For Quick Alerts
ALLOW NOTIFICATIONS  
For Daily Alerts

ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

|

ತುಳಸಿಯು ಹಿಂದೂ ಧಾರ್ಮಿಕ ಸಂಪ್ರದಾಯಗಳ ಪವಿತ್ರ ಸ್ಥಾನವನ್ನು ಹೊಂದಿದೆ. ಭಾರತೀಯರು ತುಳಸಿಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಪೂಜಿಸುತ್ತಾರೆ ಮತ್ತು ಈ ಪವಿತ್ರ ಸಸ್ಯದ ಔಷಧೀಯ ಗುಣಗಳನ್ನು ನೋಡಿದರೆ ನಿಮಗೂ ಅದರ ಮಹತ್ವದ ಅರ್ಥವಾಗುತ್ತದೆ. ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ.

ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ನೋಡಲು

ಪುಟ್ಟದಾಗಿರುವ ಈ ಎಲೆಗಳು ತಲೆನೋವನ್ನು ಗುಣಪಡಿಸುವಲ್ಲಿ, ಬಾಯಿಯ ದುರ್ವಾಸನೆ ಹೋಗಲಾಡಿಸುವಲ್ಲಿ ಮೊದಲಾದ ಚಿಕ್ಕಪುಟ್ಟ ತೊಂದರೆಗಳನ್ನು ಲೀಲಾಜಾಲವಾಗಿ ನಿವಾರಿಸುವುದು ಮಾತ್ರವಲ್ಲದೆ ಮುಖ್ಯವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ. ಬನ್ನಿ ತುಳಸಿ ಎಲೆಯ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ...

ಜ್ವರವನ್ನು ಕಡಿಮೆಗೊಳಿಸುತ್ತದೆ

ಜ್ವರವನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ಯಾವುದೋ ಕಾರಣಕ್ಕೆ ಜ್ವರ ಬಂದಿದ್ದು ಸಾಮಾನ್ಯ ಔಷಧಿಗಳಿಗೆ ಬಗ್ಗದೇ ಇದ್ದಾಗ ತುಳಸಿ ಎಲೆಗಳ ಸೇವನೆಯನ್ನು ದಿನಕ್ಕೆ ಮೂರು ಎಲೆಗಳಿಗೆ ವಿಸ್ತರಿಸಿ ದಿನಕ್ಕೆ ಮೂರು ಹೊತ್ತು ಸೇವಿಸುವುದರಿಂದ ಜ್ವರ ಇಳಿಯಲು ನೆರವಾಗುತ್ತದೆ.

ಸೋಂಕು ಉಂಟಾಗಿದ್ದರೆ ಗುಣವಾಗಲು ನೆರವಾಗುತ್ತದೆ

ಸೋಂಕು ಉಂಟಾಗಿದ್ದರೆ ಗುಣವಾಗಲು ನೆರವಾಗುತ್ತದೆ

ನಮ್ಮ ದೇಹಕ್ಕೆ ಹಲವು ವಿಧದ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಧಾಳಿ ಮಾಡುತ್ತಲೇ ಇರುತ್ತವೆ. ಒಂದು ವೇಳೆ ಯಾವುದೋ ತೊಂದರೆಯಿಂದ ವೈರಸ್ಸೊಂದು ದೇಹದ ಒಂದು ಭಾಗವನ್ನು ಆಕ್ರಮಿಸಲು ಯಶಸ್ವಿಯಾದರೆ ದೇಹ ತನ್ನ ರೋಗ ನಿರೋಧಕ ಶಕ್ತಿಯನ್ನು ಬಳಸಿ ಈ ಸೋಂಕನ್ನು ಎದುರಿಸಲು ಮುನ್ನುಗ್ಗುತ್ತದೆ.ಮುಂದೆ ಓದಿ

ಸೋಂಕು ಉಂಟಾಗಿದ್ದರೆ ಗುಣವಾಗಲು ನೆರವಾಗುತ್ತದೆ

ಸೋಂಕು ಉಂಟಾಗಿದ್ದರೆ ಗುಣವಾಗಲು ನೆರವಾಗುತ್ತದೆ

ದಿನಕ್ಕೊಂದು ತುಳಸಿ ಎಲೆಯನ್ನು ಜಗಿದು ತಿನ್ನುವುದರಿಂದ ಇದರ ಶಿಲೀಂಧ್ರನಾಶಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದರೆ ಕರಗಿಸುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದರೆ ಕರಗಿಸುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗುವುದು ಸಾಮಾನ್ಯವಾಗಿದೆ. ಇದರ ತೊಂದರೆ ಏನೆಂದರೆ ಈ ಕಲ್ಲು ಒಂದು ನಿರ್ದಿಷ್ಟ ಗಾತ್ರಕ್ಕೆ ಬೆಳೆಯುವವರೆಗೂ ನೋವು ನೀಡದೇ ಗೋಪ್ಯವಾಗಿರುತ್ತದೆ. ಒಮ್ಮೆ ಈ ಕಲ್ಲಿನ ಗಾತ್ರ ಮೂತ್ರಪಿಂಡದ ಸಹನೆಗೆ ಮೀರಿತೋ, ಅತೀವ ನೋವು ನೀಡಲು ಪ್ರಾರಂಭಿಸುತ್ತದೆ. ಮುಂದೆ ಓದಿ

