For Quick Alerts
ALLOW NOTIFICATIONS  
For Daily Alerts

ನಿಮ್ಮ ಹೊಟ್ಟೆಯ ಗ್ಯಾಸ್ (ಹೂಸು) ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು!

|

ಅಪಾಯವಾಯು ಎಂಬುವುದು ಪ್ರತಿಯೊಬ್ಬರಲ್ಲೂ ನಡೆಯುವ ನೈಸರ್ಗಿಕ ಕ್ರಿಯೆ.. ಅರೇ ಇದೇನಪ್ಪ ಎಂದು ಯೋಚಿಸುತ್ತಿದ್ದೀರಾ? ಇದು ಬೇರೆನಲ್ಲ, ನಾವು ಸಾಮಾನ್ಯವಾಗಿ ಕರೆಯುವ ಗ್ಯಾಸ್ ಅಥವಾ ಹೂಸು ಬಿಡುವುದಾಗಿದೆ. ಅಪಾಯವಾಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ತಿಳಿಸುವ ಒಂದು ವಿಚಾರವಾಗಿದ್ದು, ಅದರ ವಿಧಗಳ ಆಧಾರದ ಮೇಲೆ ನಮ್ಮ ಜೀರ್ಣಾಂಗ ವ್ಯವಸ್ಥೆ ಎಷ್ಟು ಉತ್ತಮವಾಗಿದೆ, ಎಷ್ಟು ಹಾಳಾಗಿದೆ ಎಂಬುದನ್ನು ಸೂಚಿಸುತ್ತದೆ. ಹಾಗಾದರೆ, ಅಪಾಯವಾಯುವಿನ ವಿಧಗಳು ಯಾವುವು? ಇವು ನಮ್ಮ ಆರೋಗ್ಯವನ್ನು ಹೇಗೆ ಪ್ರತಿಬಿಂಬಿಸುತ್ತವೆ? ಎಂಬುದನ್ನು ಇಲ್ಲಿ ನೋಡೋಣ.

ಅಪಾಯವಾಯು( ಗ್ಯಾಸ್, ಹೂಸು)ವಿನ ವಿಧಗಳು ಹಾಗೂ ಅವು ಸೂಚಿಸುವ ಆರೋಗ್ಯ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

ವಾಸನೆಯಿಲ್ಲದ ಅಪಾಯವಾಯು(ಹೂಸು)

ವಾಸನೆಯಿಲ್ಲದ ಅಪಾಯವಾಯು(ಹೂಸು)

ಸಹಜವಾಗಿ ಕೆಲವರಿಗೆ ಬರುವ ಗ್ಯಾಸ್ ಅಥವಾ ಅಪಾಯವಾಯು ವಾಸನೆಮುಕ್ತವಾಗಿರುತ್ತವೆ. ಇಂತಹ ಗ್ಯಾಸ್ ನಿಮ್ಮ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿದೆ ಎಂಬುದನ್ನು ಸೂಚಿಸುತ್ತವೆ. ವಾಸನೆಯಿಲ್ಲದೇ ಇರುವ ಗ್ಯಾಸ್ ಎಂದರೆ, ದೇಹದಲ್ಲಿ ಹೆಚ್ಚು ಸಂಗ್ರಹವಾಗಿರುವ ಗಾಳಿಯಾಗಿದ್ದು, ಅದು ಗ್ಯಾಸ್ ಮೂಲಕ ಹೊರಹೋಗುತ್ತದೆ. ಇದರಲ್ಲಿ 99 ಪ್ರತಿಶತದಷ್ಟು ವಾಸನೆಯಿಲ್ಲದ ಅನಿಲಗಳನ್ನು ಒಳಗೊಂಡಿದ್ದು, ಆದರೆ ಉಳಿದ 1 ಪ್ರತಿಶತವು ಸಾಮಾನ್ಯವಾಗಿ ಕಲ್ಮಶಗಳನ್ನು ಹೊಂದಿರುತ್ತದೆ.

