For Quick Alerts
ALLOW NOTIFICATIONS  
For Daily Alerts

ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿಮಗೂ ಮಂಕು ಕವಿದಿದೆ ಎಂದರ್ಥ

|

ಕೆಲವೊಮ್ಮೆ ಕಾರಣ ತಿಳಿಸಲು ಸಾಧ್ಯವಾಗದ, ಮೆದುಳಿನ ನಿಷ್ಕ್ರಿಯತೆ ಎದುರಾಗುತ್ತದೆ. ಹೀಗಾದಾಗ ಯಾವುದೇ ವಿಷಯದ ಬಗ್ಗೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯನ್ನು ನಮ್ಮ ಹಿರಿಯರು ಮಂಕು ಕವಿಯುವುದು ಎಂದು ಕರೆದಿದ್ದಾರೆ. ವೈದ್ಯರು ಈ ಸ್ಥಿತಿಯನ್ನು brain fog ಎಂದು ಗುರುತಿಸುತ್ತಾರೆ. ಇದಕ್ಕೆ ಕೆಲವಾರು ಕಾರಣಗಳಿದ್ದು ಇದರ ಅನುಭವ ನಿಮಗೆ ಆಗಾಗ ಆಗುತ್ತಿದ್ದರೆ ಈ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರುವುದು ಅಗತ್ಯವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ:

brain fog
ವಿಚಿತ್ರ ಆಲೋಚನೆಗಳನ್ನು ನಿರ್ಲಕ್ಷಿಸದಿರಿ

ವಿಚಿತ್ರ ಆಲೋಚನೆಗಳನ್ನು ನಿರ್ಲಕ್ಷಿಸದಿರಿ

ಒಂದು ವೇಳೆ ನಿತ್ಯದಂತೆ ನಿಮ್ಮ ಆಲೋಚನೆ ಇಲ್ಲದೇ ಮಾಡಬೇಕಾದ ಕೆಲಸಗಳನ್ನೆಲ್ಲಾ ಮರೆತು ಬೇರಾವುದೋ ಅಸಂಬದ್ಧ ಯೋಚನೆಯೇ ತಲೆಯನ್ನು ತುಂಬಿಕೊಂಡಿದ್ದು ತರ್ಕಬದ್ದತೆಯಲ್ಲಾ ಮಾಯವಾಗಿದ್ದರೆ ಇದಕ್ಕೆ ಬ್ರೇಯ್ನ್ ಫಾಗ್ ಅಥವಾ ಮಂಕು ಕವಿಯುವುದು ಎಂದು ಕರೆಯಬಹುದು. ಈ ಬಗ್ಗೆ ತಜ್ಞರು ಇದು ನೇರವಾಗಿ ಒಂದು ಕಾಯಿಲೆಯಲ್ಲ, ಬದಲಿಗೆ ಬೇರಾವುದೋ ಗಂಭೀರವಾದ ಕಾಯಿಲೆಯ ಅಡ್ಡ ಪರಿಣಾಮ ಅಥವಾ ಸೂಚನೆ ಎಂದು ತಿಳಿಸುತ್ತಾರೆ. ಹಾಗಾಗಿ, ಈ ಬಗೆಯ ಮಂಕು ಕವಿಯುವುದು ಆಗಾಗ ಕಾಡುತ್ತಿದ್ದರೆ ತಜ್ಞರ ನೆರವು ಪಡೆಯುವುದು ಅಗತ್ಯವಾಗಿದೆ ಹಾಗೂ ಇದಕ್ಕೆ ಕಾರಣವನ್ನು ಹುಡುಕಿ ಸೂಕ್ತ ಚಿಕಿತ್ಸೆಯನ್ನು ಆದಷ್ಟೂ ಬೇಗನೇ ಪ್ರಾರಂಭಿಸಬೇಕು.

