For Quick Alerts
ALLOW NOTIFICATIONS  
For Daily Alerts

ಸಿಹಿ ಜೋಳ ಅಥವಾ ದೇಸಿ ಜೋಳ ಯಾವುದು ಹೆಚ್ಚು ಆರೋಗ್ಯಕರ?

|

ಮಳೆಗಾಲದಲ್ಲಿ ಚುಮುಚುಮು ಚಳಿಯ ನಡುವೆ ಬಿಸಿ ಬಿಸಿ ಮೆಕ್ಕೆ ಜೋಳ ಒಂದು ಕಪ್‌ ಟೀ/ಕಾಫಿ ಆಹಾ ಎಂಥಾ ಅದ್ಭುತ ಎನಿಸದೇ ಇರದು. ಎಲ್ಲಾ ಕಾಲಮಾನದಲ್ಲೂ ಲಭ್ಯವಿರುವ ಜೋಳ ಬಹುತೇಕರ ನೆಚ್ಚಿನ ತಿಂಡಿ. ಇದನ್ನು ಸುಟ್ಟು, ಬೇಯಿಸಿ ತಿನ್ನುವ ಅಭ್ಯಾಸವಿದೆ ಅಲ್ಲದೆ, ವಿಭಿನ್ನ ಖಾದ್ಯಗಳಲ್ಲಿ ಸಹ ಬಳಸಲಾಗುತ್ತದೆ.

ಆದರೆ ಈ ಮೆಕ್ಕೆ ಜೋಳದಲ್ಲಿ ಎರಡು ವಿಧಗಳಿವೆ. ಒಂದು ಸಿಹಿ ಜೋಳ ಮತ್ತೊಂದು ದೇಸಿ ಜೋಳ, ಎರಡೂ ವಿಭಿನ್ನ ರುಚಿಯನ್ನು ಹೊಂದಿದೆ. ಆದರೆ ಬಹುತೇಕ ಎಲ್ಲರಿಗೂ ಪ್ರಿಯವಾಗುವುದು ಸಿಹಿ ಜೋಳವೇ. ಇದು ಬಾಯಿ ರುಚಿಯ ಜತೆಗೆ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುತ್ತದೆ ಎಂದು ಈ ಜೋಳವನ್ನು ಹೆಚ್ಚು ಇಷ್ಟಪಡುತ್ತಾರೆ.

ಏಕದಳ ಧಾನ್ಯ ಜೋಳವು ಹೇರಳವಾದ ಮ್ಯಾಂಗನೀಸ್, ರಂಜಕ, ಮೆಗ್ನೀಶಿಯಂ ಮತ್ತು ಸತುವಿನಂತಹ ಕೆಲವು ಪೋಷಕಾಂಶಗಳಿಂದ ಕೂಡಿದೆ. ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಸಿಹಿ ಜೋಳ ಆರೋಗ್ಯಕರವೇ ಅಥವಾ ಆರೋಗ್ಯಕ್ಕಾಗಿ ದೇಸಿ ಜೋಳವನ್ನೇ ಸೇವಿಸಬೇಕೆ ಎಂಬುದರ ಬಗ್ಗೆ ನಾವಿಂದು ಸವಿವರ ಮಾಹಿತಿ ನೀಡಲಿದ್ದೇವೆ:

ಸಿಹಿ ಜೋಳದಲ್ಲಿರುವ ಪೋಷಕಾಂಶಗಳು

ಸಿಹಿ ಜೋಳದಲ್ಲಿರುವ ಪೋಷಕಾಂಶಗಳು

ಜೋಳದಲ್ಲಿ ಕಾರ್ಬ್‌ನ ಮುಖ್ಯ ಮೂಲವೆಂದರೆ ಪಿಷ್ಟವಾಗಿದ್ದು ಅದು ಒಣ ತೂಕದ 30-80 ಪ್ರತಿಶತವನ್ನು ಹೊಂದಿರುತ್ತದೆ. ಇದು ಸ್ವಲ್ಪ ಪ್ರಮಾಣದ ಸಕ್ಕರೆಯನ್ನು ಹೊಂದಿದ್ದು, ಅದರಲ್ಲಿ ಹೆಚ್ಚಿನವು ಸುಕ್ರೋಸ್ ಆಗಿದೆ. ಸಿಹಿ ಜೋಳದಲ್ಲಿ ಸಕ್ಕರೆ ಅಂಶವಿದ್ದರೂ, ಇದು ಹೆಚ್ಚಿನ ಗ್ಲೈಸೆಮಿಕ್ ಆಹಾರವಲ್ಲ. ಜೋಳವು ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಮಾಡುವಂಥ ಪ್ರೋಟೀನ್ ಅನ್ನು ಹೊಂದಿರುವುದಿಲ್ಲ.

