For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ

By Lekhaka
|

ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹಾರವಾದರೂ ಹೇಗೆ ಕಂಡುಹಿಡಿಯಲು ಸಾಧ್ಯ. ಹೀಗೆ ನಿಮ್ಮ ಜೀವನದಲ್ಲೂ ಹಲವುಬಾರಿ ಯಾವುದೇ ಸರಿಯಾದ ಕಾರಣವಿಲ್ಲದೆ ಸಮಸ್ಯೆಗಳು ಎದುರಾಗಿರಬಹುದು. ಯಾವುದೇ ವೈದ್ಯರಲ್ಲಿ ಹೋದರೂ ಅನಾರೋಗ್ಯವೇ ಗುಣವಾಗುವುದಿಲ್ಲ, ಯಾವುದೇ ವ್ಯವಹಾರದಲ್ಲೂ ಲಾಭವಾಗುವುದಿಲ್ಲ ಹೀಗೆ ಅನೇಕ ವೇಳೆ ಏನೇ ಮಾಡಿದರೂ ನಷ್ಟವೇ ಆಗುತ್ತಿರಬಹುದು. ನಿಮ್ಮ ಪ್ರಯತ್ನದ ಹೊರತಾಗಿಯೂ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಕೈ ಹಿಡಿಯುವ ಇನ್ನೂ ಅನೇಕ ವಿಷಗಳಿವೆ.

