For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಸ್ತ್ರ-ನೆನಪಿನಲ್ಲಿಟ್ಟು ಕೊಳ್ಳಬೇಕಾದ ಸಂಗತಿಗಳು

By Manu
|

ವಾಸ್ತು ಶಾಸ್ತ್ರವನ್ನು ನಂಬುವುದಾದರೆ ಕೆಲವೊಂದು ದಿಕ್ಕುಗಳಿಗೆ ಸರಿಯಾಗಿ ನಮ್ಮ ಮನೆಯ ಪ್ರವೇಶದ್ವಾರವಿರಬೇಕು. ಕೋಣೆಗಳು ಕೂಡ ಕೆಲವು ದಿಕ್ಕುಗಳಲ್ಲಿ ಇರಬೇಕು. ಹೀಗೆ ಪ್ರತಿಯೊಂದಕ್ಕೂ ವಾಸ್ತು ಶಾಸ್ತ್ರವಿದೆ.

ನಮ್ಮ ಆರೋಗ್ಯ ಯಾವಾಗಲೂ ಸರಿಯಲ್ಲವೆಂದಾದರೆ ಮನೆಯಲ್ಲಿ ಏನೋ ಒಂದು ಸಮಸ್ಯೆಯಿದೆ ಎಂದರ್ಥ. ಇನ್ನು ಆರ್ಥಿಕವಾಗಿ ದಿನೇ ದಿನೇ ಕುಗ್ಗುತ್ತಲಿದ್ದರೆ, ಮನೆಯಲ್ಲಿ ಏನೋ ವಾಸ್ತು ಸಮಸ್ಯೆಯಿರಬಹುದು. ಇದರಿಂದಾಗಿ ಹೀಗೆ ಆಗುತ್ತಿದೆ. ಇದನ್ನು ಬೇಗನೆ ನಿವಾರಿಸಿಕೊಳ್ಳಬೇಕಾಗಿದೆ ಎಂದೆನಿಸಿಕೊಳ್ಳುತ್ತೇವೆ. ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ

ಆದರೆ ಇದಕ್ಕೆಲ್ಲಾ ವಾಸ್ತು ತಜ್ಞರನ್ನು ಕರೆಸಿದರೆ ಅದರಿಂದ ನಿಮಗೆ ತುಂಬಾ ಖರ್ಚು. ಚಿಂತಿಸದಿರಿ, ಇದಕ್ಕೆಂದೇ ಬೋಲ್ಡ್ ಸ್ಕೈ ಹೇಳಿರುವ ಕೆಲವೊಂದು ವಾಸ್ತುವನ್ನು ತಿಳಿದುಕೊಂಡು ನಿಮ್ಮ ಸಮಸ್ಯೆ ನಿವಾರಿಸಬಹುದು. ನಾವು ಹೇಳುವಂತಹ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಆದಷ್ಟು ಬೇಗ ಮನೆಯಿಂದ ದೂರವಿಟ್ಟು ನಿಮ್ಮ ಆರ್ಥಿಕ ಸಮಸ್ಯೆಯನ್ನು ಸರಿಮಾಡಿಕೊಳ್ಳಿ, ಮುಂದೆ ಓದಿ... ವಾಸ್ತು ಶಾಸ್ತ್ರ: ನೀವು ತಿಳಿಯಬೇಕಾದ ದಿಕ್ಕಿನ ಪ್ರಾಮುಖ್ಯತೆ

ಪಾರಿವಾಳದ ಗೂಡು

ಪಾರಿವಾಳದ ಗೂಡು

ಮನೆಯಲ್ಲಿ ಪಾರಿವಾಳದ ಗೂಡನ್ನು ಇಡುವುದರಿಂದ ಮನೆಯಲ್ಲಿ ಅಸ್ಥಿರತೆ ಉಂಟಾಗಿ ಬಡತನ ಕಾಣಿಸಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ಇದು ಇದೆಯೆಂದಾದರೆ ಅದನ್ನು ದೂರವಿಡಿ.

ಜೇನು ಗೂಡು

ಜೇನು ಗೂಡು

ಜೇನು ಗೂಡು ನಿಮಗೆ ಮಾತ್ರ ಅಪಾಯ ಉಂಟುಮಾಡುವುದಲ್ಲದೆ ದುರಾದೃಷ್ಟ ಮತ್ತು ಬಡತನ ತರವುದು. ಮನೆಯಲ್ಲಿ ಜೇನುಗೂಡು ಇದ್ದರೆ ಅದನ್ನು ತೆಗೆಯುವ ನಿಪುಣರಿಂದ ತೆಗೆಸಿಕೊಳ್ಳಿ.

