ಪರಮ ಪವಿತ್ರವಾದ ಸುದಿನ 'ಅಕ್ಷಯ ತೃತೀಯ' ಹಬ್ಬದ ಹಿನ್ನೆಲೆ

By: Jaya subramanya
Subscribe to Boldsky

ಅಕ್ಷಯ ತೃತೀಯವನ್ನು ಹಿಂದೂಗಳು ಮಾತ್ರವಲ್ಲದೆ ಜೈನರು ಕೂಡ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಪ್ರತಿಯೊಂದು ರಾಜ್ಯದಲ್ಲೂ ಈ ಹಬ್ಬಕ್ಕೆ ಪ್ರಾಧಾನ್ಯತೆ ಇದ್ದು ಐಶ್ವರ್ಯ ಮತ್ತು ಸಂಪತ್ತಿನ ಗುರುತಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಅಕ್ಷಯ ತೃತೀಯ ಎಂದರೆ ಅದೊಂದು ಮುಗಿಯದ ಸಂಪತ್ತು ಎಂಬ ನಂಬಿಕೆ ಇದೆ. ವೈಶಾಖ ಮಾಸದ ಶುಕ್ಲ ಪಕ್ಷದ ಪವಿತ್ರ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇಂದಿನ ಲೇಖನದಲ್ಲಿ ಈ ಹಬ್ಬವನ್ನು ಏಕೆ ಮತ್ತು ಯಾವ ದಿನ ಆಚರಿಸಬೇಕು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ. ಕಷ್ಟಕಾರ್ಪಣ್ಯ ಮರೆಯಾಗಲು 'ಅಷ್ಟ ಲಕ್ಷ್ಮೀ ಸ್ತೋತ್ರ' ನಿತ್ಯ ಪಠಿಸಿ

ಛತ್ತೀಸ್‌ಗಢದಲ್ಲಿ ಅಕ್ತಿ ಎಂಬುದಾಗಿ ಇದನ್ನು ಕರೆದರೆ, ಗುಜರಾತ್ ಮತ್ತು ರಾಜಸ್ತಾನದಲ್ಲಿ ಅಕಾ ತೀಜ್ ಎಂದೇ ಪ್ರಸಿದ್ಧವಾಗಿದೆ. ಲಕ್ಷ್ಮೀ ಮತ್ತು ಕುಬೇರನಿಗೆ ಈ ದಿನ ಪ್ರತ್ಯೇಕ ಮಹತ್ವವಿದ್ದು ಸಂಪತ್ತನ್ನು ಪಡೆದುಕೊಳ್ಳಲು ಈ ದಿನ ಈ ದೇವರುಗಳನ್ನು ಭಕ್ತಿಯಿಂದ ಪೂಜಿಸುತ್ತಾರೆ. ಈ ದೇವರನ್ನು ಸಂಪ್ರೀತಿಪಡಿಸಲು ಆಯಾಯ ದೇವರುಗಳ ಮಂತ್ರವನ್ನು ಪಠಿಸಬೇಕಾಗಿದ್ದು ಇದರಿಂದ ನಾವು ಮನಸ್ಸಲ್ಲಿರುವ ಇಚ್ಛೆ ಈಡೇರಲಿದೆ....  

ಅಕ್ಷಯ ತೃತೀಯದ ಉತ್ತಮ ಮುಹೂರ್ತ

ಅಕ್ಷಯ ತೃತೀಯದ ಉತ್ತಮ ಮುಹೂರ್ತ

ಈ ವರ್ಷ,ತೃತೀಯ ತಿಥಿಯ ಆರಂಭವು 28 ಏಪ್ರಿಲ್ ಶುಕ್ರವಾರ 10.29 ಮುಂಜಾನೆ ಆರಂಭವಾಗಲಿದೆ ಇದು ಮುಕ್ತಾಯಗೊಳ್ಳುವುದು (29 ಏಪ್ರಿಲ್ ಶನಿವಾರ) 6.55 ಸಂಜೆಯಾಗಿದೆ. ಈ ಹಬ್ಬವನ್ನು ಆಚರಿಸಲು ಈ ಸಮಯ ದೀರ್ಘವಾಗಿದೆ.

ಪೂಜೆಗಾಗಿ ಉತ್ತಮ ಸಮಯ

ಪೂಜೆಗಾಗಿ ಉತ್ತಮ ಸಮಯ

ಶನಿವಾರದವರೆಗೆ ತಿಥಿಯು ವಿಸ್ತರಣೆಗೊಳ್ಳುವುದರಿಂದ, ಪೂಜೆ ಮುಹೂರ್ತವು 2 ಗಂಟೆ 6 ನಿಮಿಷಗಳವರೆಗೆ ಮುಂದುವರಿಯುತ್ತದೆ. ಇದು 28 ಏಪ್ರಿಲ್ 10.29 ಮುಂಜಾನೆಯಿಂದ 12:36 ರ ಅದೇ ದಿನದವರೆಗೆ ಆರಂಭಗೊಳ್ಳುತ್ತದೆ.

ಪರಶುರಾಮ ಜನನ

ಪರಶುರಾಮ ಜನನ

ಅಕ್ಷಯ ತೃತೀಯದ ಮುಹತ್ವವನ್ನು ಅರಿತುಕೊಳ್ಳುವಾಗ, ಈ ದಿನ ಪರಶುರಾಮನ ಜನ್ಮದಿನವಾಗಿದೆ. 21 ನೆಯ ಬಾರಿ ಸರಿಯಾಗಿ ಆಡಳಿತ ನಡೆಸದ ರಾಜರುಗಳಿಂದ ವಿಶ್ವವನ್ನು ಮುಕ್ತಿಗೊಳಿಸಿದ ವಿಷ್ಣುವಿನ ಅವತಾರವಾಗಿದೆ ಪರಶುರಾಮ ಅವತಾರ.

