For Quick Alerts
ALLOW NOTIFICATIONS  
For Daily Alerts

ದೇಹದಲ್ಲಿ ವಿಟಮಿನ್ ಕೊರತೆಯಾಗಿದ್ದರೆ, ಮುಖದ ಮೇಲೆ ಈ ಲಕ್ಷಣಗಳು ಗೋಚರಿಸುವುದು

|

ಉತ್ತಮ ಆರೋಗ್ಯ ಪಡೆಯಲು ಪೌಷ್ಠಿಕಾಂಶ, ವಿಟಮಿನ್ ಭರಿತ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ. ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರಲಿ ಅಥವಾ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ನಿರ್ಬಂಧಿತ ಆಹಾರವನ್ನು ಅನುಸರಿಸುತ್ತಿದ್ದರಾಗಲೀ, ನಿಮ್ಮ ದೇಹವನ್ನು ಸಮೃದ್ಧವಾಗಿರಿಸಲು ಆರೋಗ್ಯಕರ ಆಹಾರ ಸೇವಿಸಬೇಕು.

ಆದರೆ, ಪೋಷಕಾಂಶಯುಕ್ತ ಆಹಾರ ಸೇವನೆ ಮಾಡದಿದ್ದರೆ, ವಿಟಮಿನ್‌ಗಳ ಕೊರತೆ ಉಂಟಾಗುತ್ತದೆ. ನಮ್ಮ ದೇಹದ ಬೆಳವಣಿಗೆಗೆ ವಿಟಮಿನ್‌ಗಳು ಅತ್ಯವಶ್ಯಕವಾಗಿರುವ ಕಾರಣ, ಅದರ ಕೊರತೆಯಿಂದ ವಿವಿಧ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಅದು ಆಂತರಿಕವಾಗಿ ಮಾತ್ರವಲ್ಲದೆ ಮುಖದ ಮೇಲೂ ಕೆಲವು ಬದಲಾವಣೆಗಳನ್ನು ಪ್ರದರ್ಶಿಸಬಹುದು. ಆದ್ದರಿಂದ ನಾವಿಂದು ನಿಮ್ಮ ಮುಖದ ಮೇಲೆ ಗಮನಿಸಬೇಕಾದ ವಿಟಮಿನ್ ಕೊರತೆಯ ಕೆಲವು ಲಕ್ಷಣಗಳನ್ನು ಹೇಳಿದ್ದೇವೆ.

ವಿಟಮಿನ್ ಕೊರತೆಯಿಂದ ಮುಖದ ಮೇಲೆ ಉಂಟಾಗುವ ಬದಲಾವಣೆಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮುಖದಲ್ಲಿ ಮೊಡವೆ ಮತ್ತು ಶುಷ್ಕತೆ:

ಮುಖದಲ್ಲಿ ಮೊಡವೆ ಮತ್ತು ಶುಷ್ಕತೆ:

ಮೊಡವೆ ಮತ್ತು ಒಣ ಚರ್ಮವು ವಿವಿಧ ಹಾರ್ಮೋನ್ ಬದಲಾವಣೆಗಳ ಪರಿಣಾಮವಾಗಿರಬಹುದು. ಇದು ಕೊಳೆ ಮತ್ತು ಸೂಕ್ಷ್ಮಾಣು ಶೇಖರಣೆಯ ಪರಿಣಾಮವೂ ಆಗಿರಬಹುದು. ಆದರ ಜೊತೆಗೆ ಕೆಲವು ವಿಟಮಿನ್‌ಗಳ ಕೊರತೆಯು ಸಹ ನಿಮ್ಮ ಮುಖದ ಮೇಲಿನ ಬದಲಾವಣೆಗೆ ಕಾರಣವಾಗಬಹುದು. ಅಮರ್ಪಕ ಪ್ರಮಾಣದ ವಿಟಮಿನ್ ಎ ಮತ್ತು ಇ ನಿಮ್ಮ ಮುಖದ ಮೇಲೆ ಮೊಡವೆ ರಚನೆಗೆ ಕಾರಣವಾಗಬಹುದು, ಜೊತೆಗೆ ಕಡಿಮೆ ಮಟ್ಟದ ವಿಟಮಿನ್ ಬಿ 12 ಕೊರತೆಯು ನಿಮ್ಮ ಚರ್ಮವನ್ನು ಎಂದಿಗಿಂತಲೂ ತೆಳುವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ರೋಗನಿರ್ಣಯವನ್ನು ದೃಢೀಕರಿಸಲು, ತೀವ್ರ ಆಯಾಸ, ಮನಸ್ಥಿತಿ ಬದಲಾವಣೆಗಳು ಸೇರಿದಂತೆ, ಇತರ ಲಕ್ಷಣಗಳನ್ನು ಗಮನಿಸಿ.

ಉಬ್ಬಿದ ಕಣ್ಣುಗಳು:

ಉಬ್ಬಿದ ಕಣ್ಣುಗಳು:

ಅಲರ್ಜಿಯು ನಿಮ್ಮ ಕಣ್ಣುಗಳು ಊದಿಕೊಳ್ಳಲು ಕಾರಣವಾಗಬಹುದು. ಆದರೆ ಇದು ಬೆಳಿಗ್ಗೆ ಏಳುವ ಪ್ರತಿ ಬಾರಿಯೂ ಸಂಭವಿಸಿದರೆ, ದೇಹದಲ್ಲಿ ಕಡಿಮೆ ಅಯೋಡಿನ್ ಮಟ್ಟಗಳ ಸಂಕೇತವಾಗಿರಬಹುದು. ಅಧ್ಯಯನಗಳು ಅಯೋಡಿನ್ ಕೊರತೆಯು ಥೈರಾಯ್ಡ್ನೊಂದಿಗೆ ಸಂಬಂಧ ಹೊಂದಿದೆ. ಇದು ಸಾಮಾನ್ಯವಾಗಿ ಆಯಾಸ, ತೂಕ ಹೆಚ್ಚಾಗುವುದು ಮತ್ತು ಸಹಜವಾಗಿ ಉಬ್ಬುವ ಕಣ್ಣುಗಳಿಗೆ ಕಾರಣವಾಗಬಹುದು.