ಜೇಡರ ಬಲೆ

ಜೇಡರ ಬಲೆ

ಜೇಡರ ಬಲೆಯು ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟದು ನಡೆಯುತ್ತಾ ಇರುತ್ತದೆ ಎನ್ನುವ ಸೂಚನೆಯಾಗಿದೆ. ನೋಡಿದ ಕೂಡಲೇ ಅದನ್ನು ತೆಗೆದುಬಿಡಿ ಮತ್ತು ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ.

ಒಡೆದ ಕನ್ನಡಿ

ಒಡೆದ ಕನ್ನಡಿ

ವಾಸ್ತು ಪ್ರಕಾರ ಒಡೆದ ಕನ್ನಡಿಯು ತುಂಬಾ ಕೆಟ್ಟದು ಮತ್ತು ಇದು ಮನೆಯೊಳಗೆ ನಕಾರಾತ್ಮಕ ಅಂಶಗಳನ್ನು ಮತ್ತು ಬಡತನವನ್ನು ಸೆಳೆಯುತ್ತದೆ. ಮನೆಯಲ್ಲಿರುವ ಒಡೆದ ಕನ್ನಡಿಯನ್ನು ದೂರ ಬಿಸಾಡಿ.

ಬಾವಲಿ

ಬಾವಲಿ

ಬಾವಲಿಗಳನ್ನು ತುಂಬಾ ಅನಾರೋಗ್ಯ, ದುರಾದೃಷ್ಟದ ಪರಿಸ್ಥಿತಿ, ಬಡತನ ಮತ್ತು ಕೆಲವೊಮ್ಮೆ ಸಾವು ಉಂಟು ಮಾಡಬಹುದು ಎಂದು ನಂಬಲಾಗಿದೆ. ನಿಮ್ಮ ಪ್ರದೇಶದಲ್ಲಿ ಬಾವಲಿ ಕಂಡುಬಂದರೆ ಸಂಜೆಯಾಗುತ್ತಿರುವಂತೆ ಮನೆಯ ಬಾಗಿಲುಗಳನ್ನು ಮುಚ್ಚಿಕೊಳ್ಳಿ.

ಗೋಡೆಯಲ್ಲಿ ಬಿರುಕು

ಗೋಡೆಯಲ್ಲಿ ಬಿರುಕು

ಗೋಡೆಯಲ್ಲಿ ಬಿರುಕು ಕಂಡುಬಂದರೆ ತಕ್ಷಣ ಅದನ್ನು ರಿಪೇರಿ ಮಾಡಿಸಿಕೊಳ್ಳಿ. ಇದು ಕಣ್ಣು ನೋವು ತರುವುದು ಮಾತ್ರವಲ್ಲದೆ ದುರಾದೃಷ್ಟ ಮತ್ತು ಬಡತನವನ್ನು ಆಮಂತ್ರಿಸುತ್ತದೆ.

ಸೋರುವ ನಳ್ಳಿಗಳು

ಸೋರುವ ನಳ್ಳಿಗಳು

ನಳ್ಳಿಗಳು ಸೋರುತ್ತಿರುವ ಕೇವಲ ನೀರು ವ್ಯರ್ಥವಾಗುವುದು ಮಾತ್ರವಲ್ಲದೆ ಮನೆಯಿಂದ ಧನಾತ್ಮಕ ಶಕ್ತಿಯು ಹೊರಹೋಗುತ್ತದೆ. ಸೋರುವ ನಳ್ಳಿಯಿದ್ದರೆ ಅದನ್ನು ಆದಷ್ಟು ಬೇಗನೆ ರಿಪೇರಿ ಮಾಡಿಕೊಳ್ಳಿ.

ಟೇರೆಸ್

ಟೇರೆಸ್

ಟೇರೆಸ್ ಮೇಲೆ ನಾವು ಬೇಡದ ಸಾಮಾನುಗಳನ್ನು ಮತ್ತು ಕಸವನ್ನು ಹಾಕುವುದು ಸಾಮಾನ್ಯವಾಗಿದೆ. ಟೇರೆಸ್ ಮೇಲೆ ಕಸಕಡ್ಡಿಗಳಿಂದ ತುಂಬಿದ್ದರೆ ಅದನ್ನು ತಕ್ಷಣ ಸ್ವಚ್ಛಗೊಳಿಸಿ. ಯಾಕೆಂದರೆ ಕೊಳಕಾಗಿರುವ ಟೇರೆಸ್ ಮನೆಗೆ ಬಡತನವನ್ನು ಉಂಟು ಮಾಡುವುದು.