ಮಹಾಭಾರತದ ಆರಂಭ

ಮಹಾಭಾರತದ ಆರಂಭ

ಭಗವಾನ್ ಗಣೇಶನು ಈ ಶುಭ ದಿನದಂದೇ ಮಹಾಭಾರತವನ್ನು ಬರೆಯಲು ಆರಂಭಿಸಿದರು ಎಂಬುದಾಗಿ ಐತಿಹ್ಯವಿದ್ದು ವೇದ ವ್ಯಾಸರು ಇವರಿಗೆ ಮಾರ್ಗದರ್ಶನ ನೀಡಿದ್ದರು.

 ಪಾಂಡವರಿಗೆ ವಿಜಯದ ದಿನ

ಪಾಂಡವರಿಗೆ ವಿಜಯದ ದಿನ

ಅಕ್ಷಯ ತೃತೀಯ ಮತ್ತು ಮಹಾಭಾರತಕ್ಕೆ ಸಂಬಂಧಿಸಿದಂತೆ ಇನ್ನೊಂದು ಕಥೆಯಿದೆ. ಈ ದಿನ ಪಾಂಡವರಿಗೆ ಮರದಲ್ಲಿ ಅವಿತಿಟ್ಟ ಆಯುಧಗಳು ದೊರೆತಿದ್ದು, ಇದರಿಂದ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ವಿರುದ್ಧ ಪಾಂಡವರಿಗೆ ಜಯ ಗಳಿಸಲು ಸಾಧ್ಯವಾಯಿತು.

ಕುಬೇರನ ದಿನ

ಕುಬೇರನ ದಿನ

ಹಲವಾರು ಪುರಾಣಗಳಲ್ಲಿ ಅಕ್ಷಯ ತೃತೀಯವನ್ನು ಪವಿತ್ರ ದಿನವಾಗಿ ಕಂಡುಕೊಳ್ಳಲಾಗಿದೆ. ಶಿವಪುರಾಣದ ಪ್ರಕಾರ ಶಿವ ದೇವರ ವರದಿಂದ ಕುಬೇರನು ಎಲ್ಲಾ ಧನ ಧಾನ್ಯಗಳನ್ನು ಪಡೆದುಕೊಂಡಿದ್ದರು ಮತ್ತು ಲಕ್ಷ್ಮೀ ದೇವತೆಯಂತೆ ಅವರು ಕೂಡ ಸಂಪತ್ತಿನ ಒಡೆಯರು ಎಂದೆನಿಸಿದ್ದಾರೆ.

ಚಿನ್ನವನ್ನು ಖರೀದಿ ಮಾಡುವ ಮಹತ್ವ

ಚಿನ್ನವನ್ನು ಖರೀದಿ ಮಾಡುವ ಮಹತ್ವ

ವ್ಯವಹಾರದೊಂದಿಗೆ ಈ ದಿನ ಸಂಯೋಜನೆಯನ್ನು ಪಡೆದುಕೊಂಡಿದೆ. ಈ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿ ಮಾಡಲು ಶುಭ ಎಂದಾಗಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಶುಭ ಮತ್ತು ಉತ್ತಮ ದಿನಗಳು ನಿಮಗೆ ಒದಗಲಿವೆ.

ಹೊಸ ವರ್ಷದ ಆರಂಭ

ಹೊಸ ವರ್ಷದ ಆರಂಭ

ಶಾಸ್ತ್ರಗಳ ಪ್ರಕಾರ, ತ್ರೇತಾಯುಗ ಅಥವಾ ಶ್ರೀರಾಮ ದೇವರ ಯುಗದ ಆರಂಭವೆಂದು ಈ ದಿನವನ್ನು ಕರೆಯಲಾಗುತ್ತದೆ. ಧರ್ಮದ ಹಾದಿಯನ್ನು ಜನರು ಈ ದಿನ ಅನುಸರಿಸಿದ್ದಾರೆ. ಅಕ್ಷಯ ತೃತೀಯವೆಂಬುದು ಪಾವಿತ್ರ್ಯತೆಯ ಸಂಕೇತವಾಗಿದೆ ಮತ್ತು ಆಶೀರ್ವಾದವನ್ನು ಪಡೆದುಕೊಳ್ಳುವ ಶುಭವಸರವಾಗಿದೆ. ಈ ದಿನ ನೀವು ಯಾವುದೇ ಶುಭ ಕಾರ್ಯವನ್ನು ಆರಂಭಿಸಿದರೂ ನಿಮಗೆ ಅರದಲ್ಲಿ ಜಯ ನಿಶ್ಚಿತವಾಗಿದೆ. ಜಪ, ದಾನ-ಪುಣ್ಯ,ಪಿತೃ ತರ್ಪಣ ಮೊದಲಾದವನ್ನು ನಡೆಸುವುದರಿಂದ ಅವರುಗಳ ಶುಭಾಶಿರ್ವಾದ ನಿಮಗೆ ದೊರೆಯಲಿದೆ.

English summary

Best Time To Perform The Akshaya Tritiya Puja & Stories Related To It

Akshaya Tritiya is popularly known in different states by different names. It is known as Akti in Chattisgarh, while in Gujrat and Rajasthan, it is known as Akha Teej. This is the holy day which falls on the third day of Shukla Paksha in the month Vaisakha, according to the Hindu lunar calendar.
Subscribe Newsletter