For Quick Alerts
ALLOW NOTIFICATIONS  
For Daily Alerts

ನಮ್ಮ ಶೇ.70ರಷ್ಟು ಆಹಾರ ಉತ್ಪನ್ನಗಳು ಆರೋಗ್ಯಕರವಲ್ಲ ಎಂದ ಮ್ಯಾಗಿ ತಯಾರಿಸುವ ನೆಸ್ಟ್ಲೆ ಕಂಪನಿ

|

ವಿಶ್ವದ ಪ್ರಸಿದ್ಧ ಫುಡ್‌ ಬ್ರ್ಯಾಂಡ್‌ಗಳಲ್ಲಿ ಒಂದು ನೆಸ್ಟ್ಲೆ (Nestlé).ಮಕ್ಕಳ ಆಹರ ವಸ್ತುಗಳಿಂದ ಹಿಡಿದು ಫಾಸ್ಟ್‌ ಫುಡ್‌ಗಳಾದ ಮ್ಯಾಗಿ ಇವೆಲ್ಲಾ ಈ ಕಂಪನಿಯಿಂದ ತಯಾರಾಗುತ್ತದೆ. ಅನೇಕ ಪಾನೀಯಗಳು, ಮಕ್ಕಳಿಗೆ ತಿನ್ನಲು ನೀಡುವ ಆಹಾರ ವಸ್ತುಗಳು ಎಲ್ಲವೂ ಈ ಕಂಪನಿಯಿಂದ ಉತ್ಪತ್ತಿಯಾಗುತ್ತಿದೆ. ಇದೀಗ ಈ ಕಂಪನಿ ಉತ್ಪತ್ತಿ ಮಾಡುತ್ತಿರುವ ಶೇ. 70ರಷ್ಟು ಉತ್ಪನ್ನಗಳು ಆರೋಗ್ಯಕರವಲ್ಲ ಎಂಬುವುದು ತಿಳಿದು ಬಂದಿದೆ.

ನೆಸ್ಟ್ಲೆಯ ಶೇ. 37ರಷ್ಟು ಉತ್ಪನ್ನಗಳು ಆರೋಗ್ಯಕರವಾದ ಅಂಶಗಳನ್ನು ಒಳಗೊಂಡಿದೆ.

ಶೇ.70ರಷ್ಟು ಉತ್ಪನ್ನಗಳು ಆರೋಗ್ಯಕರ ಪಟ್ಟಿಯಲ್ಲಿ ಇಲ್ಲ

ಶೇ.70ರಷ್ಟು ಉತ್ಪನ್ನಗಳು ಆರೋಗ್ಯಕರ ಪಟ್ಟಿಯಲ್ಲಿ ಇಲ್ಲ

ನೂಡಲ್ಸ್, ಕಿಟ್‌ಕ್ಯಾಟ್‌, ನೆಸ್‌ಕೆಫೆ ಹೀಗೆ ಅನೇಕ ಆಹಾರ ವಸ್ತುಗಳನ್ನು ಉತ್ಪಾದಿಸುತ್ತಿರುವ ಈ ಕಂಪನಿ ಆಹಾರ ಆರೋಗ್ಯಕರ ಎಂದು ಹೇಳುವ ಮಾನದಂಡಗಳನ್ನು ಹೊಂದಿಲ್ಲ ಎಂದು ಸ್ವತಃ ನೆಸ್ಟ್ಲೆ ಕಂಪನಿ ಒಪ್ಪಿಕೊಂಡಿದೆ.

ರೇಟಿಂಗ್‌ ಎಷ್ಟು ಪಡೆದುಕೊಂಡಿದೆ?

ರೇಟಿಂಗ್‌ ಎಷ್ಟು ಪಡೆದುಕೊಂಡಿದೆ?

