For Quick Alerts
ALLOW NOTIFICATIONS  
For Daily Alerts

ಡಯೆಟ್ ಅಥವಾ ವ್ಯಾಯಾಮ ಮಾಡದೇ ತೂಕ ಕಳೆದುಕೊಳ್ಳುವ ಸುಲಭ ಮಾರ್ಗಗಳು ಇಲ್ಲಿವೆ

|

ಇಂದಿನ ಜೀವನಶೈಲಿಯಲ್ಲಿ ನಿಮ್ಮ ದೇಹವನ್ನು ಸದೃಢವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಅದೇ ಸಮಯದಲ್ಲಿ, ಹೆಚ್ಚು ತೂಕವು ನಿಮ್ಮ ಆರೋಗ್ಯಕ್ಕೆ ಅನೇಕ ಸಮಸ್ಯೆಗಳನ್ನು ತರುತ್ತದೆ. ಫಿಟ್ ನೆಸ್ ಪಡೆಯಲು ಜನರು ಅನೇಕ ರೀತಿಯ ಯೋಜನೆಗಳನ್ನು ಮಾಡುತ್ತಾರೆ, ಆದರೆ ಪ್ರತಿ ಬಾರಿಯೂ ಅವುಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಸಾಕಷ್ಟು ಶ್ರಮ ಮತ್ತು ಸಮಯವನ್ನು ನೀಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿ, ತೂಕ ಕಳೆದುಕೊಳ್ಳಬಹುದು. ಇದಕ್ಕೆ ನೀವು ಜಿಮ್ ಹೋಗಬೇಕಾಗಿಲ್ಲ, ವ್ಯಾಯಾಮ ಮಾಡಬೇಕಾಗಿಲ್ಲ. ಆಹಾರದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಸಾಕು. ಅಂತಹ 10 ಸುಲಭ ಮಾರ್ಗಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ ಅದು ಖಂಡಿತವಾಗಿಯೂ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಸುಲಭವಾದ ಮಾರ್ಗಗಳು ಇಲ್ಲಿವೆ:

ನೀರು ಮತ್ತು ತೂಕ ನಷ್ಟ:

ನೀರು ಮತ್ತು ತೂಕ ನಷ್ಟ:

ದಿನಕ್ಕೆ 7 ರಿಂದ 8 ಲೋಟ ನೀರು ಕುಡಿಯಬೇಕು, ಇದರ ಜೊತೆಗೆ, ಊಟದ ನಡುವೆ ನೀರನ್ನು ಕುಡಿಯುತ್ತಿದ್ದರೆ ಅದು ನಿಮ್ಮ ಜೀರ್ಣಕಾರಿ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂಬುದನ್ನು ಸಹ ನೆನಪಿನಲ್ಲಿಡಬೇಕು. ಇದು ಮಾತ್ರವಲ್ಲ, ಪೌಷ್ಠಿಕಾಂಶವನ್ನು ಹೀರಿಕೊಳ್ಳುವುದೂ ನಿಲ್ಲುತ್ತದೆ. ಇದಕ್ಕೆ ವಿರುದ್ಧವಾಗಿ, ತಿನ್ನುವ ಮೊದಲು 15 ನಿಮಿಷಗಳ ಕಾಲ ನೀರು ಕುಡಿಯುವುದು ನಿಮ್ಮ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.

ಅತಿಯಾಗಿ ಬೇಯಿಸಬೇಡಿ:

ಅತಿಯಾಗಿ ಬೇಯಿಸಬೇಡಿ:

ಆಹಾರವನ್ನು ತಿನ್ನುವ ಮೊದಲು ಅಡುಗೆ ಮಾಡುವ ಬಗ್ಗೆ ಗಮನ ಕೊಡುವುದು ಸಹ ಮುಖ್ಯ, ಏಕೆಂದರೆ ತರಕಾರಿಗಳನ್ನು ಬೇಯಿಸುವುದರ ಮೇಲೆ ಅವುಗಳಲ್ಲಿ ಅಗತ್ಯವಾದ ಪೋಷಕಾಂಶಗಳು ನಾಶವಾಗುತ್ತವೆ. ಅರೆಬೆಂದ, ಸುಟ್ಟ ತರಕಾರಿಗಳು ಮತ್ತು ಮಾಂಸವನ್ನು ತಿನ್ನುವುದು ದೇಹಕ್ಕೆ ತುಂಬಾ ಒಳ್ಳೆಯದು.

