For Quick Alerts
ALLOW NOTIFICATIONS  
For Daily Alerts

ಬಳಸಿದ ಟೀ ಬ್ಯಾಗ್‌ನಲ್ಲಿದೆ ಚರ್ಮ ಸಮಸ್ಯೆ ಗುಣಪಡಿಸುವ ಶಕ್ತಿ, ಅವುಗಳನ್ನು ಎಂದಿಗೂ ಎಸೆಯಬೇಡಿ,

|

ಟೀ ಎಲ್ಲರ ಫೇವರೆಟ್.. ದಿ ಶುರುವಾಗುವುದರಿಂದ ಹಿಡಿದು, ಆ ದಿನ ಮುಗಿಸುವ ತನಕ ವಿವಿಧ ರೀತಿಯ ಚಹಾ ಕುಡಿಯುವವರಿದ್ದಾರೆ. ಆದರೆ, ನಾವಿಂದ ಟೀಯ ಅನುಕೂಲ ಅಥವಾ ಅನಾನುಕೂಲಗಳ ಬಗ್ಗೆ ಮಾತನಾಡುತ್ತಿಲ್ಲ. ಟೀ ತಯಾರಿಸಿದ ಮೇಲೆ ಎಸೆಯುವ ಟೀ ಬ್ಯಾಗ್ ಬಗ್ಗೆ ಚರ್ಚಿಸಲಿದ್ದೇವೆ.

ವೇಸ್ಟ್ ಎಂದು ಎಸೆಯುವ ಟೀ ಬ್ಯಾಗ್‌ನ್ನು ಸಾಕಷ್ಟು ಚಿಕಿತ್ಸೆಗಳಿಗೆ ಬಳಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದು ಕೆಲವು ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಹೊಂದಿದೆ. ಇನ್ನುಮುಂದೆ ಟೀ ಬಳಸಿದ ಟೀ ಬ್ಯಾಗ್‌ಗಳನ್ನು ಬಿಸಾಡುವ ಮುನ್ನ ಒಮ್ಮೆ ಅದರ ಶಕ್ತಿಯನ್ನು ಯೋಚಿಸಿ. ಹಾಗಾದ್ರೆ, ಅವುಗಳಾವುವು ಎಂಬುದನ್ನು ನೋಡಿಕೊಂಡು ಬರೋಣ.

ಬಳಸಿದ ಟೀ ಬ್ಯಾಗ್‌ಗಳನ್ನು ಯಾವ ಚಿಕಿತ್ಸೆಗೆ ಬಳಸಬಹುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕೀಟ ಕಡಿತದ ಮೇಲೆ:

ಕೀಟ ಕಡಿತದ ಮೇಲೆ:

ಚಹಾ ಎಲೆಗಳು ಔಷಧೀಯ ಗುಣಗಳನ್ನು ಹೊಂದಿವೆ. ಚರ್ಮದ ಮೇಲೆ ಕೀಟ ಕಡಿತದಿಂದಾದ ಗುಳ್ಳೆಗಳು ಅಥವಾ ಹುಳುವಿನ ಕಡಿತದಿಂದ ಸಣ್ಣ ಸಣ್ಣಕಣಗಳು ಬಂದಿದ್ದರೆ, ಬಳಸಿದ ಚಹಾ ಎಲೆಗಳು ಅಥವಾ ಟೀ ಬ್ಯಾಗ್‌ಗಳನ್ನು ಅದರ ಮೇಲಿಡಿ. ಇದರಿಂದಾಗಿ ಊತ ಕಡಿಮೆಯಾಗುತ್ತದೆ ಮತ್ತು ಸೋಂಕು ಹರಡುವುದಿಲ್ಲ.

ಕುರು ಅಥವಾ ಕುರಾಕ್ಕೆ ಪರಿಣಾಮಕಾರಿ:

ಕುರು ಅಥವಾ ಕುರಾಕ್ಕೆ ಪರಿಣಾಮಕಾರಿ:

ದೇಹದ ಯಾವುದೇ ಭಾಗದಲ್ಲಿ ಕುರಾ ಅಥವಾ ಕುರು ಆದರೆ, ಆ ನೋವನ್ನು ಸಹಿಸಲು ಅಸಾಧ್ಯ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಆದ್ದರಿಂದ ಅವುಗಳಿಗೆ ಬಳಸಿದ ಟೀ ಬ್ಯಾಗ್‌ನೊಂದಿಗೆ ಚಿಕಿತ್ಸೆ ನೀಡಿ. ಟೀ ಬ್ಯಾಗ್‌ಗಳನ್ನು ಕುರುವಿನ ಮೇಲೆ ಇಡುವುದರಿಂದ ಅಥವಾ ಬಳಸಿದ ಚಹಾ ಎಲೆಗಳನ್ನು ಕುರುವಿನ ಮೇಲಿಟ್ಟರೆ, ಅದರ ನೀರು ಸುಲಭವಾಗಿ ಬರಿದಾಗುತ್ತದೆ, ಅದು ನಿಧಾನವಾಗಿ ಒಣಗಲು ಪ್ರಾರಂಭಿಸುತ್ತದೆ.

ಬಾಯಿಯ ಹುಣ್ಣುಗಳಿಗೆ ಚಿಕಿತ್ಸೆ:

ಬಾಯಿಯ ಹುಣ್ಣುಗಳಿಗೆ ಚಿಕಿತ್ಸೆ:

ಬಾಯಿಯ ಹುಣ್ಣುಗಳನ್ನು ಬಳಸಿದ ಟೀ ಬ್ಯಾಗ್‌ಗಳಿಂದಲೂ ಗುಣಪಡಿಸಬಹುದು, ಇದಕ್ಕಾಗಿ ಬಳಸಿದ ಟೀ ಬ್ಯಾಗ್‌ಗಳನ್ನು ಡೀಪ್ ಫ್ರಿಜ್ ಮಾಡಿದ ನಂತರ ಅವುಗಳನ್ನು ಗಾಯದ ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ ನಿಮಗೆ ಸಾಕಷ್ಟು ಪರಿಹಾರ ಸಿಗುತ್ತದೆ.

ಸನ್‌ಬರ್ನ್‌ ಕಡಿಮೆಮಾಡುವುದು:

ಸನ್‌ಬರ್ನ್‌ ಕಡಿಮೆಮಾಡುವುದು:

ಗ್ರೀನ್ ಟೀಯಲ್ಲಿ ಕಂಡುಬರುವ ಎಪಿಗಲ್ಲೊಕಟೆಚಿನ್ -3-ಗ್ಯಾಲೇಟ್ (ಇಜಿಸಿಜಿ) ಒಂದು ಸನ್ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುವ ಒಂದು ಅಂಶವಾಗಿದೆ. ಇದು ನಿಮ್ಮನ್ನು ಯುವಿ ವಿಕಿರಣದಿಂದ ರಕ್ಷಿಸುತ್ತದೆ. ಹಾಗಾಗಿ ಸನ್‌ಬರ್ನ್ ಆದ ಜಾಗಕ್ಕೆ ಒದ್ದೆಯಾದ ಟೀ ಬ್ಯಾಗ್ ಇಡಿ, ಸ್ವಲ್ಪ ಸಮಯ ಬಿಡಿ.

ರಕ್ತಸ್ರಾವವನ್ನು ನಿಲ್ಲಿಸುವುದು:

ರಕ್ತಸ್ರಾವವನ್ನು ನಿಲ್ಲಿಸುವುದು:

ಅನೇಕ ಬಾರಿ ಗಾಯದಿಂದಾಗಿ ರಕ್ತಸ್ರಾವ ನಿಲ್ಲುವುದಿಲ್ಲ, ಇಂತಹ ಪರಿಸ್ಥಿತಿಯಲ್ಲಿ, ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆಗ ಇದಕ್ಕಾಗಿ ಬಳಸಿದ ಚಹಾ ಎಲೆಗಳನ್ನು ಪ್ರಯತ್ನಿಸಿ. ಇದರಲ್ಲಿರುವ ಟ್ಯಾನಿನ್‌ಗಳು ರಕ್ತವನ್ನು ಹೆಪ್ಪುಗಟ್ಟಿಸುತ್ತವೆ, ಇದು ರಕ್ತಸ್ರಾವವನ್ನು ನಿಲ್ಲಿಸುತ್ತದೆ.

English summary

Treat from Insect Bites to Boils with used Tea Leaves in Kannada

Here we talking about Treat from insect bites to boils with used tea leaves in kannada, read on
Story first published: Wednesday, October 13, 2021, 14:06 [IST]
X
Desktop Bottom Promotion