ಇತ್ತೀಚಿನ ಒತ್ತಡದ ದಿನಚರಿಗಳಲ್ಲಿ ನಮ್ಮ ಆರೋಗ್ಯ ಯಾಕೆ ಹಾಳಗುತ್ತಿದೆ, ಸಂಪತ್ತು ಏನಾಗುತ್ತಿದೆ ಸಂಬಂಧಗಳು ಯಾಕೆ ಹಾಳಗುತ್ತಿವೆ ಎಂದು ತಿಳಿಯಲು ನಮ್ಮಿಂದ ಆಗುತ್ತಿಲ್ಲ. ಇವುಗಳಲ್ಲಿ ಹೆಚ್ಚಿನವು ವಾಸ್ತು ಅಥವಾ ಫೆಂಗ್ ಶುಯಿ ಯಲ್ಲಿರುವ ದೋಷದ ಕಾರಣದಿಂದ ಆಗುತ್ತಿವೆ. ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ವಾಸ್ತು ಮತ್ತು ಫೆಂಗ್ ಶುಯಿ ಪರಿಣತರು ನೀಡಿರುವ ಕೆಲವು ಸಲಹೆಗಳು ನಿಮ್ಮ ಬದುಕನ್ನು ಹಸನು ಮಾಡಲು ಸಹಕಾರಿಯಾಗಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವು ಇಲ್ಲಿವೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಮಧ್ಯಭಾಗದಲ್ಲಿ ನಿಲ್ಲಿ ಹಾಗೂ ಕೈಯಲ್ಲಿ ಕಂಪಾಸನ್ನು ಹಿಡಿದುಕೊಳ್ಳಿ ಹಾಗೂ ನಿಮ್ಮ ಮನೆಯ ದಿಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಯಿರಿ. ನಿಮ್ಮ ಮನೆಯ ಮುಖ್ಯ ದ್ವಾರ ನಿಮ್ಮ ಮನೆಯ ಬಾಯಿಯಾಗಿದ್ದು ಅದು ನಿಮ್ಮ ಮನೆಗೆ ಶಕ್ತಿಯನ್ನು ತರುತ್ತದೆ. ಮನೆಯ ನೈಋತ್ಯ ಭಾಗಕ್ಕೆ ಮುಖ್ಯದ್ವಾರ ಇರುವ ಮನೆಯನ್ನು ಎಂದೂ ಆರಿಸಿಕೊಳ್ಳಬೇಡಿ. ಇದರಿಂದಾಗಿ ಮನೆಗೆ ದುಷ್ಟ ಶಕ್ತಿಗಳ ಆಗಮನವಾಗಿ ಮನೆಯಲ್ಲಿ ಅಶಾಂತಿ ಮನೆ ಮಾಡುತ್ತದೆ. ಈಗ ನೀವಿರುವ ಮನೆಯಲ್ಲಿ ಮುಖ್ಯದ್ವಾರ ನೈಋತ್ಯ ದಿಕ್ಕಿನಲ್ಲಿಯೇ ಇದೆ ಎಂದಾದರೆ ಎರಡು ಹನುಮಾನ್ ಟೈಲ್ಸ್ ಗಳನ್ನು ಹಾಕಿ ಹಾಗೂ ವ್ಯತ್ಯಾಸ ಗಮನಿಸಿ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ದೇವಾಲಯ ವಾಸ್ತು ನಿಯಮಗಳ ಮುಖ್ಯ ಸ್ಥಾನವಾಗಿದೆ. ಇದನ್ನು ಈಶಾನ್ಯ ದಿಕ್ಕಿಗೆ ಇಡಿ ಹಾಗೂ ನಿಮ್ಮ ನೆರವೇರದ ಎಲ್ಲಾ ಕಾರ್ಯಗಳು ಹೇಗೆ ಸಾಂಗವಾಗಿ ನೆರವೇರುತ್ತವೆ ಎಂದು ಗಮನಿಸಿ. ಮತ್ತು ಪೂಜೆಯ ಸಮಯದಲ್ಲಿ ಯಾವಾಗಲೂ ಪೂರ್ವ ದಿಕ್ಕಿಗೆ ಮುಖ ಮಾಡಲು ನೆನಪಿರಲಿ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ಅಡುಗೆ ಮನೆ ಎಂದಿಗೂ ಸಂಪತ್ತಿನ ಸೂಚಕವಾಗಿದೆ ಹಾಗೂ ಇದನ್ನು ಎಂದಿಗೂ ಆಗ್ನೇಯ ದಿಕ್ಕಿನಲ್ಲಿಡಲು ಮರೆಯದಿರಿ. ಉತ್ತರ ಅಥವಾ ಈಶಾನ್ಯದಲ್ಲಿರುವ ಅಡುಗೆ ಮನೆ ಖಂಡಿತ ನಿಮ್ಮ ಮನೆಗೆ ಹಣಕಾಸಿನ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತರುತ್ತದೆ. ಈಗಾಗಲೇ ನಿಮ್ಮ ಮನೆಯ ಅಡುಗೆ ಮನೆ ಇದೇ ದಿಕ್ಕಿನಲ್ಲಿದ್ದರೆ ಮೂರು ಕಂದು ಬಣ್ಣದ ಬೌಲ್ ಗಳನ್ನು ಮೇಲೆ ಕೆಳಗೆ ಮಾಡಿ ನೇರು ಹಾಕಿ. ಆದರೆ ಇದು ಅಡುಗೆ ಒಲೆಯ ಮೇಲೆ ಬಾರದ ಹಾಗೆ ಜಾಗೃತೆ ವಹಿಸಿ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ಸ್ನಾನಗೃಹಗಳು ಮತ್ತು ಶೌಚಾಲಯಗಳು ನರಕದ ಶಕ್ತಿಯನ್ನು ಪಡೆದಿರುತ್ತವೆ. ಹಾಗಾಗಿ ಇವನ್ನು ದಕ್ಷಿಣ ಅಥವಾ ಪಶ್ಚಿಮದಲ್ಲಿಡಿ. ಆದರೆ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಎಂದಿಗೂ ಇಡಬೇಡಿ, ಹೀಗೆ ಮಾಡಿದ ಸಂದರ್ಭದಲ್ಲಿ ಅವು ಆರ್ಥಿಕ, ಆರೋಗ್ಯ ಸಂಬಂಧಿ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ತಂದೊಡ್ಡುತ್ತವೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ಮನೆಯ ಮಧ್ಯಭಾಗ ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು ಇಲ್ಲಿಂದ ಮನೆಯ ಎಲ್ಲಾ ಮುಖ್ಯ ಕೆಲಸ ಕಾರ್ಯಗಳು ನಡೆಯುತ್ತವೆ. ಇದುಯಾವಾಗಲೂ ತೆರೆದಿರಬೇಕು ಹಾಗೂ ಅಡೆ ತಡೆ ರಹಿತವಾಗಿರಬೇಕು. ಇಲ್ಲಿ ಗೋಡೆ ಇದ್ದರೆ ಉದರ ಸಂಬಂಧಿ ಹಾಗೂ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ಇಲ್ಲಿ ಒಂದು ಝೀರೋ ವಾಲ್ಟ್ ನ ನೀಲಿ ಬಣ್ಣದ ಒಂದು ಬಲ್ಪನ್ನು ಹಚ್ಚಿಡಿ ಹಾಗೂ ಇದು ದಿನ ಇಪ್ಪತ್ತನಾಲ್ಕು ಗಂಟೆಯೂ ಬೆಳಗುತ್ತಿರಲಿ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ಮನೆಗೆ ಬಣ್ಣ ಬಳಿಯುವಾಗ ಬಹಳ ಪ್ರಕಾಶಮಾನವಾದ ಬಣ್ಣಗಳಾದ ಕೆಂಪು ಮತ್ತು ನೇರಳೆ ಬಣ್ಣಗಳನ್ನು ಬಳಸಬೇಡಿ. ಇವು ಅನಾರೋಗವನ್ನು ಉಂಟುಮಾಡುವ ಶಕ್ತಿಯನ್ನು ನಿಮ್ಮ ಮನೆಯಲ್ಲಿ ಹೆಚ್ಚಿಸುತ್ತವೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಮುಖ್ಯ ಮಲಗುವ ಕೋಣೆ (ಮಾಸ್ಟರ್ ಬೆಡ್ ರೂಂ) ನಿಮ್ಮ ಮನೆಯಲ್ಲಿ ಸುಭದ್ರತೆ ನೆಲೆ ಮಾಡಲು ಮುಖ್ಯವಾಗಿದೆ. ಹಾಗೂ ಇದು ಯಾವಾಗಲೂ ನೈಋತ್ಯ ದಿಕ್ಕಿನಲ್ಲಿರಲಿ. ಹಾಗೂ ಮಲಗುವಾಗ ಯಾವಾಗಲೂ ನಿಮ್ಮ ತಲೆ ದಕ್ಷಿಣ ಅಥವಾ ಪಶ್ಚಿಮಕ್ಕ್ಕೆ ತಲೆ ಮಾಡಿ ಮಲಗಿ. ಆದರೆ ಮನೆಯ ಮುಖ್ಯ ದುಡಿಯುವ ಯಜಮಾನ ಈಶಾನ್ಯ ದಿಕ್ಕಿಗೆ ತಲೆ ಮಾಡಿ ಮಲಗಲಿ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ಮನೆಯ ಯಾವುದೇ ಭಾಗದಲ್ಲಿ ಕತ್ತರಿಸಿದ ಭಾಗಗಳಿದ್ದರೆ ಮನೆಗೆ ಶುಭವಲ್ಲ. ಅದರಲ್ಲೂ ಮುಖ್ಯವಾಗಿ ನೈಋತ್ಯ ಈಶಾನ್ಯ, ಆಗ್ನೇಯ ಹಾಗೂ ಉತ್ತರ ದಿಕ್ಕಿನಲ್ಲಿ ಇದ್ದಲ್ಲಿ ಗಂಭೀರ ಸಮಸ್ಯೆಗಳು ಬರುತ್ತವೆ. ಕತ್ತರಿಸಿದ ಸಂಜ್ಹೆಗಳ ಹಿಂದೆ ದೊಡ್ಡ ಕಥೆಯೇ ಇದೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ಮನೆಯ ಶಯನ ಗೃಹದಲ್ಲಿ ನೀರು ಅಥವಾ ಜಲಪಾತದ ಚಿತ್ರಗಳನ್ನು ಇಡಬೇಡಿ. ಇವು ನಿಮ್ಮ ಮನೆಗೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ದೇವರ ಮನೆಯನ್ನು ಯಾವುದೇ ಕಪ್ ಬೋರ್ಡ್ ಅಥವಾ ಸೆಲ್ಫ್ ನ ಕೆಳಗೆ ಇಡಬೇಡಿ ಹೀಗೆ ಮಾಡಿದ್ದಲ್ಲಿ ನೀವು ಯಾವಾಗಲೂ ಒತ್ತಡದಲ್ಲಿರಬೇಕಾದ ಅನಿವಾರ್ಯತೆ ಬರುತ್ತದೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯೊಳಗೆ ಬೋನ್ಸಾಯಿ ಗಿಡಗಳನ್ನು ಎಂದಿಗೂ ಇಡಬೇಡಿ ಇವು ನಿಮ್ಮ ಜೀವನದ ಯಾವುದೇ ಒಂದು ಭಾಗವನ್ನು ಋಣಾತ್ಮಕವಾಗಿ ಪ್ರಭಾವಿಸುವ ಸಾಧ್ಯತೆ ಇದೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯನ್ನು ಸಮುದ್ರದ ಉಪ್ಪುನೀರಿನಲ್ಲಿ ವಾರದಲ್ಲಿ ಎರಡು ಬಾರಿ ಸ್ವಚ್ಛಗೊಳಿಸುವುದು ನಿಮ್ಮ ಮನೆಯನ್ನು ದುಷ್ಟ ಶಕ್ತಿಗಳಿಂದ ದೂರವಿಡಲು ನೆರವಾಗುತ್ತದೆ.