ಅತೀ ವಾಸನೆಯ ಅಪಾಯವಾಯು( ಹೂಸು)

ಅತೀ ವಾಸನೆಯ ಅಪಾಯವಾಯು( ಹೂಸು)

ನಿಮ್ಮ ಅಪಾಯವಾಯು ಕೊಳೆತ ಮೊಟ್ಟೆಗಳಂತೆ ವಾಸನೆ ಬರಲು ಪ್ರಾರಂಭಿಸಿದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಏನೋ ತಪ್ಪಾಗಿದೆ ಎಂದರ್ಥ. ಇದು ಅನಾರೋಗ್ಯಕರ ಆಹಾರ, ಹೆಚ್ಚಿನ ಫೈಬರ್, ಹೆಚ್ಚಿನ ಸಲ್ಫರ್ ಆಹಾರಗಳು, ಕೆಲವು ಔಷಧಿಗಳು ಮತ್ತು ಪ್ರತಿಜೀವಕಗಳ ಕಾರಣದಿಂದಾಗಿ ಉಂಟಾಗುತ್ತದೆ. ಕೆಲವೊಮ್ಮೆ ಜೀರ್ಣಾಂಗವ್ಯೂಹದ ಸೋಂಕನ್ನು ಪ್ರತಿನಿಧಿಸುವುದು. ಕೆಲವೊಮ್ಮೆ ಮಲಬದ್ಧತೆಯಂತಹ ಸಾಮಾನ್ಯ ಸಮಸ್ಯೆಯೂ ಸಹ ಅತಿ ವಾಸನೆಯ ಅಪಾಯವಾಯುವಿಗೆ ಕಾರಣವಾಗಬಹುದು.

ಆಗಾಗ ಬರುವ ಅಪಾಯವಾಯು(ಹೂಸು)

ಆಗಾಗ ಬರುವ ಅಪಾಯವಾಯು(ಹೂಸು)

ಈಗಾಗಲೇ ಹೇಳಿದಂತೆ, ಅಪಾಯವಾಯು ಸಾಮಾನ್ಯ ಜೈವಿಕ ಪ್ರಕ್ರಿಯೆಯಾಗಿದೆ. ಕೆಲವರಿಗೆ ಅಪರೂಪವಾಗಿ ಗ್ಯಾಸ್ ಹೋದರೆ, ದಿನಕ್ಕೆ ಹಲವಾರ ಬಾರಿ ಅಪಾಯವಾಯುವನ್ನು ಅನುಭವಿಸುವವರೂ ಇದ್ದಾರೆ. ನೀವು ದಿನಕ್ಕೆ 5 ರಿಂದ 15 ಬಾರಿ ಗ್ಯಾಸ್ ಹೋಗುವುದನ್ನು ಸಾಮಾನ್ಯ ಎಂದು ಹೇಳಲಾಗುತ್ತದೆ. ಅದಕ್ಕಿಂತ ಹೆಚ್ಚು ಬಾರಿ ಇದ್ದಾಗ ಅದು ಯಾವುದೋ ಬೇರೆ ಕಾರಣಗಳನ್ನು ಸೂಚಿಸುವುದು.

ಹೆಚ್ಚಿನ ಸಂದರ್ಭಗಳಲ್ಲಿ ಆಗಾಗ್ಗೆ ಗ್ಯಾಸ್ ಹೋಗುವುದು ಕಾರ್ಬೊನೇಟೆಡ್ ಪಾನೀಯಗಳ ಫಲಿತಾಂಶವಾಗಿದೆ. ನಿಖರವಾಗಿ ಹೇಳಬೇಕೆಂದರೆ ಸೋಡಾ, ಕೋಲಾ ಇತ್ಯಾಸಿ. ಇವು ಜಠರಗರುಳಿನ ಪ್ರದೇಶದಲ್ಲಿ ಹೆಚ್ಚು ಗಾಳಿಯು ಸಂಗ್ರಹವಾಗಲು ಕಾರಣವಾಗುತ್ತವೆ. ಇದರಿಂದ ಸಾಮಾನ್ಯವಾಗಿ ಹೆಚ್ಚಿನ ಸಲ ಗ್ಯಾಸ್ ಹೊರಹೋಗುವುದು.

