For Quick Alerts
ALLOW NOTIFICATIONS  
For Daily Alerts

ನೀವು ಇಡೀ ದಿನ ಡೆಸ್ಕ್‌ನಲ್ಲಿ ಕುಳಿತುಕೊಳ್ಳುವಿರೇ ? ಆರೋಗ್ಯ ಸುಧಾರಣೆಗೆ ಇಲ್ಲಿದೆ ಟಿಪ್ಸ್

|

ಜಂಕ್ ಫುಡ್ ನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ದಿನಗಳು ಕಡಿಮೆ ಆಗುತ್ತಿದೆ. ಆರೋಗ್ಯದ ಬಗ್ಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಳಜಿ ಮೂಡತ್ತಿದೆ. ಆರೋಗ್ಯಕಾರಿ ಆಹಾರದ ಕಡೆಗೆ ಜನರು ದೌಡಾಯಿಸುತ್ತಿರುವ ಕಾರಣ ಇದಕ್ಕಾಗಿ ಕೆಲವು ಹೋಟೆಲ್ ಗಳು ಕೂಡ ಆರೋಗ್ಯಕಾರಿ ಆಹಾರ ಎನ್ನುವ ಹೊಸ ಪದ್ಧತಿ ಆರಂಭಿಸಿದೆ.

ಅದರಲ್ಲೂ ಕನಿಷ್ಠ 8 ಗಂಟೆಗೂ ಹೆಚ್ಚು ಕಾಲ ಕುಳಿತು ಕೆಲಸ ಮಾಡುವ ವೃತ್ತಿನಿರತರಂತೂ ತಮ್ಮ ಆಹಾರ ಕ್ರಮದ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ಒಂದೇ ಕಡೆ ಕುಳಿತು ದೇಹದ ಬೊಜ್ಜು, ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಕಾರಣ ಫಿಟ್ ನೆಸ್ ಕಡೆಗೆ ಗಮನಹರಿಸುತ್ತಿದ್ದಾರೆ. ಆರೋಗ್ಯಕಾರಿ ಆಹಾರ ಹಾಗೂ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ ಜನರು ಸಕ್ಕರೆ ಮತ್ತು ಪಿಷ್ಠವಿರುವ ಆಹಾರವನ್ನು ಸಂಪೂರ್ಣವಾಗಿ ಕಡೆಗಣಿಸಿ, ಕಾರ್ಬ್ಸ ಮತ್ತು ಕ್ಯಾಲರಿ ಕಡಿಮೆ ಇರುವ ಮತ್ತು ಪ್ರೋಟೀನ್ ಅಧಿಕವಿರುವ ಆಹಾರ ಸೇವಿಸುವ ಅಭ್ಯಾಸ ಹೆಚ್ಚಾಗುತ್ತಿದೆ. ಮಿತ ಪ್ರಮಾಣದ ಚೀಸ್ ಮತ್ತು ಬೆಣ್ಣೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದನ್ನು ನಾವು ಅತಿಯಾಗಿ ಸೇವನೆ ಮಾಡಲೇಬಾರದು. ಆರೋಗ್ಯಕಾರಿ ಆಹಾರವೆಂದರೆ ಕೇವಲ ಹಸಿರೆಲೆ ತರಕಾರಿಗಳು ಮಾತ್ರವಲ್ಲ, ಮಾಂಸಹಾರಿಗಳು ಕೋಳಿ ಮಾಂಸ, ಮೀನು ಮತ್ತು ಮಾಂಸ ತಿನ್ನಬಹುದು ಎನ್ನುತ್ತಾರೆ ಡಯಟ್ ತಜ್ಞರು.

ಕೆಲಸದ ನಡುವೆ ನಮ್ಮ ಡಯಟ್ ಹೇಗಿರಬೇಕು, ನಮ್ಮ ದಿನಚರಿಯಲ್ಲಿ ಯಾವೆಲ್ಲಾ ಆಹಾರಗಳು ಎಷ್ಟು ಮಿತಿಯಲ್ಲಿ ಸೇವಿಸಬೇಕು?, ಕೆಲಸದ ನಡುವಿನ ವಿರಾಮ ಹೇಗಿರಬೇಕು?, ಇಲ್ಲಿದೆ ಕೆಲವು ಟಿಪ್ಸ್.

1. ದಿನದಲ್ಲಿ ಎಷ್ಟು ಸಲ ಊಟ ಮಾಡಬೇಕು?

