For Quick Alerts
ALLOW NOTIFICATIONS  
For Daily Alerts

ಕೋವಿಡ್‌ನಿಂದ ಗುಣಮುಖರಾಗುವವರು ಶ್ವಾಸಕೋಶದ ಸ್ವಾಸ್ಥ್ಯಕ್ಕೆ ಈ ವ್ಯಾಯಾಮಗಳನ್ನು ಮಾಡಿ

|

ಕೋವಿಡ್‌ ದಾಳಿಗೆ ತುತ್ತಾಗಿರುವ ಎಲ್ಲರಲ್ಲೂ ಶ್ವಾಸಕೋಶದ ಸಮಸ್ಯೆ ಎದುರಾಗುವುದು ಸಾಮಾನ್ಯ, ಆದರೆ ಸಮಸ್ಯೆಯ ತೀವ್ರತೆಯಲ್ಲಿ ಬದಲಾವಣೆ ಇರುತ್ತದೆ. ಆದ್ದರಿಂದ ಕೋವಿಡ್‌ ಬಾಧಿಸುತ್ತಿರುವ ಎಲ್ಲರೂ ಮೊದಲನೇ ದಿನದಿಂದಲೇ ಶ್ವಾಸಕೋಶದ ಸ್ವಾಸ್ಥ್ಯ ವೃದ್ಧಿಯಾಗಲು ಕೆಲವು ಸುಲಭ ವ್ಯಾಯಾಮಗಳನ್ನು ಮಾಡುವುದು ಅತ್ಯಗತ್ಯ.

Recuperative lung strengthening exercises for Covid-19 recovery in Kannada

ಶ್ವಾಸಕೋಶದ ಸಮಸ್ಯೆ ಹೆಚ್ಚಾದರೆ ಎದೆಯಲ್ಲಿ ನ್ಯುಮೋನಿಯಾ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು, ಆದ್ದರಿಂದ ಚೇತರಿಕೆಯ ಹಂತದಲ್ಲಿ ವ್ಯಾಯಾಮ ಮಾಡುವ ಮೂಲಕ ನಿಮ್ಮ ಅರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯ.

ತಜ್ಞರ ಪ್ರಕಾರ ಈ ಕೆಳಗೆ ನೀಡಿರುವ ಕೆಲವು ಸರಳ ವ್ಯಾಯಾಮಗಳನ್ನು ಪ್ರತಿದಿನ ಕನಿಷ್ಠ 6-7 ಬಾರಿ ಮಾಡುವ ಮೂಲಕ ಕೋವಿಡ್‌ ಸಂದರ್ಭದಲ್ಲಿ ಶ್ವಾಸಕೋಶಕ್ಕೆ ಎದುರಾಗುವ ಸಮಸ್ಯೆಯಿಂದ ಪಾರಾಗಬಹುದು:

1. ಸ್ಪಿರೋಮೀಟರ್

1. ಸ್ಪಿರೋಮೀಟರ್

ಮೂರು ಚೆಂಡುಗಳಿರುವ ಯಂತ್ರವು ನಿಮ್ಮ ಶ್ವಾಸಕೋಶವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆಳವಾಗಿ ಉಸಿರಾಡುತ್ತಾ ಎಲ್ಲಾ ಚೆಂಡುಗಳನ್ನು ನಳಿಕೆಯ ಮೂಲಕ ಉಸಿರಿನಿಂದ ಮೇಲಕ್ಕೆತ್ತಲು ಪ್ರಯತ್ನಿಸುವುದು ಮತ್ತು ಹೊರಗೆ ಬಿಡುವುದು ಈ ವ್ಯಾಯಾಮ ಮಾಡುವ ಸರಿಯಾದ ಮಾರ್ಗವಾಗಿದೆ. ಆದರೆ ನೆನಪಿರಲಿ ಈ ವ್ಯಾಯಾಮ ಮಾಡುವ ಪ್ರಕ್ರತಿಯೆಯು ನಿಧಾನಗತಿಯಲ್ಲಿ ಇರಬೇಕು, ಆತಿಯಾದ ವೇಗ ಒಳ್ಳೆಯದಲ್ಲ. ನಿಮ್ಮ ಉಸಿರಾಟಕ್ಕೆ ತೊಂದರೆಯಾಗದಂತೆ ಖಚಿತಪಡಿಸಿಕೊಳ್ಳಿ.

