For Quick Alerts
ALLOW NOTIFICATIONS  
For Daily Alerts

ಅಸ್ತಮಾಗೆ ಕೆಲವೊಂದು ಹೋಮಿಯೋಪಥಿ ಔಷಧಿಗಳು

|

ನಮ್ಮೆಲ್ಲರಿಗೂ ಗೊತ್ತರುವ ಹಾಗೆ ವಿಶ್ವದಲ್ಲಿ ಅನೇಕರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅಸ್ತಮಾ ಕಾಯಿಲೆ ಇರುವವರು ಉಸಿರಾಡಲು ಕಷ್ಟ ಪಡುವುದನ್ನು ನೋಡುವಾಗ ಎಂತಹವರಿಗೂ ಅಯ್ಯೋ ಪಾಪ ಅನಿಸುತ್ತದೆ. ಅಸ್ತಮಾ ಕಾಯಿಲೆ ಹಲವಾರು ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಇದೇ ಕಾರಣದಿಂದ ಕಾಣಿಸಿಕೊಂಡಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ

ವಂಶಪಾರಂಪರ್ಯವಾಗಿ ಬರಬಹುದು. ಹವಾಮಾನ ಬದಲಾದಾಗ, ತಂಪಾದ ಹವಾಮಾನದಿಂದ, ಪರಿಸರ ಮಾಲಿನ್ಯ, ದೂಳು, ಧೂಮಪಾನ, ಆಗಾಗ ಕೆಮ್ಮು ಕಂಡು ಬರುವುದು, ಕೆಲವು ವಸ್ತುಗಳಿಂದ ಅಲರ್ಜಿ ಉಂಟಾಗಿ ಅಸ್ತಮಾ ಕಂಡು ಬರಬಹುದು. ಇದು ವಂಶಪಾರಂಪರ್ಯವಾಗಿ ಬರುವ ಕಾಯಿಲೆಯಾಗಿರುವುದರಿಂದ ತಂದೆ-ತಾಯಿಯಲ್ಲಿ ಯಾರಿಗಾದರು ಇದ್ದರೆ ಮಕ್ಕಳಿಗೆ ಬರುತ್ತದೆ ಎಂಬ ಸಂಶಯ ಹಲವರಲ್ಲಿದೆ. ಇನ್ನು ಮಕ್ಕಳಿಗೆ ಬಂದೇ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಬರುವುದೇ ಇಲ್ಲ ಅಂತಲೂ ಹೇಳಲು ಸಾಧ್ಯವಿಲ್ಲ. ಉಸಿರಾಟದಲ್ಲಿ ತೊಂದರೆ, ಎದೆ ಬಿಗಿಯಾದಂತೆ ಅನ್ನಿಸುವುದು, ಉಸಿರಾಡುವಾಗ ಸೀಟಿ ಹೊಡೆದಂತಾಗುವುದು ಅಥವಾ ಗೂರುಬ್ಬಸ (wheezing)ಕಂಡುಬರುವುದು, ಇವೆಲ್ಲಾ ಅಸ್ತಮಾ ರೋಗದ ಲಕ್ಷಣಗಳು.

Homeopathic Remedy for Asthma

ಅಸ್ತಮಾವನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಾಗದು ಎನ್ನಲಾಗುತ್ತದೆ. ಅದರ ಲಕ್ಷಣಗಳು ಆಗಾಗ ಕಾಣಿಸಿಕೊಳ್ಳುತ್ತಾ ಇರುತ್ತದೆ. ಆದರೆ ಹೋಮಿಯೋಪಥಿ ಔಷಧಿಯು ಅಸ್ತಮಾಗೆ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ವೈಯಕ್ತಿಕ ಲಕ್ಷಣಗಳು ಮತ್ತು ಸಾಮಾನ್ಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅಸ್ತಮಾಕ್ಕೆ ಚಿಕಿತ್ಸೆ ನೀಡಲಾಗುತ್ತದೆ.