ಊಟಕ್ಕೆ ಮುಂಚಿತವಾಗಿ ಇವುಗಳನ್ನು ಸೇವಿಸಿ:

ಊಟಕ್ಕೆ ಮುಂಚಿತವಾಗಿ ಇವುಗಳನ್ನು ಸೇವಿಸಿ:

ಊಟಕ್ಕೂ ಮೊದಲು ಹಣ್ಣುಗಳನ್ನು ಸುಮಾರು 30 ನಿಮಿಷಗಳ ಕಾಲ ಮುಂಚೆ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರೊಂದಿಗೆ, ತೂಕ ಇಳಿಸಿಕೊಳ್ಳಲು ಇದು ಸಹಕಾರಿಯಾಗಿದೆ.

ಬೆಳಗಿನ ಉಪಹಾರ ಹೀಗಿರಲಿ:

ಬೆಳಗಿನ ಉಪಹಾರ ಹೀಗಿರಲಿ:

ಬೆಳಗಿನ ಉಪಾಹಾರದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಸರಿಯಾದ ಉಪಹಾರವು ದಿನವಿಡೀ ಶಕ್ತಿಯಿಂದ ಕೆಲಸ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ ನೀವು ಯಾವುದೇ ಕೆಲಸಕ್ಕೆ ಎಷ್ಟು ತಡವಾಗಿಯಾದರೂ ಹೋಗಿ ಆದರೆ ನಿಮ್ಮ ಉಪಾಹಾರವನ್ನು ಎಂದಿಗೂ ಬಿಡಬೇಡಿ. ಎಚ್ಚರವಾದ 1 ಗಂಟೆಯೊಳಗೆ ಉಪಾಹಾರ ಸೇವಿಸಿ, ಇದು ನಿಮ್ಮ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ.

ಊಟ ಮಾಡುವಾಗ ಟಿವಿ ಬೇಡ:

ಊಟ ಮಾಡುವಾಗ ಟಿವಿ ಬೇಡ:

ಊಟ ಮಾಡುವಾಗ ಟಿವಿ ನೋಡುವ ಅಭ್ಯ್ಸಾಸ ಹೆಚ್ಚಿನವರು ಬೆಳೆಸಿಕೊಂಡಿರುತ್ತಾರೆ. ಇದು ತಪ್ಪು ಯಾಕಂದ್ರೆ ಟಿವಿ ನೋಡುತ್ತಿರುವಾಗ ನಿಮ್ಮ ಗಮನ ಟಿವಿ ಮೇಲೆ ಇರುತ್ತದೆಯೇ ಹೊರತು ಊಟದ ಮೇಲಲ್ಲ. ಆಗ ಹೆಚ್ಚಿನ ಪ್ರಮಾಣದ ಊಟ ಸೇವಿಸುತ್ತೀರಿ. ನೀವು ತಿನ್ನುವ ಆಹಾರದ ಪ್ರಮಾಣವನ್ನು ನೀವು ನೆನಪಿನಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ. ಆಹಾರದ ಬಗ್ಗೆ ಗಮನ ಹರಿಸುವುದರ ಮೂಲಕ, ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತೀರಿ ಮತ್ತು ಅದು ನಿಮ್ಮನ್ನು ತೂಕ ಹೆಚ್ಚಾಗುವುದರಿಂದ ದೂರವಿರಿಸುತ್ತದೆ.

ಆತುರಪಡಬೇಡಿ:

ಆತುರಪಡಬೇಡಿ:

ಆತುರದ ಜೀವನದಲ್ಲಿ ನೀವು ಆಹಾರವನ್ನು ಅವಸರದಿಂದಲೇ ಸೇವಿಸುತ್ತೀರಿ. ಈ ಕಾರಣದಿಂದಾಗಿ, ನೀವು ಆಹಾರವನ್ನು ಸರಿಯಾಗಿ ಅಗಿಯಲು ಸಾಧ್ಯವಾಗುವುದಿಲ್ಲ. ಅಧ್ಯಯನದ ಪ್ರಕಾರ ಯಾರು ಹೆಚ್ಚು ಅಗಿದು ಆಹಾರ ಸೇವಿಸುತ್ತಾರೋ ಅವರು ಹೆಚ್ಚು ತಿಂದರೂ ಸಹ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತಾರೆ. ಆದ್ದರಿಂದ ಸರಿಯಾಗಿ ಜಗಿದು ತಿನ್ನಿ.

