನು. ಸುಗ್ರೀವನ ಪ್ರತಿನಿಧಿಗಳು ತಮ್ಮ ಪ್ರದೇಶಕ್ಕೆ ಬಂದ ಇಬ್ಬರು ಸಹೋದರರು ಬಂದಿರುವುದನ್ನು ತಿಳಿಸಿದರು. ಇವರು ಸುಗ್ರೀವನ ಪ್ರದೇಶದಲ್ಲಿ ಅಲೆಯುತ್ತಿರುವುದನ್ನು ಕಂಡು ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹನುಮಂತನು ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟನು. ತನ್ನ ಉದ್ದೇಶವನ್ನು ಸಾಧಿಸಲು ಹನುಮಂತನು ಒಬ್ಬ ಸಂತನ ರೂಪವನ್ನು ತಾಳಿದನು. ಹಾಗೂ ಸಹೋದರರಲ್ಲಿ ಅವರ ಬಗ್ಗೆ ಹೇಳಬೇಳಬೇಕೆಂದು ಹೇಳಿದನು. ನಿಜವನ್ನು ತಿಳಿದ ನಂತರ ಹನುಮಂತನು ರಾಮನ ಪಾದಕ್ಕೆ ಎರಗಿದನು. ಕ್ಷಮೆಯಾಚಿಸಿ, ರಾಮನನ್ನು ಸುಗ್ರೀವನ ರಾಜ್ಯಕ್ಕೆ ಕರೆದೊಯ್ದನು.

ಭಕ್ತಿಯ ಆಳ

ಭಗವಾನ್ ಶ್ರೀರಾಮನು ತನ್ನ 14 ವರ್ಷದ ವನವಾಸವನ್ನು ಪೂರ್ಣಗೊಳಿಸಿದ ನಂತರ ಅಯೋಧ್ಯೆಗೆ ಮರುಳಿದನು. ನಂತರ ಅಯೋಧ್ಯೆಯ ರಾಜನಾಗಿ ಉಳಿದನು. ಈ ಸುದ್ದಿಯಿಂದ ಇಡೀ ಅಯೋಧ್ಯೆಯ ಜನರು ಸಂತೋಷದಿಂದ ಉತ್ಸುಕರಾಗಿದ್ದರು. ಜೊತೆಗೆ ಇಡೀ ನಗರದ ಜನರು ಸಂತೋಷದಿಂದ ಪುಳಕಿತರಾಗಿದ್ದರು. ಇದೇ ಸಂತೋಷದಿಂದ ಆಭರಣ ಹಾಗೂ ಉಡುಗೊರೆಯನ್ನು ನೀಡಿದರು. ಸೀತಾ ದೇವಿಯು ಹನುಮಂತನಿಗೆ ಅಮೂಲ್ಯವಾದ ವಜ್ರಗಳಿಂದ ಮಾಡಿದ ಹಾರವನ್ನು ನೀಡಿದಳು. 

ಅನಿರೀಕ್ಷಿತ ಎನ್ನುವಂತೆ, ಹನುಮಂತನು ಸೀತಾ ದೇವಿ ಕೊಟ್ಟ ವಜ್ರದ ಹಾರವನ್ನು ಪರೀಕ್ಷಿಸಿದನು. ಬಳಿಕ ಅದನ್ನು ಹಾಳುಮಾಡಿದನು. ಇದು ಜನರಲ್ಲಿ ಆಶ್ಚರ್ಯವನ್ನು ಕೆರಳಿಸಿತು. ವಜ್ರದ ಹಾರದಲ್ಲಿ ಯಾವ ಹರಳು ಸಹ ರಾಮನ ಚಿತ್ರವನ್ನು ಹೊಂದಿರಲಿಲ್ಲ ಎನ್ನುವ ಉದ್ದೇಶವಾಗಿತ್ತು. ಈ ವರ್ತನೆಯನ್ನು ಪ್ರಶ್ನಿಸಿದ ಜನರಿಗೆ ಹನುಮಂತನು "ರಾಮ ತನ್ನ ಎದೆಯಲ್ಲಿ ಇದ್ದಾನೆ" ಎಂದನು. ಅದಕ್ಕೆ ಸಾಕ್ಷಿಯಾಗಿ ತನ್ನ ಎದೆಯನ್ನು ಬಗೆದು ತೋರಿಸಿದನು. ಆಗ ಅವನ ಎದೆಯಲ್ಲಿ ರಾಮ ಮತ್ತು ಸೀತಾ ದೇವಿಯ ಪ್ರತಿರೂಪವನ್ನು ಜನರು ಕಂಡರು. ಆಗ ಹನುಮಂತನಿಗೆ ರಾಮನಲ್ಲಿರುವ ಅತೀವ ಭಕ್ತಿ ಏನು ಎನ್ನುವುದು ಎಲ್ಲರಿಗೂ ಅರಿವಾಯಿತು.