ಅಸ್ತಮಾದಿಂದ ಬಳಲುತ್ತಿರುವ ಜನರಲ್ಲಿ ಹೆಚ್ಚಾಗಿ ಅಲರ್ಜಿಗಳು ಕಾಣಿಸಿಕೊಳ್ಳುವುದು. ಅದಾಗ್ಯೂ, ಅಸ್ತಮಾಗೆ ಇರುವಂತಹ ಹಲವಾರು ರೀತಿಯ ಹೋಮಿಯೋಪಥಿ ಔಷಧಿಗಳು ತುಂಬಾ ಲಾಭಕಾರಿ ಎಂದು ಸಾಬೀತಾಗಿದೆ. ವೈದ್ಯರ ಸರಿಯಾದ ಮಾರ್ಗದರ್ಶನದೊಂದಿಗೆ ಆರೈಕೆ ಮಾಡಿದರೆ ಆಗ ಅಸ್ತಮಾ ಇರುವವರು ಸಾಮಾನ್ಯ ಆರೋಗ್ಯ ಕಾಪಾಡಬಹುದು ಮತ್ತು ಅಸ್ತಮಾದಿಂದ ಬರುವಂತಹ ಅಲರ್ಜಿಯ ಪರಿಣಾಮಗಳನ್ನು ಇದು ಕಡಿಮೆ ಮಾಡುವುದು. ಅಸ್ತಮಾಗೆ ಹೋಮಿಯೋಪಥಿ ಔಷಧಿ ತೆಗೆದುಕೊಳ್ಳುವ ಮೂಲಕ ಅದು ಅಸ್ತಮಾದ ದಾಳಿಯನ್ನು ತಡೆಯುತ್ತದೆ. ಆದರೆ ಹೋಮಿಯೋಪಥಿ ಔಷಧಿಯನ್ನು ತುಂಬಾ ದೀರ್ಘಕಾಲ ತನಕ ತೆಗೆದುಕೊಳ್ಳ ಬೇಕಾಗುತ್ತದೆ. ಅಸ್ತಮಾ ಪರಿಸ್ಥಿತಿ ಅಥವಾ ದಾಳಿ, ಉಸಿರಾಡಲು ಸಾಧ್ಯವಾಗದೆ ಇರುವುದು, ದುರ್ಬಲವಾಗುವುದು, ತುಟಿಗಳು ನೀಲಿಯಾಗುವುದು ಮತ್ತು ರೋಗಿಗಳು ತಮ್ಮ ಪ್ರಜ್ಞೆ ಕಳೆದುಕೊಂಡರೆ ಆಗ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಹೋಮಿಯೋಪಥಿ ಔಷಧಿಗಳು ತುಂಬಾ ಭಿನ್ನವಾಗಿ ಇರುತ್ತದೆ. ಇದು ರೋಗಿಯ ಪರಿಸ್ಥಿತಿಗೆ ಅನುಗುಣವಾಗಿ ನೀಡಲಾಗುತ್ತದೆ. ಅಸ್ತಮಾದ ಲಕ್ಷಣಗಳು ಇರುವಂತಹ ರೋಗಿಗಳಿಗೆ ನೀಡಲಾಗುವ ಕೆಲವೊಂದು ಹೋಮಿಯೋಪಥಿ ಔಷಧಿಗಳ ಬಗ್ಗೆ ನೀವು ಇಲ್ಲಿ ತಿಳಿಯಿರಿ.

Homeopathic Remedy for Asthma

ಕಾರ್ಬೊ ವೆಜಿಟಬಿಲಿಸ್

ಈ ಔಷಧಿಯನ್ನು ವ್ಯಕ್ತಿಯು ತುಂಬಾ ಕೆಮ್ಮುತ್ತಿರುವಂತಹ ಮತ್ತು ಅದು ಆತನಿಗೆ ಹಿಂಸಾತ್ಮಕವಾಗಿ ಇರುವ ಸಂದರ್ಭದಲ್ಲಿ ನೀಡಲಾಗುತ್ತದೆ. ತೀವ್ರತೆಯಿಂದಾಗಿ ಶೀತವಾಗಿರಬಹುದು, ಆದರೆ ಉಸಿರಾಡಲು ಗಾಳಿ ಅಥವಾ ತಂಗಾಳಿ ಬೇಕು. ಅರ್ಜೀಣದ ಭಾವನೆಯಾಗಬಹುದು ಮತ್ತು ಹೂಸು ಇದಕ್ಕೆ ಪರಿಹಾರ ನೀಡುವುದು.

