For Quick Alerts
ALLOW NOTIFICATIONS  
For Daily Alerts

ಪುರುಷರು ಹಾಗೂ ಮಹಿಳೆಯರಲ್ಲಿ ಕಂಡುಬರುವ ಹೆಚ್ಐವಿ (HIV) ಸೋಂಕಿನ ಆರಂಭಿಕ ಲಕ್ಷಣಗಳು ಇವೇ ನೋಡಿ

|

ಪ್ರತಿ ವರ್ಷ ಡಿಸೆಂಬರ್ 1ರಂದು 'ವಿಶ್ವ ಏಡ್ಸ್ ದಿನʼವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಗುರುತಿಸಿರುವ ಎಂಟು ಅಧಿಕೃತ ಜಾಗತಿಕ ಸಾರ್ವಜನಿಕ ಆರೋಗ್ಯ ಅಭಿಯಾನಗಳಲ್ಲಿ ವಿಶ್ವ ಏಡ್ಸ್ ದಿನವೂ ಒಂದು. ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

HIV ಅಥವಾ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್, ಲೈಂಗಿಕವಾಗಿ ಹರಡುವ ವೈರಸ್ ಆಗಿದ್ದು, ಜನನಾಂಗದ ಸ್ರವಿಸುವಿಕೆ ಅಥವಾ ರಕ್ತದ ಮೂಲಕ, ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ ಹರಡುವ ಸಂಭವವಿದೆ. ಆರಂಭಿಕ ಹಂತದಲ್ಲಿ ಗುರುತಿಸಿ, ಸರಿಯಾದ ಚಿಕಿತ್ಸೆ ನೀಡದಿದ್ದರೆ, ಇದು ಏಡ್ಸ್ (AIDS) ಎಂಬ ಮಾರಣಾಂತಿಕ ಹಂತ ತಲುಪುತ್ತದೆ. ಆದ್ದರಿಂದ ಇವುಗಳನ್ನು ಆರಂಭಿಕ ಗುಣಲಕ್ಷಣಗಳನ್ನು ಗುರುತಿಸುವುದು ತುಂಬಾ ಮುಖ್ಯ.

ನಾವಿಂದು ಈ ಲೇಖನದಲ್ಲಿ ಪುರುಷ ಹಾಗೂ ಮಹಿಳೆಯರಲ್ಲಿ ಕಂಡುವರುವ ಹೆಚ್ಐವಿಯ ಆರಂಭಿಕ ಗುಣಲಕ್ಷಣಗಳಾವುವು ಎಂಬುದನ್ನು ವಿವರಿಸಿದ್ದೇವೆ:

ಪುರುಷರಲ್ಲಿ HIV ಆರಂಭಿಕ ಗುಣಲಕ್ಷಣಗಳು ಹೀಗಿವೆ:

ಪುರುಷರಲ್ಲಿ HIV ಆರಂಭಿಕ ಗುಣಲಕ್ಷಣಗಳು ಹೀಗಿವೆ:

ಎಚ್ಐವಿ ಸೋಂಕಿನ ಪ್ರಾರಂಭದಲ್ಲಿ ಕೆಲವರು ಜ್ವರ ತರಹದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಈ ಆರಂಭಿಕ ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯಲ್ಲಿ 2-4 ವಾರಗಳಲ್ಲಿ ಬೆಳವಣಿಗೆಯಾಗುತ್ತವೆ. ಇದು ಕೆಲವು ದಿನ ಅಥವಾ ವಾರಗಳ ಕಾಲ ಇರುತ್ತದೆ. ಸೋಂಕಿನ ಈ ಆರಂಭಿಕ ಹಂತವನ್ನು ತೀವ್ರವಾದ HIV ಸೋಂಕು ಎಂದು ಕರೆಯಲಾಗುತ್ತದೆ. ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಸಂಪರ್ಕ ಪಡೆದು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.