1. ದಿನದಲ್ಲಿ ಎಷ್ಟು ಸಲ ಊಟ ಮಾಡಬೇಕು?

ನಾವು ಹಸಿವನ್ನು ತಿಳಿದುಕೊಂಡು, ಅದಕ್ಕೆ ಅನುಗುಣವಾಗಿ ಊಟ ಮಾಡಬೇಕು. ಆದರೆ ಇಂದಿನ ದಿನಗಳಲ್ಲಿ ಕೆಲಸ ಒತ್ತಡ ಮತ್ತು ಇತರ ಕೆಲಸಗಳು ಅತಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ದೇಹದ ಬೇಡಿಕೆಯ ಬಗ್ಗೆ ಗಮನಹರಿಸುವುದೇ ಇಲ್ಲ. ನೀವು ನಿಯಮಿತವಾಗಿ ತಿನ್ನುವ ಕ್ರಮವನ್ನು ಅಳವಡಿಸಿಕೊಳ್ಳಿ ಮತ್ತು ಮೂರು ಸಲ ಊಟ ಮತ್ತು 2 ಸಲ ಆರೋಗ್ಯಕಾರಿ ತಿಂಡಿ ಸೇವಿಸಿ.

2. ಎಷ್ಟು ಕಪ್ ಕಾಫಿ ಅಥವಾ ಚಹಾ ಕುಡಿಯಬೇಕು?

2. ಎಷ್ಟು ಕಪ್ ಕಾಫಿ ಅಥವಾ ಚಹಾ ಕುಡಿಯಬೇಕು?

ಮಿತವಾಗಿದ್ದರೆ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. 3-4 ಕಪ್ ಚಹಾ ಅಥವಾ ಕಾಫಿ ಪ್ರತಿನಿತ್ಯವು ಸೇವಿಸಿದರೆ ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ನಾವು ಇಲ್ಲಿ ಮಾಡುವಂತಹ ತಪ್ಪು ಎಂದರೆ 2-3 ಚಮಚ ಸಕ್ಕರೆ, ಕೆನೆಯುಕ್ತ ಹಾಲು ಮತ್ತು ಬಿಸ್ಕಿಟ್ ಸೇವಿಸುತ್ತೇವೆ. ಇದೆಲ್ಲವನ್ನು ಬಿಟ್ಟು ನೀವು ಚಹಾ ಅಥವಾ ಕಾಫಿ ಕುಡಿದರೆ ಅದು ಒಳ್ಳೆಯದು. ನಮ್ಮ ಆಹಾರ ಕ್ರಮದಲ್ಲಿ ಪ್ರತಿನಿತ್ಯವು ಹಾಲನ್ನು ಸೇರಿಸಿಕೊಳ್ಳುವ ಕಾರಣದಿಂದಾಗಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಲಭ್ಯವಾಗುವುದು.

3. ಪ್ರತಿನಿತ್ಯವು ನಾವು ಹಣ್ಣುಗಳು ಮತ್ತು ಸಲಾಡ್ ಸೇವಿಸಬೇಕೇ?

3. ಪ್ರತಿನಿತ್ಯವು ನಾವು ಹಣ್ಣುಗಳು ಮತ್ತು ಸಲಾಡ್ ಸೇವಿಸಬೇಕೇ?

ಪ್ರತಿನಿತ್ಯವು ನೀವು ಸ್ವಲ್ಪ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುತ್ತಲಿದ್ದರೆ ಅದು ಒಳ್ಳೆಯದು. ಅರೆಬೆಂದ ತರಕಾರಿಗಳನ್ನು ತಿಂದರೆ ಅದು ತುಂಬಾ ಒಳ್ಳೆಯದು. ಒಂದು ಕಪ್ ಹಸಿ ತರಕಾರಿ ಸೇವಿಸಿ. ಹಣ್ಣುಗಳ ವಿಚಾರದಲ್ಲಿ ಒಂದು ಮಧ್ಯಮ ಗಾತ್ರದ ಸೇಬು, ಪೀಯರ್ ಮತ್ತು ಬಾಳೆಹಣ್ಣು ಪ್ರತಿನಿತ್ಯ ಸೇವಿಸಿ. ಇವುಗಳಲ್ಲಿ ಉನ್ನತ ಮಟ್ಟದ ಸೂಕ್ಷ್ಮ ಪೋಷಕಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ಇವೆ. ತರಕಾರಿ ಹಾಗೂ ಹಣ್ಣುಗಳಲ್ಲಿ ಹೀರಿಕೊಳ್ಳುವ ನಾರಿನಾಂಶವಿದೆ. ಮಧುಮೇಹ, ರಕ್ತದೊತ್ತಡ ಹಾಗೂ ಇತರ ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು.

4. ಯಾವ ಸಮಯದಲ್ಲಿ ತಿನ್ನಬೇಕು?

4. ಯಾವ ಸಮಯದಲ್ಲಿ ತಿನ್ನಬೇಕು?

ನಿದ್ರೆಯಿಂದ ಎದ್ದ ಕೆಲವೇ ಗಂಟೆಗಳಲ್ಲಿ ಪೋಷಕಾಂಶಗಳು ಇರುವಂತಹ ಉಪಾಹಾರ ಮಾಡಬೇಕು ಮತ್ತು ಇದರ ಬಳಿಕ ದಿನದ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಬೇರೆ ಬೇರೆ ಸಮಯದಲ್ಲಿ ಕಚೇರಿಗೆ ಹೋಗಲಿರುವುದು, ಮನೆಯ ಕೆಲಸಗಳು, ಚಟುವಟಿಕೆಗಳು ಮತ್ತು ಬೇರೆ ಅಗತ್ಯ ಕೆಲಸಗಳು ಇರಬಹುದು. ನಿಮ್ಮ ಊಟದ ಸಮಯವನ್ನು ನಿಗದಿ ಮಾಡುವ ವೇಳೆ ಇದೆಲ್ಲವನ್ನೂ ಗಮನಹರಿಸಬೇಕು.

5. ಊಟದಲ್ಲಿ ಏನೇನು ಇರಬೇಕು?

5. ಊಟದಲ್ಲಿ ಏನೇನು ಇರಬೇಕು?

ಸಮತೋಲಿನ ಊಟವನ್ನು ಪಾಲಿಸಿಕೊಂಡು ಹೋಗುವುದಿದ್ದರೆ ಆಗ ನೀವು ಅರ್ಧ ಪ್ಲೇಟ್ ನಲ್ಲಿ ತರಕಾರಿಗಳು, ¼ ಪ್ಲೇಟ್ ನಲ್ಲಿ ಪ್ರೋಟೀನ್ ಮತ್ತು ¼ ನಾರಿನಾಂಶ ಅಧಿಕ ಮತ್ತು ಕಾರ್ಬ್ಸ ಕಡಿಮೆ ಇರುವ ಆಹಾರ. ಭಾರತೀಯ ಊಟವು ಸಂಪೂರ್ಣವಾಗಿರುವುದು. ಇಲ್ಲಿ ಕಾರ್ಬ್ಸ ಕಡೆಗೆ ಗಮನವಿಡಬೇಕು. ಒಂದು ಹಣ್ಣು, ಮೊಸರು ಅಥವಾ ಹಸಿ ಬೀಜಗಳು ಒಳ್ಳೆಯ ತಿಂಡಿಯಾಗಿರುವುದು.

6. ಅಜೀರ್ಣ ನಿವಾರಿಸಲು ಯಾವ ಆಹಾರವನ್ನು ಕಡೆಗಣಿಸಬೇಕು?

6. ಅಜೀರ್ಣ ನಿವಾರಿಸಲು ಯಾವ ಆಹಾರವನ್ನು ಕಡೆಗಣಿಸಬೇಕು?

ಆಹಾರವು ಸರಿಯಾಗಿ ಜೀರ್ಣವಾಗದೆ ಉಳಿದರೆ ಆಗ ಅಜೀರ್ಣ ಸಮಸ್ಯೆಯು ಬರುವುದು, ಇದು ಕಾಯಿಲೆ ಏನಲ್ಲ. ಊಟ ಮಾಡಲು ಆರಂಭಿಸಿದ ಬಳಿಕ ಹೊಟ್ಟೆಯಲ್ಲಿ ನೋವು ಮತ್ತು ಹೊಟ್ಟೆ ತುಂಬಿದಂತಹ ಭಾವನೆ ಆಗುವುದು ಇದರ ಕೆಲವು ಲಕ್ಷಣಗಳು. ಅಜೀರ್ಣವೆನ್ನುವುದು ಜೀವನಶೈಲಿಗೆ ಸಂಬಂಧಿಸಿದ್ದಾಗಿದೆ ಮತ್ತು ಇದು ಆಹಾರ, ಪಾನೀಯ ಅಥವಾ ಔಷಧಿಯಿಂದಾಗಿ ಬರಬಹುದು. ನಾವು ದೇಹವನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು. ಯಾವುದೇ ರೀತಿಯ ಆಹಾರದಿಂದಾಗಿ ಅಜೀರ್ಣ ಕಾಣಿಸಿಕೊಂಡಿದೆಯಾ ಎಂದು ನಮ್ಮ ದೇಹದಿಂದಲೇ ತಿಳಿಯಬೇಕಾಗಿದೆ. ಒಮ್ಮೆ ಇದು ಯಾವ ಆಹಾರವೆಂದು ನಿಮಗೆ ತಿಳಿದರೆ ಆಗ ನೀವು ಇದನ್ನು ಕಡೆಗಣಿಸಬಹುದು.

7. ಸಿಹಿ ತಿಂಡಿ ಕಡೆಗಣಿಸಬೇಕೇ?

7. ಸಿಹಿ ತಿಂಡಿ ಕಡೆಗಣಿಸಬೇಕೇ?

ಕ್ರೀಂ ಬಿಸ್ಕಿಟ್, ಕೇಕ್, ಮಫಿನ್ ಮತ್ತು ಭಾರತದ ಇತರ ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಕ್ಯಾಲರಿ ಅಧಿಕವಾಗಿರುವುದು ಮಾತ್ರವಲ್ಲದೆ ಇದರಲ್ಲಿ ಕೊಬ್ಬಿನಾಂಶವು ಇರುವುದು. ಸಕ್ಕರೆ ಕೂಡ ಈ ಸಿಹಿ ತಿಂಡಿಗಳಿಗೆ ಬಳಸಲಾಗುತ್ತದೆ. ಯಾವಾಗಲೊಮ್ಮೆ ಇದನ್ನು ಸೇವಿಸಿದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ನೀವು ಪ್ರತಿನಿತ್ಯವು ಇಂತಹ ಸಿಹಿ ತಿಂಡಿಗಳನ್ನು ಸೇವನೆ ಮಾಡಿದರೆ ಖಂಡಿತವಾಗಿಯೂ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ನಿಮಗೆ ಸಿಹಿ ಬೇಕಿದ್ದರೆ ಆಗ ನೀವು ಖರ್ಜೂರ, ದ್ರಾಕ್ಷಿ ಅಥವಾ ಅಂಜೂರ ಸೇವಿಸಿ. ಇದು ತುಂಬಾ ಆರೋಗ್ಯಕಾರಿ. ಬೆಲ್ಲ ಮತ್ತು ಜೇನುತುಪ್ಪ ಕೂಡ ಸೇವಿಸಬಹುದು.

8. ಪ್ರತಿನಿತ್ಯ ಎಷ್ಟು ನೀರು ಕುಡಿಯಬೇಕು?

8. ಪ್ರತಿನಿತ್ಯ ಎಷ್ಟು ನೀರು ಕುಡಿಯಬೇಕು?

ದಿನದಲ್ಲಿ ನಾವು 8-10 ಲೋಟ ನೀರು ಕುಡಿಯಬೇಕು. ಊಟವಾದ ತಕ್ಷಣ ನೀರು ಕುಡಿದರೆ ಆಗ ಜೀರ್ಣಕ್ರಿಯೆ ರಸಕ್ಕೆ ಇದರಿಂದ ಪರಿಣಾಮವಾಗುವುದು ಮತ್ತು ಗ್ಯಾಸ್ಟ್ರಿಕ್ ಉಂಟಾಗುವುದು.

9. ಕೆಲಸದ ಮಧ್ಯೆ ಸ್ವಲ್ಪ ನಡೆದಾಡಬೇಕೇ?

9. ಕೆಲಸದ ಮಧ್ಯೆ ಸ್ವಲ್ಪ ನಡೆದಾಡಬೇಕೇ?