ಕ್ಯಾಮೊಮಿಲ್ಲಾ

ಭಾವನಾತ್ಮಕ ಒತ್ತಡ, ಆತಂಕ ಮತ್ತು ಅತಿಯಾದ ಉತ್ಸಾಹದಿಂದಾಗಿ ಕಾಣಿಸಿಕೊಳ್ಳುವ ಅಸ್ತಮಾ ದಾಳಿಗೆ ಈ ಔಷಧಿ ನೀಡಲಾಗುತ್ತದೆ. ಈ ವ್ಯಕ್ತಿಯ ನಡವಳಿಕೆಯು ತುಂಬಾ ಕಿರಿಕಿರಿ, ಕೋಪ ಮತ್ತು ಅತಿಸೂಕ್ಷ್ಮತೆಯಿಂದ ಕೂಡಿರುವುದು. ಕೆಲವೊಂದು ಸಲ ಇದು ಅತಿಯಾದ ಕೆಮ್ಮಿನಿಂದ ಕೂಡಿಸುತ್ತದೆ.

ಆರ್ಸೆನಿಕಮ್ ಆಲ್ಬಮ್

ಬಳಲಿಕೆ ಮತ್ತು ಅಹಿತಕರ ಭಾವನೆ ಎದುರಿಸುವಂತಹ ಅಸ್ತಮಾ ರೋಗಿಗೆ ಈ ಔಷಧಿಯನ್ನು ನೀಡಲಾಗುತ್ತದೆ. ಬಗ್ಗಿದಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು ಮತ್ತು ನೆಟ್ಟಗೆ ಇದ್ದರೆ ಇದು ಉತ್ತಮವಾಗುವುದು. ಹೆಚ್ಚಾಗಿ ಇಂತಹ ರೋಗಿಗಳಿಗೆ ಈ ಸಮಸ್ಯೆಯು ರಾತ್ರಿ ವೇಳೆ ಕಾಣಿಸಿಕೊಳ್ಳುವುದು. ಈ ವೇಳೆ ಉಬ್ಬಸ ಮತ್ತು ಅತಿಯಾಗಿ ಬಾಯಾರಿಕೆ ಆಗುವುದು. ಅತಿಯಾದ ಚಳಿ ಕಾಣಿಸಿಕೊಳ್ಳಬಹುದು. ಈ ವೇಳೆ ಮೈ ಬಿಸಿ ಮಾಡಿಕೊಳ್ಳಬೇಕು.

ನ್ಯಾಟ್ರಮ್ ಸಲ್ಫುರಿಕಮ್

ತೇವದಿಂದಾಗಿ ಅಸ್ತಮಾವು ಹೆಚ್ಚಾಗುತ್ತಲಿದ್ದರೆ ಆಗ ಈ ಔಷಧಿಯನ್ನು ರೋಗಿಗೆ ನೀಡಲಾಗುತ್ತದೆ. ಇದು ತುಂಬಾ ಪರಿಣಾಮಕಾರಿ ಆಗಿದೆ.

ನಕ್ಸ್ ವೊಮಿಕಾ

ಖಾರವಾದ ಆಹಾರ, ಆಲ್ಕೋಹಾಲ್ ಮತ್ತು ಸಿಹಿಯಿಂದಾಗಿ ಯಾವುದೇ ವ್ಯಕ್ತಿಗೆ ಎದೆ ಮತ್ತು ಹೊಟ್ಟೆಯಲ್ಲಿ ಸಂಕುಚಿತಗೊಂಡ ಭಾವನೆ ಆಗಬಹುದು. ಈ ಔಷಧಿಯೊಂದಿಗೆ ಮೈಯನ್ನು ಬಿಸಿ ಮಾಡುವುದು ಮತ್ತು ನಿದ್ರೆ ಮಾಡಿದರೆ ಪರಿಹಾರ ಸಿಗುವುದು.