ನಿಮಗರಿವಿಲ್ಲದೆಯೇ ನೀವು ಖಿನ್ನತೆಗೆ ಒಳಗಾಗಿರಬಹುದು

ನಿಮಗರಿವಿಲ್ಲದೆಯೇ ನೀವು ಖಿನ್ನತೆಗೆ ಒಳಗಾಗಿರಬಹುದು

ಖಿನ್ನತೆ (clinical depression) ಅಥವಾ ನಿರಾಶಾದಾಯಕ ಭಾವನೆ ಚಿಂತನೆಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ ಹಾಗೂ ಇದು ಮಂಕು ಕವಿಯುವುದಕ್ಕೆ ನೇರವಾಗಿ ಕಾರಣವಾಗಿದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಸಾಮಾನ್ಯ ಚಿಂತನೆ, ಕ್ರಿಯೆಗೆ ಸ್ಪಂದಿಸಬೇಕಾದ ಪ್ರತಿಕ್ರಿಯೆ, ಮನೋಭಾವ ಮೊದಲಾದವುಗಳನ್ನು ಭಿನ್ನರೀತಿಯಲ್ಲಿ ತೋರ್ಪಡಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ ಮೂವತ್ತು ಕೋಟಿ ಜನರಿಗೆ ಈ ತೊಂದರೆ ಇದೆ. ಒಂದು ವೇಳೆ ನಿಮಗರಿವಿಲ್ಲದೇ, ನಿಮ್ಮ ಆಪ್ತರು ಆಗಾಗ ಗಮನಿಸಿ ನಿಮಗೆ ಎಚ್ಚರಿಕೆ ಕೊಡುತ್ತಿದ್ದರೆ ನಿಮಗೆ ಖಿನ್ನತೆ ಇರುವ ಸಾಧ್ಯತೆ ಇರಬಹುದು ಹಾಗೂ ತಕ್ಷಣವೇ ನೀವು ತಜ್ಞರ ಸಲಹೆ ಪಡೆಯಬೇಕು. ಮೊದಲು ವೈದ್ಯರು ನಿಮ್ಮ ರಕ್ತಪರೀಕ್ಷೆ ಹಾಗೂ ಇತರ ಅಗತ್ಯ ಪರೀಕ್ಷೆಗಳನ್ನು ನಡೆಸಿ ತಜ್ಞರ ಬಳಿ ಕಳುಹಿಸುತ್ತಾರೆ. ಅಗತ್ಯ ಎನಿಸಿದರೆ ಮನಃಶಾಸ್ತ್ರಜ್ಞರ ಬಳಿಗೂ ಕಳುಹಿಸಬಹುದು. ಒಂದು ವೇಳೆ ಇದಕ್ಕೂ ಮುನ್ನ ನಿಮಗೆ ಖಿನ್ನತೆಯ ತೊಂದರೆ ಇದ್ದರೆ ನಿಮಗೆ ನೀಡಿದ್ದ ಖಿನ್ನತಾ ನಿವಾರಕ ಗುಳಿಗೆಗಳ ಪ್ರಭಾವವೇನಾದರೂ ಈಗಿನ ಸ್ಥಿತಿಗೆ ಕಾರಣವಾಗಬಹುದೇ ಎಂಬ ಬಗ್ಗೆ ವೈದ್ಯರಲ್ಲಿ ಚರ್ಚಿಸಿ. ಕೆಲವೊಮ್ಮೆ ಕೆಲವು ಔಷಧಿಗಳ ಅಡ್ಡಪರಿಣಾಮದಿಂದಲೂ ಮಂಕು ಕವಿಯುತ್ತದೆ. ವಿಶೇಷವಾಗಿ, ಕೆಲವು ಔಷಧಿಗಳ ಸೇವನೆಯ ಬಳಿಕ ನಿದ್ದೆ ಬರಬೇಕಾಗಿದ್ದು ಈ ನಿದ್ದೆಯನ್ನು ಬಲವಂತವಾಗಿ ಬಾರದಂತೆ ತಡೆದು ಇದ್ದ ಪರಿಸ್ಥಿತಿಯಿಂದಲೂ ಮಂಕು ಕವಿಯಬಹುದು.

ನಿಮಗೆ ಆಗತ್ಯವಿದ್ದಷ್ಟು ಗಾಢ ನಿದ್ದೆ ಸಿಗುತ್ತಿಲ್ಲವೇ?

ನಿಮಗೆ ಆಗತ್ಯವಿದ್ದಷ್ಟು ಗಾಢ ನಿದ್ದೆ ಸಿಗುತ್ತಿಲ್ಲವೇ?

