For Quick Alerts
ALLOW NOTIFICATIONS  
For Daily Alerts

ವ್ಯಾಯಾಮದ ವೇಳೆ ಹೃದಯಾಘಾತ ಸಂಭವಿಸುವುದು ಹೇಗೆ : ನೀವು ಜಿಮ್ ಹೋಗುವವರಾದ್ರೆ ತಪ್ಪದೇ ಈ ಸ್ಟೋರಿ ಓದಿ

|

ಹೃದಯಾಘಾತ...ಇನ್ನಿತರ ರೋಗಗಳಂತೆ ಈ ಪದ ಅಥವಾ ಈ ಸಮಸ್ಯೆ ಜಗತ್ತಿನಲಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಭಾರತದಲ್ಲಿ ಅನೇಕ ಪ್ರಸಿದ್ದ ತಾರೆಯರು ಹೃದಯಾಘಾತ ಎನ್ನುವ ಪೆಡಂಭೂತಕ್ಕೆ ಬಲಿಯಾದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇದೆ.

ಅದರಲ್ಲೂ ಜಿಮ್ ವೇಳೆ ಅನೇಕರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಜನಪ್ರಿಯ ಭಾರತೀಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಟ್ರೆಡ್‌ಮಿಲ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವೇಳೆ ಹೃದಯಘಾತಕ್ಕೊಳಗಾಗಿ 40 ದಿನಗಳ ನಂತರ ಅಸುನೀಗಿದ್ದರು.

Heart attacks at gym

ಇನ್ನು ಕನ್ನಡದ ಧೀಮಂತ ನಟ ಪುನೀತ್ ರಾಜ್ ಕುಮಾರ್ ಕೂಡ ಜಿಮ್ ನಲ್ಲಿ ವ್ಯಾಯಾಮ ನಡೆಸುವ ವೇಳೆ ಎದೆನೋವು ಬಂದ ಹಿನ್ನೆಲೆ ಆಸ್ಪತ್ರೆಗೆ ತೆರಳಿದಾಗ ಕೊನೆಯುಸಿರೆಳೆದಿದ್ದರು. ಪುನೀತ್ ರಾಜ್ ಕುಮಾರ್ ನಿಧನದಿಂದ ಇಡೀ ಕರ್ನಾಟಕವೇ ಶೋಕ ಸಾಗರದಲ್ಲಿ ಮುಳುಗಿದ್ದನು ನಾವು ನೋಡಿದ್ದೇವೆ. ಇನ್ನು ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ವ್ಯಾಯಾಮದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಅದರಲ್ಲೀ ಅತೀವ ವ್ಯಾಯಾಮದಿಂದ ಪ್ರಾಣವೇ ಕಳೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದವು.

ಜಿಮ್ ಗೆ ಹೋಗುವ ಅನೇಕ ಜನರು ಅಪ್ಪು ಘಟನೆ ಬಳಿಕ ಇಸಿಜಿಯಂತಹ ಹೃದಯ ಸಂಬಂಧಿ ಪರೀಕ್ಷೆಗಳನು ನಡೆಸಿದ್ದರು. ಹಾಗಾದರೆ ವ್ಯಾಯಾಮದ ಬಗ್ಗೆ ನಾವು ಗಮನಿಸಬೇಕಾದ ಅಂಶ ಏನು? ಜಿಮ್ ನಲ್ಲಿ ಅನೇಕರು ಹೃದಯಘಾತಕ್ಕೆ ಒಳಗಾಗುವುದು ಏಕೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಜಿಮ್ ವೇಳೆ ಹೃದಯಾಘಾತಕ್ಕೆ ಒಳಗಾಗುವುದು ಏಕೆ..?

ಜಿಮ್ ವೇಳೆ ಹೃದಯಾಘಾತಕ್ಕೆ ಒಳಗಾಗುವುದು ಏಕೆ..?