100 ಗ್ರಾಂ ಬೇಯಿಸಿದ ಸಿಹಿ ಜೋಳದಲ್ಲಿರುವ ಪೋಷಕಾಶಗಳು

100 ಗ್ರಾಂ ಬೇಯಿಸಿದ ಸಿಹಿ ಜೋಳದಲ್ಲಿರುವ ಪೋಷಕಾಶಗಳು

ಕ್ಯಾಲೋರಿಗಳು: 96

ನೀರು: 73%

ಪ್ರೋಟೀನ್: 3.4 ಗ್ರಾಂ

ಕಾರ್ಬೋಹೈಡ್ರೇಟ್ಗಳು: 21 ಗ್ರಾಂ

ಫೈಬರ್: 2.4 ಗ್ರಾಂ

ಕೊಬ್ಬು: 1.5 ಗ್ರಾಂ

ಸಿಹಿ ಜೋಳ ಮತ್ತು ದೇಸಿ ಜೋಳದ ನಡುವಿನ ವ್ಯತ್ಯಾಸ

ಸಿಹಿ ಜೋಳ ಮತ್ತು ದೇಸಿ ಜೋಳದ ನಡುವಿನ ವ್ಯತ್ಯಾಸ

ಜೋಳದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿವೆ, ಆದರೆ ನೀವು ಅದನ್ನು ಬೇಯಿಸುವ ವಿಧಾನವು ಇದರ ಪೌಷ್ಟಿಕಾಂಶದ ಮೌಲ್ಯವನ್ನು ಬದಲಾಯಿಸಬಹುದು.

ಸಿಹಿ ಜೋಳ

ಸಿಹಿ ಜೋಳ

ಇತ್ತೀಚೆಗೆ ಹೈಬ್ರೀಡ್ ಬೀಜಗಳಿಂದ ಸಿಹಿ ಜೋಳವನ್ನು ಬೆಳೆಯಲಾಗುತ್ತದೆ, ಅದಕ್ಕೆ ಬೆಳೆಯಲು ಸುಧಾರಿತ ಸಂಪನ್ಮೂಲಗಳ ಅಗತ್ಯವಿದೆ ಎಂದು ತಜ್ಞರು ಹೇಳಿದರು. ಪೌಷ್ಟಿಕಾಂಶದ ಭಾಗದಲ್ಲಿ, ಈ ರೀತಿಯ ಜೋಳದಲ್ಲಿ ಅಧಿಕ ಸಕ್ಕರೆ ಅಂಶವಿದೆ ಮತ್ತು ಇತರ ಆರೋಗ್ಯಕರ ಖನಿಜಗಳು ಮತ್ತು ವಿಟಮಿನ್‌ಗಳು ಕಡಿಮೆ. ಇದರಲ್ಲಿರುವ ಫೈಬರ್ ಅಂಶ ಕೂಡ ಅತ್ಯಲ್ಪ.

