Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಬೆಡ್‌ರೂಮ್‌ನಲ್ಲಿ ಇಂತಹ ವರ್ಣಚಿತ್ರಗಳನ್ನು ಮಾತ್ರ ಇಡಬೇಡಿ!
ವಾಸ್ತು ಶಾಸ್ತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮನೆಯಲ್ಲಿನ ಪ್ರತಿಯೊಂದು ಮೂಲೆ ಮತ್ತು ಒಳಗಿರುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯ, ಸಂಬಂಧ ಹಾಗೂ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಬೆಡ್ ರೂಮ್‌ನಲ್ಲಿ ನಾವು ಇಟ್ಟುಕೊಳ್ಳುವಂತಹ ಪ್ರತಿಯೊಂದು ವಸ್ತುವಿನ ಬಗ್ಗೆ ನಾವು ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ವಾಸ್ತು ಶಾಸ್ತ್ರ-ನೆನಪಿನಲ್ಲಿಟ್ಟು ಕೊಳ್ಳಬೇಕಾದ ಸಂಗತಿಗಳು
ಮನೆಯಲ್ಲಿ ಇಡುವಂತಹ ವಸ್ತುಗಳಿಂದಾಗಿ ನಕಾರಾತ್ಮಕ ಅಂಶಗಳು ಬರಬಹುದು. ಇದರಿಂದ ನಕಾರಾತ್ಮಕ ಅಂಶಗಳು ಮನೆಯೊಳಗೆ ಪ್ರವೇಶ ಮಾಡುವುದು ಮಾತ್ರವಲ್ಲದೆ ಸಂಬಂಧದಲ್ಲೂ ಬಿರುಕು ಕಾಣಿಸಿಕೊಳ್ಳಬಹುದು. ಬೆಡ್ ರೂಮ್ ನ್ನು ಚೆನ್ನಾಗಿ ಅಲಂಕರಿಸುವಾಗ ಕೆಲವೊಂದು ವರ್ಣಚಿತ್ರಗಳನ್ನು ನಾವು ಇಟ್ಟುಕೊಳ್ಳುತ್ತೇವೆ. ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ
ಆದರೆ ಈ ಲೇಖನದಲ್ಲಿ ಬೆಡ್ ರೂಮ್‌ನಲ್ಲಿ ಇಡಲೇಬಾರದ ಕೆಲವು ವರ್ಣಚಿತ್ರಗಳ ಬಗ್ಗೆ ಚರ್ಚಿಸಲಿದ್ದೇವೆ. ಇಂತಹ ವರ್ಣಚಿತ್ರಗಳು ನಿಮ್ಮಲ್ಲಿ ನಕಾರಾತ್ಮಕತೆಯನ್ನು ಉಂಟು ಮಾಡಿ ಸಂಗಾತಿ ಜತೆಗಿನ ಸಂಬಂಧಕ್ಕೂ ಮಾರಕವಾಗಬಹುದು. ಬೆಡ್ ರೂಮ್ ನಲ್ಲಿ ಕಡೆಗಣಿಸಬೇಕಾದ ವರ್ಣಚಿತ್ರಗಳ ಬಗ್ಗೆ ತಿಳಿಯಿರಿ.....

ಗೊಂದಲದ ಆಧುನಿಕ ವರ್ಣಚಿತ್ರ
ಬೆಡ್ ರೂಮ್‌ನಲ್ಲಿ ಗೊಂದಲದ ಯಾವುದೇ ವರ್ಣಚಿತ್ರಗಳನ್ನು ಇಡಬೇಡಿ. ಇದನ್ನು ಇಟ್ಟರೆ ನಿಮ್ಮ ಹಾಗೂ ಸಂಗಾತಿ ಮಧ್ಯೆ ಒಮ್ಮತದ ನಿರ್ಧಾರ ಸಾಧ್ಯವಿಲ್ಲ. ಯಾವಾಗಲೂ ಗೊಂದಲದಲ್ಲಿ ಇರುತ್ತೀರಿ. ಗೊಂದಲದ ಆಧುನಿಕ ವರ್ಣಚಿತ್ರವು ಖುದ್ದು ಗೊಂದಲದ ಗೂಡಾಗಿರುವ ಕಾರಣದಿಂದ ಅದಕ್ಕೆ ಯಾವುದೇ ಪರಿಹಾರವಿರುವುದಿಲ್ಲ.

ಎರಡು ಮುಖವಾಡದ ಚಿತ್ರಕಲೆ
ಹೆಚ್ಚಿನ ಮನೆಗಳಲ್ಲಿ ನಾವು ಈ ಚಿತ್ರಕಲೆಯನ್ನು ಕಾಣುತ್ತೇವೆ. ಆದರೆ ಇದನ್ನು ಬೆಡ್ ರೂಮ್ ನಲ್ಲಿ ಇಡಬೇಡಿ. ಯಾಕೆಂದರೆ ಸಂಗಾತಿಯು ಮುಖವಾಡ ಧರಿಸಿಕೊಂಡು ಸಂಬಂಧದಲ್ಲಿ ಇರಬಹುದು. ಇದರಿಂದ ಸಂಬಂಧವು ಕೆಡಬಹುದು.

ಬಹುಪತ್ನಿತ್ವ ವರ್ಣಚಿತ್ರ
ನಾಲ್ಕು ಅಥವಾ ಐದು ಮಂದಿ ಮಹಿಳೆಯರೊಂದಿಗೆ ಒಬ್ಬ ಪುರುಷನು ನಿಂತಿರುವಂತಹ ವರ್ಣಚಿತ್ರವನ್ನು ನೀವು ನೋಡಿರಬಹುದು. ಇಂತಹ ವರ್ಣಚಿತ್ರವು ಬಹುಪತ್ನಿತ್ವವನ್ನು ಸೂಚಿಸುತ್ತದೆ. ಬೆಡ್ ರೂಮ್‌ನಲ್ಲಿ ಇದನ್ನು ಇಡಲೇಬಾರದು.

ಯುದ್ಧದ ವರ್ಣಚಿತ್ರಗಳು
ಇಂತಹ ವರ್ಣಚಿತ್ರಗಳನ್ನು ಸಂಪೂರ್ಣವಾಗಿ ಕಡೆಗಣಿಸಬೇಕು. ಶವಗಳು, ಗುಂಡು, ಮಕ್ಕಳು ಅಳುವ ಮತ್ತು ಜನರು ಸಾಯುವಂತಹ ವರ್ಣಚಿತ್ರಗಳನ್ನು ಬೆಡ್ ರೂಮ್‌ನಿಂದ ದೂರವಿಡಿ.

ಬೇಟಿಯಾಡುವ ವರ್ಣಚಿತ್ರ
ತಮ್ಮ ಬೇಟಿಗೆ ಕಾಯುತ್ತಿರುವಂತಹ ಚಿತ್ರವಿರುವ ಮತ್ತು ಬೇಟೆ ಸಿಕ್ಕಿದ ಬಳಿಕ ಅದನ್ನು ಆನಂದಿಸುವಂತಹ ವರ್ಣಚಿತ್ರಗಳನ್ನು ಕಡೆಗಣಿಸಿ. ಇದು ಸಂಬಂಧದಲ್ಲಿ ಹಿಂಸೆಯನ್ನು ಉಂಟು ಮಾಡುವುದು. ಇಂತಹ ಯಾವುದೇ ವರ್ಣಚಿತ್ರಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಈಗಲೇ ತೆಗೆದುಹಾಕಿ.



Click it and Unblock the Notifications