ನಾವು ಹೇಳಿದ್ದು ಕೇವಲ ತಾರೆಯರ ಹೆಸರು ಮಾತ್ರ ಆದರೆ ಸಾಮಾನ್ಯವಾಗಿ ಭಾರತದಲಿ ಜಿಮ್ ವೇಳೆ ಹಲವಾರು ಮಂದಿ ಸಾವನಪ್ಪಿರುವ ಬಗ್ಗೆ ಸಮೀಕ್ಷೆಗಳು ನಡೆದಿದೆ. ಹಾಗಾದರೆ ವ್ಯಾಯಾಮ ಕೆಟ್ಟದಾ ಎನ್ನುವ ಡೌಟ್ ನಿಮಗೆ ಮೂಡಬಹುದು. ಖಂಡಿತವಾಗ್ಲು ವ್ಯಾಯಾಮ ಮಾಡುವುದು ಕೆಟ್ಟದಲ್ಲ. ಆದರೆ ಎಷ್ಟು ಮಾಡುತ್ತೇವೆ..? ಹೇಗೆ ಮಾಡುತ್ತೇವೆ? ವ್ಯಾಯಾಮ ಮಾಡುವ ಮುನ್ನ ಹಾಗೂ ನಂತರ ಯಾವ ಆಹಾರ ಸೇವನೆ ಮಾಡುತ್ತೇವೆ ಎನ್ನುವುದು ಕೂಡ ಮುಖ್ಯವಾಗಿರುತ್ತದೆ. ಹೌದು, ವ್ಯಾಯಾಮ ಮತ್ತು ಹೃದಯಕ್ಕೆ ನೇರ ಸಂಬಂಧ ಇದೆ. ನೀವು ಭಾರೀಊ ಓಡಿದಾಗ ನಿಮ್ಮ ಹೃದಯಬಡಿತ ಜಾಸ್ತಿಯಾಗುವುದನ್ನು ನೀವು ಗಮನಿಸಿರಬಹುದು.

ಹೀಗಾಗಿ ಹೃದಯ ಮತ್ತು ವ್ಯಾಯಾಮಕ್ಕೆ ಸಂಬಂಧವಿದೆ. ಇನ್ನು ಅತೀಯಾಗಿ ವ್ಯಾಯಾಮ ಮಾಡುವುದು ಒಳ್ಳೆಯದಲ್ಲ ಎನ್ನುವುದು ವೈದ್ಯರುಗಳ ಮಾತು. ಇನ್ನು ಒಬ್ಬ ವ್ಯಕ್ತಿ ಆತನ ಚುರುಕುತನ, ತ್ರಾಣ ಮತ್ತು ಮುಖ್ಯವಾಗಿ ಹೃದಯದ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ. ಆತನ ತ್ರಾಣ, ಹೃದಯದ ಸಾಮರ್ಥ್ಯವನ್ನು ಮೀರಿ ಆತ ವ್ಯಾಯಾಮ ಮಾಡಿದರೆ ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಆತ ಒಳಗಾಗಬಹುದು. ಹೀಗಾಗಿ ಭಾರ ಎತ್ತುವ ಮತ್ತು ತೀವ್ರವಾದ ವ್ಯಾಯಾಮಗಳಿಗೆ ಒಳಗಾಗುವ ಮೊದಲು ನಿಮ್ಮ ಹೃದಯ ಮತ್ತು ಆರೋಗ್ಯದ ನಿಯತಾಂಕಗಳನ್ನು ಅಥವಾ ಪ್ಯಾರಾಮೀಟರ್ ಅನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.

ಜಿಮ್ ನಲಿ ಹೃದಯಘಾತ ಯಾವ ಕಾರಣಕ್ಕೆ ಉಂಟಾಗುತ್ತದೆ ಮತ್ತು ಅದನ್ನು ತಡೆಯುವುದು ಹೇಗೆ?

ನಮಗೆ ವಿವಿಧ ರೀತಿಯ ಜನರು ಜಿಮ್ ನಲಿ ಕಾಣಸಿಗುತ್ತಾರೆ. ಈ ಪೈಕಿ ಕೆಲವರು ಏರೋಬಿಕ್ ಅಥವಾ ಕಾರ್ಡಿಯೋ ವ್ಯಾಯಾಮಕ್ಕಾಗಿ ಜಿಮ್‌ಗೆ ಹೋಗುತ್ತಾರೆ ಮತ್ತು ಕೆಲವರು ಭಾರವಾದ ಭಾರ ಎತ್ತುವುದು ಅಥವಾ ತೀವ್ರ ತರದ ವ್ಯಾಯಾಮಕ್ಕಾಗಿ ಜಿಮ್‌ಗೆ ಹೋಗುತ್ತಾರೆ. ನಿಮಗೊಂದು ನೆನಪಿರಲಿ ಸರಳವಾದ ಏರೋಬಿಕ್ಸ್ ಮತ್ತು ಕಾರ್ಡಿಯೋ ವ್ಯಾಯಾಮಗಳು ನಿಮಗೆ ಹೃದಯ ಸಂಬಂಧಿತ ಅನೇಕ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