ಮಲಬದ್ಧತೆ ಮತ್ತು ಅಪಾಯವಾಯು(ಹೂಸು)

ಮಲಬದ್ಧತೆ ಮತ್ತು ಅಪಾಯವಾಯು(ಹೂಸು)

ಮಲಬದ್ಧತೆಯಿಂದ ಕೂಡ ವಾಯು ಸಮಸ್ಯೆ ಉಂಟಾಗುತ್ತದೆ. ಈ ಸ್ಥಿತಿಯು ವ್ಯಕ್ತಿಯು ಅಹಿತಕರ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುತ್ತಾನೆ. ಒಬ್ಬ ವ್ಯಕ್ತಿಗೆ ಮಲಬದ್ಧತೆ ಉಂಟಾದಾಗ, ಹಾದುಹೋಗಬೇಕಾದ ತ್ಯಾಜ್ಯವು ಕರುಳಿನಲ್ಲಿ ಹೆಚ್ಚು ಸಮಯದವರೆಗೆ ಇರುತ್ತದೆ, ಇದು ಹೆಚ್ಚುವರಿ ಅನಿಲವನ್ನು ನಿರ್ಮಿಸಲು ಕಾರಣವಾಗುತ್ತದೆ. ಇದು ಆಗಾಗ್ಗೆ ಹೂಸು ಬಿಡಲು ಕಾರಣವಾಗುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಫೈಬರ್ ಭರಿತ ಆಹಾರವನ್ನು ತಿನ್ನುವುದು, ನೀರು ಕುಡಿಯುವುದು ಮತ್ತು ತಿರುಗಾಡುವುದನ್ನು ತಜ್ಞರು ಶಿಫಾರಸು ಮಾಡುತ್ತಾರೆ.

ಉಬ್ಬುವಿಕೆ ಮತ್ತು ಕಿಬ್ಬೊಟ್ಟೆಯ ನೋವಿನೊಂದಿಗೆ ಅಪಾಯವಾಯು

ಉಬ್ಬುವಿಕೆ ಮತ್ತು ಕಿಬ್ಬೊಟ್ಟೆಯ ನೋವಿನೊಂದಿಗೆ ಅಪಾಯವಾಯು

ಹೊಟ್ಟೆ ಉಬ್ಬರದ ಜೊತೆಗೆ ನಿರಂತರ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದರೆ, ಇದು ಆಹಾರ ಅಸಮತೋಲನದ ಸಂಕೇತವಾಗಿರಬಹುದು. ಇವುಗಳು ಅತಿಯಾದ ಗ್ಯಾಸ್ ಉತ್ಪಾದನೆ ಮತ್ತು ಜಠರಗರುಳಿನ ಪ್ರದೇಶದಲ್ಲಿ ಗ್ಯಾಸ್ ಶೇಖರಣೆಗೆ ಕಾರಣವಾಗಬಹುದು, ಇದು ಆಗಾಗ್ಗೆ ಅಪಾಯವಾಯು (ಹೂಸು) ಮತ್ತು ಕಿಬ್ಬೊಟ್ಟೆಯ ಸೆಳೆತಕ್ಕೆ ಕಾರಣವಾಗುತ್ತದೆ.

ಮುಟ್ಟಿನ ಸಮಯದಲ್ಲಿ ಅಪಾಯವಾಯು(ಹೂಸು)

ಮುಟ್ಟಿನ ಸಮಯದಲ್ಲಿ ಅಪಾಯವಾಯು(ಹೂಸು)

ಮುಟ್ಟಿನ ಸಮಯದಲ್ಲಿ, ಹಾರ್ಮೋನ್ ಅಸಮತೋಲನ ಸಾಮಾನ್ಯವಾಗಿದ್ದು, ಇದು ಹಲವಾರು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ದೇಹದಲ್ಲಿನ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗಿ ಗ್ಯಾಸ್ ಮತ್ತು ಮಲಬದ್ಧತೆಗೆ ಕಾರಣವಾಗಬಹುದು. ಇವುಗಳು ನಿಮ್ಮ ಗರ್ಭಾಶಯವನ್ನು ಪ್ರೋಸ್ಟಗ್ಲಾಂಡಿನ್ ಎಂಬ ಹಾರ್ಮೋನ್ ತರಹದ ರಾಸಾಯನಿಕಗಳನ್ನು ಉತ್ಪಾದಿಸಬಹುದು. ಇದರಿಂದ ಮುಟ್ಟಿನ ಸಮಯದಲ್ಲಿ ಗ್ಯಾಸ್ ಮತ್ತು ಇತರ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.

English summary

Types of farts and what each of them can tell you about your health in Kannada

Here we are discussing about Types of farts and what each of them can tell you about your health in Kannada. Read more.
X
Desktop Bottom Promotion