ಕೆಲಸದ ಮಧ್ಯೆ ನಾವು ನಡೆದರೆ ಆಗ ಇದು ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಮಾನಸಿಕವಾಗಿಯೂ ಬಲಗೊಳಿಸಿ ಉತ್ಪಾದಕತ್ವ ಹೆಚ್ಚಿಸಲು ನೆರವಾಗುವುದು. 10-15 ನಿಮಿಷ ಕಾಲ ನಡೆದರೆ ಅದು ತುಂಬಾ ನೆರವಿಗೆ ಬರುವುದಿಲ್ಲ. ಸ್ವಲ್ಪ ದೂರ ನಡೆಯಬೇಕು. ಕುಳಿತುಕೊಂಡೇ ಕೆಲಸ ಮಾಡುವವರಿಗಿಂತ ಕೆಲಸ ಮಧ್ಯೆ 10 ನಿಮಿಷ ನಡೆದರೆ ಅವರ ಗ್ಲೈಸೆಮಿಕ್ ನಿಯಂತ್ರಣ ಮತ್ತು ರಕ್ತದೊತ್ತಡವು ಉತ್ತಮವಾಗಿರುವುದು ಎಂದು ಅಧ್ಯಯನಗಳು ಹೇಳಿವೆ. ದೈಹಿಕವಾಗಿ ಚಟುವಟಿಕೆಯಲ್ಲಿ ಇಲ್ಲದೆ ಇರುವ ಜನರು ಧೂಮಪಾನಿಗಿಂತಲೂ ಬೇಗನೆ ಸಾಯುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಕೆಲಸದ ಅವಧಿಯಲ್ಲಿ ಹೀಗೆ ಮಾಡಿ

* ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಬಳಿಗೆ ಫೈಲ್ ನೀಡಲು, ಪಡೆಯಲು ನೀವೇ ಹೋಗಿ

* ನಿಮ್ಮ ಮೇಜಿನ ಮೇಲೆ ಊಟ ಮಾಡಬೇಡಿ

* ಲಿಫ್ಟ್ ಬದಲು ಮೆಟ್ಟಿಲು ಹತ್ತಿ

* ಕಚೇರಿಯಿಂದ ಸ್ವಲ್ಪ ದೂರದಲ್ಲೇ ಕಾರನ್ನು ಪಾರ್ಕ್ ಮಾಡಿ

* ಹತ್ತು ನಿಮಿಷ ಮಧ್ಯಾಹ್ನ ಊಟದ ವೇಳೆ ನಡೆಯಿರಿ

10. ಕಾರ್ಬೋಹೈಡ್ರೇಟ್ಸ್ ನ್ನು ನಮ್ಮ ಆಹಾರ ಕ್ರಮದಿಂದ ತೆಗೆಯಬೇಕೇ?

10. ಕಾರ್ಬೋಹೈಡ್ರೇಟ್ಸ್ ನ್ನು ನಮ್ಮ ಆಹಾರ ಕ್ರಮದಿಂದ ತೆಗೆಯಬೇಕೇ?

ಕಾರ್ಬ್ಸ ಕೂಡ ನಮ್ಮ ಆಹಾರ ಕ್ರಮದ ಒಂದು ಭಾಗ. ಹಾಲು, ಮೊಸರು, ಧಾನ್ಯ, ಹಣ್ಣುಗಳು, ಪಿಷ್ಠವಿರುವ ತರಕಾರಿ ಮತ್ತು ಎಲ್ಲಾ ರೀತಿಯ ಸೀರಲ್ ಇದರ ಉತ್ಪನ್ನಗಳು.

11. ಕಚೇರಿಯಲ್ಲಿ ಕುಳಿತುಕೊಳ್ಳುವ ಭಂಗಿ ಎಷ್ಟು ಮುಖ್ಯ?

11. ಕಚೇರಿಯಲ್ಲಿ ಕುಳಿತುಕೊಳ್ಳುವ ಭಂಗಿ ಎಷ್ಟು ಮುಖ್ಯ?

ಇಂದಿನ ದಿನಗಳಲ್ಲಿ ನಾವು ಹೆಚ್ಚಾಗಿ 10-12 ಗಂಟೆಗಳ ಕಾಲ ಕುಳಿತುಕೊಂಡೇ ಕಳೆಯುತ್ತೇವೆ. ಇದರಿಂದಾಗಿ ಕುಳಿತುಕೊಳ್ಳುವ ಭಂಗಿಯು ಅತೀ ಅಗತ್ಯವಾಗಿ ಇರುವುದು. ನೀವು ನೋಡುವಂತಹ ಸ್ಕ್ರೀನ್ ಮೇಲೆ ಕಣ್ಣುಗಳು ನೇರವಾಗಿರಬೇಕು. ಭುಜದ ಸಮಸ್ಯೆ ಮತ್ತು ದೀರ್ಘಕಾಲದ ಬೆನ್ನು ನೋವು ತಪ್ಪಿಸಲು ನೀವು ಕೈಗಳನ್ನು 90 ಡಿಗ್ರಿಯಲ್ಲಿ ಇಟ್ಟುಕೊಂಡರೆ ಒಳ್ಳೆಯದು. ಬೆನ್ನಿಗೆ ಏನಾದರೂ ಬಲ ನೀಡಿ. ನಿಂತುಕೊಂಡು ಕೆಲಸ ಮಾಡುವಂತಹ ಕಂಪ್ಯೂಟರ್ ಟೇಬಲ್ ನ್ನು ತೆಗೆದುಕೊಂಡರೆ ಅದರಿಂದ ತುಂಬಾ ಒಳ್ಳೆಯದು. ಆದರೆ ನಿಮಗೆ ನಿಂತುಕೊಳ್ಳಲು ಅವಕಾಶ ಸಿಗುವುದು.

