For Quick Alerts
ALLOW NOTIFICATIONS  
For Daily Alerts

ಅದೃಷ್ಟ ತರುವ ಗಿಡಗಳಿವು! ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ

By Staff
|

ನೀವು ಯಾವುದೇ ತೋಟ ಅಥವಾ ಮನೆಯ ಮುಂದೆ ಗಿಡವನ್ನು ತಂದು ನೆಟ್ಟರೆ ಅದು ತುಂಬಾ ದೀರ್ಘ ಮತ್ತು ಸಮೃದ್ಧವಾಗಿ ಬೆಳೆಯಬೇಕು ಎಂದು ಅದಕ್ಕೆ ಪ್ರತಿಯಾಗಿ ಪ್ರಕೃತಿ ಕೂಡ ಅದನ್ನೇ ಪ್ರತಿಯಾಗಿ ಬಯಸುವುದು. ನೀವು ಕೂಡ ಅದನ್ನೇ ಆಶಿಸುತ್ತೀರಾ? ಗಿಡವು ನಿಮಗೆ ಇದೇ ರೀತಿಯ ಅಭಿವೃದ್ಧಿ, ಸಮೃದ್ಧಿ, ಸಂಪತ್ತು ಮತ್ತು ಆರೋಗ್ಯವನ್ನು ಆಶೀರ್ವದಿಸಬಹುದು. ಮನೆಯಲ್ಲಿ ನೀವು ಬೆಳೆಸಬಹುದಾದ ಹಲವಾರು ರೀತಿಯ ವಾಸ್ತುಗಿಡಗಳು ಲಭ್ಯವಿದೆ ಮತ್ತು ಇದಕ್ಕೆ ಪ್ರತಿಯಾಗಿ ಅದು ಮನೆಯ ಯಜಮಾನನಿಗೆ ಒಳ್ಳೆಯ ಗುಣಮಟ್ಟದ ಜೀವನವನ್ನು ಬಯಸುವುದು. ಆಧುನಿಕ ಯುಗದಲ್ಲಿ ಕೆಲವೊಂದು ಜನರು ಕಚೇರಿಯಲ್ಲಿ ಹಣ ಬರಲಿ ಎಂದು ವಾಸ್ತು ಗಿಡಗಳನ್ನು ಇಡುವರು. ಮನೆಯಲ್ಲೂ ಕೆಲವೊಂದು ವಾಸ್ತು ಗಿಡಗಳನ್ನು ಬೆಳೆಸಬಹುದಾಗಿದೆ. ಇದು ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ಸಂಪೂರ್ಣ ಅಭಿವೃದ್ಧಿಗೆ ಲಾಭಕಾರಿಯಾಗಿರುವುದು.

ವಾಸ್ತು ಗಿಡಗಳು ಹಲವಾರು ವಿಧ, ಗಾತ್ರ ಮತ್ತು ವಿನ್ಯಾಸದಲ್ಲಿ ಬರುವುದು ಮತ್ತು ಇದು ಮನೆಯ ಒಳಗಿನ ಅಲಂಕಾರಕ್ಕೂ ಮೆರಗು ನೀಡುವುದು. ವಾಸ್ತು ಗಿಡವನ್ನು ಮನೆಯಲ್ಲಿ ಇಡುವುದಕ್ಕೆ ಕೆಲವೊಂದು ವೈಜ್ಞಾನಿಕ ಕಾರಣಗಳು ಕೂಡ ಇದೆ. ಯಾವ ಗಿಡಗಳನ್ನು ಮನೆಯ ಒಳಗಡೆ ಇಡಬೇಕು ಎಂದು ತಿಳಿದುಕೊಳ್ಳುವ ಜತೆಗೆ ಫೆಂಗ್ ಶೂಯಿ ಪ್ರಕಾರ ಅದನ್ನು ಯಾವ ಭಾಗದಲ್ಲಿ ಇಡಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯವಾಗಿರುವುದು. ಕೆಲವೊಂದು ಗಿಡಗಳು ಮಲಗುವ ಮನೆಯಲ್ಲಿ ಇಡಬಹುದು, ಇನ್ನು ಕೆಲವೊಂದನ್ನು ವಾಸದ ಕೋಣೆಯಲ್ಲಿ. ಅದೇ ರೀತಿಯಾಗಿ ಗಿಡಗಳ ಆಯ್ಕೆ ಮತ್ತು ಅದನ್ನು ಇಡಬೇಕಾದ ಸ್ಥಳದ ಬಗ್ಗೆ ವಾಸ್ತುವಿನಲ್ಲಿ ಕೆಲವೊಂದು ನಿಯಮಗಳು ಕೂಡ ಇದೆ. ಇದನ್ನು ಪಾಲಿಸಿಕೊಂಡು ಹೋಗಬೇಕು. ವಾಸ್ತು ಪ್ರಕಾರ ಇರುವಂತಹ ಕೆಲವೊಂದು ಗಿಡವು ನಿಮ್ಮ ಬಾಳಿನಲ್ಲಿ ಅದೃಷ್ಟ ತರುತ್ತವೆಯಂತೆ, ಅಂತಹ ಗಿಡಗಳು ಯಾವುದು ಎಂಬುದನ್ನು ತಿಳಿಯಲು ಮುಂದೆ ಓದಿ

