For Quick Alerts
ALLOW NOTIFICATIONS  
For Daily Alerts

ಮುಟ್ಟು ನಿಂತ ಮಹಿಳೆಯರ ಆಹಾರ ಪದ್ಧತಿ ಹೇಗಿರಬೇಕು ಗೊತ್ತಾ?

|

ಸಾಮಾನ್ಯವಾಗಿ ಮಹಿಳೆಯರಿಗೆ ವಯಸ್ಸಾದ ಮೇಲೆ ಅವರ ತಿಂಗಳ ಮುಟ್ಟು ಅಥವಾ ಋತುಸ್ರಾವ ನಿಲ್ಲುತ್ತದೆ. ಇದು ದೇಹದಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆಯಾಗುವುದರ ಸಂಕೇತವಾಗಿದೆ. ಇದರಿಂದ ಮಹಿಳೆಯರಲ್ಲಿ ಹೃದಯಾಘಾತ ಮತ್ತು ಮಧುಮೇಹದ ಸಾಧ್ಯತೆಗಳು ಬಹಳಷ್ಟು ಹೆಚ್ಚಾಗುತ್ತವೆ, ಆದ್ದರಿಂದ ಅವುಗಳನ್ನು ತಪ್ಪಿಸಲು, ಆಹಾರದ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಹಾಗಾದರೆ ಮುಟ್ಟು ನಿಂತ ಮೇಲೆ ಏನು ತಿನ್ನಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಮಹಿಳೆಯರಲ್ಲಿ ಮುಟ್ಟು ನಿಂತದ ನಂತರ, ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ, ಪರಿಣಾಮವಾಗಿ ಅಪಧಮನಿಗಳು ಗಟ್ಟಿಯಾಗಿ, ಅನೇಕ ರೋಗಗಳಿಗೆ ಕಾರಣವಾಗುತ್ತವೆ. ನೀವು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ಇದನ್ನು ತಪ್ಪಿಸಬಹುದು. ಇದರಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಋತುಬಂಧದ ನಂತರ ನಾವು ನಮ್ಮ ಆಹಾರದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು ತಿಳಿಯೋಣ.

ಮುಟ್ಟು ನಿಂತ ಮೇಲೆ ಮಹಿಳೆಯರು ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಾಕಷ್ಟು ನೀರು ಕುಡಿಯಿರಿ:

ಸಾಕಷ್ಟು ನೀರು ಕುಡಿಯಿರಿ:

ಸಾಕಷ್ಟು ನೀರು ಕುಡಿಯುವುದು ಎಂದಿಗೂ ಪ್ರಯೋಜನಕಾರಿಯಾಗಿದೆ, ಆದರೆ ಋತುಬಂಧದ ನಂತರ, ದೇಹದಲ್ಲಿ ನೀರಿನ ಪ್ರಮಾಣವು ಯಾವುದೇ ಕಾರಣಕ್ಕೂ ಕಡಿಮೆಯಾಗಲು ಬಿಡಬಾರದು. ಆದ್ದರಿಂದ ಆದಷ್ಟು ಹೆಚ್ಚೆಚ್ಚು ಪ್ರಮಾಣದಲ್ಲಿ ನೀರನ್ನು ಕುಡಿಯಲು ಪ್ರಾರಂಭಿಸಿ, ಏಕೆಂದರೆ, ನೀರು ನಿಮ್ಮನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ.

ಫೈಬರ್ ಭರಿತ ಆಹಾರ ಹೆಚ್ಚಿರಲಿ:

ಫೈಬರ್ ಭರಿತ ಆಹಾರ ಹೆಚ್ಚಿರಲಿ:

ಉತ್ತಮ ಜೀರ್ಣಕ್ರಿಯೆಗೆ ಫೈಬರ್ ಅತ್ಯಗತ್ಯ. ಅದರಲ್ಲೂ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ, ನಾರಿನಾಂಶ ಹೆಚ್ಚಿರುವ ಆಹಾರ ಸೇವಿಸಿ. ಮಲಬದ್ಧತೆ ಸಮಸ್ಯೆಯೇ ಮುಂದೆ, ಬೊಜ್ಜು, ಕೊಲೆಸ್ಟ್ರಾಲ್ ಬೆಳವಣಿಗೆಗೆ ಕಾರಣವಾಗುವುದು. ಮುಟ್ಟುನಿಂತ ಮೇಲೆ ನಾವು ನಮ್ಮ ಆಹಾರದಲ್ಲಿ ಕನಿಷ್ಠ 15 ರಿಂದ 20 ಪ್ರತಿಶತ ಫೈಬರ್ ಉತ್ಪನ್ನಗಳನ್ನು ಸೇವಿಸಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಸಲಾಡ್ ಸೇವಿಸುವುದು ಉತ್ತಮ. ಇದು ನಿಮ್ಮನ್ನು ಸಮಸ್ಯೆಗಳಿಂದ ಕಾಪಾಡುತ್ತದೆ.

