For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯ ಜಿರಳೆ ನಿವಾರಿಸಲು ಇಲ್ಲಿದೆ ಬೆಸ್ಟ್‌ ಮನೆಮದ್ದುಗಳು

|

ಅಡುಗೆಮನೆಯಲ್ಲಿ ಜಿರಳೆ ಮತ್ತು ದೋಷಗಳನ್ನು ತಡೆಯುವ ಸುಲಭ ಪರಿಹಾರಗಳು

ಇತ್ತೀಚಿನ ದಿನಗಳಲ್ಲಿ ಜಿರಳೆ ಅಥವಾ ಕೀಟಗಳು ಇಲ್ಲದ ಮನೆ ಕಾಣಸಿಗುವುದು ಬಹಳ ಅಪರೂಪ. ಅದರಲ್ಲೂ ಮಾಡ್ಯುಲರ್‌ ಕಿಚನ್‌ಗಳು ಬಂದ ನಂತರ ಜಿರಳೆಗಳ ಕಾಟ ಅತಿಯಾಗಿದೆ ಎಂದೇ ಹೇಳಬಹುದು. ಮರದ ವಾರ್ಡ್‌ರೋಬ್‌ಗಳ ನಡುವೆ ಹೊಕ್ಕ ಜಿರಳೆಗಳು ತನ್ನ ಇಡೀ ಸಂಸಾರವನ್ನೇ ಮನೆಗೆ ಹರಡುತ್ತದೆ. ಅಲ್ಲದೇ ಇತರ ಕೀಟಗಳಿಗೂ ಸಹ ಅಡುಗೆ ಮನೆ ನೆಮ್ಮದಿಯ ತಾಣವಾಗಿರುತ್ತದೆ.

Remedies That Prevent Cockroaches and Bugs in Kitchen

ಅಡುಗೆ ಮಾಡುವಾಗ, ಇತರರು ಅಡುಗೆ ಬಂದಾಗ ಇಂಥಾ ಜಿರಳೆಗಳು ಕಂಡರಂತೂ ಅಸಹ್ಯಕರ ಎನಿಸುವುದುಂಟು. ಇದಕ್ಕಾಗಿ ನೀವು ಎಷ್ಟೇ ಕಷ್ಟಪಟ್ಟು ನಿತ್ಯ ಸ್ವಚ್ಛಗೊಳಿಸಿದರೂ, ಯಾವೆಲ್ಲಾ ಔಷಧಗಳನ್ನು ಸಿಂಪಡಿಸಿದರೂ ಕೇವಲ ತಾತ್ಕಾಲಿಕವಷ್ಟೇ ಆಗಿರುತ್ತದೆ, ಹಾಗೂ ಹೀಗೂ ಮತ್ತೆ ಅಡುಗೆ ಮನೆ ಸೇರಿಸುತ್ತವೆ. ಅಷ್ಟೇ ಅಲ್ಲದೇ ಇದು ಅರೋಗ್ಯಕ್ಕೆ ಸಾಕಷ್ಟು ಹಾನಿಕಾರಕ ಮತ್ತು ಹಲವಾರು ಕಾಯಲೆಗಳಿಗೆ ಸಹ ಕಾರಣವಾಗಬಹುದು.

ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಹೆಚ್ಚಿನ ಖರ್ಚಿಲ್ಲದೆ, ಮನೆಯಲ್ಲೇ ಇರುವ ಮದ್ದುಗಳ ಮೂಲಕ ಹೇಗ ಜಿರಳೆಗಳನ್ನು ನಿಧಾನವಾಗಿ ನಿವಾರಿಸಬಹುದು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

1. ಬಿಸಿನೀರು, ನಿಂಬೆ ಮತ್ತು ಅಡಿಗೆ ಸೋಡಾ

1. ಬಿಸಿನೀರು, ನಿಂಬೆ ಮತ್ತು ಅಡಿಗೆ ಸೋಡಾ

ಒಂದು ಚಮಚ ನಿಂಬೆ ರಸ, 2 ಚಮಚ ಬೇಕಿಂಗ್ ಸೋಡಾವನ್ನು 1 ಲೀಟರ್ ಬಿಸಿನೀರಿನಲ್ಲಿ ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಸಿಂಕ್‌ ಅಥವಾ ನೀರು ಹೋಗುವ ಸ್ಥಳಗಳಲ್ಲಿ ಸುರಿಯಿರಿ ಅಥವಾ ಸಿಂಕ್ ಹಾಗೂ ಅಡುಗೆ ಮನೆಯ ಚಪ್ಪಡಿಗಳನ್ನು ಇದನ್ನು ಹಾಕಿ ತೊಳೆಯಿರಿ. ಇದು ಪರಿಣಾಮಕಾರಿಯಾಗಿ ಅಡುಗೆಮನೆಯಲ್ಲಿನ ಜಿರಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುತ್ತದೆ.

2. ಬಿಸಿನೀರು ಮತ್ತು ವಿನೆಗರ್

2. ಬಿಸಿನೀರು ಮತ್ತು ವಿನೆಗರ್

ಇದು ಅತೀ ಸರಳ ವಿಧಾನವಾಗಿದೆ. ಸ್ವಲ್ಪ ಬಿಸಿನೀರನ್ನು ತೆಗೆದುಕೊಂಡು, ಬಿಳಿ ವಿನೆಗರ್ ಅನ್ನು ಬೆರೆಸಿ ಜಿರಳೆ ಇರುವ ಎಲ್ಲಡೆ ಅಡುಗೆ ಮನೆಯನ್ನು ಒರೆಸಿ. ಒಂದು ಪಾತ್ರೆಯಲ್ಲಿ ಇದನ್ನು ಬೆರೆಸಿ ದ್ರಾವಣವನ್ನು ಸಿಂಕ್‌ ನಲ್ಲಿ ಸುರಿಯಿರಿ, ಇದು ಕೊಳವೆಗಳು ಮತ್ತು ಚರಂಡಿಗಳನ್ನು ಸೋಂಕುರಹಿತಗೊಳಿಸುತ್ತದೆ.