12. ತರಕಾರಿ ನಮ್ಮ ಆಹಾರದ ಭಾಗವಾಗಬೇಕೇ?

12. ತರಕಾರಿ ನಮ್ಮ ಆಹಾರದ ಭಾಗವಾಗಬೇಕೇ?

ಧಾನ್ಯ, ದ್ವಿದಳ ಧಾನ್ಯ ಮತ್ತು ಇತರ ಕೆಲವೊಂದು ಬೀಜಗಳಲ್ಲಿ ಉನ್ನತ ಮಟ್ಟದ ಪ್ರೋಟೀನ್, ಕಾರ್ಬ್ಸ ಮತ್ತು ಹೆಚ್ಚಿನ ಹೀರಿಕೊಳ್ಳುವ ನಾರಿನಾಂಶವಿದೆ ಮತ್ತು ಸೂಕ್ಷ್ಮಪೋಷಕಾಂಶಗಳಾದ ಕಬ್ಬಿಣಾಂಶ ಇತ್ಯಾದಿಗಳು ಇವೆ. ದಿನಕ್ಕೆ ಒಂದು ಪಿಂಗಾಣಿಯಷ್ಟು ದ್ವಿದಳ ಧಾನ್ಯ ಸೇವಿಸಬೇಕು.

13. ದಿನಕ್ಕೆಷ್ಟು ಮೊಟ್ಟೆ ತಿನ್ನಬಹುದು?

13. ದಿನಕ್ಕೆಷ್ಟು ಮೊಟ್ಟೆ ತಿನ್ನಬಹುದು?

ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿಕೊಂಡು ಹೋಗಲು ನಿತ್ಯವೂ ಒಂದು ಮೊಟ್ಟೆ ಸೇವಿಸಬೇಕು ಎಂದು ಅಮೆರಿಕಾದ ಹೃದಯ ಅಸೋಸಿಯೇಷನ್ ಹೇಳಿದೆ. ಮೊಟ್ಟೆಯು ಹೃದಯದ ಕಾಯಿಲೆ ಸಮಸ್ಯೆ ಅಪಾಯ ಕಡಿಮೆ ಮಾಡಿದೆ ಮತ್ತು ಹೃದಯಾಘಾತ ಕೂಡ. ಮೊಟ್ಟೆಯಲ್ಲಿ ಹೆಚ್ಚಿನ ಪೋಷಕಾಂಶಗಳು ಇದೆ. ಆದರೆ ಇದನ್ನು ನೀವು ಮಿತ ಪ್ರಮಾಣದಲ್ಲಿ ಸೇವಿಸಿ. ಜಿಮ್ ಗೆ ಹೋಗುವಂತಹ ಜನರಿಗೆ ಹೆಚ್ಚು ಪ್ರೋಟೀನ್ ಅಗತ್ಯವಿರುವುದು. ಅವರು ಕೇವಲ ಮೊಟ್ಟೆ ಮಾತ್ರವಲ್ಲದೆ ಇತರ ಕೆಲವೊಂದು ಪ್ರೋಟೀನ್ ಗಳಾಗಿರುವಂತಹ ಕೋಳಿ ಮಾಂಸ, ಮೀನು, ಸೋಯಾ ಮತ್ತು ಇತರ ಉತ್ಪನ್ನಗಳನ್ನು ಸೇವಿಸಬೇಕು.

English summary

Tips For Being Healthy When You Sit At A Desk All Day

It’s all about low-carb, low-calorie and high-protein food these days, if you want to remain fit. The year 2018 has seen people getting increasingly conscious about not just what they eat but also what goes into making their food. People have also adopted tough food habits like a ketogenic diet, which includes avoiding all kinds of sugar and starch. This has also led to the rapid increase of healthy food chains, which mention the ingredients being put and the calories being consumed.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X