ಪಲ್ಸಟಿಲ್ಲಾ

ಕೋಣೆಯೊಳಗಡೆ ಅತಿಯಾದ ಉಷ್ಣಾಂಶ ಮತ್ತು ಅತಿಯಾಗಿ ಖಾರದ ಆಹಾರ ಸೇವನೆ ಮಾಡುವ ಪರಿಣಾಮವಾಗಿ ಉಬ್ಬಸವು ಉಂಟಾಗುವುದು ಮಾತ್ರವಲ್ಲದೆ ಎದೆಯು ಕಟ್ಟಿದಂತೆ ಆಗುತ್ತದೆ. ಅಸ್ತಮಾದಿಂದ ಬಳಲುವ ಮಕ್ಕಳಿಗೆ ಇದು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ.

Homeopathic Remedy for Asthma

ಹೋಮಿಯೋಪಥಿ ಔಷಧಿಯ ಸೇವನೆ ಪ್ರಮಾಣ

ಹೋಮಿಯೋಪಥಿ ಔಷಧಿಯನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎನ್ನುವುದನ್ನು ವೈದ್ಯರು ನಿರ್ಧಾರ ಮಾಡುವರು. ವಿವಿಧ ಔಷಧಿಗಳು ವಿಭಿನ್ನ ಸಾಮರ್ಥ್ಯ ಹೊಂದಿರುವುದು. ಸ್ವಯಂ ಔಷಧಿ ತೆಗೆದುಕೊಳ್ಳುವುದು ಸರಿಯಾದ ನಿರ್ಧಾರವಲ್ಲ. ನಿಮ್ಮ ಅಸ್ತಮಾಗೆ ತುಂಬಾ ಹತ್ತಿರವಾಗಿರುವಂತಹ ಔಷಧಿ ಸೇವನೆ ಮಾಡಬಹುದು. ವೈದ್ಯರು ಸೂಚಿಸಿದ ಪ್ರಮಾಣದಲ್ಲಿ ಇದನ್ನು ತೆಗೆದುಕೊಂಡು ಪರೀಕ್ಷಿಸಿಕೊಳ್ಳಿ. ಇದು ಕೆಲಸ ಮಾಡದೆ ಇದ್ದರೆ ಆಗ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ. ಪ್ರಮಾಣ ಹೆಚ್ಚಿಸಿಯೂ ಕೆಲಸ ಮಾಡದೆ ಇದ್ದರೆ ಆಗ ನೀವು ಬೇರೆ ಹೋಮಿಯೋಪಥಿ ಔಷಧಿ ತೆಗೆದುಕೊಳ್ಳಿ. ಅಸ್ತಮಾ ನಿವಾರಣೆ ಮಾಡಲು ಹೋಮಿಯೋಪಥಿ ಔಷಧಿಯು ತುಂಬಾ ಪರಿಣಾಮಕಾರಿ ಆಗಿರುವುದು. ವೈಯಕ್ತಿಕ ಲಕ್ಷಣಗಳನ್ನು ನೋಡಿಕೊಂಡು ಔಷಧಿಗಳನ್ನು ನೀಡಲಾಗುತ್ತದೆ ಮತ್ತು ವ್ಯಕ್ತಿಯ ಸಂಪೂರ್ಣ ಆರೋಗ್ಯ ಸುಧಾರಣೆ ಮಾಡುವುದು ಇದರ ಹಿಂದಿರುವ ಉದ್ದೇಶವಾಗಿದೆ. ಅಸ್ತಮಾದಿಂದ ಉಂಟಾಗುವಂತಹ ಹಲವಾರು ರೀತಿಯ ಅಲರ್ಜಿಗಳನ್ನು ಇದು ನಿವಾರಣೆ ಮಾಡುವುದು. ಹೋಮಿಯೋಪಥಿ ಔಷಧಿ ಸೇವನೆಯಿಂದಾಗಿ ಹೆಚ್ಚಿನ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತದೆ.

English summary

Homeopathic Remedy for Asthma

Homeopathic Remedies for Asthma - There are several homeopathic remedies for asthma which can prove to be beneficial. Remedies are usually decided by a homeopath keeping in mind the individual's symptoms and general health to combat asthma causin People suffering from asthma generally suffer from allergies, however, there are several homeopathic remedies for asthma which can prove beneficial. Consistent care under the guidance of an experienced doctor can improve a person’s general health and help to ward off the ill-effects of allergies that result in asthma attacks.
Story first published: Tuesday, July 23, 2019, 15:02 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X