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದರೆ ಕರಗಿಸುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದರೆ ಕರಗಿಸುತ್ತದೆ

ತುಳಸಿ ಎಲೆಗಳ ನಿತ್ಯದ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದು ಇದುವರೆಗೆ ಅರಿವಿಗೆ ಬಾರದಿದ್ದರೂ ಕರಗುತ್ತದೆ. ಒಂದು ವೇಳೆ ಮೂತ್ರಪಿಂಡಗಳಲ್ಲಿ ನೋವು ಪ್ರಾರಂಭವಾಗಿದ್ದರೂ ಇದು ಕಡಿಮೆಯಾಗಲು ತುಳಸಿ ನೆರವಾಗುತ್ತದೆ.

ಒಸಡಿನ ಸೋಂಕು ಹೋಗಲಾಡಿಸುತ್ತದೆ

ಒಸಡಿನ ಸೋಂಕು ಹೋಗಲಾಡಿಸುತ್ತದೆ

ಬಾಯಿ ದುರ್ವಾಸನೆಗೆ ಒಂದು ಕಾರಣವೆಂದರೆ ಒಸಡಿನಲ್ಲಿ ಉಳಿದ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಆಹಾರವನ್ನು ಕೊಳೆಸುವುದು. ಮುಂದೆ ಓದಿ

ಒಸಡಿನ ಸೋಂಕು ಹೋಗಲಾಡಿಸುತ್ತದೆ

ಒಸಡಿನ ಸೋಂಕು ಹೋಗಲಾಡಿಸುತ್ತದೆ

ಇದಕ್ಕಾಗಿ ಬೆಳಿಗ್ಗೆ ಹಲ್ಲುಗಳನ್ನು ಬ್ರಶ್ ಮಾಡಿದ ಬಳಿಕ ತುಳಸಿ ಎಲೆಯೊಂದನ್ನು ಬೆರಳುಗಳಲ್ಲಿಯೇ ಹಿಚುಕಿ ಒಸಡುಗಳಿಗೆ ರಸ ತಗಲುವಂತೆ ಹಚ್ಚಿಕೊಳ್ಳಿ. ಇಡಿಯ ದಿನ ಬಾಯಿಯಲ್ಲಿ ದುರ್ವಾಸನೆ ಬರದಿರಲು ಇದು ನೆರವಾಗುತ್ತದೆ.

ಒಣ ಕೆಮ್ಮು ನಿಲ್ಲಿಸುತ್ತದೆ

ಒಣ ಕೆಮ್ಮು ನಿಲ್ಲಿಸುತ್ತದೆ

ಒಂದು ವೇಳೆ ನಿಮ್ಮನ್ನು ಕೆಮ್ಮು ಬಾಧಿಸುತ್ತಿದ್ದು ಕಫವಿಲ್ಲದೇ ಗಂಟಲು ಒಣದಾಗಿದ್ದರೆ ತುಳಸಿ ಎಲೆಯನ್ನು ನೀರಿನೊಂದಿಗೆ ಸೇವಿಸಿದ ಬಳಿಕ ಉತ್ತಮ ಪರಿಣಾಮ ದೊರಕುತ್ತದೆ. ಮುಂದೆ ಓದಿ

ಒಣ ಕೆಮ್ಮು ನಿಲ್ಲಿಸುತ್ತದೆ

ಒಣ ಕೆಮ್ಮು ನಿಲ್ಲಿಸುತ್ತದೆ

ಏಕೆಂದರೆ ತುಳಸಿ ಎಲೆಗಳಲ್ಲಿರುವ ಕೆಮ್ಮು ನಿವಾರಕ ಗುಣ (antitussive property) ಕೆಮ್ಮಿಗೆ ಕಾರಣವಾಗಿರುವ ಕೀಟಾಣುಗಳನ್ನು ಹೊಡೆದೋಡಿಸುತ್ತದೆ ಹಾಗೂ ಇದರ ಕಫಹಾರಿ ಗುಣ ಗಂಟಲಿನಲ್ಲಿನ ಕಫವನ್ನು ನಿವಾರಿಸಲು ನೆರವಾಗುತ್ತದೆ.