Hanuman

ಸಿಂಧೂರದ ಕಥೆ

ಒಂದು ದಿನ ಸೀತಾ ದೇವಿ ತನ್ನ ಹಣೆಗೆ ಕೆಂಪು ಸಿಂಧೂರವನ್ನು ಇಟ್ಟುಕೊಳ್ಳುತ್ತಿರುವುದನ್ನು ಹನುಮಂತನು ನೋಡುತ್ತಿದ್ದನು. ಇದು ಹನುಮಂತನಿಗೆ ಒಂದು ಅಸಹಜ ಸಂಗತಿ ಎಂದು ಅನಿಸುತ್ತಿತ್ತು. ಈ ಸಿಂಧೂರವನ್ನು ಏಕೆ ಹಚ್ಚಿಕೊಳ್ಳುವುದು ಎನ್ನುವುದನ್ನು ತಿಳಿದಿರಲಿಲ್ಲ. ಈ ವಿಚಾರವಾಗಿ ಹನುಮಂತನು ಸೀತೆಗೆ ಪ್ರಶ್ನಿಸಿದನು. ಆಗ ಸೀತೆಯು ಇದು ತನ್ನ ಯಜಮಾನನಾದ ಶ್ರೀರಾಮನ ಸುದೀರ್ಘವಾದ ಜೀವನ ಮತ್ತು ಅಭ್ಯುದಯಕ್ಕಾಗಿ ಇಟ್ಟುಕೊಳ್ಳುತ್ತಿದ್ದೇನೆ ಎಂದಳು. ಇದನ್ನು ಕೇಳಿದ ತಕ್ಷಣ ಹನುಮಂತ ಅಲ್ಲಿಂದ ಪಾರಾದನು. ಬಳಿಕ ಹನುಮಂತ ತನ್ನ ಇಡೀ ದೇಹಕ್ಕೂ ಕೆಂಪು ಸಿಂಧೂರವನ್ನು ಹಚ್ಚಿಕೊಂಡನು. ಇದನ್ನು ಕಂಡ ಶ್ರೀರಾಮನು ಸಂಪೂರ್ಣವಾಗಿ ಪ್ರಭಾವಿತನಾದನು. ಅಲ್ಲದೆ ಭವಿಷ್ಯದಲ್ಲಿ ಜನರು ನಿನ್ನನ್ನು ಇದೇ ಅವರತಾರದಲ್ಲಿ ಪೂಜಿಸಲಿ ಎಂದು ಹರಸಿದನು. ಈ ಹಿನ್ನೆಲೆಯಿಂದಲೇ ಜನರು ಇಂದಿಗೂ ಹನುಮಂತನನ್ನು ಕೆಂಪು ಬಣ್ಣದಲ್ಲಿಯೇ ತೋರಿಸುತ್ತಾರೆ ಮತ್ತು ಪೂಜಿಸುತ್ತಾರೆ.

hanuman

ಮರಣ ದಂಡನೆ

ಅಯೋಧ್ಯೆಯ ರಾಜನಾಗಿ ಶ್ರೀರಾಮನು ಇರುವಾಗ ಒಮ್ಮೆ ನ್ಯಾಯಾಲಯದ ಸಭೆಯನ್ನು ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಹನುಮಂತನು ವಿಶ್ವಾಮಿತ್ರರನ್ನು ಹೊರತು ಪಡಿಸಿ ಉಳಿದ ಋಷಿಮುನಿಗಳನ್ನು ಆಹ್ವಾನಿಸಿದ್ದನು. ಈ ವಿಚಾರವನ್ನು ನಾರದ ಮುನಿಗಳು ಹನುಮಂತನಿಗೆ ಮನವರಿಕೆ ಮಾಡಿದರು. ಹಾಗೆಯೇ ವಿಶ್ವಾಮಿತ್ರರನ್ನು ಪ್ರೇರೇಪಿಸಿದನು. ಈ ವಿಚಾರವಾಗಿ ಕೋಪಗೊಂಡ ವಿಶ್ವಾಮಿತ್ರರು ಶ್ರೀರಾಮನಿಗೆ ಹನುಮಂತನಿಗೆ ಮರಣದಂಡನೆಯನ್ನು ವಿಧಿಸಬೇಕು ಎಂದು ಆಜ್ಞಾಪಿಸಿದರು. ವಿಶ್ವಾಮಿತ್ರನು ರಾಮನ ಗುರುವಾಗಿದ್ದರಿಂದ ಅವರ ಮಾತನ್ನು ಮೀರಲು ಆಗಲಿಲ್ಲ.

ರಾಮನು ಬಾಣಗಳನ್ನು ಬಿಟ್ಟು ಹನುಮಂತನನ್ನು ಸಾಯಿಸಬೇಕು ಎಂದು ಆಜ್ಞೆ ಮಾಡಿದರು. ಅದರಂತೆಯೇ ಹನುಮಂತನಿಗೆ ಬಾಣವನ್ನು ಬಿಡಲಾಯಿತು. ಮರಣದ ಹಾಸಿಗೆಯಲ್ಲಿ ಮಲಗಿದ್ದ ಹನುಮಂತನು ರಾಮನ ಜಪ ಮಾಡುತ್ತಿದ್ದುದರಿಂದ ಬಾಣಗಳು ಹನುಮಂತನಿಗೆ ಯಾವುದೇ ಹಾನಿಯನ್ನು ಉಂಟುಮಾಡಿರಲಿಲ್ಲ. ಇದನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತರಾದರು. ಕೋಪಗೊಂಡ ವಿಶ್ವಾಮಿತ್ರರು ಮತ್ತೆ ರಾಮನಿಗೆ ಮರಣದಂಡನೆಯನ್ನು ವಿಧಿಸಲು ಹೇಳಿದರು. ಅದರಂತೆಯೇ ರಾಮನು ಅದನ್ನು ಮಾಡಲು ಸಮರ್ಥನಾದನು.

English summary

BOND BETWEEN LORD RAMA AND HANUMAN

Talking of the Ramayana, one cannot ignore the relationship between Lord Rama and his able disciple Lord Hanuman. In fact, it will be fair on our part to say that the battles that Lord Rama won effortlessly had a major role that was played by Lord Hanuman. Such was the dedication of Lord Hanuman towards his master that he would often put himself in trouble to protect the dignity of his master and his wife. Famous stories like the burning of Lanka on a rage are ones that do the rounds even today.
Story first published: Friday, March 23, 2018, 7:01 [IST]