For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಬಾಳೆ ಹಣ್ಣು ತಿಂದರೆ ಇಷ್ಟೆಲ್ಲಾ ಪ್ರಯೋಜನವಿದೆಯೇ?

|

ಹಿಂದೊಮ್ಮೆ ಯಾವ್ದೋ ಕೆಲಸದ ಮೇಲೆ ಎಲ್ಲೋ ಹೊರಹೋಗಿದ್ದ ನೀವು, ಮಧ್ಯಾಹ್ನ ಊಟ ಮಾಡೋಕೆ ಸಾಧ್ಯವಾಗ್ದೇ, ಹಸಿತಾ ಇದ್ದ ಹೊಟ್ಟೆನಾ ಹೇಗೆ ಸಮಾಧಾನ ಪಡಿಸಿದ್ರಿ ಅಂತಾ ನಿಮಗೆ ನೆನಪಿದೆಯೇ ? ನಿಜ, ನೀವು ಆಗ ಮೊರೆಹೋಗಿದ್ದು ಬೀದಿಬದಿಯಲ್ಲೇ ತಳ್ಳುಗಾಡೀಲೀ ಮಾರ್ತಾ ಇದ್ದಿದ್ದ ಬಾಳೆಹಣ್ಣುಗಳ ಮೇಲೆ. ದೊಡ್ಡ ಸೈಜಿನ ಒಂದೋ, ಎರಡೋ ಬಾಳೆಹಣ್ಣುಗಳನ್ನ ಹೊಟ್ಟೆಗಿಳಿಸಿಕೊಂಡ್ರೆ ಮುಗೀತು. ಹಸಿವೂ ಮಾಯ, ಆರೋಗ್ಯಯುತವಾದದ್ದೇನನ್ನೋ ತಿಂದ ತೃಪೀನೂ ಜೊತೆಗೆ. ಕೆಲ ಸಮಯದ ಹಿಂದೆ ಮಹಿಳೆಯೋರ್ವಳು ಸತತ 12 ದಿನಗಳ ಕಾಲ ಏನನ್ನೂ ಸೇವಿಸದೇ ಬರೀ ಬಾಳೆಹಣ್ಣುಗಳನ್ನಷ್ಟೇ ಸೇವಿಸಿ ಆರೋಗ್ಯವಾಗಿದ್ದ ಸುದ್ದಿಯೂ ಹರಿದಾಡಿತ್ತು.

ಈ ಬಾಳೆಹಣ್ಣು ಅನ್ನೋದು ಅದೆಂತಹ ಅಮೃತಫಲ ಅನ್ನೋದನ್ನ ಹೇಳೋದಕ್ಕೆಂದೇ ನಾವಿಷ್ಟೆಲ್ಲ ಪೀಠಿಕೆ ಹಾಕಿದ್ದು. ಹೌದು, ಬಾಳೆಹಣ್ಣಿನ ಸದ್ಗುಣಗಳು, ಆರೋಗ್ಯ ಲಾಭಗಳು ಒಂದಲ್ಲ, ಎರಡಲ್ಲ, ಹಲವಾರು. ಬಾಳೆಹಣ್ಣು ಇಷ್ಟೆಲ್ಲ ಆರೋಗ್ಯದಾಯಕ ಅಂತಾದ್ರೂ ಕೂಡ, "ಅತಿಯಾದ್ರೆ ಅಮೃತಾನೂ ವಿಷ" ಅನ್ನೋ ಗಾದೆಮಾತನ್ನ ಬಾಳೆಹಣ್ಣಿನ ವಿಚಾರದಲ್ಲೂ ಮರೆಯೋ ಹಾಗಿಲ್ಲ!! ಹೆಲ್ತ್ ಲೈನ್ ನಿಯತಕಾಲಿಕೆ ಹೇಳೋ ಪ್ರಕಾರ, ದಿನಕ್ಕೊಂದು ಅಥವಾ ಎರಡು ಬಾಳೆಹಣ್ಣುಗಳನ್ನಷ್ಟೇ ತಿನ್ನಬೇಕೇ ಹೊರತು ಅದಕ್ಕಿಂತ ಹೆಚ್ಚಿಗೆ ಅಲ್ಲ. "ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೇದು" ಅಂತಾ ಅದನ್ನೇ ಸಿಕ್ಕಾಪಟ್ಟೆ ತಿಂದ್ರೆ, ಬೊಜ್ಜು ಮೈ ಬರೋದಂತೂ ಗ್ಯಾರಂಟಿ!! ಆದರೆ ದಿನಕ್ಕೊಂದು ಬಾಳೆಹಣ್ಣನ್ನ ತಿನ್ನೋದ್ರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಗಳಿವೆ. ಹಾಗಾದರೆ ಆ ಪ್ರಯೋಜನಗಳೇನೇನು ಅಂತಾ ಈ ಲೇಖನದ ಮೂಲಕ ತಿಳ್ಕೊಳ್ಳೋಣ ಬನ್ನಿ.....