ಯಾವುದೋ ಕಾರ್ಯಕ್ಕಾಗಿ ನಿದ್ದೆಗೆಡುತ್ತಿದ್ದೀರಾ ಅಥವಾ ಸುಖನಿದ್ದೆ ಆವರಿಸುತ್ತಿಲ್ಲವೇ? ಅಥವಾ ನಿದ್ದೆಗೆ ನಡುನಡುವೆ ಭಂಗ ಬರುತ್ತಿದೆಯೇ? ಒಟ್ಟಾರೆ ನಿಮಗೆ ಆರೋಗ್ಯಕರ ಪ್ರಮಾಣದ ಸುಖನಿದ್ದೆ ಸಿಗುತ್ತಿಲ್ಲವಾದರೆ ಇದರಿಂದಲೂ ಮಂಕು ಕವಿಯಬಹುದು. ಅಮೇರಿಕನ್ ಸ್ಲೀಪ್ ಅಸೋಸಿಯೇಶನ್ ಪ್ರಕಾರ ಈ ಏಳು ಕೋಟಿ ಜನರಿಗೆ ನಿದ್ರಾರಾಹಿತ್ಯ, ಸ್ಲೀಪ್ ಅಪ್ನಿಯಾ ಅಥವಾ ತಡೆತಡೆದು ನಿದ್ದೆ ಬರುವಿಕೆ ಮೊದಲಾದ ತೊಂದರೆಗಳಿದ್ದು ಇದು ನೇರವಾಗಿ ಮಂಕು ಕವಿಯುವಿಕೆಗೆ ಕಾರಣವಾಗಿರಬಹುದು. ಊಟವಿಲ್ಲದೇ ನಾವು ಮೂರು ನಾಲ್ಕು ದಿನವಾದರೂ ಜೀವಂತವಿರಬಹುದು. ಆದರೆ ನಿದ್ದೆಯಿಲ್ಲದೇ ಎರಡು ದಿನಕ್ಕಿಂತ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ರಾತ್ರಿಯ ನಿದ್ದೆಯ ಸಮಯದಲ್ಲಿ ನೂರಾರು ಅನೈಚ್ಛಿಕ ಕಾರ್ಯಗಳು ನಡೆಯುತ್ತವೆ ಹಾಗೂ ಇವೆಲ್ಲವನ್ನೂ ಮೆದುಳುಬಳ್ಳಿ ನಿರ್ವಹಿಸುತ್ತದೆ. ಈ ಸಮಯದಲ್ಲಿ ಮೆದುಳು ವಿಶ್ರಾಂತಿ ಪಡೆಯುತ್ತದೆ ಹಾಗೂ ಮುಂದಿನ ದಿನದ ಕೆಲಸಗಳಿಗಾಗಿ ಅಗತ್ಯವಿರುವ ಸೂಚನೆಗಳನ್ನು ನೀಡಬೇಕಾದ ನ್ಯೂರಾನುಗಳನ್ನು ತಯಾರು ಮಾಡುತ್ತದೆ. ನಿದ್ದೆಯೇ ಇಲ್ಲದಿದ್ದಲ್ಲಿ ನ್ಯೂರಾನುಗಳು ತಯಾರಾಗುವುದಾದರೂ ಹೇಗೆ? ಇದರ ಕೊರತೆಯೇ ಮಂಕು ಕವಿಯಲು ನೇರವಾಗಿ ಕಾರಣವಾಗುತ್ತದೆ. ಹಾಗಾಗಿ, ನಿಮ್ಮ ಕೆಲವು ಅಭ್ಯಾಸಗಳಿಂದಾಗಿ ನಿದ್ದೆ ಮೊಟಕುಗೊಳ್ಳುತ್ತಿದ್ದರೆ ಇದನ್ನು ಗುರುತಿಸಿ ನಿಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳಲೇ ಬೇಕು. ವಿಶೇಷವಾಗಿ ರಾತ್ರಿ ಮಲಗುವ ಸಮಯವನ್ನು ಮೊಬೈಲ್ ಹಾಗೂ ಇತರ ಮಾಧ್ಯಮಗಳನ್ನು ವೀಕ್ಷಿಸುವಲ್ಲಿ ಕಳೆಯುವುದನ್ನು ತಜ್ಞರು ತೀವ್ರವಾಗಿ ಖಂಡಿಸುತ್ತಾರೆ. ಬದಲಿಗೆ ಕೋಣೆಯ ತಾಪಮಾನವನ್ನು 65 ರಿಂದ 67 ಡಿಗ್ರಿ ಫ್ಯಾರನ್ ಹೀಟ್ ನಡುವೆ ಇರಿಸಿ, ಕತ್ತಲಾವರಿಸಿ, ಶಾಂತ ಪರಿಸರದಲ್ಲಿ ಮಲಗುವಂತೆ ಸಲಹೆ ಮಾಡುತ್ತಾರೆ.

ನಿಮ್ಮ ದೇಹದ ರಸದೂತಗಳ ಮಟ್ಟಗಳಲ್ಲಿ ಏರುಪೇರು

ನಿಮ್ಮ ದೇಹದ ರಸದೂತಗಳ ಮಟ್ಟಗಳಲ್ಲಿ ಏರುಪೇರು

ವಿಶೇಷವಾಗಿ ಮಹಿಳೆಯರಲ್ಲಿ ರಸದೂತಗಳ ಮಟ್ಟದಲ್ಲಿ ಏರುಪೇರು ಸಾಮಾನ್ಯವಾಗಿದೆ. ಈ ಪರಿಯ ಏರುಪೇರುಗಳಿಂದ ಯಾವುದೇ ವಯಸ್ಸಿನ ಮಹಿಳೆಯಲ್ಲಿ ಮಂಕು ಕವಿಯಬಹುದು. ಅದರಲ್ಲೂ ರಜೋನಿವೃತ್ತಿಯ ಸಮಯಕ್ಕೂ ಮೊದಲು ಮತ್ತು ನಂತರ ಈ ಏರುಪೇರು ಅತ್ಯಧಿಕವಾಗಿರುತ್ತದೆ. ರಜೋನಿವೃತ್ತಿಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್ ಸಹಿತ ಇತರ ರಸದೂತಗಳು ಅತಿ ಎನಿಸುವಷ್ಟು ಏರುಪೇರು ಕಾಣಿಸುತ್ತವೆ. ಪರಿಣಾಮವಾಗಿ ಮಂಕು ಕವಿಯುವ ಸಹಿತ ತಲೆನೋವು, ಯಾವುದೇ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯವಾಗದಿರುವುದು, ಗೊಂದಲ ಮತ್ತು ಸಿಡುಕುತನ ವಿಪರೀತವಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿಯೂ ಗರ್ಭಿಣಿಯ ದೇಹದಲ್ಲಿ ಹಲವಾರು ರಸದೂತಗಳ ಏರುಪೇರು ಕಾಣಿಸಿಕೊಳ್ಳುವ ಮೂಲಕ ಮಂಕು ಕವಿಯುವುದು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮಹಿಳೆಯ ಫಲವತ್ತತೆಯ ದಿನಗಳಲ್ಲಿಯೂ ಈ ಪರಿ ಕಂಡುಬರಬಹುದು. ಒಂದು ವೇಳೆ ಈ ತೊಂದರೆ ವಿಪರೀತ ಎನಿಸಿದರೆ ಅಂತಃಸ್ರಾವಶಾಸ್ತ್ರಜ್ಞ ಸಲಹೆ ಪಡೆಯಬೇಕು. ತಜ್ಞರು ಸೂಕ್ತ ಪರೀಕ್ಷೆಗಳ ಮೂಲಕ ಯಾವ ರಸದೂತಗಳ ಮಟ್ಟ ಹೆಚ್ಚು ಕಡಿಮೆಯಾಗಿದೆ ಎಂಬುದನ್ನು ಗಮನಿಸಿ ಸೂಕ್ತ ಔಷಧಿಗಳನ್ನು ನೀಡಬಹುದು. ಈ ಮೂಲಕ ಏರುಪೇರು ಸರಿಯಾದರೆ ಉಳಿದ ತೊಂದರೆಗಳೆಲ್ಲಾ ತನ್ನಿಂತಾನೇ ಸರಿಹೋಗುತ್ತವೆ.