2. ಶುದ್ಧ ಉಸಿರಾಟ

2. ಶುದ್ಧ ಉಸಿರಾಟ

ಶುದ್ಧ ಉಸಿರಾಟವು ಶ್ವಾಸಕೋಶವು ಶುದ್ಧವಾಗಲು ಸಹಾಯ ಮಾಡುವ ಮತ್ತೊಂದು ಪ್ರಮುಖ ಉಸಿರಾಟದ ತಂತ್ರವಾಗಿದೆ. ನಿಮ್ಮ ತುಟಿಗಳನ್ನು ಮುಚ್ಚಿ ನಿಮ್ಮ ಮೂಗಿನಿಂದ ಆಳವಾಗಿ ಉಸಿರನ್ನು ಎಳೆದುಕೊಳ್ಳಿ ನಂತರ ತುಟಿಗಳನ್ನು ಒ ಎನ್ನುವಂತೆ ತೆರೆದು ಬಾಯಿಯ ಮೂಲಕ ಉಸಿರನ್ನು ಹೊರಗೆ ಬಿಡಿ. ನಿಮಗೆ ಸಾಧ್ಯವಾದಷ್ಟು ಬಾರಿ ಇದನ್ನು ಪುನರಾವರ್ತಿಸಿ.

3. ಓಂ ಜಪ

3. ಓಂ ಜಪ

ಓಂ ಎಂಬ ಶಬ್ಧ ನಮ್ಮಲ್ಲಿ ಸಾಕಷ್ಟು ಸಕಾರಾತ್ಮಕತೆಯನ್ನು ತುಂಬುತ್ತದೆ. ಹಾಗೆಯೇ ನಮ್ಮ ಶ್ವಾಸಕೋಶದ ಆರೋಗ್ಯಕ್ಕೂ ಸಾಕಷ್ಟು ಸಹಕಾರಿ ಎಂಬುದು ಗೊತ್ತೆ. ಓಂ ಎನ್ನುವ ಮೊದಲು ದೀರ್ಘವಾಗಿ ಉಸಿರಾಡಿ ನಂತರ ಓಂ ಎಂದು ಜಪಿಸಿ, ಇದನ್ನು ಹೇಳುವಾಗ ಸಾಧ್ಯವಾದಷ್ಟು ಅಗಲವಾಗಿ ಬಾಯಿ ತೆರೆಯಿರಿ.

4. ಆರಂಭಿಕ ವ್ಯಾಯಾಮಗಳು (2 ವಿಧಗಳು)

4. ಆರಂಭಿಕ ವ್ಯಾಯಾಮಗಳು (2 ವಿಧಗಳು)

ಶ್ವಾಸಕೋಶದ ಆರೋಗ್ಯ ವೃದ್ಧಿಸುವ ಆರಂಭಿಕ ವ್ಯಾಯಾಮಗಳಲ್ಲಿ 2 ವಿಧಗಳಿವೆ.

1. ನಿಮ್ಮ ಕೈಗಳನ್ನು ನಿಮ್ಮ ಮುಂದೆ ನೇರವಾಗಿ ಇಟ್ಟುಕೊಂಡು ನಂತರ ಎರಡನ್ನು ಗಟ್ಟಿಯಾಗಿ ಜೋಡಿಸಿ, ಈಗ ಅವುಗಳನ್ನು ತಲೆಯ ಮೇಲೆ ಇರಿಸಿಕೊಂಡು ಉಸಿರನ್ನು ದೀರ್ಘವಾಗಿ ಎಳೆದುಕೊಳ್ಳಿ ನಂತರ ಮತ್ತೆ ನಿಮ್ಮ ಕಣ್ಣಿಗೆ ಸಮನಾಗಿ ಮುಂದೆ ತಂದು ಉಸಿರನ್ನು ಬಿಡಿ.

2. ಆನೆಯ ಕಿವಿಗಳಂತೆ ನಿಮ್ಮ ತಲೆಯ ಹಿಂಭಾಗವನ್ನು ನಿಮ್ಮ ಎರಡೂ ಕೈಗಳಿಂದ ಹಿಡಿದುಕೊಳ್ಳಿ ನಂತರ ನಿಮ್ಮ ತೋಳುಗಳನ್ನು ತೆರೆದು ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಿ ಮತ್ತೆ ಕೈಗಳನ್ನು ಮುಖದ ಮುಂದೆ ಮುಚ್ಚಿ ಉಸಿರನ್ನು ಬಿಡಿ.

5. ಬಲೂನ್ ಸ್ಫೋಟಿಸಿ!

5. ಬಲೂನ್ ಸ್ಫೋಟಿಸಿ!

ಇದು ಕಠಿಣವಾದ ವ್ಯಾಯಾಮ ಎನಿಸಿದರೂ ಶ್ವಾಸಕೋಶದ ಚೇತರಿಕೆಗೆ ಹೆಚ್ಚು ಶಿಫಾರಸು ಮಾಡುವ ವ್ಯಾಯಾಮವಾಗಿದೆ. ದಿನಕ್ಕೆ ಕನಿಷ್ಠ 2ರಿಂದ 3 ಬಲೂನ್‌ ಊದಲು ಯತ್ನಿಸಿ.

6. ನಡೆಯಿರಿ

6. ನಡೆಯಿರಿ

ನಿಮ್ಮ ಶ್ವಾಸಕೋಶದ ಸ್ಥಿತಿ ಮತ್ತು ನಿಮ್ಮ ಎಸ್‌ಪಿಒ 2 ಮಟ್ಟವನ್ನು ಆಧರಿಸಿ ನಿಮ್ಮ ದಿನಚರಿಯಲ್ಲಿ ನಡಿಗೆಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಆರೋಗ್ಯಕ್ಕೆ ಚೇತರಿಕೆಯ ಉದ್ದೇಶದಿಂದ ಇದನ್ನು ಮನೆಯೊಳಗೆ ಮಾಡಿ.

7. ನೆನಪಿಡಿ

7. ನೆನಪಿಡಿ

  • ಈ ವ್ಯಾಯಾಮಗಳನ್ನು ಮಾಡುವ ಮುನ್ನ ಹಾಗೂ ನಂತರ ಸಾಕಷ್ಟು ನೀರು ಅಥವಾ ಹಣ್ಣಿನ ರಸವನ್ನು ಸೇವಿಸಿ.
  • ಪ್ರತಿದಿನ ಕನಿಷ್ಠ 5 ನಿಮಿಷಗಳ ಕಾಲ ಸ್ಟೀಂ ತೆಗೆದುಕೊಳ್ಳಿ.
  • ವೈದ್ಯರನ್ನು ಸಂಪರ್ಕಿಸದೆ ನಿಮ್ಮ ಜೀವನಶೈಲಿ ಅಥವಾ ಆಹಾರಕ್ರಮದಲ್ಲಿ ಯಾವುದೇ ಬದಲಾವಣೆ ಬೇಡ.
  • ಕೊನೆಯದಾಗಿ ಸಾಕಷ್ಟು ವಿಶ್ರಾಂತಿ ಪಡೆಯಿರಿ.
English summary

Recuperative lung strengthening exercises for Covid-19 recovery in Kannada

Here we are discussing about Recuperative lung strengthening exercises for Covid-19 recovery. If your lungs got impacted during COVID, it’s extremely important to follow certain guidelines and techniques to bring them back to their original capacity. Here are some physiotherapist recommended exercises that you must do daily, at least 6-7 times every day. Read more.
Story first published: Friday, May 14, 2021, 12:53 [IST]
X
Desktop Bottom Promotion