For Quick Alerts
ALLOW NOTIFICATIONS  
For Daily Alerts

ಈ ಕ್ಯಾನ್ಸರ್‌ ವಿಧಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ಇದ್ದರೆ ಅಪಾಯ ತಪ್ಪಿಸಬಹುದು

|

ಆಧುನಿಕರಣದ ಹೆಸರಿನಲ್ಲಿ ಮುಂದೆ ಹೋಗುತ್ತಿರುವಾಗ, ನಮ್ಮ ಆಹಾರ ಮತ್ತು ದೈನಂದಿನ ಅಭ್ಯಾಸಗಳು ಸೇರಿದಂತೆ ಹಲವಾರು ವಿಷಯಗಳು ಬದಲಾಗುತ್ತಿವೆ. ಆದ್ದರಿಂದ, ಈ ಸಮಯದಲ್ಲಿ ಅನಾರೋಗ್ಯ ಮತ್ತು ಸಮಸ್ಯೆಗಳು ಹೆಚ್ಚುತ್ತಿವೆ. ಹೀಗಾಗಿ, ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನ ಕಾಡುತ್ತಿರುವ ಸಮಸ್ಯೆಗಳಲ್ಲಿ ಕ್ಯಾನ್ಸರ್ ಕೂಡ ಒಂದು. ವಿಧವಿಧವಾದ ಕ್ಯಾನ್ಸರ್ ಗಳು ನಾನಾ ಮಹಿಳೆಯರನ್ನ ಕಾಡುತ್ತಿದ್ದು, ಮಹಿಳೆಯರು ಈ ಕುರಿತು ಎಚ್ಚರ ವಹಿಸಬೇಕು. ಆದ್ದರಿಂದ ನಾವಿಂದು ಪ್ರತಿ ಮಹಿಳೆ ತಿಳಿದುಕೊಳ್ಳಬೇಕಾದ ವಿಧದ ಕ್ಯಾನ್ಸರ್ ಬಗ್ಗೆ ಹೇಳಹೊರಟಿದ್ದೇವೆ.

ಮಹಿಳೆಯರನ್ನ ಕಾಡುವ ಸಾಮಾನ್ಯ ಕ್ಯಾನ್ಸರ್ ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ :

ಅಂಡಾಶಯದ ಕ್ಯಾನ್ಸರ್:

ಅಂಡಾಶಯದ ಕ್ಯಾನ್ಸರ್:

ಅಂಡಾಶಯದ ಕ್ಯಾನ್ಸರ್ ಮಹಿಳೆಯ ಅಂಡಾಶಯದಲ್ಲಿ ಹುಟ್ಟುತ್ತದೆ. ಅಂಡಾಶಯದ ಕ್ಯಾನ್ಸರ್ ಸೊಂಟ ಮತ್ತು ಹೊಟ್ಟೆಗೆ ಹರಡುವವರೆಗೂ ಪತ್ತೆಯಾಗುವುದಿಲ್ಲ. ಈ ಹಂತದಲ್ಲಿ, ಚಿಕಿತ್ಸೆ ನೀಡುವುದು ಇನ್ನೂ ಕಷ್ಟ ಮತ್ತು ಮಾರಕವಾಗಬಹುದು.

ಅಂಡಾಶಯ ಕ್ಯಾನ್ಸರ್ ಲಕ್ಷಣಗಳು :

  • ಅಸಹಜ ಯೋನಿ ರಕ್ತಸ್ರಾವ
  • ಶ್ರೋಣಿಯ ಪ್ರದೇಶದಲ್ಲಿ ನೋವು
  • ಹೊಟ್ಟೆ ನೋವು
  • ಪದೇ ಪದೇ ಮೂತ್ರ ವಿಸರ್ಜನೆ
  • ಗರ್ಭಾಶಯದ ಕ್ಯಾನ್ಸರ್:

    ಗರ್ಭಾಶಯದ ಕ್ಯಾನ್ಸರ್:

