For Quick Alerts
ALLOW NOTIFICATIONS  
For Daily Alerts

ಸ್ತನಕ್ಯಾನ್ಸರ್‌ನ ಈ ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ

|

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನ ಕಾಡುತ್ತಿರುವ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದು. ಸ್ತನ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಸಂಭವಿಸಬಹುದು, ಇದಕ್ಕೆ ನಿಖರವಾದ ಕಾರಣ ಇನ್ನೂ ಅಸ್ಪಷ್ಟವಾಗಿದ್ದರೂ, ಲಕ್ಷಾಂತರ ಜೀವನವನ್ನು ಬಲಿತೆಗೆದುಕೊಂಡಿದ್ದಂತೂ ಸುಳ್ಳಲ್ಲ.

ಆದ್ದರಿಂದ ಈ ಸ್ತನಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವುದು ತುಂಬಾ ಮುಖ್ಯ. ಸಮಯ ಮೀರಿದರೆ, ಅಪಾಯ ಹೆಚ್ಚು. ಅದಕ್ಕಾಗಿ ಮಹಿಳೆಯರು ತಮ್ಮ ಸ್ತನಗಳಲ್ಲಿ ಆಗುವ ಪ್ರತಿಯೊಂದು ಬದಲಾವಣೆ ಕುರಿತು ಲಕ್ಷ್ಯ ವಹಿಸಬೇಕು. ಆದರೆ, ಸ್ತನ ಕ್ಯಾನ್ಸರ್‌ನ ಲಕ್ಷಣಗಳೇ ಆದ ಇವುಗಳ ಬಗ್ಗೆ ಸಾಮಾನ್ಯವಾಗಿ ಮಹಿಳೆಯರಿಗೆ ನಿರ್ಲಕ್ಷ್ಯವೇ ಹೆಚ್ಚು. ಇದು ಸರಿಯಲ್ಲ. ನಿಮ್ಮಲ್ಲಿ ಇಂತಹ ಸೂಚನೆಗಳೇನಾದರೂ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಸ್ತನ ಕ್ಯಾನ್ಸರ್‌ನ 5 ಚಿಹ್ನೆಗಳನ್ನು ಈ ಕೆಳಗೆ ನೀಡಲಾಗಿದೆ:

ಸ್ತನ ಕ್ಯಾನ್ಸರ್‌ನ 5 ಚಿಹ್ನೆಗಳನ್ನು ಈ ಕೆಳಗೆ ನೀಡಲಾಗಿದೆ:

ಉಂಡೆಗಳು ಅಥವಾ ಸ್ತನದಲ್ಲಿನ ನೋವನ್ನು ಸಾಮಾನ್ಯವಾಗಿ ಸ್ತನ ಕ್ಯಾನ್ಸರ್‌ನ ಆರಂಭಿಕ ಚಿಹ್ನೆಗಳೆಂದು ಪರಿಗಣಿಸಲಾಗುತ್ತದೆ, ಇದು ಸಾಮಾನ್ಯವಾಗಿ ನೋವುರಹಿತವಾಗಿರುತ್ತದೆ. ಇದರ ಜೊತೆಗೆ ನೀವು ಗಮನಹರಿಸಬೇಕಾದ ಸ್ತನ ಕ್ಯಾನ್ಸರ್ನ ಕೆಲವು ಇತರ ಲಕ್ಷಣಗಳು:

ಸ್ತನತೊಟ್ಟಿನಲ್ಲಿ ಸ್ರಾವ:

ಸ್ತನತೊಟ್ಟಿನಲ್ಲಿ ಸ್ರಾವ:

ಮೊಲೆತೊಟ್ಟುಗಳಿಂದ ಸ್ರವಿಸುವಿಕೆಯು ಗರ್ಭಾವಸ್ಥೆಯಲ್ಲಿ / ಸ್ತನ್ಯಪಾನ ಸಮಯದಲ್ಲಿ ಒಂದು ವಿಶಿಷ್ಟವಾದ ಕ್ರಿಯೆಯಾಗಿದೆ. ಈ ಸ್ರವಿಸುವಿಕೆಯು 3 ವರ್ಷಗಳವರೆಗೆ ಮುಂದುವರೆಯಬಹುದು. ಹಾಲುಣಿಸುವ ಸಮಯದಲ್ಲಿ ಹೊರತುಪಡಿಸಿ ಯಾವುದೇ ರೀತಿಯ ಮೊಲೆತೊಟ್ಟುಗಳ ಸ್ರವಿಕೆ ಉಂಟಾದರೆ, ವೈದ್ಯರಲ್ಲಿಗೆ ಹೋಗಬೇಕು. ಅಲ್ಲದೆ, ಸ್ರವಿಸುವಿಕೆಯು ರಕ್ತಸಿಕ್ತವಾಗಿದ್ದರೆ ಅಥವಾ ರಕ್ತದಿಂದ ಕೂಡಿದ್ದರೆ ಕ್ಯಾನ್ಸರ್ನ ಸಾಧ್ಯತೆಗಳು ಹೆಚ್ಚಿರುತ್ತವೆ.

ಮೊಲೆತೊಟ್ಟುಗಳ ಬಣ್ಣ ಬದಲಾವಣೆ:

ಮೊಲೆತೊಟ್ಟುಗಳ ಬಣ್ಣ ಬದಲಾವಣೆ:

ಸ್ತನದಲ್ಲಿ ಕ್ಯಾನ್ಸರ್ ಕೋಶಗಳ ಉಪಸ್ಥಿತಿಯು ಸ್ತನದಲ್ಲಿ ದಪ್ಪ, ಕೆಂಪು ಗುಳ್ಳೆ ಮತ್ತು ಪಫಿನೆಸ್ ಅನ್ನು ಉಂಟುಮಾಡಬಹುದು. ಇದು ಸಾಮಾನ್ಯವಾಗಿ ಮಹಿಳೆಯರ ಗಮನಕ್ಕೆ ಬರುವುದಿಲ್ಲ. ಜೊತೆಗೆ ಸ್ತನತೊಟ್ಟುಗಳ ಬಣ್ಣವು ಗಾಢವಾಗಬಹುದು. ಇದನ್ನು ಸೂಕ್ಷ್ಮವಾಗಿ ಗಮನಿಸುವುದು ತುಂಬಾ ಮುಖ್ಯ.

ಆಕಾರದಲ್ಲಿ ಬದಲಾವಣೆ:

ಆಕಾರದಲ್ಲಿ ಬದಲಾವಣೆ:

ಸ್ತನಗಳ ಆಕಾರ ಅಸಮರ್ಪಕವಾಗಿರುವುದು ಸಹಜ. ಆದರೆ, ಸ್ತನಗಳಲ್ಲಿ ಹಠಾತ್ ಅಥವಾ ಗಮನಾರ್ಹ ಬದಲಾವಣೆಯು ಕ್ಯಾನ್ಸರ್ನ ಚಿಹ್ನೆಯಾಗಿರಬಹುದು. ಆದ್ದರಿಂದ ಇದನ್ನು ಎಂದಿಗೂ ನಿರ್ಲಕ್ಷಿಸಬಾರದು.

ತಲೆಕೆಳಗಾದ ಸ್ತನತೊಟ್ಟು:

ತಲೆಕೆಳಗಾದ ಸ್ತನತೊಟ್ಟು:

ಕೆಲವು ಮಹಿಳೆಯರು ಅಂಗಾತ ಮಲಗುವುದರಿಂದ ಈ ರೀತಿ ತಲೆಕೆಳಗಾದ ಅಥವಾ ಚಪ್ಪಟೆಯಾದ ಸ್ತನತೊಟ್ಟನ್ನು ಎದುರಿಸುತ್ತಾರೆ. ಆದರೆ ನೀವು ಇದ್ದಕ್ಕಿದ್ದಂತೆ ಸ್ತನತೊಟ್ಟು ಜೋತುಬಿದ್ದಿದ್ದರೆ ಅಥವಾ ಚಪ್ಪಟೆಯಾಗಿ ಒಳಮುಖ ಬಾಗಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕು. ಕಾರಣವಿಲ್ಲದೇ, ಯಾವುದು ಸಂಭವಿಸುವುದಿಲ್ಲ ಅಲ್ಲವೇ?..

ಕಂಕುಳಡಿ ಉಂಡೆಗಳು:

ಹೆಚ್ಚುವರಿ ಸ್ತನ ಅಂಗಾಂಶಗಳು ಸ್ತನದ ಸಾಮಾನ್ಯ ಪ್ರದೇಶದಿಂದ ವಿಸ್ತರಿಸುತ್ತವೆ. ಆದ್ದರಿಂದ ಕಂಕುಳಲ್ಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಉಂಡೆಗಳು, ಊತ ಅಥವಾ ನೋವು ಸ್ತನ ಕ್ಯಾನ್ಸರ್ಗೆ ಸಂಬಂಧಿಸಿರಬಹುದು. ಇಂತಹ ಬದಲಾವಣೆಗಳನ್ನು ಗುರುತಿಸಲು ನಿಮ್ಮ ದೇಹವನ್ನು ನಿಕಟವಾಗಿ ಗಮನಿಸುವುದು ಮುಖ್ಯ. ಈ ಬದಲಾವಣೆಗಳು ಆರಂಭಿಕ ಚಿಹ್ನೆಗಳು ಅಥವಾ ಗಂಭೀರ ತೊಡಕುಗಳ ಲಕ್ಷಣಗಳಾಗಿರಬಹುದು, ಅದನ್ನು ಸುಲಭವಾಗಿ ನಿರ್ಲಕ್ಷಿಸಬಹುದು.

FAQ's
  • ಸ್ತನ ಕ್ಯಾನ್ಸರ್‌ ಬರಲು ಕಾರಣಗಳೇನು?

    ಸ್ತನ ಕ್ಯಾನ್ಸರ್‌ನ ಕೆಲವು ಸಾಮಾನ್ಯ ಕಾರಣಗಳೆಂದರೆ - ಅನುವಂಶೀಯತೆ, ಸ್ಥೂಲಕಾಯತೆ, ವಯಸ್ಸು, ಲಿಂಗ (ಮಹಿಳೆಯರು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು), ಗರ್ಭಾವಸ್ಥೆ ಮತ್ತು ಮದ್ಯಪಾನ.

  • ಸ್ತನಕ್ಯಾನ್ಸರ್‌ ಹೆಚ್ಚಾಗಿ ಯಾವಾಗ ಕಂಡುಬರುತ್ತದೆ?

    ಸ್ತನಕ್ಯಾನ್ಸರ್‌ಗೆ ವಯಸ್ಸಿನ ಭೇದವಿಲ್ಲದಿದ್ದರೂ, ಸಾಮಾನ್ಯವಾಗಿ 50ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

English summary

Most Ignored Signs of Breast Cancer in Kannada

Here we talking about Most ignored signs of breast cancer in Kannada, read on
Story first published: Wednesday, January 5, 2022, 12:18 [IST]
X
Desktop Bottom Promotion