For Quick Alerts
ALLOW NOTIFICATIONS  
For Daily Alerts

ಈ ಗಿಡಮೂಲಿಕೆಗಳಿಂದ ಫುಡ್ ಪಾಯಿಸನ್‌ನನ್ನು ಮನೆಯಲ್ಲಿಯೇ ಗುಣಪಡಿಸಬಹುದು!

|

ಕೆಲವೊಮ್ಮೆ ನಾವು ಇಷ್ಟಪಟ್ಟು ತಿನ್ನುವ ಆಹಾರವೇ ನಮ್ಮ ಆರೋಗ್ಯ ಕೆಡಿಸಲು ಕಾರಣವಾಗಬಹುದು. ಜಿಟಜಿಟಿ ಎಂದು ಮಳೆ ಸುರಿಯುವಾಗ ಬೀದಿಬದಿಯಲ್ಲಿ ಮಾಡುವ ಬಿಸಿಬಿಸಿ ಅಥವಾ ಮಸಾಲೆಯುಕ್ತ ಆಹಾರಗಳ ಕಡೆ ಮನಸ್ಸು ಸೆಳೆಯುತ್ತದೆ. ಆದರೆ ಇದರ ಆರೋಗ್ಯ ಪರಿಣಾಮಗಳ ಬಗ್ಗೆ ಎಂದೂ ಯೋಚಿಸುವುದಿಲ್ಲ. ಇದು ಕೆಲವೊಮ್ಮೆ ಫುಡ್ ಪಾಯಿಸನ್ ಗೆ ಕಾರಣವಾಗುತ್ತದೆ.

ಫುಡ್ ಪಾಯಿಸನ್ ಆಹಾರದ ಕಳಪೆ ನೈರ್ಮಲ್ಯದಿಂದ ಸಾಮಾನ್ಯವಾಗಿ ಉಂಟಾಗುತ್ತಿದ್ದು, ಜ್ವರ, ಹೊಟ್ಟೆನೋವು ಮೊದಲಾದ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇಂತಹ ರೋಗ ಲಕ್ಷಣ ನಿವಾರಿಸಲು ಸಹಾಯ ಮಾಡುವ ಕೆಲವೊಂದು ನೈಸರ್ಗಿಕ ಗಿಡಮೂಲಿಕೆಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಇವುಗಳು ಫುಡ್ ಪಾಯಿಸನ್‌ನ್ನು ಕಡಿಮೆ ಮಾಡುತ್ತವೆ.

ಫುಡ್ ಪಾಯಿಸನ್ ಗುಣಪಡಿಸುವ ನೈಸರ್ಗಿಕ ಗಿಡಮೂಲಿಕೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಶುಂಠಿ:

ಶುಂಠಿ:

ಶುಂಠಿಯು ಫುಡ್ ಪಾಯಿಸನ್‌ನ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಅದರ ಅಂತರ್ಗತ ಉರಿಯೂತದ ಗುಣಗಳಿಂದಾಗಿ ನಿಮ್ಮ ಹೊಟ್ಟೆಯ ಒಳಪದರವನ್ನು ಶಾಂತಗೊಳಿಸುತ್ತದೆ. ಒಂದು ಲೋಟ ತುರಿದ ಶುಂಠಿಯನ್ನು ಒಂದು ಕಪ್ ನೀರನೊಂದಿಗೆ ಕುದಿಸಿ. ಅಗತ್ಯವಿರುವಂತೆ ಜೇನುತುಪ್ಪ ಅಥವಾ ಸಕ್ಕರೆಯನ್ನು ಸೇರಿಸಿ. ಪರ್ಯಾಯವಾಗಿ, ನೀವು ಶುಂಠಿಯ ತುಂಡುಗಳನ್ನು ನೇರವಾಗಿ ತಿನ್ನಬಹುದು.

ಮೊಸರು ಮತ್ತು ಮೆಂತ್ಯ ಬೀಜ:

ಮೊಸರು ಮತ್ತು ಮೆಂತ್ಯ ಬೀಜ:

ಮೊಸರಿನ ಆಂಟಿಬ್ಯಾಕ್ಟೀರಿಯಲ್ ಗುಣಗಳು ಫುಡ್ ಪಾಯಿಸನ್ ಉಂಟುಮಾಡುವ ರೋಗಾಣುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಮೆಂತ್ಯ ಬೀಜಗಳಲ್ಲಿ ಬಹಳಷ್ಟು ನಾರುಗಳಿದ್ದು, ಇವು ನೀರನ್ನು ಹೀರಿಕೊಂಡು, ಉತ್ತಮ ಜೀರ್ಣಕ್ರಿಯೆ ಆಗುವಂತೆ ನೋಡಿಕೊಳ್ಳುತ್ತದೆ. ಮೆಂತ್ಯ ಬೀಜಗಳು ಸಡಿಲಗೊಳಿಸುವ ಗುಣವನ್ನು ಹೊಂದಿದ್ದು ಅದು ಹೊಟ್ಟೆ ನೋವಿನ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಚಮಚ ಮೊಸರು ಮತ್ತು ಒಂದು ಚಮಚ ಮೆಂತ್ಯ ಬೀಜಗಳನ್ನು ತಿನ್ನಿರಿ. ಬೀಜಗಳನ್ನು ಅಗಿಯುವ ಬದಲು ನುಂಗಲು ಸೂಚಿಸಲಾಗುತ್ತದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಬೆಳ್ಳುಳ್ಳಿ ಅದರ ಜ್ವರನಿವಾರಕ ಮತ್ತು ಹೃದಯದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಪರಿಣಾಮಗಳಿಂದಾಗಿ ಅತಿಸಾರ ಮತ್ತು ಹೊಟ್ಟೆಯ ಅಸ್ವಸ್ಥತೆ ಸೇರಿದಂತೆ ಅನೇಕ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಒಂದು ಬೆಳ್ಳುಳ್ಳಿ ಎಸಳನ್ನು ಒಂದು ಲೋಟ ನೀರಿನ ಜೊತೆಗೆ ದಿನಕ್ಕೆ ಒಮ್ಮೆ ತೆಗೆದುಕೊಳ್ಳಿ. ನಿಮಗೆ ಬೆಳ್ಳುಳ್ಳಿಯ ವಾಸನೆ ಸಹಿಸಲಾಗದಿದ್ದರೆ, ಬೆಳ್ಳುಳ್ಳಿ ರಸವನ್ನು ಕುಡಿಯಬಹುದು. ಇಲ್ಲದಿದ್ದರೆ, ಬೆಳ್ಳುಳ್ಳಿ ಮತ್ತು ಸೋಯಾಬೀನ್ ಎಣ್ಣೆಯನ್ನು ಮಿಕ್ಸ್ ಮಾಡಿ, ಊಟದ ನಂತರ ಅದನ್ನು ನಿಮ್ಮ ಹೊಟ್ಟೆಗೆ ಮಸಾಜ್ ಮಾಡಿ.

ಜೇನುತುಪ್ಪ:

ಜೇನುತುಪ್ಪ:

ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಫಂಗಲ್ ವಿರೋಧಿ ಗುಣಲಕ್ಷಣಗಳಿಂದಾಗಿ ಅತ್ಯಂತ ಪರಿಣಾಮಕಾರಿ ಫುಡ್ ಪಾಯಿಸನ್ ಚಿಕಿತ್ಸೆಗಳಲ್ಲಿ ಒಂದಾಗಿದೆ. ದಿನಕ್ಕೆ ಮೂರು ಬಾರಿ, ಒಂದು ಚಮಚ ಜೇನುತುಪ್ಪವನ್ನು ಸೇವಿಸಿ. ಬಯಸಿದರೆ ನೀವು ಇದನ್ನು ಚಹಾ ಅಥವಾ ನಿಂಬೆ ಪಾನಕದೊಂದಿಗೆ ಕುಡಿಯಬಹುದು.

ಜೀರಿಗೆ:

ಜೀರಿಗೆ:

ಜೀರಿಗೆ ಬೀಜಗಳು ಫುಡ್ ಪಾಯಿಸನ್ ಗೆ ಸಾಂಪ್ರದಾಯಿಕ ಮನೆಮದ್ದು. ಇದು ನಿಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳ (ಆಹಾರವನ್ನು ಒಡೆಯುವ ಕಿಣ್ವಗಳು) ಚಟುವಟಿಕೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಜೀರ್ಣಕ್ರಿಯೆ ವೇಗಗೊಳ್ಳುತ್ತದೆ. ಒಂದು ಕಪ್ ನೀರಿನಲ್ಲಿ ಜೀರಿಗೆಯನ್ನು ಕುದಿಸಿ, ನಂತರ ಅದಕ್ಕೆ ಕೊತ್ತಂಬರಿ ರಸವನ್ನು ಸೇರಿಸಿ, ದಿನಕ್ಕೆ ಎರಡು ಬಾರಿ ಕುಡಿಯಿರಿ. ಉಪ್ಪು, ಜೀರಿಗೆ ಮತ್ತು ಇಂಗುಗಳ ಸಂಯೋಜನೆಯನ್ನು ಸಹ ಬಳಸಬಹುದು. ಈ ಪಾನೀಯವನ್ನು ದಿನಕ್ಕೆ ಕನಿಷ್ಠ 2-3 ಬಾರಿ ಸೇವಿಸಬೇಕು.