ಅತಿಯಾದ ಕಾಫಿ-ಟೀ ತಪ್ಪಿಸಿ:

ಅತಿಯಾದ ಕಾಫಿ-ಟೀ ತಪ್ಪಿಸಿ:

ಮುಟ್ಟು ನಿಂತ ಮೇಲೆ ದಿನಕ್ಕೆ ಒಂದು ಅಥವಾ ಎರಡು ಕಪ್ ಚಹಾ ಮತ್ತು ಕಾಫಿಗೆ ಮಿತಿಗೊಳಿಸಿದರೆ ತೊಂದರೆ ಇಲ್ಲ, ಆದರೆ ಮೊದಲಿನಂತೆ ಆಗೊಮ್ಮೆ ಈಗೊಮ್ಮೆ ಕಾಫಿ ಮತ್ತು ಟೀ ಕುಡಿಯುತ್ತಿದ್ದರೆ, ಈ ಅಭ್ಯಾಸಕ್ಕೆ ಬಾಯ್ ಹೇಳುವುದು ಉತ್ತಮ. ಈಗಲೂ ಅದನ್ನು ಮುಂದುವರಿಸಿದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ. ಇಲ್ಲಿ, ಒಂದು ವಿಷಯವನ್ನು ಹೆಚ್ಚು ಗಮನದಲ್ಲಿಟ್ಟುಕೊಳ್ಳಿ. ಸಮಯಕ್ಕೆ ಸರಿಯಾಗಿ ತಿನ್ನಬೇಕು, ಇಲ್ಲವಾದಲ್ಲಿ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುವುದು.

ಧೂಮಪಾನ ಬೇಡ:

ಧೂಮಪಾನ ಬೇಡ:

ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಋತುಬಂಧದ ನಂತರ ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗಬಹುದು. ಈ ಹಿಂದೆ ಧೂಮಪಾನ, ತಂಬಾಕು ಸೇವನೆ ಮಾಡುತ್ತಿದ್ದರೆ, ಮುಟ್ಟುನಿಂತ ಮೇಲೆ ಅದನ್ನು ಬಿಡುವುದು ಉತ್ತಮ. ಇಲ್ಲವಾದಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು.

ಓಡಬೇಡಿ ಆದರೆ ನಿಯಮಿತವಾಗಿ ನಡೆಯಿರಿ:

ಓಡಬೇಡಿ ಆದರೆ ನಿಯಮಿತವಾಗಿ ನಡೆಯಿರಿ:

ಈ ವಯಸ್ಸಿನಲ್ಲಿ ರನ್ನಿಂಗ್ ಅಗತ್ಯವಿಲ್ಲ, ಹಾಗಂತ ಈಗಾಗಲೇ ನಿಯಮಿತವಾಗಿ ಓಡುತ್ತಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿಲ್ಲ. ಒಂದು ವೇಳೆ, ಓಟವು ನಿಮ್ಮನ್ನು ಆಯಾಸಗೊಳಿಸಿದರೆ, ದೇಹ ಮತ್ತು ಮನಸ್ಸು ದಣಿದಿದ್ದರೆ, ಓಡುವುದನ್ನು ದೂರವಿಡಿ. ಆದರೆ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ನಿಲ್ಲಿಸಬೇಡಿ. ಮುಟ್ಟು ನಿಂತ ನಂತರವೂ, ನೀವು ಮೊದಲಿನಂತೆಯೇ ನಿಮ್ಮ ನಿಯಮಿತ ಜೀವನವನ್ನು ನಡೆಸಬಹುದು. ಆದರೆ ಹಿಂದೆ ನಡೆಯದಿದ್ದರೆ, ಈಗ ಖಂಡಿತವಾಗಿಯೂ ನಡೆಯಲೇಬೇಕು. ವಯಸ್ಸಾದ ಮೇಲೆ ಸಣ್ಣ ವ್ಯಾಯಾಮ ಬೇಕೇಬೇಕು.

English summary

Menopause Diet: Best and Worst Foods to Eat After Menopause in kannada

Here we talking about Menopause Diet: Best and Worst Foods to Eat After Menopause in kannada, read on
Story first published: Wednesday, November 24, 2021, 17:55 [IST]
X
Desktop Bottom Promotion