ಅದೃಷ್ಟ ತರುವ ಪುಟ್ಟ ಬಿದಿರು

ಅದೃಷ್ಟ ತರುವ ಪುಟ್ಟ ಬಿದಿರು

ಚೀನೀಯರ ಅದೃಷ್ಟ ತರುವ ಚಿಕ್ಕ ಚಿಕ್ಕ ಬಿದಿರಿನ ಗಿಡಗಳು ಈಗ ಭಾರತದಲ್ಲಿಯೂ ಬಹಳಷ್ಟು ಜನಪ್ರಿಯತೆ ಕಂಡುಕೊಳ್ಳುತ್ತಿವೆ. ಚಿಕ್ಕ ಚಿಕ್ಕ ಬಿದಿರಿನ ಹಸಿ ಕಡ್ಡಿಗಳನ್ನು ಕಲಾತ್ಮಕವಾಗಿ ಜೋಡಿಸಿ ಮನೆಯ ಒಳಾಂಗಣದಲ್ಲಿ, ಮೇಜು, ಕಿಟಕಿಗಳಲ್ಲೆಲ್ಲಾ ಸ್ಥಳ ಪಡೆಯುತ್ತಿದೆ.....

ಅದೃಷ್ಟ ತರುವ ಪುಟ್ಟ ಬಿದಿರು

ಅದೃಷ್ಟ ತರುವ ಪುಟ್ಟ ಬಿದಿರು

ಚೀನೀಯರು ಇದಕ್ಕೆ ಫೆಂಗ್ ಶುಯಿ ಎಂದು ಕರೆಯುತ್ತಾರೆ. ಸರಳವಾದ ವಿನ್ಯಾಸದಲ್ಲಿ ನಾಲ್ಕು ಬಿದಿರಿನ ಹಸಿ ಕಾಂಡಗಳ ಭಾಗವನ್ನು ಕೆಂಪು ರಿಬ್ಬನ್ ಪಟ್ಟಿಯಿಂದ ಕಟ್ಟಲಾಗಿರುತ್ತದೆ. ಈ ಗಿಡ ಮನೆಯೊಳಗಿದ್ದರೆ ಅದೃಷ್ಟ ಅರಸಿ ಬರುವುದೆಂದು ನಂಬಲಾಗುತ್ತದೆ.

ತುಳಸಿ ಗಿಡ

ತುಳಸಿ ಗಿಡ

ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ತುಳಸಿ ಗಿಡ

ತುಳಸಿ ಗಿಡ

ಇದರ ಎಲೆಗಳು ಹಲವು ಕಾಯಿಲೆಗಳನ್ನು ತೊಳೆದು ಹಾಕುವಂತೆಯೇ ಬಟ್ಟೆಗಳ ಕಲೆಯನ್ನೂ ತೊಲಗಿಸಬಲ್ಲದು. ಮನೆಯಂಗಳದಲ್ಲಿರುವ ತುಳಸಿ ಗಿಡ ಕೆಟ್ಟ ಶಕ್ತಿಗಳನ್ನು ದೂರವಾಗಿಸಿ ಧನಾತ್ಮಕ ಶಕ್ತಿಯನ್ನು ಮನೆಯೊಳಕ್ಕೆ ತರುತ್ತದೆ ಎಂದು ನಂಬಲಾಗಿದೆ.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್

ಅತ್ತೆಯ ನಾಲಿಗೆ (Mother-in-law's tongue) ಎಂಬ ಅನ್ವರ್ಥನಾಮವನ್ನು ಪಡೆದಿರುವ ಈ ಗಿಡದ ಎಲೆಗಳು ಉದ್ದವಾದ ನಾಲಿಗೆಯೊಂದು ನೆಲದಿಂದ ಮೇಲೆ ಚಾಚಿದಂತಿದ್ದು ನಡುವಲ್ಲಿ ಹಸಿರು ಮತ್ತು ಅಂಚುಗಳಲ್ಲಿ ಹಳದಿ ಪಟ್ಟಿಯನ್ನು ಹೊಂದಿದೆ. ಈ ಸಸ್ಯ ಮನೆಯಲ್ಲಿದ್ದರೆ ಮನೆಯೊಳಗಣ ಹಲವು ವಿಷಾನಿಲಗಳನ್ನು ಹೀರಿಕೊಳ್ಳುತ್ತದೆ ಎಂದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ.