ದೇಸಿ ಜೋಳ

ದೇಸಿ ಜೋಳ

ಮತ್ತೊಂದೆಡೆ, ದೇಸಿ ಜೋಳವು 3000ಕ್ಕೂ ಹೆಚ್ಚು ಪ್ರಭೇದಗಳಲ್ಲಿ ಬರುತ್ತದೆ, ಇದು ಕನಿಷ್ಠ ನೀರು ಮತ್ತು ಗೊಬ್ಬರವನ್ನು ಬಳಸಿ ಬೆಳೆಯಲಾಗುತ್ತದೆ. ಅವುಗಳು ಹೆಚ್ಚಿನ ಪೋಷಕಾಂಶಗಳು, ಫೈಬರ್ ಅನ್ನು ಹೊಂದಿರುತ್ತವೆ ಮತ್ತು ಕಡಿಮೆ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದರಲ್ಲಿರುವ ಸಕ್ಕರೆಯನ್ನು ಹೆಚ್ಚಾಗಿ ಸಂಕೀರ್ಣ ಪಿಷ್ಟವಾಗಿ ಪರಿವರ್ತಿಸಲಾಗುತ್ತದೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಹಾಗಾಗಿ, ಸಿಹಿ ಜೋಳಕ್ಕಿಂತ ದೇಸಿ ಜೋಳವೇ ಹೆಚ್ಚು ಆರೋಗ್ಯಕರ.

ಜೋಳ ತಿನ್ನುವುದರಿಂದಾಗುವ ಲಾಭಗಳು

ಜೋಳ ತಿನ್ನುವುದರಿಂದಾಗುವ ಲಾಭಗಳು

ಜೋಳವನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

* ಜೋಳವು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ.

* ಕ್ಯಾರೊಟಿನಾಯ್ಡ್ಗ ಮತ್ತು ಲುಟೀನ್, ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

* ಆಕ್ಸಿಡೇಟಿವ್ ಹಾನಿಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಲುಟಿನ್ ಸಹಾಯ ಮಾಡುತ್ತದೆ.

* ಇದರಲ್ಲಿರುವ ಪೊಟ್ಯಾಶಿಯಂ ಅಂಶವು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

* ಫೋಲೇಟ್ ಶಿಶುಗಳಲ್ಲಿ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

* ಹೆಚ್ಚಿನ ಫೈಬರ್ ಅಂಶವಿರುವುದರಿಂದ, ಜೋಳವು ನಿಮ್ಮನ್ನು ಡೈವರ್ಟಿಕ್ಯುಲರ್ ಕಾಯಿಲೆಯಿಂದ ತಡೆಯಬಹುದು.

ಜೋಳವನ್ನು ಹೆಚ್ಚು ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳು

ಜೋಳವನ್ನು ಹೆಚ್ಚು ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳು

ಪೌಷ್ಟಿಕ ಆಹಾರವಾಗಿದ್ದರೂ ಯಾವುದರಲ್ಲೂ ಅತಿಯಾದದ್ದು ಅನಾರೋಗ್ಯಕರ ಎಂದು ಹೇಳಲಾಗುತ್ತದೆ. ಆದ್ದರಿಂದ, ಜೋಳದಲ್ಲಿ ಪೋಷಕಾಂಶಗಳು ತುಂಬಿದ್ದರೂ, ಕೆಲವು ಕಾಳಜಿಗಳು ಇರುವುದರಿಂದ ನೀವು ಅದನ್ನು ಮಿತಿಯಲ್ಲಿ ತಿನ್ನಬೇಕು.

ಜೋಳದಲ್ಲಿ ಕೆಲವು ಪ್ರಮಾಣದ ಫೈಟಿಕ್ ಆಸಿಡ್ ಇದ್ದು ಇದು ದೇಹದಲ್ಲಿ ಕಬ್ಬಿಣ ಮತ್ತು ಸತುವಿನಂತಹ ಖನಿಜಗಳ ಹೀರಿಕೊಳ್ಳುವಿಕೆಯನ್ನು ಕುಂಠಿತಗೊಳಿಸುತ್ತದೆ. ಒಂದು ದಿನದಲ್ಲಿ ಹೆಚ್ಚು ಕಾರ್ನ್ ಸೇವನೆಯು ಉಬ್ಬುವುದು ಮತ್ತು ಮಲಬದ್ಧತೆಯ ಸಮಸ್ಯೆ ಎದುರಾಗಬಹುದು.

English summary

Sweet Corn vs Desi Bhutta: Nutrition, Helath Benefits, Side effects in Kannada

Here we are discussing about Sweet Corn vs Desi Bhutta: Nutrition, Helath Benefits, Side effects in Kannada. Read more
Story first published: Thursday, August 12, 2021, 17:01 [IST]
X
Desktop Bottom Promotion