ಒಟ್ಟಿಗೆ ಹೆಚ್ಚು ತಿನ್ನಬೇಡಿ:

ಒಟ್ಟಿಗೆ ಹೆಚ್ಚು ತಿನ್ನಬೇಡಿ:

ನಮ್ಮ ದೇಹವು ಶಕ್ತಿಯನ್ನು ಪಡೆಯಲು ನಾವು ತಿನ್ನಬೇಕು, ಆದರೆ ಒಟ್ಟಿಗೆ ಸಾಕಷ್ಟು ಆಹಾರವನ್ನು ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುವುದಿಲ್ಲ, ಆದರೆ ನಿಮ್ಮ ಚಯಾಪಚಯವು ಬಹಳಷ್ಟು ನಿಧಾನಗೊಳ್ಳುತ್ತದೆ. ನಿಮ್ಮ ಆಹಾರಗಳನ್ನು ಸಣ್ಣ ಭಾಗಗಳಾಗಿ ವಿಂಗಡಿಸಿ ಮತ್ತು ಸ್ವಲ್ಪ ಸಮಯದ ನಂತರ ತಿನ್ನುವುದನ್ನು ಮುಂದುವರಿಸಿ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುವುದಿಲ್ಲ ಮತ್ತು ನಿಮ್ಮ ದೇಹವು ಶಕ್ತಿಯನ್ನು ಪಡೆಯುವುದನ್ನು ಮುಂದುವರಿಸುತ್ತದೆ.

ಆಹಾರ ತಟ್ಟೆಯ ಗಾತ್ರವನ್ನು ಚಿಕ್ಕದು ಮಾಡಿ:

ಆಹಾರ ತಟ್ಟೆಯ ಗಾತ್ರವನ್ನು ಚಿಕ್ಕದು ಮಾಡಿ:

ಕೇಳುವುದಕ್ಕೆ ಖಂಡಿತವಾಗಿಯೂ ಸ್ವಲ್ಪ ವಿಚಿತ್ರವಾಗಿದೆ , ಆದರೆ ನಿಮ್ಮ ತಟ್ಟೆಯ ಗಾತ್ರವು ಚಿಕ್ಕದಾಗಿಸಿದರೆ ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಹರಿಸಲು ನಿಮಗೆ ಸಾಧ್ಯವಾಗುತ್ತದೆ. ಕೆಲವೊಮ್ಮೆ ದೊಡ್ಡ ತಟ್ಟೆ ಇದ್ದಾಗ ನಿಮ್ಮ ಅಜಾಗರೂಕತೆಯಿಂದ ನಿಮ್ಮ ಆಹಾರಕ್ಕಿಂತ ಹೆಚ್ಚಿನ ಆಹಾರವನ್ನು ಸೇವಿಸುತ್ತೀರಿ.

ಈ ಸಮಯದಲ್ಲಿ ರಾತ್ರಿ ಊಟ ಸೇವಿಸಿ:

ಈ ಸಮಯದಲ್ಲಿ ರಾತ್ರಿ ಊಟ ಸೇವಿಸಿ:

ನಿಮ್ಮ ಆರೋಗ್ಯ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡಲು ರಾತ್ರಿ ಊಟ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ರಾತ್ರಿ 7:30 ರಿಂದ ರಾತ್ರಿ 8 ರವರೆಗೆ ನೀವು ಊಟ ಮಾಡುವುದು ಮುಖ್ಯ. ತಿನ್ನುವ ಮೊದಲು ಸ್ನಾಕ್ ತಿನ್ನುವುದು ತಪ್ಪಿಸಿ, ಒಂದು ವೇಳೆ ಸೇವಿಸಿದರೂ ನಂತರ ಖಂಡಿತವಾಗಿಯೂ ಹಸಿರು ಚಹಾವನ್ನು ಕುಡಿಯಿರಿ.

English summary

Tips To Lose Weight Without Diet Or Exercise In Kannada

Here we told about Tips to Lose Weight Without Diet or Exercise in Kannada, read on
Story first published: Saturday, March 13, 2021, 13:21 [IST]
X
Desktop Bottom Promotion