ಸ್ನೇಕ್ ಪ್ಲಾಂಟ್

ಸ್ನೇಕ್ ಪ್ಲಾಂಟ್

ಅಲ್ಲದೇ ಇತರ ಗಿಡಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೀರಿ ಅತ್ಯಧಿಕ ಪ್ರಮಾಣದ ಆರ್ದ್ರತೆ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮನೆಯಲ್ಲಿ ಹೆಚ್ಚಿನ ಆರ್ದ್ರತೆ ಇದ್ದು ಚರ್ಮದ ಆರೈಕೆಯಲ್ಲಿ ನೆರವಾಗುತ್ತದೆ. ಇದು ವಾಸ್ತವವಾಗಿ ಆರೋಗ್ಯದ ರೂಪದಲ್ಲಿ ಮನೆಗೆ ಶುಭತರುತ್ತದೆ.

ಮನಿ ಪ್ಲಾಂಟ್

ಮನಿ ಪ್ಲಾಂಟ್

ನಮ್ಮ ವೀಳೆಯದೆಲೆಯೇ ಕೊಂಚ ತೆಳು ಹಸಿರು ಹಳದಿ ಬಣ್ಣಗಳಲ್ಲಿರುವಂತೆ ಕಾಣುವ ಮನಿಪ್ಲಾಂಟ್ ಅತಿ ಸುಲಭವಾಗಿ, ಅತಿ ಕಡಿಮೆ ಆರೈಕೆಯಲ್ಲಿ, ಬರೆಯ ಕಾಂಡವನ್ನು ಕೊಂಚ ನೀರಿನಲ್ಲಿ ಮುಳುಗಿಸಿಟ್ಟರೂ ಸೊಂಪಾಗಿ ಬೆಳೆಯುವ ಗಿಡವಾಗಿದ್ದು ಇದರ ಬೆಳವಣಿಗೆಯೂ ಅತಿ ವೇಗದಲ್ಲಿ ಆಗುತ್ತದೆ. ಈ ಗಿಡ ಮನೆಯಲ್ಲಿದ್ದರೆ ಹಣ ಬರುತ್ತದೆ ಎಂಬ ನಂಬಿಕೆಯಿಂದಲೇ ಈ ಗಿಡಕ್ಕೆ ಮನಿ ಪ್ಲಾಂಟ್ ಎಂಬ ಹೆಸರು ಬಂದಿದೆ.

ಮನಿ ಪ್ಲಾಂಟ್

ಮನಿ ಪ್ಲಾಂಟ್

ವಾಸ್ತವವಾಗಿ ಈ ಗಿಡದ ಬೆಳವಣಿಗೆ ನೆಲದಿಂದ ಮೇಲಕ್ಕೇರುವಂತಿರಬೇಕೇ ಹೊರತು ಮೇಲಿನಿಂದ ಕೆಳಕ್ಕೆ ಬರುವಂತೆ ಅಲ್ಲ. ಕೆಲವರು ಕೀಟಬಾಧೆಯನ್ನು ತಡೆಯಲು, ಅಲಂಕಾರ ಹೆಚ್ಚಲು ತೂಗುಹಾಕುವ ಕುಂಡದಲ್ಲಿ ಈ ಗಿಡವನ್ನು ಬೆಳೆಸುತ್ತಾರೆ. ಆದರೆ ಈ ಪರಿಯಿಂದ ಮನಿ ಪ್ಲಾಂಟ್‌ನ ಶಕ್ತಿಯೂ ವಿರುದ್ದವಾಗುತ್ತದೆ. ಅಂದರೆ ಹಣ ಮನೆಯಿಂದ ಹೊರಹೋಗುತ್ತದೆ. ಆದ್ದರಿಂದ ಸದಾ ಮನಿ ಪ್ಲಾಂಟ್ ಕಳಗಿನಿಂತ ಮೇಲೆ ಹೋಗುವಂತೆ ಮಾತ್ರ ಬೆಳೆಸಿ.

English summary

Best Good Luck Plants For Your Home

Good luck plants are an interesting new trend for your home decor and your garden. Lucky plants are supposed to bring good fortune. Earlier these good luck charms for homes was a local or at best regional trends. Every courtyard would have a Tulsi plant to bring forth auspicious energy into the house But now, we have an information explosion on the internet and with the world so well connected, good luck plants have become more of a global trend. You enter any average Indian home and you will see the famous lucky bamboo plants.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X