ಶ್ವಾಸಕೋಶಗಳಿಗೆ ಉತ್ತಮವಾಗಿದೆ

ಶ್ವಾಸಕೋಶಗಳಿಗೆ ಉತ್ತಮವಾಗಿದೆ

ತುಳಸಿ ಎಲೆಗಳಲ್ಲಿರುವ ಪಾಲಿಫಿನಾಲ್ ಕಣಗಳು ಶ್ವಾಸಕೋಶದಲ್ಲಿ ಅಡಚಣೆಗೆ ಕಾರಣವಾಗಿರುವ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತವೆ. ಮುಂದೆ ಓದಿ

ಶ್ವಾಸಕೋಶಗಳಿಗೆ ಉತ್ತಮವಾಗಿದೆ

ಶ್ವಾಸಕೋಶಗಳಿಗೆ ಉತ್ತಮವಾಗಿದೆ

ಇದರಿಂದ ಶ್ವಾಸಕೋಶಕ್ಕೆ ಪೂರ್ಣವಾಗಿ ಶ್ವಾಸವನ್ನು ಎಳೆದುಕೊಳ್ಳಲು ಸಾಧ್ಯವಾಗುತ್ತದೆ. ತನ್ಮೂಲಕ ಆಮ್ಲಜನಕದ ಪ್ರಮಾಣ ಹೆಚ್ಚಾಗುವುದರಿಂದ ಆರೋಗ್ಯ ಉತ್ತಮಗೊಳ್ಳುವುದು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ತುಳಸಿಯ ಪ್ರತಿರಕ್ಷಾ ಗುಣಗಳು (immunomodulatory properties) ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಮುಂದೆ ಓದಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅಲ್ಲದೇ ಇದರ ಸೋಂಕುನಿವಾರಕ (disinfectant) ಗುಣ ದೇಹಕ್ಕೆ ಧಾಳಿ ಮಾಡುವ ವೈರಸ್ ಗಳನ್ನು ಎದುರಿಸಿ ಸೋಂಕು ಉಂಟಾಗುವುದರಿಂದ ರಕ್ಷಿಸುತ್ತದೆ.

ತಲೆನೋವನ್ನು ನಿವಾರಿಸುತ್ತದೆ

ತಲೆನೋವನ್ನು ನಿವಾರಿಸುತ್ತದೆ

ಸಾಮಾನ್ಯವಾದ ತಲೆನೋವಿಗೆ ತುಳಸಿ ಉತ್ತಮವಾಗಿದೆ. ತುಳಸಿ ರಸದಲ್ಲಿರುವ ನರಗಳನ್ನು ಸಡಿಲಗೊಳಿಸುವ ಗುಣ ಮೆದುಳಿಗೆ ಹೆಚ್ಚಿನ ರಕ್ತ ಸರಬರಾಜು ಮಾಡಲು ನೆರವಾಗುತ್ತದೆ ಹಾಗೂ ಮೂಗು ಕಟ್ಟಿರುವುದನ್ನು ತೆರೆದು ಹೆಚ್ಚಿನ ಆಮ್ಲಜನಕ ಪಡೆಯಲು ನೆರವಾಗುತ್ತದೆ. ಮುಂದೆ ಓದಿ

ತಲೆನೋವನ್ನು ನಿವಾರಿಸುತ್ತದೆ

ತಲೆನೋವನ್ನು ನಿವಾರಿಸುತ್ತದೆ

ಸಾಮಾನ್ಯವಾಗಿ ಮೆದುಳಿಗೆ ರಕ್ತಸರಬರಾಜು ಮಾಡುವ ನಾಳ, ಮೂಗಿನ ಮೇಲೆ, ಎರಡು ಕಣ್ಣುಗಳ ನಡುವೆ ಹಣೆಯ ಹಿಂಬದಿಯಲ್ಲಿ ಇರುವ ಟೊಳ್ಳಾದ ಭಾಗವಾದ ಕುಹರ ಅಥವಾ ಸೈನಸ್ ನಲ್ಲಿ ಸೋಂಕು ಆಗಿದ್ದರೆ ಇದು ತಲೆನೋವಿಗೆ ಕಾರಣವಾಗಬಹುದು. ತುಳಸಿಯ ಸೇವನೆ ಅಥವಾ ತುಳಸಿಯ ಎಣ್ಣೆಗಳನ್ನು ಹಣೆ, ಕುತ್ತಿಗೆಗೆ ಹಿಂಭಾಗ, ಕಿವಿಯ ಹಿಂಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಮೈಗ್ರೇನ್ ನಂತಹ ಅತ್ಯುಗ್ರ ತಲೆನೋವು ಸಹಾ ತಹಬಂದಿಗೆ ಬರುತ್ತದೆ.

English summary

1 Tulsi Leaf A Day For Better Health

Tulsi leaf is the mother and queen of herbs.This little leaf can protect one against any harm or disease. Tulsi leaves are so powerful that it acts as the body's defense against respiratory conditions. Tulsi leaves are effective for treating headaches, a cure for bad breath and above all it is the key to bring up your low immunity. All you need to do is pop in a tulsi leaf every morning on an empty stomach with a glass of water.
X
Desktop Bottom Promotion