3. ಬೋರಿಕ್ ಆಮ್ಲ ಮತ್ತು ಸಕ್ಕರೆ

3. ಬೋರಿಕ್ ಆಮ್ಲ ಮತ್ತು ಸಕ್ಕರೆ

ಸ್ವಲ್ಪ ಬೋರಿಕ್ ಆಮ್ಲ ಮತ್ತು ಸಕ್ಕರೆಯನ್ನು ಬೆರೆಸಿ ಜಿರಳೆಗಳು ಹೆಚ್ಚು ಇರುವ ಸ್ಥಳಗಳಲ್ಲಿ ಹಾಕಿ. ಸಕ್ಕರೆ ಜಿರಳೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರೆ, ಬೋರಿಕ್ ಆಮ್ಲ ತಕ್ಷಣ ಅವುಗಳನ್ನು ಕೊಲ್ಲುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಈ ಜಿರಳೆ, ಕೀಟಗಳನ್ನು ಓಡಿಸಲು ಇದನ್ನು ಪ್ರಯತ್ನಿಸಿ.

4. ಬೇವಿನ ಸಾರಗಳು

4. ಬೇವಿನ ಸಾರಗಳು

ಬೇವಿನ ಎಲೆಗಳಿಂದ ಬೇವಿನ ಎಣ್ಣೆಯವರೆಗೆ, ನಿಮ್ಮ ಅಡುಗೆಮನೆಯಿಂದ ಕೀಟಗಳನ್ನು ನಿವಾರಿಸುವಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತವೆ. ಬೇವಿನ ಕೆಲವು ಎಲೆಗಳನ್ನು ಅಡುಗೆಮನೆಯಲ್ಲಿ ಇರಿಸಿ ಮತ್ತು ಕೇವಲ 3 ದಿನಗಳಲ್ಲಿ ಬದಲಾವಣೆಗೆ ನೀವು ಸಾಕ್ಷಿಯಾಗಬಹುದು. ಅಡುಗೆಮನೆಯಲ್ಲಿ ಸಂತಾನೋತ್ಪತ್ತಿ ಮಾಡುವುದನ್ನು ತಡೆಯಲು ಸ್ವಲ್ಪ ಬೇವಿನ ಎಣ್ಣೆಯನ್ನು ಬಿಸಿನೀರಿನೊಂದಿಗೆ ಬೆರೆಸಿ ಸಿಂಪಡಿಸಿ.

5. ಸಾರಭೂತ ತೈಲಗಳು

5. ಸಾರಭೂತ ತೈಲಗಳು

ನೀವು ಈ ತೈಲಗಳನ್ನು ಚರ್ಮದ ಆರೈಕೆ ಅಥವಾ ಇತರ ಗುಣಪಡಿಸುವ ಉದ್ದೇಶಗಳಿಗಾಗಿ ಬಳಸುವುದು ಸಹಜ. ಆದರೆ ಈ ಸಾರಭೂತ ತೈಲಗಳಾದ ಪುದೀನಾ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯುಜಿರಳೆಗಳನ್ನು ಕೊಲ್ಲುವಲ್ಲಿ ಸಹಾಯ ಮಾಡುತ್ತದೆ. ಅಡಿಗೆ ಮನೆ ಮತ್ತು ಸಿಂಕ್‌ ಸುತ್ತಲೂ ಕೆಲವು ಸಾರಭೂತ ತೈಲಗಳನ್ನು ಸಿಂಪಡಿಸಿ ಕೀಟಗಳಿಂದ ಮುಕ್ತಿ ಪಡೆಯಿರಿ.

6. ದಾಲ್ಚಿನ್ನಿ

6. ದಾಲ್ಚಿನ್ನಿ

ದಾಲ್ಚಿನ್ನಿಯು ಪ್ರಬಲವಾದ ಮಸಾಲೆ ಪದಾರ್ಥ ಹಾಗೂ ವಾಸನೆಯು ದೀರ್ಘವಾಗಿರುವುದರಿಂದ ಜಿರಳೆಗಳನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತದೆ. ದಾಲ್ಚಿನ್ನಿಯನ್ನು ಅಡುಗೆ ಮನೆಯ ಚಪ್ಪಡಿಗಳು ಮತ್ತು ಕ್ಯಾಬಿನೆಟ್‌ಗಳನ್ನು ಹತ್ತುವುದನ್ನು ತಡೆಯುತ್ತದೆ. ಅಡುಗೆಮನೆಯ ಸುತ್ತಲೂ ವಾರಕ್ಕೊಮ್ಮೆ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ ಸಂತಾನೋತ್ಪತ್ತಿ ಮಾಡದಂತೆ ತಡೆಯಬಹುದು.

English summary

Remedies That Prevent Cockroaches and Bugs in Kitchen

Here we are discussing about Remedies That Prevent Cockroaches and Bugs in Kitchen. There are countless home remedies for roaches out there, but which are recipes for success and which are a waste of time?its simplest ingredients: a sticky surface and something. Read more.
X
Desktop Bottom Promotion