For Quick Alerts
ALLOW NOTIFICATIONS  
For Daily Alerts

ಸ್ಯಾನಿಟೈಸರ್ ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

|

ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಮತ್ತೊಮ್ಮೆ ದೇಶ ಮತ್ತು ವಿಶ್ವವನ್ನು ಕಳವಳಕ್ಕೆ ನೂಕಿದೆ. ಕರೋನಾವನ್ನು ತಪ್ಪಿಸಲು ವಿಜ್ಞಾನಿಗಳು ಪ್ರತಿದಿನ ಹೊಸ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಈ ಸಾಂಕ್ರಾಮಿಕ ರೋಗದಿಂದ ದೂರವಿರಲು ಮಾಸ್ಕ ಮತ್ತು ಸ್ಯಾನಿಟೈಜರ್ ಗಳನ್ನು ನಿಯಮಿತವಾಗಿ ಬಳಸುವುದೊಂದೇ ಮಾರ್ಗವಾಗಿದೆ.

ವ್ಯಕ್ತಿಯನ್ನು ಸುರಕ್ಷಿತವಾಗಿಡಲು ಮತ್ತು ವೈರಸ್ ಹರಡುವುದನ್ನು ತಡೆಯಲು ಈ ಎರಡೂ ವಿಷಯಗಳು ಬಹಳ ಸಹಾಯಕವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಡಬ್ಲ್ಯುಎಚ್ಒ ಮತ್ತು ಸಿಡಿಎಸ್ ನ ಮಾರ್ಗಸೂಚಿಗಳ ಪ್ರಕಾರ, ಸ್ಯಾನಿಟೈಜರ್ ನ್ನು ಹೇಗೆ ಬಳಸಿದರೆ ವ್ಯಕ್ತಿ ಸುರಕ್ಷಿತವಾಗಿರುತ್ತಾನೆ ಎಂಬುದನ್ನು ತಿಳಿದುಕೊಳ್ಳಬೇಕು. ಅದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಸ್ಯಾನಿಟೈಜರ್ ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಬೇಕಾದ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

60 ಪ್ರತಿಶತ ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ಬಳಸಿ:

60 ಪ್ರತಿಶತ ಆಲ್ಕೋಹಾಲ್ ಇರುವ ಸ್ಯಾನಿಟೈಜರ್ ಬಳಸಿ:

WHO ಮಾರ್ಗಸೂಚಿಗಳ ಪ್ರಕಾರ, ನೀವು ಸ್ಯಾನಿಟೈಜರ್ ಅನ್ನು ಖರೀದಿಸಿದಾಗಲೆಲ್ಲಾ, ಮೊದಲು ನಿಮ್ಮ ಸ್ಯಾನಿಟೈಜರ್ ನ ಅಲ್ಕೋಹಾಲ್ ಪ್ರಮಾಣ 60 ಪ್ರತಿಶತದಷ್ಟು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೈರಸ್ ಮತ್ತು ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು 60 ಪ್ರತಿಶತ ಆಲ್ಕೋಹಾಲ್ ಸ್ಯಾನಿಟೈಜರ್ ಬಳಕೆಯು ಮುಖ್ಯವಾಗಿದೆ.

ಒಣಗುವವರೆಗೆ ಕೈಗಳನ್ನು ಉಜ್ಜಿಕೊಳ್ಳಿ:

ಒಣಗುವವರೆಗೆ ಕೈಗಳನ್ನು ಉಜ್ಜಿಕೊಳ್ಳಿ:

ಕೆಲವು ಜನರು ತಮ್ಮ ಕೈಗಳ ಬ್ಯಾಕ್ಟೀರಿಯಾವನ್ನು ಮುಕ್ತಗೊಳಿಸಲು ಸ್ಯಾನಿಟೈಜರ್ ಅನ್ನು ಬಳಸುತ್ತಾರೆ ಆದರೆ ಅದನ್ನು ಕೈಯಲ್ಲಿ ಚೆನ್ನಾಗಿ ಉಜ್ಜಿಕೊಳ್ಳುವುದಿಲ್ಲ. ಆದರೆ ಹೀಗೆ ಮಾಡಬೇಡಿ. ಸ್ಯಾನಿಟೈಜರ್ ಅನ್ನು ಹಚ್ಚಲು ಇದು ಸರಿಯಾದ ಮಾರ್ಗವಲ್ಲ. ಸ್ಯಾನಿಟೈಜರ್ ಸಂಪೂರ್ಣವಾಗಿ ಒಣಗುವವರೆಗೆ ನಿಮ್ಮ ಕೈಗಳನ್ನು ಚೆನ್ನಾಗಿ ಉಜ್ಜಿಕೊಳ್ಳಿ.