 1. ನಿಮ್ಮ ಜೀರ್ಣಾಂಗವ್ಯೂಹ ಆರೋಗ್ಯವಾಗಿರುತ್ತೆ

1. ನಿಮ್ಮ ಜೀರ್ಣಾಂಗವ್ಯೂಹ ಆರೋಗ್ಯವಾಗಿರುತ್ತೆ

ನಮ್ಮ ಒಟ್ಟಾರೆ ಆರೋಗ್ಯ ಚೆನ್ನಾಗಿರಬೇಕಾದ್ರೆ ನಮ್ಮ ಜೀರ್ಣಾಂಗವ್ಯೂಹ ಸುಸ್ಥಿತಿಯಲ್ಲಿರೋದು ಅದೆಷ್ಟು ಮುಖ್ಯ ಅನ್ನೋದು ಹಿಂದೆಂದಿಗಿಂತಲೂ ಈಗ ನಮಗೆ ಹೆಚ್ಚು ಹೆಚ್ಚು ಮನವರಿಕೆ ಆಗಿದೆ. ಪಚನಯಂತ್ರದ ಆರೋಗ್ಯದತ್ತ ಮೊದಲ ಹೆಜ್ಜೆ ಅಂದರೆ ಅದು ಬಾಳೆಹಣ್ಣಿನ ಸೇವನೆ. ನ್ಯೂಟ್ರಿಷನ್ ಬುಲೆಟಿನ್ ನಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ಬಾಳೆಹಣ್ಣುಗಳಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಇದ್ದು, ಇದು ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಅಗತ್ಯವಾಗಿರೋ ಶಾರ್ಟ್-ಚೈನ್ ಕೊಬ್ಬಿನಾಮ್ಲಗಳ ಉತ್ಪಾದನೇನಾ ಹೆಚ್ಚಿಸುತ್ತೆ.

2. ತೂಕನಷ್ಟಕ್ಕೂ ನೆರವಾಗಬಲ್ಲದು

2. ತೂಕನಷ್ಟಕ್ಕೂ ನೆರವಾಗಬಲ್ಲದು

ಇದಂತೂ ಬಾಳೆಹಣ್ಣಿನ ಉಪೇಕ್ಷಿಸಲಾಗದ ಪ್ರಯೋಜನ. ಪ್ರತಿದಿನವೂ ಬಾಳೆಹಣ್ಣನ್ನು ತಿನ್ನುವುದರಿಂದ ನಿಮ್ಮ ತೂಕನಷ್ಟದ ಗುರಿಯನ್ನ ಸಾಧಿಸಬಹುದು. ನಾರಿನಂಶ ಮತ್ತು ಪ್ರೋಟೀನ್ ಗಳಿಂದ ಸಮೃದ್ಧವಾಗಿರೋ ಬಾಳೆಹಣ್ಣು, ಬಹಳ ಹೊತ್ತಿನವರೆಗೆ ನಿಮಗೆ ಹೊಟ್ಟೆ ತುಂಬಿರುವಂತಹ ಅನುಭವ ನೀಡುತ್ತದೆ. ಹಾಗಂತ ಬಾಳೆಹಣ್ಣಿನ ಒಂದು ತುಣುಕಿನಲ್ಲಿರೋದು ಬರೀ 100 ಕ್ಯಾಲರಿಗಳಷ್ಟೇ! ತೂಕನಷ್ಟಕ್ಕೆ ವರದಾನವಾಗಿರೋ 20 ಅತ್ಯುತ್ತಮ ಆಹಾರವಸ್ತುಗಳ ಪೈಕಿ ಬಾಳೆಹಣ್ಣೂ ಸಹ ಹೆಲ್ತ್ ಲೈನ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಹಾಗಾಗಿ, ಮುಂದಿನ ಬಾರಿ ಅಂಗಡಿಗೆ ಹೋದಾಗ, ಒಂದಷ್ಟು ಬಾಳೆಹಣ್ಣುಗಳನ್ನೂ ಆರಿಸಿಕೊಳ್ಳಲು ಮರೆಯದಿರಿ!