ಅನಾರೋಗ್ಯಕರ ಆಹಾರಾಭ್ಯಾಸ

ಅನಾರೋಗ್ಯಕರ ಆಹಾರಾಭ್ಯಾಸ

ನಿಮ್ಮ ಗೊಂದಲದ ನಿರ್ಣಗಳು, ಸೂಕ್ತವಾಗಿ ನಿರ್ಧಾರ ಕೈಗೊಳ್ಳಲು ಅಸಾಧ್ಯವಾಗದಿರುವುದು ಅಥವಾ ಉದ್ವೇಗ ಮೊದಲಾದವುಗಳಿಗೆ ಅನಾರೋಗ್ಯಕರ ಆಹಾರಕ್ರಮವೂ ಕಾರಣವಾಗಿರಬಹುದು. ಉದಾಹರಣೆಗೆ ಅತಿ ಹೆಚ್ಚಿನ ಕೆಫೇನ್, ಮದ್ಯ ಅಥವಾ ಸಕ್ಕರೆಯ ಸೇವನೆ, ಇವು ದೀರ್ಘಕಾಲದಲ್ಲಿ ಮಂಕು ಕವಿಯುವಿಕೆಗೆ ಕಾರಣವಾಗಬಹುದು. ಕೆಫೀನ್ ಸೇವನೆಯಿಂದ ಆ ಕ್ಷಣಕ್ಕೆ ಎಚ್ಚರಾಗಿರುವ ಮತ್ತು ಚುರುಕುತನ ಪಡೆಯಬಹುದಾದರೂ ದೀರ್ಘಕಾಲೀನ ಸೇವನೆಯಿಂದ ಸಿಡುಕುವಿಕೆ, ಸುಸ್ತು, ಏಕಾಗ್ರತೆ ಸಾಧ್ಯವಾಗದಿರುವುದು ಮೊದಲಾದವು ಕಾಣಿಸಿಕೊಳ್ಳಬಹುದು. ಅತಿ ಹೆಚ್ಚಿನ ಕೆಫೀನ್ ಸೇವನೆಯಿಂದ ನಡುಮಧ್ಯಾಹ್ನದ ಸಮಯದಲ್ಲಿ ತಲೆತಿರುಗುವಿಕೆ ಎದುರಾಗಬಹುದು. ಇದಕ್ಕೆ ವೈದ್ಯರು mid-day crash ಎಂದು ಕರೆಯುತ್ತಾರೆ. ಇದು ಅತಿ ಹೆಚ್ಚಿನ ಸಕ್ಕರೆಗೂ ಅನ್ವಯಿಸುತ್ತದೆ. ಅಧ್ಯಯನಗಳ ಪ್ರಕಾರ ದೀರ್ಘಕಾಲ ಮದ್ಯವ್ಯಸನಿಗಳಾಗಿದ್ದು ಥಟ್ಟನೇ ಒಮ್ಮೆಲೇ ಮದ್ಯಪಾನ ನಿಲ್ಲಿಸಿದರೂ ಇದೇ ಸ್ಥಿತಿ ಎದುರಾಗುತ್ತದೆ. ಹಾಗಾಗಿ ವ್ಯಸನಿಗಳು ಒಮ್ಮೆಲೇ ಬಿಡದೇ ನಿಧಾನವಾಗಿ ಕಡಿಮೆಗೊಳಿಸುತ್ತಾ ಇಳಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ. ಒಂದು ವೇಳೆ ನಿಮಗೆ ಗ್ಲುಟೆನ್ ಅಥವಾ ಡೈರಿ ಉತ್ಪನಗಳಿಗೆ ಅಲರ್ಜಿಯಿದ್ದು ಈ ವಸ್ತುಗಳಿರುವ ಆಹಾರ ಸೇವನೆಯಿಂದಲೂ ಮಂಕು ಕವಿಯಬಹುದು. ಒಂದು ವೇಳೆ ಈ ಬಗೆಯ ಅಲರ್ಜಿಗಳು ನಿಮ್ಮ ಮಂಕುಕವಿಯುವಿಕೆಗೆ ಕಾರಣ ಎಂಬ ಅನುಮಾನ ನಿಮ್ಮ ವೈದ್ಯರಿಗೆ ಎದುರಾದರೆ ಅವರು ರಕ್ತಪರೀಕ್ಷೆ ಹಾಗೂ ಅಲರ್ಜಿಕಾರಕಗಳನ್ನು ಕಂಡುಹಿಡಿಯುವ ಪರೀಕ್ಷೆಗಳನ್ನು ಮಾಡಿಸಬಹುದು. ನಮ್ಮ ಆಹಾರ ಆದಷ್ಟೂ ಸಾವಯವ ವಿಧಾನದಲ್ಲಿ ಬೆಳೆದ, ಇಡಿಯ ಧಾನ್ಯಗಳಿಂದ ಮಾಡಲ್ಪಟ್ಟ, ಸಸ್ಯಜನ್ಯ ಮತ್ತು ಹೆಚ್ಚು ಹೆಚ್ಚಾಗಿ ತರಕಾರಿ, ಹಣ್ಣು, ಒಣಫಲ, ಬೀಜಗಳಿಂದ ಕೂಡಿರಬೇಕು ಹಾಗೂ ಪ್ರಾಣಿಜನ್ಯ, ಸಂಸ್ಕರಿತ, ಸಕ್ಕರೆ ಭರಿತ, ಕೊಬ್ಬು ಭರಿತ ಮತ್ತು ಕುಲಾಂತರಿ ತಳಿ ಆಧಾರಿತ ಆಹಾರಗಳು ಆದಷ್ಟೂ ಕಡಿಮೆ ಇರಬೇಕು.

ನೀವು ಸಾಕಷ್ಟು ವ್ಯಾಯಾಮ ಮಾಡುತ್ತಿದ್ದೀರಾ?

ನೀವು ಸಾಕಷ್ಟು ವ್ಯಾಯಾಮ ಮಾಡುತ್ತಿದ್ದೀರಾ?

ಮಂಕು ಕವಿಯುವಿಕೆಗೆ ಬೇರಾವುದೇ ಅನಾರೋಗ್ಯ ಅಥವಾ ಔಷಧಿಗಳ ಪರಿಣಾಮ ಕಾರಣವಿರದಿದ್ದಲ್ಲಿ ನಿಮ್ಮ ವೈದ್ಯರು ನಿಮ್ಮ ದೈಹಿಕ ಚಟುವಟಿಕೆಗಳ ಬಗ್ಗೆ ವಿಚಾರಿಸಬಹುದು. ಇದರಲ್ಲಿ ನಿಮ್ಮ ಶಕ್ತಿ, ದಾರ್ಢ್ಯತೆ, ಬಾಗುವಿಕೆಯ ಸಾಮರ್ಥ್ಯ, ತಕ್ಷಣದ ಕ್ರಿಯೆಗೆ ಮೆದುಳಿನ ಪ್ರತಿಕ್ರಿಯೆ (neuromotor function) ಮೊದಲಾದವುಗಳನ್ನು ಪರೀಕ್ಷಿಸಬಹುದು. ಅಗತ್ಯವಿರುವಷ್ಟು ದೈಹಿಕ ಚಟುವಟಿಕೆಯನ್ನು ಪಡೆಯದಿರುವ ವ್ಯಕ್ತಿಗಳು ತಕ್ಷಣವೇ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ವ್ಯಾಯಾಮವನ್ನು ಪ್ರಾರಂಭಿಸಬೇಕು. ನಿತ್ಯವೂ ಈ ವ್ಯಾಯಾಮವನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ದೇಹ ಈ ಹೊಸ ಚಟುವಟಿಕೆಗೆ ಒಗ್ಗಿಕೊಳ್ಳುತ್ತಾ ನಿಧಾನವಾಗಿ ಮಂಕು ಕವಿಯುವಿಕೆ ಇಲ್ಲವಾಗುತ್ತದೆ. ಈ ವ್ಯಾಯಾಮ ಕೇವಲ ಮೆದುಳಿಗಲ್ಲ, ಬದಲಿಗೆ ಇಡಿಯ ದೇಹದ ಎಲ್ಲಾ ಅಂಗಾಂಗಗಳಿಗೆ ಅಗತ್ಯವಾಗಿದೆ. ಅಷ್ಟೇ ಅಲ್ಲ, ದೈಹಿಕ ವ್ಯಾಯಾಮದ ಕೊರತೆಯಿಂದ ಸ್ಥೂಲಕಾಯ ಎದುರಾಗಿದ್ದರೆ, ಈ ಅನಗತ್ಯ ತೂಕವನ್ನು ಇಳಿಸಲೂ ವ್ಯಾಯಾಮ ಅಗತ್ಯವಾಗಿದೆ.

ವಿಟಮಿನ್ ಕೊರತೆ

ವಿಟಮಿನ್ ಕೊರತೆ

ಒಂದು ವೇಳೆ ದೇಹದಲ್ಲಿ ಅಗತ್ಯ ಪ್ರಮಾಣದ ಕೆಲವು ವಿಟಮಿನ್ನುಗಳಿಲ್ಲದಿದ್ದರೆ, ವಿಶೇಷವಾಗಿ ವಿಟಮಿನ್ B12 ಕೊರತೆಯಿದ್ದರೆ ಇದು ಕೇಂದ್ರ ನರವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಇರಲು ಕಾರಣವಾಗಬಹುದು. ವಿಶೇಷವಾಗಿ ತೀವ್ರತರದ ಮಂಕುಕವಿಯುವಿಕೆಗೆ ಈ ಕೊರತೆ ಪ್ರಮುಖ ಕಾರಣವಾಗಿದೆ. ಇದರ ಹೊರತಾಗಿ ದೇಹದಲ್ಲಿ ಫೋಲೇಟ್, ಥಿಯಾಮಿನ್, ನಿಯಾಸಿನ್, ವಿಟಮಿನ್ ಬಿ೬, ಮೊದಲಾದ ಪೋಷಕಾಂಶಗಳರ ಕೊರತೆಯೂ ಮಂಕು ಕವಿಯುವಿಕೆಗೆ ಕಾರಣವಾಗಬಹುದು. ರೋಗ ನಿರೋಧಕ ಶಕ್ತಿಗೆ ಅತ್ಯಗತ್ಯವಾಗಿ ಬೇಕಾಗಿರುವ ವಿಟಮಿನ್ ಸಿ ಸಹಾ ಮೆದುಳಿನಲ್ಲಿ ಉರಿಯೂತವುಂಟಾಗದೇ ಇರಲು ಅಗತ್ಯವಾಗಿದೆ. ಹಾಗಾಗಿ ಇವುಗಳ ಕೊರತೆಯಿಂದ ಮಂಕು ಕವಿಯುವಿಕೆ ತೋರಬಹುದು. ಆದರೆ ಈ ಲಕ್ಷಣಕ್ಕೂ ಮುನ್ನವೇ ಸುಸ್ತು ಹಾಗೂ ಇತರ ಸೂಚನೆಗಳು ಕಾಣಬರುತ್ತದೆ. ಹಾಗಾಗಿ ಸೂಕ್ತ ರಕ್ತಪರೀಕ್ಷೆಯಿಂದ ಅಗತ್ಯ ವಿಟಮಿನ್ನುಗಳ ಕೊರತೆಯನ್ನು ಕಂಡುಕೊಂಡು ವೈದ್ಯರು ಸೂಕ್ತ ಹೆಚ್ಚುವರಿ ಔಷಧಿಗಳನ್ನು ಸೂಚಿಸುತ್ತಾರೆ. ಈ ಪರೀಕ್ಷೆಗಳನ್ನು ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲು ತಡವಾದಾಗಲೇ ಇದು ಉಲ್ಬಣಗೊಂಡು ಮಂಕು ಕವಿಯುವಿಕೆಯತ್ತ ಸಾಗುತ್ತದೆ. ಹಾಗಾಗಿ ಸೋಮಾರಿತನ ಸಲ್ಲದು. ಈ ಪೋಷಕಾಂಶಗಳೆಲ್ಲವೂ ನಮ್ಮ ಆಹಾರದ ಮೂಲಕವೇ ಲಭಿಸುವ ಕಾರಣ ಸಮತೋಲನದ ಆಹಾರಾಭ್ಯಾಸದಿಂದ ಈ ಕೊರತೆ ಎದುರಾಗದಂತೆ ಕಾಪಾಡಿಕೊಳ್ಳುವುದೇ ಜಾಣತನದ ಕ್ರಮವಾಗಿದೆ.

ಫೈಬ್ರೋಮೈಯಾಗ್ಲಿಯಾ ಕಾರಣ

ಫೈಬ್ರೋಮೈಯಾಗ್ಲಿಯಾ ಕಾರಣ

ಅತೀವವಾದ ಸ್ನಾಯುಗಳ ನೋವು, ಮೂಳೆಸಂದುಗಳು ಅತೀವ ಸಂವೇದನಾಶೀಲವಾಗಿರುವುದು, ಸುಸ್ತು, ತಡೆತಡೆದು ಬರುವ ನಿದ್ದೆ ಇವೆಲ್ಲವೂ ಫೈಬ್ರೋಮೈಯಾಗ್ಲಿಯಾ (Fibromyalgia) ಎಂಬ ಕಾಯಿಲೆಯ ಲಕ್ಷಣಗಳಾಗಿವೆ. ಈ ಕಾಯಿಲೆ ಇರುವ ವ್ಯಕ್ತಿಗಳಿಗೆ ಮಂಕುಕವಿಯುವುದೂ ಸಾಮಾನ್ಯವಾಗಿ ಎದುರಾಗುತ್ತದೆ. ಈ ಸ್ಥಿತಿಯನ್ನು ವೈದ್ಯರು ‘fibro fog' ಎಂದು ಗುರುತಿಸುತ್ತಾರೆ. ಈ ವ್ಯಕ್ತಿಗಳಿಗೆ ತಾತ್ಕಾಲಿಕವಾಗಿ ನೆನಪಿನ ಶಕ್ತಿ ಕುಂದುವುದು, ವಿಚಿತ್ರ ಚಿಂತನೆಗಳು, ವಿಷಯ ಪಲ್ಲಟಗೊಳ್ಳುವಿಕೆ, ಸಂವಾದವನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟಕರವಾಗುವುದು ಮೊದಲಾದವು ಎದುರಾಗುತ್ತದೆ ಎಂದು ಆರ್ಥ್ರೈಟಿಸ್ ಫೌಂಡೇಶನ್ ವಿವರಿಸುತ್ತದೆ. ಈ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ರೋಗಿಯ ಕುಟುಂಬ ಇತಿಹಾಸವನ್ನು ಕೆದಕಬಹುದು ಹಾಗೂ ಹಲವು ಪರೀಕ್ಷೆಗಳ ಮೂಲಕ ಕಾರಣವನ್ನು ಕಂಡುಕೊಂಡು ಸೂಕ್ತ ಚಿಕಿತ್ಸೆ ಮುಂದುವರೆಸಬಹುದು. ಈ ಕಾಯಿಲೆಗೆ ಇದುವರೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಾಗಾಗಿ ಬೇರೆ ಬೇರೆ ಚಿಕಿತ್ಸೆ ಹಾಗೂ ಜೀವನಕ್ರಮ ಬದಲಾವಣೆಯಿಂದ ಈ ಸ್ಥಿತಿಯನ್ನು ಆದಷ್ಟೂ ಉಲ್ಬಣಗೊಳ್ಳದಂತೆ ತಡೆದು ಸಾಮಾನ್ಯ ಜೀವನವನ್ನು ಮುಂದುವರೆಸಿಕೊಂಡು ಹೋಗಬಹುದು.

ಹೈಪೋಥೈರಾಯ್ಡಿಸಂ

ಹೈಪೋಥೈರಾಯ್ಡಿಸಂ

ಥೈರಾಯ್ಡ್ ಗ್ರಂಥಿ ಅಗತ್ಯಕ್ಕೂ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಇದರಿಂದಲೂ ದೇಹದ ಕೆಲವಾರು ಕಾರ್ಯಗಳು ಕುಂಠಿತಗೊಳ್ಳುತ್ತದೆ. ಥೈರಾಯ್ಡ್ ಎಂದರೆ ಚಿಟ್ಟೆಯಾಕಾರದ, ನಮ್ಮ ಗಂಟಲಿನಲ್ಲಿರುವ ಧ್ವನಿಪೆಟ್ಟಿಗೆಯ ಸುತ್ತ ಆವರಿಸಿರುವ ಗ್ರಂಥಿಯಾಗಿದ್ದು ಇದರಿಂದ ಸ್ರವಿಸುವ ರಸದೂತಗಳು ನಮ್ಮ ದೇಹದ ಬಹುತೇಕ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತವೆ. ಇದು ನಮ್ಮ ಮನೋಭಾವದ ನಿಯಂತ್ರಣಕ್ಕೂ ಅಗತ್ಯವಾಗಿದೆ ಎಂದು ಸೊಸೈಟಿ ಆಫ್ ಎಂಡೋಕ್ರೈನಾಲಜಿ ವಿಭಾಗ ವಿವರಿಸುತ್ತದೆ. ಒಂದು ವೇಳೆ ಮಂಕು ಕವಿಯುವುದು ಈ ಗ್ರಂಥಿಯ ಸ್ರಾವದ ಕೊರತೆಯಿಂದ ಎಂದು ವೈದ್ಯರಿಗೆ ಅನುಮಾನವಿದ್ದರೆ ಈ ಕೊರತೆಯನ್ನು ಪರೀಕ್ಷಿಸಲು ಹೈಪೋಥೈರಾಯ್ಡಿಸಂ ಪರೀಕ್ಷೆಗೆ ನಿಮ್ಮನ್ನು ಒಳಪಡಿಸಬಹುದು. ಇದೇ ಕಾರಣ ಎಂದು ಖಚಿತವಾದರೆ ಇದಕ್ಕೆ ಸೂಕ್ತ ಔಷಧಿ ಹಾಗೂ ಆಹಾರಾಭ್ಯಾಸಗಳಲ್ಲಿ ಬದಲಾವಣೆಯ ಮೂಲಕ ಈ ಕೊರತೆಯನ್ನು ಶೀಘ್ರವಾಗಿ ಮತ್ತು ಸುಲಭವಾಗಿ ನೀಗಿಸಿಕೊಂಡು ಮಂಕು ಕವಿಯುವಿಕೆಯಿಂದ ಸಂಪೂರ್ಣವಾಗಿ ಹೊರಬರಬಹುದು.

ಅತಿಯಾದ ಮಾನಸಿಕ ಒತ್ತಡದಿಂದಲೂ ಇದು ಎದುರಾಗಿರಬಹುದು

ಅತಿಯಾದ ಮಾನಸಿಕ ಒತ್ತಡದಿಂದಲೂ ಇದು ಎದುರಾಗಿರಬಹುದು

ಅತಿಯಾದ ಮಾನಸಿಕ ಒತ್ತಡದ ಸಂದರ್ಭಗಳಲ್ಲಿಯೂ ಮಂಕು ಕವಿಯಬಹುದು. ಸಾಮಾನ್ಯವಾಗಿ ವೈದ್ಯರು ಇತರ ಎಲ್ಲಾ ಸಾಧ್ಯತೆಗಳು ಇಲ್ಲವೆಂದ ಬಳಿಕ ವೈದ್ಯರು ಮಾನಸಿಕ ಒತ್ತಡದ ಸಾಧ್ಯತೆಯನ್ನು ಪರೀಕ್ಷಿಸುತ್ತಾರೆ. ಮಾನಸಿಕ ಒತ್ತಡಗಳಿಗೆ ಎದುರಾಗಿರುವ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದಿರುವ ವ್ಯಕ್ತಿಗಳ ಮೆದುಳಿನ ಹೈಪೋಥಲಮಸ್, ಪಿಟ್ಯುಟರಿ-ಅಡ್ರಿನಲ್ ಅಕ್ಷದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ, ಇದು ಮೆದುಳಿಗೆ ತಲುಪುವ ಕಾರ್ಟಿಸೋಲ್ ಮತ್ತು ಇತರ ರಸದೂತಗಳ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಹಾಗೂ ಮಂಕು ಕವಿಯುವಿಕೆಗೆ ಕಾರಣವಾಗುತ್ತದೆ. ಮಾನಸಿಕ ಒತ್ತಡವನ್ನು ನಿರ್ವಹಿಸುವುದು ಹೇಳಿದಷ್ಟು ಸುಲಭವಲ್ಲ. ಆದರೆ ಇದನ್ನು ಸಮರ್ಥವಾಗಿ ನಿರ್ವಹಿಸುವ ಇನ್ನೂ ಕೆಲವಾರು ವಿಧಾನಗಳಿವೆ. ಇದಕ್ಕಾಗಿ ವ್ಯಾಯಾಮ, ಸೂಕ್ತ ಆಹಾರಕ್ರಮ, ಸಾಕಷ್ಟು ನಿದ್ದೆ ಮತ್ತು ನಿಮ್ಮ ಮೆದುಳನ್ನು ಉತ್ತಮ ಆರೋಗ್ಯದಲ್ಲಿರಿಸುವ ಅಭ್ಯಾಸಗಳು ಮೊದಲಾದವು ನೆರವಾಗುತ್ತವೆ. ಇನ್ನೂ ಉತ್ತಮವೆಂದರೆ ಧ್ಯಾನ! ಇತ್ತೀಚಿಗೆ ಈ ಭಾರತೀಯ ಪದ್ದತಿ ಪಾಶ್ಚಾತ್ಯ ಪದ್ದತಿಗಿಂತಲೂ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಒಂದು ವೇಳೆ ಮಾನಸಿಕ ಒತ್ತಡವನ್ನು ನಿರ್ವಹಿಸುವುದು ನಿಮಗೆ ಕಷ್ಟವಾಗುತ್ತಿದ್ದರೆ ಇದಕ್ಕೆ ಪರಿಣಿತರ ಸಲಹೆ ಪಡೆಯಬಹುದು. ನಿಮಗೆ ಹೊಳೆಯದೇ ಇರುವ ಕೆಲವು ಮಾರ್ಗಗಳನ್ನು ಅವರು ನಿಮಗೆ ಸೂಚಿಸಬಲ್ಲರು.

ಮಂಕು ಕವಿಯುವಿಕೆ ಮೂಲತಃ ತಾನಾಗಿಯೇ ಒಂದು ರೋಗವಲ್ಲ, ಆದರೆ ಇದರ ಲಕ್ಷಣಗಳನ್ನು ನಿಮಗಿಂತಲೂ ನಿಮ್ಮ ಸುತ್ತಮುತ್ತಲಿನವರೇ ಮೊದಲಾಗಿ ಗಮನಿಸಬಲ್ಲದು. ಹಾಗಾಗಿ ಯಾರಾದರೂ ಈ ಬಗ್ಗೆ ಎಚ್ಚರಿಸಿದರೆ, ಅಥವಾ ಮೂದಲಿಸಿದರೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಇದನ್ನು ಉಲ್ಬಣಗೊಳ್ಳುವುದರಿಂದ ತಡೆಯಬಹುದು ಹಾಗೂ ಸುಖಕರ ಮತ್ತು ನೆಮ್ಮದಿಯ ದಿನಗಳನ್ನು ಕಳೆಯಬಹುದು.

English summary

These Important Things Your Brain Fog Is Trying To Tell You

Here we are going to guide you about which are the important things your brain fog is trying to tell you. If you’ve ever felt spaced out, absent-minded, or unable to focus for no clear reason, that’s brain fog. Here are some common causes.
Story first published: Tuesday, December 17, 2019, 22:46 [IST]
X
Desktop Bottom Promotion