ಕೈಗಳನ್ನು ಸ್ವಚ್ಛಗೊಳಿಸಲು ಎಷ್ಟು ಪ್ರಮಾಣದ ಸ್ಯಾನಿಟೈಜರ್ ಬಳಸಬೇಕು?:

ಕೈಗಳನ್ನು ಸ್ವಚ್ಛಗೊಳಿಸಲು ಎಷ್ಟು ಪ್ರಮಾಣದ ಸ್ಯಾನಿಟೈಜರ್ ಬಳಸಬೇಕು?:

ಒಬ್ಬ ವ್ಯಕ್ತಿಯು ತಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಕನಿಷ್ಠ 5 ಎಂಎಲ್ ಸ್ಯಾನಿಟೈಜರ್ ಅನ್ನು ಬಳಸಬೇಕು. ಆದರೆ ನಿಮ್ಮ ಕೈಗಳು ಹೆಚ್ಚು ಕೊಳಕು ಎಂದು ನೀವು ಭಾವಿಸಿದರೆ ನೀವು 5 ಎಂಎಲ್ ಗಿಂತ ಹೆಚ್ಚು ಸ್ಯಾನಿಟೈಜರ್ ಅನ್ನು ಬಳಸಬೇಕಾಗುತ್ತದೆ.

ಸ್ವಚ್ಛಗೊಳಿಸಿದ ಕೈಗಳಿಂದ ಆಹಾರವನ್ನು ಸೇವಿಸಬೇಡಿ:

ಸ್ವಚ್ಛಗೊಳಿಸಿದ ಕೈಗಳಿಂದ ಆಹಾರವನ್ನು ಸೇವಿಸಬೇಡಿ:

ಆಹಾರವನ್ನು ತಿನ್ನುವ ಮೊದಲು ಕೈ ತೊಳೆಯುವುದನ್ನು ತಪ್ಪಿಸಲು ಅನೇಕ ಬಾರಿ ಜನರು ಸ್ಯಾನಿಟೈಜರ್ ಬಳಸಲು ಪ್ರಾರಂಭಿಸುತ್ತಾರೆ. ಸ್ಯಾನಿಟೈಜರ್ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಅನ್ನು ಹೊಂದಿರುತ್ತದೆ ಅದು ನಿಮ್ಮ ಮೂತ್ರಪಿಂಡ, ಯಕೃತ್ತು ಮತ್ತು ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ತಿನ್ನುವ 30 ಸೆಕೆಂಡುಗಳ ಮೊದಲು ಯಾವಾಗಲೂ ಸ್ಯಾನಿಟೈಜರ್ ಬಳಸಿ.

ಸ್ಯಾನಿಟೈಜರ್ ಅನ್ನು ಬೆಂಕಿಯಿಂದ ದೂರವಿಡಿ:

ಸ್ಯಾನಿಟೈಜರ್ ಅನ್ನು ಬೆಂಕಿಯಿಂದ ದೂರವಿಡಿ:

ಸ್ಯಾನಿಟೈಜರ್ ನಲ್ಲಿ ಆಲ್ಕೋಹಾಲ್ ಇರುತ್ತದೆ. ಅದು ಸುಡುವಂತೆ ಮಾಡುತ್ತದೆ. ಆದ್ದರಿಂದ ಸ್ಯಾನಿಟೈಜರ್ ನ್ನು ಅಡುಗೆಮನೆ ಅಥವಾ ಬೆಂಕಿಯಿಂದ ದೂರವಿರಿಸುವುದು ಉತ್ತಮವಾಗಿದೆ.

ರೋಗಿಯನ್ನು ಭೇಟಿಯಾದಾಗಲೂ ಸ್ಯಾನಿಟೈಜರ್ ಬಳಸಿ:

ರೋಗಿಯನ್ನು ಭೇಟಿಯಾದಾಗಲೂ ಸ್ಯಾನಿಟೈಜರ್ ಬಳಸಿ:

ಸಿಡಿಎಸ್ ಪ್ರಕಾರ, ಆಸ್ಪತ್ರೆಗೆ ಹೋಗಿ ನೀವು ರೋಗಿಯನ್ನು ಭೇಟಿಯಾದರೆ, ನಂತರ ನೀರಿನ ಬದಲು ಸ್ಯಾನಿಟೈಜರ್ ಬಳಸಿ. ಇದನ್ನು ಮಾಡುವುದರಿಂದ ನೀವು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತೀರಿ.

English summary

Things to Keep in Mind While Using Hand Sanitizers to Stay Safe from Covid-19

Here we talking about Things to Keep in Mind While Using Hand Sanitizers to Stay Safe from Covid-19, read on
X
Desktop Bottom Promotion