For Quick Alerts
ALLOW NOTIFICATIONS  
For Daily Alerts

ಮಾನ್ಸೂನ್ ಕಾಯಿಲೆಗಳಿಂದ ನಿಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ?

ಮಾನ್ಸೂನ್ ಮಳೆಯ ಸಂದರ್ಭದಲ್ಲಿ ಕೊಂಚ ಜಾಗ್ರತೆ ತಪ್ಪಿದರೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದು ನಿಶ್ಚಿತ.

|

ಮಾನ್ಸೂನ್ ಎಂದರೆ ಮೋಡಕವಿದ ವಾತಾವರಣ, ತಂಪಾದ ಸಂಜೆ, ಬಿಸಿಬಿಸಿ ಚಹಾ, ಬಾಯಿಚಪ್ಪರಿಸುವಂಥ ಬಗೆಬಗೆಯ ತಿಂಡಿಗಳು ಆಹಾ.. ಎಂಥಾ ಸೊಗಾಸು. ವಯಸ್ಕರಿಂದ, ಮಕ್ಕಳವರೆಗೂ ಎಲ್ಲರೂ ಮಾನ್ಸೂನ್ ಅನ್ನು ಇಷ್ಟಪಡುತ್ತಾರೆ.

ಆದರೆ, ಈ ಬಾರಿಯ ಮಾನ್ಸೂನ್ ಜಲಕಂಟಕವನ್ನೇ ತಂದಿದೆ. ಮಳೆಯ ಅಬ್ಬರ ದೇಶದೆಲ್ಲೆಡೆ ಭಯ, ಆತಂಕದ ವಾತಾವಾರಣವನ್ನು ಸೃಷ್ಟಿಸಿದೆ. ಕರ್ನಾಟಕದ ಬಹುತೇಕ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.

ಜಾಗ್ರತೆ ತಪ್ಪಿದರೆ ಸೋಂಕು ಖಂಡಿತ

ಜಾಗ್ರತೆ ತಪ್ಪಿದರೆ ಸೋಂಕು ಖಂಡಿತ

ಮಾನ್ಸೂನ್ ಮಳೆಯ ಸಂದರ್ಭದಲ್ಲಿ ಕೊಂಚ ಜಾಗ್ರತೆ ತಪ್ಪಿದರೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಾನ್ಸೂನ್ ಮಳೆಯ ಜತೆಗೆ ಕೆಲವು ಗಂಭೀರ ಸೋಂಕು ಮತ್ತು ಕಾಯಿಲೆಗಳನ್ನು ಕಾಯಿಲೆಗಳನ್ನು ಹೊತ್ತು ಬರುತ್ತದೆ. ಈ ಸೋಂಕು ಮಕ್ಕಳ ಮೇಲೆ ಬಹಳ ಬೇಗ ಪರಿಣಾಮ ಬೀರುತ್ತದೆ.

ಮಾನ್ಸೂನ್ ನಲ್ಲಿ ಮಕ್ಕಳ ರಕ್ಷಣೆ ಹೇಗೆ?

ಮಾನ್ಸೂನ್ ಸಂದರ್ಭದಲ್ಲಿ ಮಕ್ಕಳಿಗೆ ಸೋಂಕು ತಗುಲದಂತೆ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಈ ಕುರಿತು ಪೋಷಕರಿಗೆ ಕೆಲವು ಸಲಹೆಗಳು.

 ಸೊಳ್ಳೆಗಳು ಉತ್ಪತಿಯಾಗದಂತೆ ತಡೆಗಟ್ಟಿ

ಸೊಳ್ಳೆಗಳು ಉತ್ಪತಿಯಾಗದಂತೆ ತಡೆಗಟ್ಟಿ

ಮನೆಯ ಸುತ್ತಮುತ್ತ ಕೊಳಚೆ ನೀರು ಶೇಖರಣೆ ಆಗದಂತೆ ಎಚ್ಚರವಹಿಸಿ, ಏಕೆಂದರೆ ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತಿಯಾಗುತ್ತದೆ. ಇದರಿಂದ ಡೆಂಘೀ, ಮಲೇರಿಯಾನಂಥ ಮಾರಕ ಕಾಯಿಲೆಗಳು ಬರಬಹುದು. ಮಕ್ಕಳಿಗೆ ತುಂಬು ತೋಳಿನ ಅಂಗಿಯನ್ನು ಹಾಕಿ, ಸೊಳ್ಳೆ ಕಚ್ಚದಂಥ ಕ್ರೀಮ್ ಗಳನ್ನು ಹಚ್ಚಿರಿ.

