For Quick Alerts
ALLOW NOTIFICATIONS  
For Daily Alerts

  ಅಡಿಕೆ - ಪೂಜೆಯಲ್ಲಿ ಇದರ ಬಳಕೆಯ ಮಹತ್ವ

  By Deepu
  |

  ಹಿಂದೂ ಧರ್ಮದಲ್ಲಿ ಹಲವಾರು ಸಂಪ್ರದಾಯ ಕಟ್ಟುಪಾಡುಗಳನ್ನು ಅನುಸರಿಸಲಾಗುತ್ತದೆ. ಇದರಲ್ಲೊಂದಾಗ ಪೂಜೆಯಲ್ಲಿ ದೇವರಿಗೆ ಕೆಲವು ಕಾಣಿಕೆಗಳನ್ನು ಅರ್ಪಿಸುವುದು, ಪವಿತ್ರ ಮಂತ್ರಗಳನ್ನು ಪಠಿಸುವುದು ಮೊದಲಾದವು ಸಾವಿರಾರು ವರ್ಷಗಳ ಸಂಪ್ರದಾಯವನ್ನು ಇನ್ನಷ್ಟು ಉಜ್ವಲಗೊಳಿಸುತ್ತವೆ. ದೇವರಿಗೆ ಕಾಣಿಕೆಯಾಗಿ ನಾವು ಹಲವು ವಸ್ತುಗಳನ್ನು ಅರ್ಪಿಸುತ್ತೇವೆ, ಇದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಿ ನಮ್ಮ ಬಯಕೆಗಳು ಶೀಘ್ರವಾಗಿ ಪೂರ್ಣಗೊಳ್ಳುತ್ತವೆ ಎಂದು ನಾವು ನಂಬುತ್ತೇವೆ.

  ಉದಾಹರಣೆಗೆ ಹೆಣ್ಣು ದೇವರನ್ನು ಮತ್ತು ಹನುಮಂತ ದೇವರನ್ನು ಪ್ರಸನ್ನಗೊಳಿಸಲು ಕುಂಕುಮವನ್ನು ಬಳಸಲಾಗುತ್ತದೆ. ವಿಷ್ಣುದೇವರಿಗೆ ಗಂಧದ ಲೇಪನ ಪ್ರಿಯವಾಗಿದೆ. ಶಿವನಿಗೆ ಬಿಳಿಯ ಹೂವುಗಳು ಇಷ್ಟ, ಆದರೆ ಶಿವನ ಅವತಾರವಾದ ಹನುಮಂತದೇವರಿಗೆ ಗಂಧವನ್ನು ಬಳಸಿದಂತೆ ಶಿವನಿಗೆ ಗಂಧವನ್ನು ಬಳಸಲಾಗದು. ಅಲ್ಲದೇ ಗಣೇಶನಿಗೆ ಎಂದಿಗೂ ತುಳಸಿ ಎಲೆಗಳನ್ನು ಅರ್ಪಿಸಬಾರದು. ಹೀಗೆ ಪ್ರತಿ ದೇವರಿಗೂ ಇಷ್ಟವಾಗಿರುವ ಅಥವಾ ಇಷ್ಟವಾಗದ ವಸ್ತುಗಳ ಹಿಂದೆ ಕೆಲವು ಕಥೆಗಳಿವೆ.

  ಹಿಂದೂ ಸಂಪ್ರದಾಯದಲ್ಲಿ ಅಡಿಕೆಗೂ ಪವಿತ್ರವಾದ ಸ್ಥಾನವಿದ್ದು ಇದರಿಂದ ಪೂಜಾ ಸ್ಥಳದ ಪರಿಸರವನ್ನು ಸ್ವಚ್ಛಗೊಳಿಸುತ್ತದೆ ಹಾಗೂ ಭಕ್ತರು ಹೆಚ್ಚಿನ ಶ್ರದ್ಧೆಯಿಂದ ದೇವರನ್ನು ಆರಾಧಿಸಲು ಸಾಧ್ಯವಾಗುತ್ತದೆ. ಅಡಿಕೆಯ ಬಳಕೆಯಿಂದ ನಿತ್ಯಜೀವನದಲ್ಲಿ ಎದುರಾಗುವ ಕೆಲವಾರು ತೊಂದರೆಗಳನ್ನು ಹೇಗೆ ನಿವಾರಿಸಬಹುದು ಎಂಬುದನ್ನು ನೋಡೋಣ...

  Betel Nut

  1. ಗಣೇಶನನ್ನು ಆರಾಧಿಸುವ ವೇಳೆ ಅಡಿಕೆಯೊಂದನ್ನು ಹಳದಿ ಬಟ್ಟೆಯಲ್ಲಿರಿಸಿ ದೇವರ ಮುಂದಿರಿಸಬೇಕು. ಜೊತೆಗೆ, ಕುಂಕುಮ, ಅರಿಶಿನ ಮತ್ತು ಅಕ್ಕಿಯನ್ನು ಅರ್ಪಿಸುತ್ತಾ ಲಕ್ಷ್ಮೀದೇವಿಯನ್ನು ಸ್ತುತಿಸುವ ಮಂತ್ರವನ್ನು ಪಠಿಸಿ. ಈ ಪೂಜೆಯನ್ನು ಯಾವುದಾದರೂ ಶುಭಮುಹೂರ್ತದ ಸಮಯಲ್ಲಿ ಅನುಸರಿಸಬೇಕು. ನೆನಪಿಡಿ ಗಣೇಶನಿಗೆಂದೂ ತುಳಸಿ ಅರ್ಪಿಸಬೇಡಿ! ಗಣೇಶ ಹಾಗೂ ದೇವ ಬೈರವನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸದಿರಿ. ಗಣೇಶನು ತುಳಸಿಯನ್ನು ಶಪಿಸಿದ್ದು ತನ್ನ ಪೂಜೆಗೆ ಎಂದಿಗೂ ಆಕೆಯನ್ನು ಆಮಂತ್ರಿಸದ ಕಾರಣ ಗಣೇಶನ ಪೂಜೆಯಲ್ಲಿ ತುಳಸಿಯನ್ನು ಇರಿಸುವ ಮೂಲಕ ಗಣೇಶನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. 

  2. ಕೆಂಪು ಬಟ್ಟೆಯೊಂದರಲ್ಲಿ ಶ್ರೀಯಂತ್ರವೊಂದನ್ನು ಬರೆಯಿರಿ. ಇದರ ನಡುವೆ ಅಡಿಕೆಯೊಂದನ್ನು ಇರಿಸಿ. ಇದರಿಂದ ಗಣೇಶ ದೇವರ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಆದಾಯದ ಆಗಮನಕ್ಕೆ ಅಡ್ಡಿಯಾಗುವ ವಿಘ್ನಗಳನ್ನು ವಿನಾಯಕ ನಿವಾರಿಸುತ್ತಾನೆ.

  3. ಒಂದು ಬೆಳ್ಳಿಯ ಚಿಕ್ಕ ಪಾತ್ರೆಯಲ್ಲಿ ಅಡಿಕೆಯೊಂದನ್ನು ಇರಿಸಿ ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿರಿಸಿ. ಈ ಪಾತ್ರೆಗೆ ನಿತ್ಯವೂ ಪೂಜೆ ಸಲ್ಲಿಸುವ ಮೂಲಕ ಮನೆಯಲ್ಲಿ ಶಾಂತಿ ಹಾಗೂ ಸಾಮರಸ್ಯ ನೆಲೆಸಿರುತ್ತದೆ.

  4. ಮಂತ್ರಪಠನದ ಸಮಯದಲ್ಲಿ ಅಡಿಕೆಯನ್ನೂ ಎದುರಿಗಿರಿಸಿದರೆ ಇದು ಹಣಕಾಸಿನ ತೊಂದರೆ ಇಲ್ಲವಾಗುತ್ತದೆ. ನೆನೆಪಿಡಿ ಒಂದು ವೇಳೆ ಮಂತ್ರ ಪಠಿಸುವವರ ಬಾಯಿಯಿಂದ ದುರ್ವಾಸನೆ ಬರುತ್ತಿದ್ದರೆ ಈ ಮಂತ್ರಗಳೂ ಅಪವಿತ್ರವೆಂದು ಭಾವಿಸಲಾಗುತ್ತದೆ. ಅಲ್ಲದೇ ಪೂಜೆ ಸಲ್ಲಿಸುವವರ ಕೂದಲು ಸಹಾ ತೊಳೆದು ಸ್ವಚ್ಛಪಡಿಸಿಕೊಂಡಿರಬೇಕು. ದುರ್ವಾಸನೆ ಸೂಸುವ ಬಾಯಿ ಹಾಗೂ ಕೂದಲಿನಿಂದ ಸಲ್ಲಿಸುವ ಪೂಜೆ ಯಾವತ್ತೂ ದೇವರಿಗೆ ಸಮರ್ಪಕವಾಗುವುದಿಲ್ಲಎಂದು ಪಂಡಿತರು ತಿಳಿಸುತ್ತಾರೆ. 

  pooja ingredients

  5. ತಾಮ್ರದ ಪಾತ್ರೆಯೊಂದರಲ್ಲಿ ನೀರು ತುಂಬಿಸಿ ಇದರಲ್ಲಿ ಕೊಂಚ ಹಣ ಮತ್ತು ಅಡಿಕೆಯೊಂದನ್ನು ಇರಿಸಿ ಇದನ್ನು ದೇವಸ್ಥಾನದಲ್ಲಿ ದೇವರಿಗೆ ಕಾಣಿಕೆಯಾಗಿ ಅರ್ಪಿಸಿದರೆ ಇದರಿಂದ ಬಹುಕಾಲದ ಬಯಕೆ ಈಡೇರುತ್ತದೆ.

  6. ಹಣವಿರಿಸುವ ಕಪಾಟಿನಲ್ಲಿ ಶ್ರೀಯಂತ್ರ ಮತ್ತು ಅಡಿಕೆಯನ್ನು ಇರಿಸಿ, ಇದರಿಂದ ಅನಗತ್ಯ ಖರ್ಚು ಇಲ್ಲವಾಗುತ್ತದೆ ಹಾಗೂ ಧನಾಭಿವೃದ್ದಿಗೊಳ್ಳುತ್ತದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಬೇರೆ ಬೇರೆ ಪ್ರಕಾರದ ಯಂತ್ರಗಳನ್ನು ಬಳಸಲಾಗುತ್ತದೆ ಅಂತೆಯೇ ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಕೂಡ ಈ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಶ್ರೀ ಯಂತ್ರಕ್ಕಿಂತ ಹೆಚ್ಚು ಪ್ರಭಾವಶಾಲಿಯಾದ ಮತ್ತೊಂದು ಯಂತ್ರವಿಲ್ಲ. ನಿಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಈ ಯಂತ್ರವನ್ನು ಇರಿಸಿ. ನೀವು ಸರಿಯಾದ ಅನುಷ್ಠಾನಗಳನ್ನು ಅನುಸರಿಸಿದಲ್ಲಿ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುವುದು ಖಂಡಿತ.

  7. ಗಣೇಶನ ಕೆಲವು ಚಿತ್ರಗಳಲ್ಲಿ ದಂತ ಬಲಗಡೆಗೂ ಕೆಲವಲ್ಲಿ ಎಡಗಡೆಗೂ ಇರುತ್ತದೆ. ಬಲಭಾಗದ ಕಡೆ ದಂತ ಇರುವ ಗಣೇಶನ ಎದುರು ಅಡಿಕೆ ಮತ್ತು ಲವಂಗವನ್ನಿರಿಸಿ ಪೂಜೆ ಸಲ್ಲಿಸುವ ಮೂಲಕ ಜೀವನದಲ್ಲಿ ಎದುರಾದ ತೊಂದರೆಯನ್ನು ನಿವಾರಿಸಲು ನೆರವು ಲಭಿಸುತ್ತದೆ. ಆದರೆ, ಕೆಲವು ಸಮಯದಲ್ಲಿ, ಈ ವಿಷಯಗಳನ್ನು ಅನುಸರಿಸುವಾಗ ಚಿಕ್ಕ ಪುಟ್ಟ ವಿಷಯಗಳನ್ನು ಅನುಸರಿಸಲು ಮರೆಯುತ್ತಾರೆ. ನಿತ್ಯದ ಪೂಜೆಗಳಲ್ಲಿ ಇವು ಅಗತ್ಯವಾಗಿವೆ. ಇವುಗಳಲ್ಲಿ ಪ್ರಮುಖವಾದುದನ್ನು ನಾವು ಸಂಗ್ರಹಿಸಿ ಇಲ್ಲಿ ನೀಡುತ್ತಿದ್ದೇವೆ, ಈ ವಿಷಯಗಳ ಬಗ್ಗೆ ಗಮನವಿರಲಿ:

  *ತಿಲಕವನ್ನಿರಿಸಲು ಕೇವಲ ಉಂಗುರ ಬೆರಳನ್ನೇ ಬಳಸಬೇಕೇ ವಿನಃ ಬೇರೆ ಬೆರಳುಗಳನ್ನು ಬಳಸಬಾರದು.

  *ಶಿವನಿಗೆಂದೂ ಅರಿಶಿನ ಅರ್ಪಿಸದಿರಿ

  *ಆರತಿ ಮುಗಿದ ಬಳಿಕ ದೀಪವನ್ನು ದೇವರ ವಿಗ್ರಹದ ಮುಂದೆ ಇರಿಸಲು ಮರೆಯದಿರಿ. ಅಲ್ಲದೇ ಬೇರೆ ಸ್ಥಳದಲ್ಲಿಯೂ ಇರಿಸರಿದಿ.

  *ಒಣಗಿದ ಹೂವುಗಳನ್ನೆಂದೂ ದೇವರಿಗೆ ಅರ್ಪಿಸದಿರಿ

  *ಗಣೇಶನಿಗೆಂದೂ ತುಳಸಿ ಎಲೆಗಳನ್ನು ಅರ್ಪಿಸದಿರಿ

  *ಸೂರ್ಯದೇವನಿಗೆಂದೂ ಬಿಲ್ವಪತ್ರೆಗಳನ್ನು ಅರ್ಪಿಸದಿರಿ

  *ಸೂರ್ಯಾಸ್ತದ ಬಳಿಕ ಎಂದಿಗೂ ಎಲೆ ಅಥವಾ ಹೂವುಗಳನ್ನು ಕೀಳದಿರಿ

  *ಸೂರ್ಯದೇವನಿಗೆ ಸಲ್ಲಿಸುವ ಪೂಜೆಯ ವೇಳೆ ನೀರು ಅರ್ಪಿಸಲು ಮರೆಯದಿರಿ

  *ಸಾಯಂಕಾಲದ ಪೂಜೆಯ ಬಳಿಕ ಪೂಜಾಗೃಹವನ್ನು ಪರದೆಯಿಂದ ಮುಚ್ಚಲು ಮರೆಯದಿರಿ.

  *ಪೂಜೆಯ ಸಮಯದಲ್ಲಿ ವೀಳ್ಯದ ಎಲೆಗಳನ್ನು ಬಳಸಲು ಮರೆಯದಿರಿ.

  *ಅಗರಬತ್ತಿ- ಮನೆಯ ಪರಿಸರದಲ್ಲಿರುವ ದುಷ್ಟಶಕ್ತಿಗಳನ್ನು ದೂರ ಓಡಿಸಲು ಸುವಾಸನೆಯ ಅಗತ್ಯವಿದ್ದು ಅಗರಬತ್ತಿಯ ಹೊಗೆಯಲ್ಲಿರುವ ಸುವಾಸನೆಯ ಮೂಲಕ ದೇವರಿಗೆ ನಿರ್ಮಲ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತದೆ. ಈ ಪರಿಮಳ ಕೇವಲ ಪರಿಸರದಲ್ಲಿ ಸುವಾಸನೆ ಮೂಡಿಸುವುದು ಮಾತ್ರವಲ್ಲ, ಮನಸ್ಸನ್ನು ತಿಳಿಗೊಳಿಸಿ ಯಾವುದೇ ಋಣಾತ್ಮಕ ಯೋಚನೆಗಳನ್ನೂ ಬದಲಿಸುತ್ತದೆ.

  *ಸಿಹಿವಸ್ತುಗಳು- ದೇವರಿಗೆ ಸಿಹಿಪದಾರ್ಥವನ್ನು ಅರ್ಪಿಸುವ ಮೂಲಕ ದೇವರ ಅನುಗ್ರಹವನ್ನು ಪಡೆಯಬಹುದು. ಇದಕ್ಕಾಗಿ ಮೋದಕ, ಲಡ್ಡು, ಬರ್ಫಿ ಅಥವಾ ಇತರ ಯಾವುದೇ ಸಿಹಿವಸ್ತುಗಳನ್ನು ಆಯ್ದುಕೊಳ್ಳಬಹುದು. ಇವು ಲಭ್ಯವಿಲ್ಲದ ಸಮಯದಲ್ಲಿ ಸಾದಾ ಸಕ್ಕರೆ ಅಥವಾ ಮಿಶ್ರಿಯನ್ನೂ ದೇವರಿಗೆ ಅರ್ಪಿಸುವ ಮೂಲಕ ಪೂಜೆಯನ್ನು ಸಂಪನ್ನಗೊಳಿಸಬಹುದು.

  *ಪಂಚಾಮೃತ- ಆಯುರ್ವೇದ ಸೂಚಿಸಿರುವ ಐದು ವಸ್ತುಗಳನ್ನು ಬೆರೆಸಿ ಪಂಚಾಮೃತವನ್ನು ತಯಾರಿಸಲಾಗುತ್ತದೆ. ಇವೆಂದರೆ ಹಾಲು, ತುಪ್ಪ, ಮೊಸರು, ಜೇನು ಮತ್ತು ಸಕ್ಕರೆ. ಪಂಚಾಮೃತದಿಂದ ಗರ್ಭಗುಡಿಯಲ್ಲಿರುವ ವಿಗ್ರಹ ಅಥವಾ ಮನೆದೇವರ ವಿಗ್ರಹಕ್ಕೆ ಅಭಿಷೇಕ ಮಾಡಿ ಪುನೀತವಾಗಿಸಲಾಗುತ್ತದೆ. ವಿಗ್ರಹದಿಂದ ಸೋರಿದ ಈ ದ್ರವವನ್ನು ಸಂಗ್ರಹಿಸಿ ಪ್ರಸಾದದ ರೂಪದಲ್ಲಿ ಭಕ್ತರಿಗೆ ವಿತರಿಸಲಾಗುತ್ತದೆ. ಈ ಪಂಚಾಮೃತವನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕರ ಲಾಭಗಳೂ ಇವೆ.

  *ದೀವಿಗೆ-ಯಾವುದೇ ಪೂಜೆಯಲ್ಲಿ ಅಗತ್ಯವಾಗಿ ಬಳಸಬೇಕಾದ ಪರಿಕರವೆಂದರೆ ದೀಪ ಅಥವಾ ದೀವಟಿಗೆ ಅಥವಾ ದೀವಿಗೆ. ದೀವಿಗೆ ಉಪಯೋಗಿಸುವ ಒಂದೇ ಉದ್ದೇಶವೆಂದರೆ ಇದರ ಬೆಳಕು ಸದಾ ಮನೆಯನ್ನು ಬೆಳಗುತ್ತಿರಬೇಕು. ಈ ಬೆಳಕು ಜ್ಞಾನ, ಪ್ರಜ್ಞೆ, ನಿರ್ಮಲತೆ ಹಾಗೂ ದಿವ್ಯತೆಯ ಸಂಕೇತವಾಗಿದು ಪ್ರತಿಯೊಬ್ಬರೂ ಇದನ್ನು ತಪ್ಪದೇ ಅರಿತಿರಬೇಕು. ಇದೇ ಕಾರಣಕ್ಕೆ ದೀಪದ ಬೆಳಕು ಸದಾ ಮನೆಯಲ್ಲಿ ಬೆಳಗುತ್ತಾ ಇರುವಂತೆ, ಎಂದಿಗೂ ಎಣ್ಣೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಗೃಹಿಣಿಯ ಕರ್ತವ್ಯವೂ ಆಗಿದೆ. 

  English summary

  Betel Nut And Its Use In Pujas

  A number of customs are followed in Hinduism. The rituals, the sacred offerings and the mantras, add beauty to the age-old customs mentioned in the scriptures. We offer a number of sacred things during these rituals, which help us please the deity more and get our wishes fulfilled sooner.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more