    ಗರ್ಭಾಶಯದ ಕ್ಯಾನ್ಸರ್ ವ್ಯಕ್ತಿಯ ಗರ್ಭಕೋಶ ಅಥವಾ ಗರ್ಭದಲ್ಲಿ ಹುಟ್ಟುತ್ತದೆ. ಹೆಚ್ಚಿನ ಗರ್ಭಾಶಯದ ಕ್ಯಾನ್ಸರ್ ಕೋಶಗಳ ಮೇಲೆ ಪದರವನ್ನು ರೂಪಿಸುವ ಮೂಲಕ ಪ್ರಾರಂಭವಾಗಿ, ಮುಂದೆ ಹೆಚ್ಚಿನ ಪದರವನ್ನು ರೂಪಿಸುತ್ತದೆ. ಹೆಚ್ಚಿನ ರೋಗಲಕ್ಷಣಗಳು ಅಂಡಾಶಯದ ಕ್ಯಾನ್ಸರ್ ನಂತೆಯೇ ಇದ್ದು, ವಿಶೇಷವಾಗಿ ಅಸಹಜ ರಕ್ತಸ್ರಾವ ಹೆಚ್ಚಾಗಿರುತ್ತದೆ.

    ಅಪಾಯಕಾರಿ ಅಂಶಗಳೆಂದರೆ, ಅಧಿಕ ತೂಕ ಮತ್ತು ಚಿಕ್ಕ ವಯಸ್ಸಿನಲ್ಲೇ ಮುಟ್ಟು ನಿಲ್ಲುವುದನ್ನು ಒಳಗೊಂಡಿರುತ್ತದೆ. ಲೇಸರ್ ಜೊತೆಗೆ, ಈ ಕ್ಯಾನ್ಸರ್ ಅನ್ನು ಹಾರ್ಮೋನ್ ಚಿಕಿತ್ಸೆಯಿಂದಲೂ ಗುಣ ಪಡಿಸಬಹುದು.

    ಗರ್ಭಕಂಠದ ಕ್ಯಾನ್ಸರ್:

    ಗರ್ಭಕಂಠದ ಕ್ಯಾನ್ಸರ್:

    ಲೈಂಗಿಕವಾಗಿ ಹರಡುವ ವೈರಸ್ HPV ಯಿಂದಾಗಿ ಗರ್ಭಕಂಠದ ಕ್ಯಾನ್ಸರ್ ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತದೆ. ಇದು ಗರ್ಭಕಂಠದ ಮಾರಣಾಂತಿಕ ಗೆಡ್ಡೆಯಾಗಿದ್ದು,ಗರ್ಭಾಶಯದ ಅತ್ಯಂತ ಕೆಳಭಾಗದಲ್ಲಿ ಹುಟ್ಟಿಕೊಳ್ಳುತ್ತವೆ. ಈ ರೀತಿಯ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ PAP ಸ್ಮೀಯರ್ ಸ್ಕ್ರೀನಿಂಗ್ ಮೂಲಕ ಗುರುತಿಸಿ, HPV ಲಸಿಕೆಯಿಂದ ಇದನ್ನು ತಡೆಯಬಹುದು. ಜೊತೆಗೆ ಕೀಮೋಥೆರಪಿ, ಲೇಸರ್ ಮತ್ತು ಶಸ್ತ್ರಚಿಕಿತ್ಸೆಯ ಮೂಲಕವೂ ಕಡಿಮೆ ಮಾಡಬಹುದು.

    ಯೋನಿ ಕ್ಯಾನ್ಸರ್:

    ಯೋನಿ ಕ್ಯಾನ್ಸರ್:

    ಜನನ ಕಾಲುವೆ ಎಂದು ಕರೆಯುವ ಯೋನಿಯಲ್ಲಿ ಯಾವಾಗ ಕ್ಯಾನ್ಸರ್ ಶುರುವಾಗುತ್ತದೆಯೋ, ಆಗ ಅದನ್ನು ಯೋನಿ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

    ಯೋನಿ ಕ್ಯಾನ್ಸರ್ ಅತ್ಯಂತ ಅಪರೂಪವಾದರೂ, ಅಪಾಯಕಾರಿ ಆಗಿದೆ.

    ಲಕ್ಷಣಗಳು :

    • ಯೋನಿಯ ತುರಿಕೆ/ರಕ್ತಸ್ರಾವ
    • ದದ್ದುಗಳು, ಹುಣ್ಣುಗಳು, ಗಡ್ಡೆಗಳು
    • ಯೋನಿ ನೋವು
English summary

Types Of Cancer Every Woman Should Know About

Here we talking about Types Of Cancer Every Woman Should Know About, read on
X
Desktop Bottom Promotion