3. ನಿಮ್ಮ ತ್ವಚೆಯ ಆರೋಗ್ಯವು ಸುಧಾರಿಸುತ್ತದೆ

3. ನಿಮ್ಮ ತ್ವಚೆಯ ಆರೋಗ್ಯವು ಸುಧಾರಿಸುತ್ತದೆ

ನಿಮ್ಮ ಮೈಕಾಂತಿಯನ್ನ ಇನ್ನಷ್ಟು ಉತ್ತಮಗೊಳಿಸುವ ಆಹಾರವಸ್ತುಗಳ ವಿಚಾರಕ್ಕೆ ಬಂದಾಗ ನಿಮಗೆ ನೆನಪಾಗೋದು ಸಾಲ್ಮನ್, ಅವೊಕಾಡೊ, ಅಥವಾ ವಾಲ್ನಟ್ ಗಳಷ್ಟೇ. ಆದರೆ ನೆನಪಿಟ್ಟುಕೊಳ್ಳಿ, ತ್ವಚೆಯ ಆರೋಗ್ಯದ ವಿಚಾರದಲ್ಲಿ ಮ್ಯಾಜಿಕ್ ಮಾಡೋ ಸಾಮರ್ಥ್ಯ ಯಾವುದಕ್ಕಾದರೂ ಇದೆ ಅಂತಾದ್ರೆ ಅದು ಬಾಳೆಹಣ್ಣಿಗೆ ಮಾತ್ರ!! ಅದಕ್ಕೆ ಕಾರಣ ಬಾಳೆಹಣ್ಣಿನಲ್ಲಿ ಸಮೃದ್ಧವಾಗಿರೋ ಜೀವಸತ್ವಗಳು ಮತ್ತು ಖನಿಜಗಳು. ವಿಶೇಷವಾಗಿ ಬಾಳೆಹಣ್ಣಿನಲ್ಲಿರೋ ಮ್ಯಾಂಗನೀಸ್, ತ್ವಚೆಯ ಕೊಲ್ಲಾಜಿನ್ ಮಟ್ಟಗಳನ್ನ ವೃದ್ಧಿಸುತ್ತದೆ. ಮೊಡವೆ, ಸುಕ್ಕುಗಳು, ಒಣತ್ವಚೆ - ಹೀಗೆ ಅದ್ಯಾವುದೇ ರೀತಿಯ ಚರ್ಮದ ಸಮಸ್ಯೆ ಇದ್ದರೂ ದಿನಕ್ಕೊಂದು ಬಾಳೆಹಣ್ಣಿನ ಸೇವನೆ ಅವೆಲ್ಲಕ್ಕೂ ಉತ್ತಮ ಪರಿಹಾರವಾಗಬಲ್ಲದು.

4. ನಿಮ್ಮ ಶರೀರದ ಚೈತನ್ಯಮಟ್ಟ ಹೆಚ್ಚುತ್ತದೆ

4. ನಿಮ್ಮ ಶರೀರದ ಚೈತನ್ಯಮಟ್ಟ ಹೆಚ್ಚುತ್ತದೆ

ಬಾಳೆಹಣ್ಣನ್ನ ವಿಶೇಷವಾಗಿ ವ್ಯಾಯಾಮಕ್ಕಿಂತ ಮೊದಲು ಅಥವಾ ನಂತರ ತಿಂದರೆ, ಅದು ನಿಮ್ಮ ತ್ರಾಣಶಕ್ತಿಯನ್ನ ಹೆಚ್ಚಿಸುತ್ತದೆ ಹಾಗೂ ಆಯಾಸವೆಂಬುದು ದಿನವಿಡೀ ನಿಮ್ಮ ಹತ್ತಿರವೂ ಸುಳಿಯದಂತೆ ನೋಡಿಕೊಳ್ಳುತ್ತದೆ. ಇಸವಿ 2012 ರಲ್ಲಿ ಪುರುಷ ಅಥ್ಲೇಟ್ ಗಳ ಮೇಲೆ ಪ್ರಯೋಗವೊಂದನ್ನ ಕೈಗೊಳ್ಳಲಾಯಿತು. ಕೆಲವರಿಗೆ ಪ್ರತೀ 15 ನಿಮಿಷಗಳಿಗೊಮ್ಮೆ ಸ್ಪೋರ್ಟ್ಸ್ ಡ್ರಿಂಕ್ ವೊಂದನ್ನ ಕೊಡಲಾಯಿತು. ಇನ್ನು ಕೆಲವರಿಗೆ ತಿನ್ನಲು ಒಂದು ಬಾಳೆಹಣ್ಣು ಹಾಗೂ ಕುಡಿಯಲು ನೀರನ್ನಷ್ಟೇ ಕೊಡಲಾಯಿತು. ಬಹುದೂರದ ಸೈಕ್ಲಿಂಗ್ ರೇಸ್ ನಲ್ಲಿ ಬಾಳೆಹಣ್ಣು ತಿಂದು ನೀರನ್ನಷ್ಟೇ ಕುಡಿದವರ ನಿರ್ವಹಣೆ, ಸ್ಪೋರ್ಟ್ಸ್ ಪೇಯವನ್ನ ಪ್ರತೀ 15 ನಿಮಿಷಗಳಿಗೊಮ್ಮೆ ಕುಡಿದವರಿಗಿಂತಲೂ ಅತ್ಯುತ್ತಮ ಮಟ್ಟದ್ದಾಗಿದ್ದಿತು!! ಅರ್ಥಾತ್ ಬಾಳೆಹಣ್ಣನ್ನ ತಿನ್ನುವ ಮತ್ತು ನಿರ್ವಹಣೆಯ ವಿಚಾರದಲ್ಲಿ ಚೈತನ್ಯ ಮಟ್ಟವನ್ನ ಹೆಚ್ಚು ಮಾಡಿಕೊಳ್ಳುವುದರ ನಡುವೆ ನೇರ ಸಂಬಂಧವಿದೆ ಅಂತಾ ಹೇಳಬಹುದು.

5. ಹೃದಯದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರೋ ಪೊಟ್ಯಾಷಿಯಂ ಇರೋದೇ ಬಾಳೆಹಣ್ಣಿನಲ್ಲಿ!!

5. ಹೃದಯದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರೋ ಪೊಟ್ಯಾಷಿಯಂ ಇರೋದೇ ಬಾಳೆಹಣ್ಣಿನಲ್ಲಿ!!

ಬಾಳೆಹಣ್ಣುಗಳೆಂದರೆ ಅವು ಪೊಟ್ಯಾಷಿಯಂ ನ ಉಗ್ರಾಣಗಳೂಂತಾ ಎಲ್ಲರಿಗೂ ಗೊತ್ತು. ಆದರೆ, ಪೊಟ್ಯಾಷಿಯಂ ನಿಮ್ಮ ಹೃದಯವನ್ನ ಬಲಗೊಳಿಸುತ್ತದೆ ಅನ್ನೋ ಸಂಗತಿ ನಿಮಗೆ ತಿಳಿದಿದೆಯೇ ? ಹೌದು, ಖಂಡಿತವಾಗಿಯೂ ಇದು ಸತ್ಯ. ಹಾಗಾಗಿ ದಿನಕ್ಕೊಂದು ಬಾಳೆಹಣ್ಣಿನ ಸೇವನೆ ನಿಮ್ಮ ಹೃದಯವನ್ನ ಇನ್ನಷ್ಟು ಬಲಯುತಗೊಳಿಸಬಲ್ಲದು.

6. ಹಗಲು ಮತ್ತು ರಾತ್ರಿಗಳೆರಡು ಅವಧಿಗಳಲ್ಲೂ ನಿಮ್ಮ ದೃಷ್ಟಿಯನ್ನ ಚುರುಕಾಗಿಸುತ್ತೆ

6. ಹಗಲು ಮತ್ತು ರಾತ್ರಿಗಳೆರಡು ಅವಧಿಗಳಲ್ಲೂ ನಿಮ್ಮ ದೃಷ್ಟಿಯನ್ನ ಚುರುಕಾಗಿಸುತ್ತೆ

ಇಲ್ಲಾರೀ, ನಾವು ಕ್ಯಾರೆಟ್ ಗಳ ಬಗ್ಗೆ ಮಾತಾಡ್ತಿರೋದಲ್ಲ!! ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ಼್ ಹೆಲ್ತ್ ನ ಪ್ರಕಾರ, ಬಾಳೆಹಣ್ಣುಗಳಲ್ಲಿ ವಿಟಮಿನ್ ಎ ಇದ್ದು, ಈ ವಿಟಮಿನ್ ಎ ಮಾಡೋ ಮೂರು ಒಳ್ಳೆಯ ಕೆಲಸಗಳೇನೆಂದರೆ ನಿಮ್ಮ ಕಣ್ಣುಗಳನ್ನ ರಕ್ಷಿಸೋದು, ಆರೋಗ್ಯಕರ ದೃಷ್ಟೀನಾ ಕಾಪಾಡೋದು, ಮತ್ತು ರಾತ್ರಿ ಹೊತ್ತಲ್ಲೂ ಕಣ್ಣಿನ ದೃಷ್ಟಿ ಚುರುಕಾಗಿರೋ ಹಾಗೆ ನೋಡ್ಕೊಳ್ಳೋದು!!!

English summary

What Happens To Your Body When You Eat a Banana Every Day

Here we explains what happens to your body when you eat a banana every day, read on,
X
Desktop Bottom Promotion