 ತಾಜಾ ಆಹಾರ ಸೇವಿಸಿ

ತಾಜಾ ಆಹಾರ ಸೇವಿಸಿ

ಸಾಂಕ್ರಾಮಿಕ ರೋಗಗಳಾದ ಡೈರಿಯಾ ಮತ್ತು ಟೈಫಾಯ್ಡ್ ನಂಥ ಕಾಯಿಲೆಗಳು ಹರಡಂತೆ ಎಚ್ಚರವಹಿಸಲು ತಾಜಾ ಆಹಾರವನ್ನೇ ನೀಡಿ, ಬಿಸಿ ನೀರಿನಲ್ಲೇ ಅಡುಗೆ ಮಾಡಿ. ಮಕ್ಕಳಿಗೆ ಬಿಸಿ ಅಥವಾ ತಾಜಾ ಆಹಾರವನ್ನೇ ನೀಡಿ. ಮಾಡಿಟ್ಟಿದ್ದ ತಣ್ಣಗಿನ ಅಥವಾ ಹಳೆಯದಾದ ಆಹಾರದಿಂದ ಮಾರಕ ಕಾಯಿಲೆ ಹರಡಬಹುದು. ತುಂಡರಿಸಿಟ್ಟಿದ್ದ ಹಣ್ಣುಗಳು, ಹಸಿ ಅಥವಾ ಶುದ್ಧವಾಗಿರದ ತರಕಾರಿ, ರಸ್ತೆ ಬದಿ ಹಾಗೂ ಹೋಟೆಲ್ ಆಹಾರಗಳಿಂದ ಸಾಧ್ಯವಾದಷ್ಟು ಮಕ್ಕಳನ್ನು ದೂರವಿಡಿ.

 ಹೆಚ್ಚು ನೀರನ್ನು ಸೇವಿಸಿ

ಹೆಚ್ಚು ನೀರನ್ನು ಸೇವಿಸಿ

ಜ್ವರ ಮತ್ತು ಶೀತದಿಂದ ದೂರವಿರಲು ಹೆಚ್ಚು ನೀರನ್ನು ಸೇವಿಸಿ. ಹೆಚ್ಚು ನೀರು ಸೇವಿಸುವುದರಿಂದ ಜೀವಾಣು ವಿಷ, ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾ ಮಕ್ಕಳ ದೇಹದಿಂದ ಹೊರಹೋಗುತ್ತದೆ. ನೀರಿನ ಅಶುದ್ಧತೆಯನ್ನು ತಡೆಗಟ್ಟಲು ಮಕ್ಕಳಿಗೆ ಬಿಸಿ ನೀಡಿನ ಅಭ್ಯಾಸ ಮಾಡಿಸಿ.

 ನೈರ್ಮಲ್ಯ ಮತ್ತು ಶುದ್ಧತೆ ಕಾಪಾಡಿ

ನೈರ್ಮಲ್ಯ ಮತ್ತು ಶುದ್ಧತೆ ಕಾಪಾಡಿ

ಮಾನ್ಸೂನ್ ಹವಾಮಾನದಲ್ಲಿ ಮಕ್ಕಳು ಹೆಚ್ಚು ಬೆವರುತ್ತಾರೆ, ಇದರಿಂದ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು ಮತ್ತು ವೈರಸ್ ಉತ್ಪತಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಮಕ್ಕಳನ್ನು ಯಾವಾಗಲೂ ಶುಷ್ಕ (ತೇವ)ವಾಗಿರದಂತೆ ನೋಡಿಕೊಳ್ಳಿ. ಕ್ರಿಮಿನಾಶಕ (ಆಂಟಿಬಯಾಟಿಕ್) ಸೋಪಿನಿಂದ ಸ್ನಾನ ಮಾಡಿಸಿ, ಪ್ರತಿ ಬಾರಿ ಮಕ್ಕಳು ಶುದ್ಧವಾಗಿ ಕೈತೊಳೆದುಕೊಂಡರೇ ಗಮನಿಸಿ.

ಮೊದಲ ಮಳೆಯಲ್ಲಿ ಮಕ್ಕಳು ನೆನೆಯದಿರಲಿ

ಮೊದಲ ಮಳೆಯಲ್ಲಿ ಮಕ್ಕಳು ನೆನೆಯದಿರಲಿ

ಮೊದಲ ಮಳೆಯಲ್ಲಿ ಮಕ್ಕಳು ನೆನೆಯದಂತೆ ಪೋಷಕರು ಎಚ್ಚರವಹಿಸಿ. ಮೊದಲ ಮಳೆಯಲ್ಲಿ ವಿಷಕಾರಕ ಅಂಶಗಳು ಇರುತ್ತದೆ ಹಾಗೂ ತ್ವಚೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು. ಮೊದಲ ಮಳೆಯ ವೇಳೆ ಮಕ್ಕಳನ್ನು ಮನೆಯಿಂದ ಹೊರಗೆ ಹೋಗದಂತೆ ಎಚ್ಚರವಹಿ

ಆರೋಗ್ಯಕರ ಆಹಾರ ಕ್ರಮ ಪಾಲಿಸಿ

ಆರೋಗ್ಯಕರ ಆಹಾರ ಕ್ರಮ ಪಾಲಿಸಿ

ಮಕ್ಕಳ ದೇಹದಲ್ಲಿ ರೋಗನಿರೋಧಕ ಅಂಶ ಸಂಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ. ಆದ್ದರಿಂದ ಮಕ್ಕಳಿಗೆ ಆರೋಗ್ಯಕರ, ಪೌಷ್ಠಿಕಾಂಶಯುಕ್ತ , ಜೀವಸತ್ವ, ಖನಿಜಾಂಶವುಳ್ಳ ಆಹಾರವನ್ನೇ ನೀಡಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಜತೆಗೆ ಜ್ವರ, ಶೀತದಂಥ ಸಮಸ್ಯೆಯಿಂದಲೂ ದೂರವಿರಬಹುದು.

English summary

How To Protect Your Child From Monsoon Diseases

Mansoon season is always accompanied by a series of common infections and diseases. Children are more likely to be impacted by these, as they take a toll on their immunity. make sure to clean all sources of stagnant water around your house, eat frsh food, drinking plenty of water.
Story first published: Thursday, August 8, 2019, 18:21 [IST]
X
Desktop Bottom Promotion