ಒಸಡುಗಳಲ್ಲಿ ರಕ್ತಸ್ರಾವ:

ಒಸಡುಗಳಲ್ಲಿ ರಕ್ತಸ್ರಾವ:

ವಿಟಮಿನ್ ಸಿ ಕೊರತೆಯು ದೇಹಕ್ಕೆ ಮತ್ತು ಆರೋಗ್ಯಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಇದರ ಚಿಹ್ನೆಗಳಲ್ಲಿ ಒಸಡುಗಳಲ್ಲಿ ರಕ್ತಸ್ರಾವವಾಗುವುದು ಪ್ರಮುಖವಾಗಿದೆ, ಇದನ್ನು 'ಸ್ಕರ್ವಿ' ಎಂದೂ ಕರೆಯುತ್ತಾರೆ. ಇತರ ರೋಗಲಕ್ಷಣಗಳೆಂದರೆ, ರಕ್ತಸ್ರಾವ ಮತ್ತು ಕೀಲು ಮತ್ತು ಸ್ನಾಯು ನೋವುಗಳನ್ನು ಒಳಗೊಂಡಿರಬಹುದು. ದೇಹದಲ್ಲಿ ನಿಮ್ಮ ವಿಟಮಿನ್ ಸಿ ಮಟ್ಟವನ್ನು ಹೆಚ್ಚಿಸಲು, ಕಿತ್ತಳೆ, ನಿಂಬೆಹಣ್ಣು ಮತ್ತು ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳನ್ನು ಸೇವಿಸಿ.

ಮಸುಕಾದ ತುಟಿಗಳು:

ಮಸುಕಾದ ತುಟಿಗಳು:

ಮಸುಕಾದ, ಒಡೆದತುಟಿಗಳನ್ನು ಹೊಂದಿರುವುದು ಅನೇಕ ಕಾಯಿಲೆಗಳ ಸಂಕೇತವಾಗಿದೆ. ಆದಾಗ್ಯೂ, ಇದು ರಕ್ತಹೀನತೆಯ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದ್ದು, ದೇಹದಲ್ಲಿನ ಕಡಿಮೆ ಮಟ್ಟದ ಕೆಂಪು ರಕ್ತ ಕಣಗಳಿಂದ ಉಂಟಾಗುವ ಸ್ಥಿತಿಯಾಗಿದೆ. ದೇಹದಲ್ಲಿನ ಕಡಿಮೆ ಕಬ್ಬಿಣದ ಮಟ್ಟವು ಕೆಂಪು ರಕ್ತ ಕಣಗಳಲ್ಲಿ ಕೊರತೆಯನ್ನು ಉಂಟುಮಾಡುತ್ತದೆ, ಇದು ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸಲು ಕಷ್ಟವಾಗುತ್ತದೆ. ಆದ್ದರಿಂದ ಇದು ಚರ್ಮ ಮತ್ತು ತುಟಿಗಳ ಬಣ್ಣ ಡಲ್ ಆಗಲು ಕಾರಣವಾಗಬಹುದು. ಇದಲ್ಲದೆ, ಕಬ್ಬಿಣದ ಕೊರತೆಯು ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ಒಣ ಕೂದಲು:

ಒಣ ಕೂದಲು:

ನೀವು ಹಾನಿಗೊಳಗಾದ, ಒಣ ಕೂದಲು ಹೊಂದಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ B7 ಎಂದು ಕರೆಯಲ್ಪಡುವ ಬಯೋಟಿನ್ ಕೊರತೆಯನ್ನು ಹೊಂದಿದ್ದೀರಿ ಎಂದರ್ಥ. ಬಯೋಟಿನ್ ನಿಮ್ಮ ಕೂದಲಿಗೆ ಪೋಷಕಾಂಶವನ್ನು ನೀಡುವ ಪೋಷಕಾಂಶಗಳಾಗಿದ್ದು, ಕಡಿಮೆ ಮಟ್ಟದ ಬಯೋಟಿನ್ ಡ್ಯಾಂಡ್ರಫ್ಯುಕ್ತ, ಒಣ ಕೂದಲಿಗೆ ಕಾರಣವಾಗುತ್ತದೆ. ಇದಲ್ಲದೆ, ಇದು ತೆಳುವಾದ ಉಗುರುಗಳು ಮತ್ತು ತೆಳ್ಳನೆಯ ಕೂದಲುಗಳಿಗೆ ಕಾರಣವಾಗಬಹುದು. ಆದ್ದರಿಂದ, ಮಾಂಸ, ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಮೀನು ಸೇರಿದಂತೆ ವಿಟಮಿನ್ ಬಿ 7 ನಲ್ಲಿ ಹೆಚ್ಚಿರುವ ಆಹಾರವನ್ನು ಸೇವಿಸಿ.

English summary

Signs of Vitamin Deficiency on your Face in Kannada

Here we talking about Signs of Vitamin Deficiency on your face in Kannada, read on
Story first published: Monday, November 15, 2021, 15:22 [IST]
X
Desktop Bottom Promotion