ಆದರೆ ನೀವು ತೀವ್ರವಾದ ತಾಲೀಮು ಅಥವಾ ವ್ಯಾಯಾಮವನ್ನು ಜಿಮ್ ನಲ್ಲಿ ಮಾಡುತ್ತೀರಾ. ಅಥವಾ ತೀವ್ರ ತರದ ಭಾರವನ್ನು ಎತ್ತುತ್ತೀರಾ.? ಹಾಗಾದರೆ ಖಂಡಿತವಾಗ್ಲು ನೀವು ಈ ಬಗ್ಗೆ ಯೋಚಿಸಬೇಕು ಮತ್ತು ನಿಮ್ಮ ಪ್ಯಾರಾ ಮೀಟರನ್ನು ಪರಿಶೀಲಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಯಾವ ಕಾರಣಕ್ಕೆ ಹೃದಯಾಘಾತ ಉಂಟಾಗಬಹುದು ಮತ್ತು ಅದನ್ನು ತಡೆಯುವುದು ಹೇಗೆ ಎಂದು ನಿಮಗೆ ನಾವಿಂದು ತಿಳಿಸುತ್ತೇವೆ.

1. ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ

1. ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ

ನೀವು ತೀವ್ರ ತರದ ಜಿಮ್ ವರ್ಕೌಟ್ ಮಾಡುತ್ತಿದ್ದರೆ, ತೀವ್ರ ತರದ ಭಾರವನ್ನು ಎತ್ತುತ್ತಿದ್ದರೆ ನೀವು ನಿಮ್ಮ ಹಿಂದಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಹೌದು, ಜಿಮ್‌ಗೆ ಹೋಗುವ ಜನರು ಯಾವುದೇ ಪೂರ್ವ ಹೃದಯದ ಸ್ಥಿತಿ ಅಥವಾ ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಪರಿಧಮನಿಯ ಕಾಯಿಲೆಗಳನ್ನು ನೀವು ಅನುಭವಿಸಿದ್ದರೆ. ತೀವ್ರ ತರದ ಜಿಮ್ ಅಥವಾ ಸಾಮಾನ್ಯ ವರ್ಕೌಟ್ ಮಾಡುವ ವೇಳೆ ಇದನ್ನು ನೀವು ಗಮನಿಸಬೇಕಿದೆ. ಅಲ್ಲದೇ ನಿಮ್ಮ ಕುಟುಂಬಂದಲ್ಲಿ ಯಾರಿಗಾದರೂ ಹೃದಯ ಕಾಯಿಲೆ ಇದ್ದರೆ ಅದ್ರಲ್ಲೂ ನಿಮಗೆ ಅತೀವ ನೆಂಟರು ಹೃದಯ ಕಾಯಿಲೆ ಇದ್ದರೆ ಅದನ್ನು ನಿಮ್ಮ ಗಮನದಲ್ಲಿ ಇಟ್ಟುಕೊಳ್ಳಬೇಕು. ಹೀಗಾಗಿ ಕೆಲವೊಂದು ಆರೋಗ್ಯ ಸಮಸ್ಗೆಗಳು ಹೃದಯಾಘಾತಕ್ಕೆ ಕಾರಣವಾಗಬಹುದು. ಅಲ್ಲದೇ ಈ ರೀತಿಯ ಸಮಸ್ಯೆ ಇದ್ದವರು ವ್ಯಾಯಾಮ ಮಾಡುವ ವೇಳೆ ತಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಬೇಕು.

2. ಜಿಮ್‌ಗೆ ಹೋಗುವ ಮುನ್ನ ಬೇಸಿಕ್ ಆರೋಗ್ಯ ಪರೀಕ್ಷೆಗಳನ್ನು ಮಾಡಿ

ಯಾರು ಬೇಕಾದರು ಜಿಮ್ ಗೆ ಹೋಗಬಹುದು, ಯಾವುದೇ ರೀತಿಯ ವರ್ಕೌಟ್ ಮಾಡಬಹುದು. ತೀವ್ರ ತರದ ಭಾರ ಎತ್ತಬಹುದು. ಆದರೆ ಇದಕ್ಕೂ ಮುನ್ನ ಮೂಲಭೂತ ಪರೀಕ್ಷೆಗಳನ್ನು ಮಾಡಲು ಎಂದಿಗೂ ಮರೆಯಬೇಡಿ. ಹೌದು, ಜಿಮ್ ಗೆ ಹೋಗುವವರು ಮುಖ್ಯವಾಗಿ ಹೃದಯ ಸಂಬಂಧಿ ಪರೀಕ್ಷೆಗಳನ್ನು ಮಾಡಿದರೆ ಅತೀ ಉತ್ತಮ. ತಮ್ಮ ