For Quick Alerts
ALLOW NOTIFICATIONS  
For Daily Alerts

ಗಸಗಸೆ ಬೀಜದಲ್ಲಿದೆ ಅಚ್ಚರಿ ಪಡುವಂತಹ ಆರೋಗ್ಯ ಪ್ರಯೋಜನಗಳು!

|

ಅಡುಗೆಮನೆಯಲ್ಲಿರುವ ಗಸಗಸೆ ಎಲ್ಲರಿಗೂ ಚಿರಪರಿಚಿತ. ಆದರೆ, ಗಸಗಸೆ ಅಡಿಗೆಗೆ ಮಾತ್ರವಲ್ಲದೇ, ಹೃದಯ ರೋಗ, ಜೀರ್ಣಕ್ರಿಯೆ, ಕೂದಲು ಮತ್ತು ಚರ್ಮದ ಸಮಸ್ಯೆಗಳು, ನಿದ್ರಾಹೀನತೆ, ಮಧುಮೇಹ, ಮೂಳೆಗಳ ಅಸಹಜತೆ ಮತ್ತು ನರ ಸಮಸ್ಯೆಗಳಂತಹ ಅನೇಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಈ ಕುರಿತ ಸಂಪೂರ್ಣ ಮಾಹಿತಿ ನಿಮಗಾಗಿ..

ಗಸಗಸೆ ಬೀಜಗಳೊಂದಿಗೆ ಸಂಬಂಧಿಸಿದ ಆರೋಗ್ಯ ಪ್ರಯೋಜನಗಳು ಮತ್ತು ಪೌಷ್ಟಿಕಾಂಶದ ಮಾಹಿತಿಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ಕೆಳಗೆ ಓದಿ.

ಪೌಷ್ಟಿಕಾಂಶದ ಮೌಲ್ಯಗಳು:

ಪೌಷ್ಟಿಕಾಂಶದ ಮೌಲ್ಯಗಳು:

100 ಗ್ರಾಂ ಇಡೀ ಗಸಗಸೆ ಬೀಜಗಳಲ್ಲಿ ಈ ಕೆಳಗೆ ನೀಡಿರುವ ಪೌಷ್ಟಿಕಾಂಶಗಳು ಒಳಗೊಂಡಿರುತ್ತವೆ:

ಪೋಷಕಾಂಶ ಮೊತ್ತ

ಎನರ್ಜಿ - 536 ಕ್ಯಾಲೋರಿಗಳು

ಪ್ರೋಟೀನ್ -21.43 ಗ್ರಾಂ

ಲಿಪಿಡ್ (ಕೊಬ್ಬು) - 39.29 ಗ್ರಾಂ

ಕಾರ್ಬೋಹೈಡ್ರೇಟ್ - 28.57 ಗ್ರಾಂ

ಫೈಬರ್ - 25 ಗ್ರಾಂ

ಸಕ್ಕರೆ - 3.57 ಗ್ರಾಂ

ಕ್ಯಾಲ್ಸಿಯಂ - 1,250 ಮಿಲಿಗ್ರಾಂ

ಕಬ್ಬಿಣ - 9.64 ಮಿಗ್ರಾಂ

ಮೆಗ್ನೀಸಿಯಮ್ - 357 ಮಿಗ್ರಾಂ

ಸತು - 8.04 ಮಿಗ್ರಾಂ

ಗಸೆಗಸೆಯ ವಿಧಗಳು:

ಗಸೆಗಸೆಯ ವಿಧಗಳು:

ಗಸಗಸೆಯಲ್ಲಿ ಮುಖ್ಯವಾಗಿ 3 ವಿಧಗಳಿವೆ, ಅವುಗಳೆಂದರೆ ಬಿಳಿ ಗಸಗಸೆ (ಇದನ್ನು ಏಷ್ಯನ್ ಅಥವಾ ಭಾರತೀಯ ಗಸಗಸೆ ಎಂದು ಕರೆಯಲಾಗುತ್ತಿದ್ದು, ಅಡಿಗೆಗೆ ಬಳಸಲಾಗುತ್ತದೆ), ನೀಲಿ ಗಸಗಸೆ (ಇದನ್ನು ಯೂರೋಪಿಯನ್ ಗಸಗಸೆ ಎಂದು ಕರೆಯಲಾಗುತ್ತಿದ್ದು, ಬ್ರೆಡ್ ಹಾಗೂ ಇತರ ಕನ್ಫೆಕ್ಷನರಿ ಆಹಾರಗಳಲ್ಲಿ ಬಳಸಲಾಗುತ್ತದೆ) ಹಾಗೂ ಓರಿಯೆಂಟಲ್ ಗಸಗಸೆ (ಇದನ್ನು ಅಫೀಮು ಗಸಗಸೆ ಎಂದು ಕರೆಯಲಾಗುತ್ತಿದ್ದು, ವಾಣಿಜ್ಯ ಬಳಕೆಗೆ ಪ್ರಯೋಜನಕಾರಿಯಾಗಿದೆ).

ಆಕಾರದಲ್ಲಿ ಚಿಕ್ಕದಾಗಿರುವ ಗಸಗಸೆ ಬೀಜಗಳಲ್ಲಿ ಆರೋಗ್ಯ ಪ್ರಯೋಜನ ಸಾಕಷ್ಟಿವೆ, ಅವುಗಳಾವುವು ಇಲ್ಲಿದೆ:

ಆಕಾರದಲ್ಲಿ ಚಿಕ್ಕದಾಗಿರುವ ಗಸಗಸೆ ಬೀಜಗಳಲ್ಲಿ ಆರೋಗ್ಯ ಪ್ರಯೋಜನ ಸಾಕಷ್ಟಿವೆ, ಅವುಗಳಾವುವು ಇಲ್ಲಿದೆ:

ನಿದ್ರಾಹೀನತೆಯನ್ನು ನಿವಾರಿಸುವುದು:

ಗಸಗಸೆಯಲ್ಲಿ ಮೆಗ್ನೀಷಿಯಂ ಅಂಶ ಸಮೃದ್ಧವಾಗಿದ್ದು, ಇದು ಒತ್ತಡದ ಹಾರ್ಮೋನ್ ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ಒತ್ತಡ ನಿವಾರಣೆಯಾಗಿ, ಒಳ್ಳೆಯ ಗುಣಮಟ್ಟದ, ಶಾಂತ ನಿದ್ರೆ ಮಾಡಬಹುದು. ಮಲಗುವ ಮೊದಲು ಗಸಗಸೆಯ ಟೀ ಅಥವಾ ಗಸಗಸೆಯ ಪೇಸ್ಟ್ ಅನ್ನು ಹಾಲಿನೊಂದಿಗೆ ಸೇರಿಸಿ, ಕುಡಿಯುವುದರಿಂದ ಶರೀರದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ನಿದ್ರಿಸಲು ಪ್ರಚೋದಿಸುತ್ತದೆ. ಈ ಮೂಲಕ ನಿದ್ರಾಹೀನತೆಯಂತಹ ಸಮಸ್ಯೆಯನ್ನು ಗುಣಪಡಿಸುತ್ತದೆ.

​ಮಹಿಳೆಯರಲ್ಲಿ ಬಂಜೆತನ ನಿವಾರಣೆ:

​ಮಹಿಳೆಯರಲ್ಲಿ ಬಂಜೆತನ ನಿವಾರಣೆ:

ಗಸಗಸೆ ಮತ್ತು ಅದರ ಎಣ್ಣೆ ಮಹಿಳೆಯರಲ್ಲಿ ಬಂಜೆತನ ನಿವಾರಣೆಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಕಟ್ಟಿದ ಫೆಲೋಪಿಯನ್ ನಾಳಗಳು ಫಲವತ್ತಾದ ಅಂಡ ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಗಸಗಸೆ ಬೀಜದಿಂದ ಫೆಲೋಪಿಯನ್ ನಾಳ ಫ್ಲಶ್ ಮಾಡುವುದರಿಂದ, ಯಾವುದೇ ಕಸ ಅಥವಾ ಶ್ಲೇಷ್ಮ ಕಣಗಳು ಕರಗಿ, ಅಡಚಣೆ ನಿವಾರಣೆಯಾಗುತ್ತದೆ, ಈ ಮೂಲಕ ಇದು ಫಲವತ್ತತೆಯ ಸಾಧ್ಯತೆ ಹೆಚ್ಚಿಸುತ್ತದೆ. ಗಸಗಸೆಯಲ್ಲಿ ಲಿನಿನ್ ಎನ್ನುವ ಅಂಶ ಕಾಮೋತ್ತೇಜಕ ಗುಣ ಹೊಂದಿದ್ದು, ಇದು ಲೈಂಗಿಕಾಸಕ್ತಿಯನ್ನು ಹೆಚ್ಚಿಸಿ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ.

​ಜೀರ್ಣಕ್ರಿಯೆಗೆ ಸಹಕಾರಿ:

​ಜೀರ್ಣಕ್ರಿಯೆಗೆ ಸಹಕಾರಿ:

ನಾರಿನಿಂದ ಸಮೃದ್ಧವಾಗಿರುವ ಗಸಗಸೆ ಜೀರ್ಣಕ್ರಿಯೆ ಉತ್ತೇಜಿಸಲು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇದು ಆಹಾರದಿಂದ ಪೋಷಕಾಂಶಗಳ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನು ಗುಣಪಡಿಸುವುದರೊಂದಿಗೆ ಗುದದ್ವಾರದ ಮೂಲಕ ತ್ಯಾಜ್ಯ ಪದಾರ್ಥಗಳು ಸುಲಭವಾಗಿ ಹೋಗಲು ನೆರವಾಗುತ್ತದೆ.

​ಗ್ರಹಿಕೆಯ ಕ್ಷಮತೆ ಹೆಚ್ಚಿಸುವುದು:

​ಗ್ರಹಿಕೆಯ ಕ್ಷಮತೆ ಹೆಚ್ಚಿಸುವುದು:

ಗಸಗಸೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ, ಇದು ಸ್ವಾಭಾವಿಕವಾಗಿ ರಕ್ತ ಶುದ್ಧೀಕರಿಸುತ್ತದೆ ಮತ್ತು ಕೆಂಪುರಕ್ತಕಣಗಳನ್ನು ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತದೆ. ಮೆದುಳಿಗೆ ಆಮ್ಲಜನಕ ಮತ್ತು ಕೆಂಪು ರಕ್ತಕಣಗಳ ಸರಿಯಾದ ಪೂರೈಕೆ ನರವಾಹಕಗಳ ಉತ್ಪಾದನೆ ನಿಯಂತ್ರಿಸಲು ಮತ್ತು ಗ್ರಹಿಕಾ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ಮರೆವು, ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುವುದು.

ಹೃದಯವನ್ನು ಆರೋಗ್ಯಕರವಾಗಿರಿಸುವುದು:

ಹೃದಯವನ್ನು ಆರೋಗ್ಯಕರವಾಗಿರಿಸುವುದು:

ಗಸಗಸೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಓಲಿಕ್ ಆಮ್ಲ ರಕ್ತದೊತ್ತಡ ಕಡಿಮೆ ಮಾಡಿದರೆ, ಒಮೆಗಾ-6 ಫ್ಯಾಟಿ ಆಮ್ಲ ಹೃದಯಕ್ಕೆ ಹೆಚ್ಚು ಪ್ರಯೋಜನವಾಗುವಂತೆ ಮಾಡಿದೆ. ಇದು ಹೃದಯಾಘಾತ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮೂಳೆಗಳ ಆರೋಗ್ಯ ಸುಧಾರಿಸುವುದು:

ಮೂಳೆಗಳ ಆರೋಗ್ಯ ಸುಧಾರಿಸುವುದು:

ಗಸಗಸೆಯಲ್ಲಿ ಖನಿಜಾಂಶ ಮತ್ತು ಸತುವಿನಾಂಶ ಹೆಚ್ಚಾಗಿದ್ದು, ಮೂಳೆಗಳ ಖನಿಜ ಸಾಂದ್ರತೆ ಹೆಚ್ಚಿಸಿ, ಮೂಳೆಗಳು ಹಾಗೂ ಸಂಪರ್ಕಿತ ಅಂಗಾಂಶಗಳನ್ನು ದೃಢಪಡಿಸುವ ಮೂಲಕ, ಮೂಳೆಗಳು ಮುರಿಯದಂತೆ ರಕ್ಷಣೆ ನೀಡುತ್ತವೆ. ಇದರಲ್ಲಿರುವ ಮ್ಯಾಂಗನೀಸ್ ಮೂಳೆಗಳಲ್ಲಿ ಕೊಲ್ಯಾಜಿನ್ ಉತ್ಪಾದಿಸಲು ನೆರವಾಗುವ ಮೂಲಕ, ಮೂಳೆಗಳು ಹಾನಿಗೊಳಗಾಗದಂತೆ ರಕ್ಷಿಸುತ್ತವೆ.

​ಚರ್ಮ ಮತ್ತು ಕೂದಲಿನ ಆರೋಗ್ಯ:

​ಚರ್ಮ ಮತ್ತು ಕೂದಲಿನ ಆರೋಗ್ಯ:

ಗಸಗಸೆ ಸಮೃದ್ಧವಾದ ಆಂಟಿಆಕ್ಸಿಡೆಂಟ್ ಹೊಂದಿದ್ದು, ಚರ್ಮದ ಉರಿಯೂತ, ನೆತ್ತಿಯ ಸೋಂಕುಗಳ ಸಾಧ್ಯತೆ ಕಡಿಮೆ ಮಾಡುವುದರೊಂದಿಗೆ, ಚರ್ಮ ಮತ್ತು ಕೂದಲಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಗಸಗಸೆಯಲ್ಲಿರುವ ಅಧಿಕ ಪ್ರಮಾಣದ ಲಿನೋಲಿಕ್ ಆಮ್ಲ ಕಜ್ಜಿ, ಸುಟ್ಟಗಾಯ ಮತ್ತು ಕೆರೆತಕ್ಕೆ ಚಿಕಿತ್ಸೆ ನೀಡಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಗಸಗಸೆಯ ಪೇಸ್ಟ್ ಅನ್ನು ಮುಖದ ಮೇಲೆ ಮಾಸ್ಕ್ ನಂತೆ ಹಾಕುವುದರಿಂದ ಮೊಡವೆ ಮತ್ತು ಗುಳ್ಳೆಗಳನ್ನು ನಿವಾರಿಸಿ, ಸ್ವಚ್ಛವಾದ, ಹೊಳೆಯುವ ಚರ್ಮ ನೀಡುವ ಮೂಲಕ, ನಿಮ್ಮ ಸೌಂದರ್ಯ ಹೆಚ್ಚಿಸುತ್ತದೆ.

English summary

Poppy seeds: Nutrition and health benefits in Kannada

Here we talking about Poppy seeds: Nutrition and health benefits in Kannada, read on
X
Desktop Bottom Promotion