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ

ನಿಮ್ಮ ಮನೆಯಲ್ಲಿ ಬಹಳ ಚರ್ಚೆಗಳು ನಡೆಯುತ್ತಿವೆ ಎಂದಾದಲ್ಲಿ ಯಾವುದೇ ಒಂದು ಶಾಂತವಾದ ಸಂಗೀತದ ಸಿ.ಡಿ ಯನ್ನು ದಿನದಲ್ಲಿ ಮೂರು ನಾಲ್ಕು ಬಾರಿ ಹಾಕಿ ಶಾಂತತೆಯನ್ನು ಅನುಭವಿಸಿ.

ಬಿಳಿ ಚಹಾ ನಿಮ್ಮ ಮನೆಗೆ ಸ್ಟಾಫ್ ಮತ್ತು ಸ್ಟೆಪ್ಟೊಕೊಕಸ್ ಬಾಕ್ಟೀರಿಯಾ ನ್ಯುಮೋನಿಯಾ ಮತ್ತು ಹುಳುಕು ಹಲ್ಲಿನ ತೊಂದರೆಗಳಿಂದ ದೂರವಿಡುತ್ತದೆ.

English summary

Ways to Increase Positivity in Home

Here are some commandments which may help you to increase positive energy in your home. Here are some tips from a Vastu and Feng Shui expert for a life full of harmony.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more