ಜ್ವರ:

ಸಾಮಾನ್ಯವಾಗಿ HIV ಯ ಮೊದಲ ಚಿಹ್ನೆ ಎಂದರೆ ಜ್ವರ. ಇದು HIV ಸೋಂಕಿನ ಸಾಮಾನ್ಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ. ಜ್ವರವು ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ಗಂಟಲು ನೋವು ಇತರ ರೋಗಲಕ್ಷಣಗಳೊಂದಿಗೆ ಇರಬಹುದು.

ಆಯಾಸ:

ಆಯಾಸ:

ಎಚ್ ಐವಿ ಮುತ್ತಿಗೆ ಹಾಕಿದಾಗ ಪ್ರತಿರಕ್ಷಣಾ ವ್ಯವಸ್ಥೆಯಿಂದ ಉಂಟಾಗುವ ಉರಿಯೂತ ಪ್ರತಿಕ್ರಿಯೆಯು ದಣಿವು ಮತ್ತು ಆಲಸ್ಯ ಉಂಟುಮಾಡುತ್ತದೆ. ಕೆಲವೊಮ್ಮೆ ನಡೆಯುವಾಗ ಗಾಳಿ ಬೀಸಿದ ಅನುಭವ ಉಂಟು ಮಾಡುತ್ತದೆ. ಆಯಾಸವು ಎಚ್ಐವಿಯ ಆರಂಭಿಕ ಮತ್ತು ನಂತರದ ಲಕ್ಷಣವಾಗಿದೆ.

ಊದಿಕೊಂಡ ದುಗ್ಧರಸ ಗ್ರಂಥಿಗಳು:

ಊದಿಕೊಂಡ ದುಗ್ಧರಸ ಗ್ರಂಥಿಗಳು:

ನಿಮ್ಮ ದೇಹವು ಸೋಂಕಿನ ವಿರುದ್ಧ ಹೋರಾಡಿದಾಗ ದುಗ್ಧರಸ ಗ್ರಂಥಿಗಳು ಊದಿಕೊಳ್ಳಲು ಪ್ರಾರಂಭವಾಗುತ್ತವೆ. ದುಗ್ಧರಸ ಗ್ರಂಥಿಗಳು ಕುತ್ತಿಗೆ, ಕಂಕುಳಡಿ ಮತ್ತು ತೊಡೆಸಂದುಗಳಲ್ಲಿ ಊದಿಕೊಳ್ಳಬಹುದು . ಇದು ಕೀವು ಮತ್ತು ನೋವುಗಳಿಗೆ ಕಾರಣವಾಗಬಹುದು.

ಚರ್ಮದ ದದ್ದು:

ಚರ್ಮದ ದದ್ದು:

ಚರ್ಮದ ದದ್ದುಗಳು HIV ಯ ಆರಂಭಿಕ ಮತ್ತು ನಂತರದ ರೋಗಲಕ್ಷಣಗಳಾಗಿ ಕಾಣಿಸಿಕೊಳ್ಳುವುದು.‘ಸಿರೊಕನ್ವರ್ಷನ್'ಅವಧಿಯಲ್ಲಿ ಚರ್ಮದಲ್ಲಿ ದದ್ದುಗಳು ಆರಂಭದಲ್ಲಿ ಅಥವಾ ತಡವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಕೆಲವು ಸಂದರ್ಭಗಳಲ್ಲಿ ಈ ದದ್ದುಗಳು ತುರಿಕೆ, ನವೆ, ಗುಲಾಬಿ ಬಣ್ಣದ ಗೆರೆಗಳಂತೆ ಕಾಣಿಸಬಹುದು.

ಜೀರ್ಣಕಾರಿ ಸಮಸ್ಯೆಗಳು:

ಜೀರ್ಣಕಾರಿ ಸಮಸ್ಯೆಗಳು:

ವಾಕರಿಕೆ, ವಾಂತಿ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳು ಸಹ ಎಚ್ಐವಿ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿವೆ.

ರಾತ್ರಿ ಬೆವರುವಿಕೆ:

ರಾತ್ರಿ ಬೆವರುವಿಕೆ:

ಎಚ್ಐವಿ ಆರಂಭಿಕ ಹಂತದಲ್ಲಿ ಅನೇಕ ಜನರಿಗೆ ರಾತ್ರಿ ಬೆವರು ಕಂಡುಬರುತ್ತದೆ. ಇದು ಸೋಂಕು ತಗಲಿದ ನಂತರ ಇನ್ನಷ್ಟು ಸಾಮಾನ್ಯವಾಗಬಹುದು. ಗಮನಿಸಿ, ಇದು ವ್ಯಾಯಾಮ ಮಾಡಿದಾಗ ಅಥವಾ ಗಾಳಿಯಿಲ್ಲದೆ ಬರುವ ಬೆವರಲ್ಲ.

ಗಂಟಲು ನೋವು ಮತ್ತು ಕೆಮ್ಮು:

ಗಂಟಲು ನೋವು ಮತ್ತು ಕೆಮ್ಮು:

ಗಂಟಲು ನೋವು ಮತ್ತು ತೀವ್ರವಾದ ಒಣ ಕೆಮ್ಮು ಸಹ ಕಾಡಬಹುದು. HIV-ಸಂಬಂಧಿತ ನೋಯುತ್ತಿರುವ ಗಂಟಲು ಅಥವಾ ಇತರ ರೋಗಲಕ್ಷಣಗಳನ್ನು ಹೊಂದಿದ್ದರೆ, ಮುಂದೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಯಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಮಹಿಳೆಯರಲ್ಲಿ ಸಂಭವನೀಯ ಎಚ್ಐವಿ ಲಕ್ಷಣಗಳು ಹೀಗಿವೆ:

ಮಹಿಳೆಯರಲ್ಲಿ ಸಂಭವನೀಯ ಎಚ್ಐವಿ ಲಕ್ಷಣಗಳು ಹೀಗಿವೆ:

HIV ಸೋಂಕಿತ ವ್ಯಕ್ತಿಯಲ್ಲಿ ಕಂಡುಬರುವ ಹೆಚ್ಚಿನ ಲಕ್ಷಣಗಳು ಮಹಿಳೆಯರು ಮತ್ತು ಪುರುಷರಲ್ಲಿ ಸಾಮಾನ್ಯವಾಗಿ ಹೋಲುತ್ತವೆ. ಆದಾಗ್ಯೂ, ಮಹಿಳೆಯರು ಪುನರಾವರ್ತಿತ ಯೋನಿ ಯೀಸ್ಟ್ ಸೋಂಕುಗಳನ್ನು (ಯೋನಿ ಕ್ಯಾಂಡಿಡಿಯಾಸಿಸ್) ಅನುಭವಿಸಬಹುದು.

ಎಚ್ಐವಿ ಪರೀಕ್ಷೆ:

ಅಸುರಕ್ಷಿತ ಲೈಂಗಿಕತೆ, ಚುಚ್ಚುಮದ್ದಿನ ಸಾಧನಗಳನ್ನು ಹಂಚಿಕೊಂಡಾಗ, ಸೋಂಕಿತರ ರಕ್ತವು ದೇಹಕ್ಕೆ ಯಾವುದೇ ರೀತಿಯಲ್ಲಿ ಸೇರಿದೆ ಎಂದು ಭಾವಿಸಿದರೆ ಆಧುನಿಕ ಎಚ್ಐವಿ ಪರೀಕ್ಷೆಗಳಿಂದ ಸೋಂಕು ತಗುಲಿ 11 ದಿನಗಳಲ್ಲಿ ಪತ್ತೆ ಮಾಡಬಹುದು. ಆದ್ದರಿಂದ ಎಚ್ಐವಿ ಪೀಡಿತರಾಗಿದ್ದೀರಿ ಎಂದು ಭಾವಿಸಿದರೆ ತಕ್ಷಣವೇ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಮತ್ತು ಸೋಂಕು ಇತರರಿಗೆ ಬರದಂತೆ ತಡೆಯುವುದು ಉತ್ತಮ.

English summary

World AIDS Day 2021: What are the Early Symptoms of HIV in Men and Women in kannada

Here we talking about What are the early symptoms of HIV in Men and Women in kannada, read on
X
Desktop Bottom Promotion