ಯುಕೆ ಬ್ಯುಸ್‌ನೆಸ್‌ ಡೈಲಿ ಪ್ರಕಾರ 2021ರ ಆಂತರಿಕ ವರದಿಯಲ್ಲಿ ತಯಾರಿಸುವ ಶೇ. 70ರಷ್ಟು ಉತ್ಪನ್ನಗಳು ಆರೋಗ್ಯಕರ ಆಹಾರದ ಮಾನದಂಡಗಳನ್ನು ಹೊಂದಿಲ್ಲ ಎಂದು ಉಲ್ಲೇಖಿಸಿದೆ. ವಿಶ್ವದ ಅತೀ ದೊಡ್ಡ ಆಹಾರ ಉತ್ಪಾದಕ ಕಂಪನಿಯು ನಮ್ಮ ಕೆಲ ಕೆಟಗೆರಿಯ ಆಹರ ಉತ್ಪನ್ನಗಳು ಆರೋಗ್ಯಕರವಗಿರಲು ಸಾಧ್ಯವಿಲ್ಲ ಎಂದು ಹೇಳಿದೆ.

ನೆಸ್ಟ್ಲೆಯ ಶೆ, 37ರಷ್ಟು ಆಹಾರವಸ್ತುಗಳು ಮಾತ್ರ ಆಸ್ಟ್ರೇಲಿಯಾ ಹೆಲ್ತ್‌ ಸ್ಟಾರ್‌ ರೇಟಿಂಗ್‌ 3.5 ಹೊಂದಿದೆ.

ಆಹಾರ ವಸ್ತುಗಳನ್ನು ನ್ಯೂಟ್ರಿಷಿಯನ್ ಸೇರಿಸಲು ಪ್ಲ್ಯಾನ್ ಮಾಡುತ್ತಿರುವ ಕಂಪನಿ

ಆಹಾರ ವಸ್ತುಗಳನ್ನು ನ್ಯೂಟ್ರಿಷಿಯನ್ ಸೇರಿಸಲು ಪ್ಲ್ಯಾನ್ ಮಾಡುತ್ತಿರುವ ಕಂಪನಿ

ಕಂಪನಿಯು ' ನಮ್ಮ ಆಹಾರ ವಸ್ತುಗಳಲ್ಲಿ ವಿವಿಧ ಹಂತದ ಜನರಿಗೆ ಬೇಕಾದ ಅಗ್ಯತ ಪೋಷಕಾಂಶಗಳನ್ನು ಸೇರಿಸಿ, ಸಮತೋಲಿತ ಆಹಾರ ನೀಡಲು ಚಿಂತನೆ ನಡೆಸುತ್ತಿದ್ದೇವೆ' ಎಂದಿದೆ.

ಉದಾಹರಣೆಗೆ ಕಳೆದ ಎರಡು ದಶಕದಿಂದ ನೆಸ್ಟ್ಲೆ ತನ್ನ ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಸೋಡಿಯಂ ಅಂಶವನ್ನು ಸಾಕಷ್ಟು ಕಡಿಮೆ ಮಡಿದೆ, ಅದರಲ್ಲೂ ಕಳೆದ 7 ವರ್ಷಗಳಿಂದ ಶೇ.14-15ರಷ್ಟು ಕಡಿಮೆ ಮಾಡಿದೆ. ಇತ್ತೀಚೆಗೆ ನಾವು ಸಾವಿರಾರು ಉತ್ಪನ್ನಗಳನ್ನು ಮಕ್ಕಳು ಹಾಗೂ ಕುಟುಂಬದವರಿಗಾಗಿ ತಯಾರಿಸಿದೆ, ಅವುಗಳು ಅವರಿಗೆ ಬೇಕದ ಅಗ್ಯತ ಪೋಷಕಾಂಶಗಳನ್ನು ನೀಡುವಂತದ್ದುದಾಗಿದೆ.

ಇನ್ನು ಉಳಿದ ಪಾನೀಯಗಳು ಹಾಗೂ ಇತರ ಹಾರ ಉತ್ಪನ್ನಗಳಲ್ಲಿ ಇನ್ನೂ ಹೆಚ್ಚಿನ ಪೋಷಕಾಂಶಗಳನ್ನು ಸೇರಿಸಲು ಆಲೋಚಿಸಲಾಗಿದೆ. ತಮ್ಮ ಆಹಾರ ಉತ್ಪನ್ನಗಳು ಆರೋಗ್ಯಕರ ಹಾರದ ಮಾನದಂಡ ಪಡೆಯುವಂತೆ ತಯಾರಿಸಲು ನೆಸ್ಟ್ಲೆ ಮುಂದಾಗಿದೆ.

ಮಕ್ಕಳ ಆಹಾರ, ನಿರ್ಧಿಷ್ಟ ಆಹಾರ ವಸ್ತುಗಳು ಹಾಗೂ ಪ್ರಾಣಿಗಳ ಆಹಾರದಲ್ಲಿ ಪೋಷಕಾಂಶ ಕಡಿಮೆಯಾಗಿಲ್ಲ

ಮಕ್ಕಳ ಆಹಾರ, ನಿರ್ಧಿಷ್ಟ ಆಹಾರ ವಸ್ತುಗಳು ಹಾಗೂ ಪ್ರಾಣಿಗಳ ಆಹಾರದಲ್ಲಿ ಪೋಷಕಾಂಶ ಕಡಿಮೆಯಾಗಿಲ್ಲ

ಕಂಪನಿಯು ತಾವು ತಯಾರಿಸುತ್ತಿರುವ ಮಕ್ಕಳ ಆಹಾರ ಉತ್ಪನ್ನಗಳಲ್ಲಿ, ನಿರ್ಧಿಷ್ಟ ಆಹಾರ ಉತ್ಪನ್ನಗಳು ಹಾಗೂ ಪ್ರಾಣಿಗಳ ಆಹಾರ ಉತ್ಪನ್ನಗಳಲ್ಲಿ ಎಷ್ಟು ಅಗ್ಯತವಿದೆಯೋ ಅಷ್ಟು ಪೋಷಕಾಂಶಗಳನ್ನು ಹೊಂದಿದೆ' ಎಂದು ಹೇಳಿದೆ.

ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ಆಹಾರ ಬೇಕು: ನೆಸ್ಟ್ಲೆ

ಆರೋಗ್ಯಕರ ಜೀವನಕ್ಕಾಗಿ ಆರೋಗ್ಯಕರ ಆಹಾರ ಬೇಕು: ನೆಸ್ಟ್ಲೆ

ಜನರ ಆರೋಗ್ಯಕ್ಕೆ ಪೋಷಕಾಂಶದ ಆಹಾರ ಅವಶ್ಯಕ, ಇದನ್ನು ನೀಡುವುದು ಆಹಾರ ಕಂಪನಿಯ ಕರ್ತವ್ಯವಾಗಿದೆ, ಉತತ್ಮ ಆಹಾರ ನೀಡುವ ಮೂಲಕ ಜನರ ಆರೋಗ್ಯ ಹೆಚ್ಚಿಸಬಹುದು ಎಂಬುವುದನ್ನು ನಮ್ಮ ಕಂಪನಿ ಬಲವಾಗಿ ಪ್ರತಿಪಾದಿಸುತ್ತದೆ ಎಂದಿರುವ ಭಾರತದ ನೆಸ್ಟ್ಲೆ ವಕ್ತಾರ ಕಂಪನಿಯು ತನ್ನೆಲ್ಲಾ ಆಹಾರ ಉತ್ಪನ್ನಗಳಲ್ಲಿ ಸಮತೋಲಿತ ಪೋಷಕಾಂಶ ಸೇರಿಸಲಾಗುವುದು ಎಂದು ಹೇಳಿದ್ದಾರೆ.

English summary

Maggi-maker Nestle Admits Majority Of Its Food Products Not Healthy: Report

Nestlé’s internal documents seen by FT says majority of its products failed to meet health standards. Know more.
X
Desktop Bottom Promotion