ತುಳಸಿ:

ತುಳಸಿ:

ಫುಡ್ ಪಾಯಿಸನ್ ವಿರುದ್ಧ ಬಳಸಬಹುದಾದ ಅತ್ಯುತ್ತಮವಾದ ಗಿಡಮೂಲಿಕೆಗಳೆಂದರೆ ತುಳಸಿ ಎಲೆಗಳು. ತುಳಸಿ ಎಲೆಗಳು ಉರಿಯೂತದ ಗುಣಗಳನ್ನು ಹೊಂದಿದ್ದು, ಅದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.

ಕೊತ್ತಂಬರಿ:

ಕೊತ್ತಂಬರಿ:

ನಿಮ್ಮಲ್ಲಿ ಕೆಲವರಿಗೆ ಮಾತ್ರ ಇದರ ಚಿಕಿತ್ಸಕ ಪ್ರಯೋಜನಗಳ ಬಗ್ಗೆ ತಿಳಿದಿರಬಹುದು. ಇದು ಹೊಟ್ಟೆಯ ಸೋಂಕಿನಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಎರಡು ರೂಪಗಳಲ್ಲಿ ಲಭ್ಯವಿದೆ: ತಾಜಾ ಮತ್ತು ಪುಡಿ. ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೊತ್ತಂಬರಿ ಎಣ್ಣೆಯಲ್ಲಿಯೂ ಇವೆ ಎಂದು ವರದಿಯಾಗಿದೆ. ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿಡಿ, ಮರುದಿನ ಬೆಳಿಗ್ಗೆ, ಅದನ್ನು ಕುಡಿಯಿರಿ.

FAQ's
  • ಫುಡ್ ಪಾಯಿಸನ್ ನ ಪ್ರಮುಖ ಲಕ್ಷಣಗಳಾವುವು?

    ಹೊಟ್ಟೆನೋವು, ವಾಂತಿ-ಬೇಧಿ, ಜ್ವರ, ಅಜೀರ್ಣವು ಫುಡ್ ಪಾಯಿಸನ್ ನ ಪ್ರಮುಖ ಐದು ಲಕ್ಷಣಗಳಾಗಿವೆ. ಇದರ ಹೊರತಾಗಿ ಮೈ-ಕೈ ನೋವು, ಆಯಾಸ ಮೊದಲಾದವುಗಳು ಸೇರಿಕೊಂಡಿರುತ್ತವೆ.

  • ಫುಡ್ ಪಾಯಿಸನ್ ಗೆ ಕಾರಣಗಳೇನು?

    ಫುಡ್ ಪಾಯಿಸನ್ ಆಗಲು ಪ್ರಮುಖ ಕಾರಣವೆಂದರೆ ಕಲುಷಿತ ಆಹಾರ ಸೇವನೆ ಅಥವಾ ಹಾಳಾದ ಆಹಾರ ಸೇವನೆ. ಆಹಾರಗಳಲ್ಲಿ ಬ್ಯಾಕ್ಟೀರಿಯಾ ಅಥವಾ ಇತರ ಸೂಕ್ಷ್ಮಾಣು ಜೀವಿಗಳಿದ್ದು, ಅದನ್ನು ಸೇವಿಸಿದರೆ, ನಮ್ಮ ಹೊಟ್ಟೆ ಕೆಡುತ್ತದೆ. ಅದಕ್ಕಾಗಿಯೇ ಹೊರಗೆ ತಿನ್ನುವಾಗ ನೈರ್ಮಲ್ಯದಿಂದ ಕೂಡಿದ ಅಂಗಡಿಗಳನ್ನೇ ಆರಿಸಿಕೊಳ್ಳಿ.

English summary

Natural Herbs to Cure Food Poisoning at Home in Kannada

Here we talking about Natural Herbs to Cure Food Poisoning at Home in kannada, read on
X
Desktop Bottom Promotion