For Quick Alerts
ALLOW NOTIFICATIONS  
For Daily Alerts

ಅಪ್ಪಿತಪ್ಪಿಯೂ ಇವುಗಳನ್ನು ಮೊಸರಿನ ಜೊತೆ ಸೇವಿಸಬೇಡಿ!

|

ಬೇಸಿಗೆಯಲ್ಲಿ ನಿಮ್ಮ ಆಹಾರದ ಜೊತೆಗೆ ಮೊಸರು ತಿನ್ನುವುದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳುವುದಲ್ಲದೆ, ದೇಹದ ಉಷ್ಣತೆಯನ್ನು ಶಾಂತಗೊಳಿಸುತ್ತದೆ. ಮೊಸರಿನ್ನು ಪ್ರತಿದಿನ ತಿನ್ನುವುದರಿಂದ ಬಾಡಿ ಡಿಟಾಕ್ಸ್ ಗೆ ಕಾರಣವಾಗುತ್ತದೆ, ಆದರೆ ಮೊಸರಿನೊಂದಿಗೆ ಸೇವಿಸಬಾರದ ಕೆಲವೊಂದು ಆಹಾರಗಳಿವೆ.

ಇವುಗಳನ್ನು ಮೊಸರಿನೊಂದಿಗೆ ತಿನ್ನುವುದರಿಂದ, ದೇಹದಲ್ಲಿ ಜೀವಾಣು ರೂಪುಗೊಳ್ಳುತ್ತದೆ, ಇದು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹಾಗಾದರೆ ಆ ಐದು ಆಹಾರಗಳಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೊಸರಿನೊಂದಿಗೆ ಸೇವಿಸಬಾರದಂತಹ ಆಹಾರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಾವು ಮತ್ತು ಮೊಸರು:

ಮಾವು ಮತ್ತು ಮೊಸರು:

ನೀವು ಎಂದಿಗೂ ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನಬೇಡಿ. ಇವೆರಡೂ ದೇಹಕ್ಕೆ ವಿಷಕಾರಿಯಾಗಿವೆ. ಏಕೆಂದರೆ ಅವುಗಳ ಪರಿಣಾಮವು ಪರಸ್ಪರ ಭಿನ್ನವಾಗಿರುತ್ತದೆ. ಆದ್ದರಿಂದ ನೀವೇನಾದ್ರೂ ಮೊಸರಿನೊಂದಿಗೆ ಮಾವಿನಹಣ್ಣು ಸೇವಿಸುವುತ್ತಿದ್ದರೆ ಈಗಲೇ ನಿಲ್ಲಿಸಿ. ಇವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿವೆ.

ಉದ್ದಿನ ಬೇಳೆ ಮತ್ತು ಮೊಸರು:

ಉದ್ದಿನ ಬೇಳೆ ಮತ್ತು ಮೊಸರು:

ಉದ್ದಿನ ಬೇಳೆಯನ್ನು ಮೊಸರಿನೊಂದಿಗೆ ತಿನ್ನಬಾರದು, ಎರಡೂ ಹೊಟ್ಟೆಗೆ ಹೋಗಿ ದೇಹಕ್ಕೆ ದೊಡ್ಡ ಹಾನಿ ಉಂಟುಮಾಡುತ್ತದೆ. ಆದ್ದರಿಂದ ಉದ್ದಿನ ಬೇಳೆಯನ್ನು ಮೊಸರಿನೊಂದಿಗೆ ಎಂದಿಗೂ ಸೇವಿಸಬೇಡಿ. ಇದು ಖಂಡಿತ ನಿಮ್ಮಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಹಾಲು ಮತ್ತು ಈರುಳ್ಳಿ ಅಥವಾ ಮೊಸರು ಮತ್ತು ಈರುಳ್ಳಿ:

ಹಾಲು ಮತ್ತು ಈರುಳ್ಳಿ ಅಥವಾ ಮೊಸರು ಮತ್ತು ಈರುಳ್ಳಿ:

ಇವುಗಳನ್ನು ಎಂದಿಗೂ ಒಟ್ಟಿಗೆ ಸೇವಿಸಬಾರದು. ಇದನ್ನು ಮಾಡುವುದರಿಂದ, ಆಮ್ಲೀಯತೆ, ಗ್ಯಾಸ್ ಮತ್ತು ವಾಂತಿಯ ಸಮಸ್ಯೆ ಉಂಟಾಗುತ್ತದೆ. ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ಉದ್ಭವವಾಗುತ್ತವೆ. ಆದ್ದರಿಂದ ಮೊಸರು ಮತ್ತು ಈರುಳ್ಳಿಯನ್ನು ಜೊತೆಯಾಗಿ ಸೇವಿಸಬೇಡಿ.

ಮೀನು ಮತ್ತು ಮೊಸರು:

ಮೀನು ಮತ್ತು ಮೊಸರು:

ಮೀನನ್ನು ಮೊಸರಿನೊಂದಿಗೆ ತಿನ್ನಬಾರದು. ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಅನೇಕ ರೀತಿಯ ರೋಗಗಳು ಅದನ್ನು ಸುತ್ತುವರೆದಿವೆ. ಇವುಗಳನ್ನು ಒಟ್ಟಿಗೆ ಸೇವಿಸುವುದರಿಂದ ವಿವಿಧ ರೀತಿಯ ರೋಗಗಳು ನಿಮ್ಮ ದೇಹವನ್ನು ಹೊಕ್ಕುತ್ತವೆ. ಆದ್ದರಿಂದ ಇನ್ನು ಮುಂದೆ ಈ ಮೀನು ಮತ್ತು ಮೊಸರನ್ನು ಒಟ್ಟಿಗೆ ಸೇವಿಸುವ ಸಾಹಸವನ್ನು ಮಾಡಬೇಡಿ.

ಹುರಿದ ವಸ್ತುಗಳು ಮತ್ತು ಮೊಸರು:

ಹುರಿದ ವಸ್ತುಗಳು ಮತ್ತು ಮೊಸರು:

ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಈ ಕಾಂಬಿನೇಷನ್ ಅನ್ನು ಕಾಣಬಹುದು. ಬಿಸಿಬಿಸಿ ಪರೋಟಾದೊಂದಿಗೆ ಮೊಸರನ್ನು ಬಹಳ ಇಷ್ಟಪಟ್ಟು ಎಲ್ಲರೂ ಸವಿಯುತ್ತಾರೆ. ಆದರೆ ಇದನ್ನು ಮಾಡಬಾರದು. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಇನ್ನು ಮುಂದೆ ಹುರಿದ ವಸ್ತುಗಳ ಜೊತೆ ಮೊಸರನ್ನು ಸೇವಿಸಬೇಡಿ.

English summary

Never Eat These Foods With Curd in Kannada

Here we talking about Never eat these foods with curd in Kannada, read on
X
Desktop Bottom Promotion