For Quick Alerts
ALLOW NOTIFICATIONS  
For Daily Alerts

ಹೆಚ್ಚು ಸಮಯ ಕಂಪ್ಯೂಟರ್‌ ಬಳಸುವವರು ಕಣ್ಣಿನ ಕಾಳಜಿ ಹೀಗೆ ಮಾಡಲೇಬೇಕಂತೆ: ನೇತ್ರತಜ್ಞರು

|

ಮನುಷ್ಯದ ದೇಹದ ಪ್ರತಿಯೊಂದು ಅಂಗಕ್ಕೂ ಬಹಳ ಪ್ರಾಮುಖ್ಯತೆ ಇದೆ. ಆದರೆ ಕಣ್ಣು ಮನುಷ್ಯನಿಗೆ ಜಗತ್ತನ್ನು ಪರಿಚಯಿಸುವ ಅತ್ಯಂತ ಮಹತ್ವದ ಅಂಗವಾಗಿದೆ. ಕಣ್ಣುಗಳು ಅತ್ಯಗತ್ಯ ಮುಖದ ಪರಿಕರ ಮಾತ್ರವಲ್ಲದೆ ನಮ್ಮ ಸಂವೇದನಾ ವ್ಯವಸ್ಥೆಗಳಲ್ಲಿ ಅತ್ಯಂತ ಪ್ರಬಲವಾಗಿದೆ.

123

ಆದರೆ, ನಮ್ಮ ಕೆಲವು ಜೀವನಶೈಲಿ ನಿರ್ಧಾರಗಳು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್, ಕಣ್ಣಿನ ಪೊರೆಗಳು, ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ ಮತ್ತು ಒಣ ಕಣ್ಣುಗಳಂತಹ ಹಾನಿ ಅಥವಾ ದೃಷ್ಟಿ ದೋಷವನ್ನು ಉಂಟುಮಾಡುತ್ತಿವೆ. ನೇತ್ರದ ತಜ್ಞರ ಪ್ರಕಾರ ಅತ್ಯುತ್ತಮ ದೃಷ್ಟಿಗಾಗಿ, ಆರೋಗ್ಯಕರ ಕಣ್ಣುಗಳನ್ನು ಕಾಪಾಡಿಕೊಳ್ಳಲು ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಬೇಕು:

​20-20-20 ನಿಯಮ

​20-20-20 ನಿಯಮ

ಇಡೀ ದಿನ ಕಂಪ್ಯೂಟರ್‌, ಮೊಬೈಲ್‌ ಸ್ಕ್ರೀನ್‌ಗಳನ್ನು ನೋಡುವುದು ಕಣ್ಣಿಗೆ ಅದೆಷ್ಟು ಒತ್ತಡ ನೀಡುತ್ತದೆ ಗೊತ್ತಾ?. ಅದರಲ್ಲೂ ಯುವ ಪೀಳಿಗೆಯು ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು, ಟಿವಿ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಂತಹ ಪರದೆಗಳಿಗೆ ಅಂಟಿಕೊಂಡಿರುವ ಸಮಯವು ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೆಚ್ಚಿನ ಪರದೆಯ ಸಮಯವು ದೃಷ್ಟಿ ಆಯಾಸಕ್ಕೆ ಕಾರಣವಾಗಬಹುದು.

ಆದ್ದರಿಂದ, ನೇತ್ರಶಾಸ್ತ್ರಜ್ಞರ ಪ್ರಕಾರ 20-20-20 ನಿಯಮವನ್ನು ಪಾಲಿಸಲು ಸಲಹೆ ನೀಡುತ್ತಾರೆ. 20-20-20 ನಿಯಮ ಎಂದರೆ ಪ್ರತಿ 20 ನಿಮಿಷಗಳ ಪರದೆಯ ಸಮಯದ ನಂತರ, ನಿಮ್ಮಿಂದ 20 ಅಡಿ ದೂರದಲ್ಲಿರುವ ಯಾವುದನ್ನಾದರೂ 20 ಸೆಕೆಂಡುಗಳ ಕಾಲ ನೋಡುವುದನ್ನು ಖಚಿತಪಡಿಸಿಕೊಳ್ಳಿ.

ಬ್ಲೂ ಕಟ್ ಲೆನ್ಸ್ ಮತ್ತು ಸನ್‌ಗ್ಲಾಸ್‌

ಬ್ಲೂ ಕಟ್ ಲೆನ್ಸ್ ಮತ್ತು ಸನ್‌ಗ್ಲಾಸ್‌

ನೀವು ಡಿಜಿಟಲ್ ಸಾಧನಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರೆ, ಬ್ಲೂ ಲೈಟ್ ಬ್ಲಾಕರ್ ಲೆನ್ಸ್ ಅಥವಾ ಬ್ಲೂ ಕಟ್ ಲೆನ್ಸ್‌ಗಳನ್ನು ಧರಿಸುವುದು ಒಳ್ಳೆಯದು, ಇದು ವಿಶೇಷ ಲೇಪನವನ್ನು ಹೊಂದಿದ್ದು, ಹಾನಿಕಾರಕ ಹೆಚ್ಚಿನ ಶಕ್ತಿಯ ನೀಲಿ ಬೆಳಕು ಮತ್ತು ಯುವಿ ಕಿರಣಗಳನ್ನು ಕಣ್ಣುಗಳಿಗೆ ಪ್ರವೇಶಿಸದಂತೆ ರಕ್ಷಿಸುತ್ತದೆ. ಸನ್‌ಗ್ಲಾಸ್‌ಗಳನ್ನು ಖರೀದಿಸುವಾಗ, 99 ರಿಂದ 100 ಪ್ರತಿಶತ UV-A ಮತ್ತು UV-B ಮಾನ್ಯತೆಗಳನ್ನು ತಡೆಯುವ ಸನ್‌ಗ್ಲಾಸ್‌ಗಳನ್ನು ಖರೀದಿಸುವುದನ್ನು ಖಚಿತಪಡಿಸಿಕೊಳ್ಳಿ.

ದೃಷ್ಟಿಗಾಗಿ ಆರೋಗ್ಯಕರ ಆಹಾರ ಸೇವಿಸಿ

ದೃಷ್ಟಿಗಾಗಿ ಆರೋಗ್ಯಕರ ಆಹಾರ ಸೇವಿಸಿ

ಕ್ಯಾರೆಟ್ ದೃಷ್ಟಿಗೆ ಆರೋಗ್ಯಕರ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆದಾಗ್ಯೂ, ಹಣ್ಣುಗಳು ಮತ್ತು ತರಕಾರಿಗಳಂಥ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು, ಮುಖ್ಯವಾಗಿ ಪಾಲಕ್, ಕೇಲ್ ಅಥವಾ ಕೊಲಾರ್ಡ್ ಗ್ರೀನ್ಸ್‌ನಂತಹ ಕಡು ಹಸಿರು ತರಕಾರಿಗಳು ದೃಷ್ಟಿಯನ್ನು ಕಾಪಾಡಿಕೊಳ್ಳಲು ಬಹಳ ಸಹಕಾರಿ. ಹೆಚ್ಚುವರಿಯಾಗಿ, ಮೀನುಗಳಾದ ಸಾಲ್ಮನ್, ಲೇಕ್ ಟ್ರೌಟ್, ಮ್ಯಾಕ್ರೆಲ್, ಸಾರ್ಡೀನ್‌ಗಳು, ಟ್ಯೂನ ಮತ್ತು ಹಾಲಿಬಟ್‌ನಂತಹ ಒಮೆಗಾ-3 ಕೊಬ್ಬಿನಾಮ್ಲದ ಮೀನುಗಳನ್ನು ತಿನ್ನುವುದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ.

ವ್ಯಾಯಾಮ

ವ್ಯಾಯಾಮ

ದೈಹಿಕವಾಗಿ ಸಕ್ರಿಯವಾಗಿರುವುದು ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ. ವ್ಯಾಯಾಮದಿಂದ ಆರಂಭಿಕ ಮತ್ತು ಮುಂದುವರಿದ ಮ್ಯಾಕ್ಯುಲರ್ ಡಿಜೆನರೇಶನ್ ಹೆಚ್ಚಾಗುವ ಅಪಾಯ ಸಾಧ್ಯತೆ ಕಡಿಮೆ. ಜೊತೆಗೆ ಕಡಿಮೆ ರಕ್ತದೊತ್ತಡ, ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ಮತ್ತು ಮುಖ್ಯವಾಗಿ ದೀರ್ಘಕಾಲದ ಅನಾರೋಗ್ಯವನ್ನು ಸಹ ನಿಯಂತ್ರಿಸಬಹುದು. ಏರೋಬಿಕ್ ಆರೋಗ್ಯಕರ ಮೆದುಳು ಮಗತ್ತು ದೃಷ್ಟಿಯನ್ನು ಸುಧಾರಿಸುತ್ತದೆ.

ಕೋಲ್ಡ್ ಕಂಪ್ರೆಸ್

ಕೋಲ್ಡ್ ಕಂಪ್ರೆಸ್

ಕಣ್ಣಿನ ಆರೈಕೆಯ ಭಾಗವಾಗಿ, ಕೋಲ್ಡ್ ಕಂಪ್ರೆಸ್ ಮಾಡುವುದು ಅತ್ಯಗತ್ಯ. ಇದು ನಿಮ್ಮ ಕಣ್ಣುಗಳು ಪ್ರತಿ ದಿನವೂ ತಾಜಾವಾಗಿ ಕಾಣುವಂತೆ ಮಾಡುತ್ತದೆ ಮತ್ತು ಅತ್ಯುತ್ತಮವಾದ ನೈಸರ್ಗಿಕ ಪರಿಹಾರವಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಇದು ವಿಶೇಷವಾಗಿ ಉಪಯುಕ್ತವಾಗಿದೆ. ಒಣ ಕಣ್ಣುಗಳು, ತಲೆನೋವು ಮತ್ತು ನಿದ್ರಾಹೀನತೆಯ ಚಿಕಿತ್ಸೆಗೆ ಈ ಕೋಲ್ಡ್‌ಕಂಪ್ರೆಸ್‌ ಬಹಳ ಸಹಾಯ ಮಾಡುತ್ತದೆ.

English summary

Natural Ways to maintain good eye health in kannada

Here we are discussing about Natural Ways to maintain good eye health in kannada. Read more.
X
Desktop Bottom Promotion