ಬಾಡಿದ ಹೂವುಗಳು

ಬಾಡಿದ ಹೂವುಗಳು

ಪ್ರತಿದಿನವೂ ನೀವು ದೇವರನ್ನು ಪ್ರಾರ್ಥಿಸುವಾಗ ಬಾಡಿದ ಹೂವುಗಳನ್ನು ದೇವರಿಗೆ ಅರ್ಪಿಸಬೇಡಿ. ಪ್ರಾರ್ಥನೆಗೆ ಮೊದಲು ಕೋಣೆಯನ್ನು ಸರಿಯಾಗಿ ಸ್ವಚ್ಛ ಮಾಡಿಕೊಳ್ಳಿ. ಬಾಡಿದ ಹೂವುಗಳಿಂದ ಬಡತನ ಉಂಟಾಗಬಹುದು.

ಒಣಗಿದ ಎಲೆಗಳು

ಒಣಗಿದ ಎಲೆಗಳು

ಮನೆಯ ಒಳಗಡೆ ಏನಾದರೂ ಗಿಡಗಳು ಇದ್ದರೆ ಅದರಲ್ಲಿನ ಒಣಗಿದ ಎಲೆಗಳನ್ನು ತೆಗೆಯುತ್ತಾ ಇರಿ. ಯಾಕೆಂದರೆ ಒಣಗಿದ ಎಲೆಗಳಿಂದ ನಿಮ್ಮ ಮನೆಯೊಳಗೆ ನಕಾರಾತ್ಮಕ ಅಂಶಗಳು ಬರಬಹುದು. ಇದರಿಂದಾಗಿ ಆರ್ಥಿಕ ಸಮಸ್ಯೆ ಎದುರಾಗಬಹುದು.

ಬಿಡಿಯಾದ ವಯರ್‌ಗಳು

ಬಿಡಿಯಾದ ವಯರ್‌ಗಳು

ಮನೆಯಲ್ಲಿ ಬಿಡಿಯಾಗಿರುವ ವಯರ್‌ನ್ನು ಇಟ್ಟುಕೊಳ್ಳಬೇಡಿ. ಇದನ್ನು ಹೊರತುಪಡಿಸಿ ನಿಮ್ಮ ಮನೆಯ ಯಾವುದಾದರೂ ಎಲೆಕ್ಟ್ರಾನಿಕ್ ಸಾಧನಗಳು ಕೆಟ್ಟುಹೋಗಿದ್ದರೆ ಅದನ್ನು ಆದಷ್ಟು ಬೇಗನೆ ಸರಿಪಡಿಸಿಕೊಳ್ಳಿ ಅಥವಾ ಅದನ್ನು ಮನೆಯಿಂದ ಹೊರಗಿಡಿ.

ಹಣವನ್ನು ಆಕರ್ಷಿಸುವುದು ಹೇಗೆ?

ಹಣವನ್ನು ಆಕರ್ಷಿಸುವುದು ಹೇಗೆ?

ಯಾವುದರಿಂದಾಗಿ ಹಣವನ್ನು ಆಕರ್ಷಿಸಬಹುದು ಎನ್ನುವುದರ ಬಗ್ಗೆ ನಾವಿಲ್ಲಿ ಮಾತನಾಡುವ. ಉತ್ತರ ಭಾಗದಲ್ಲಿ ಕೋಣೆಯಿದ್ದರೆ ಅದಕ್ಕೆ ನೀಲಿ ಬಣ್ಣವನ್ನು ಹಚ್ಚಿ. ಇದಕ್ಕೆ ಕೆಂಪು ಅಥವಾ ಕಡುಗೆಂಪು ಬಣ್ಣದ ಪಟ್ಟಿ ಬಳಿಯಬೇಡಿ.

English summary

if you want be-rich remove these things from your house

According to Vastu, there are many things which if kept in the house, can drain you of your finances and bring in poverty. Here are the things that you should throw out of your house if you want to attract wealth.
X
Desktop Bottom Promotion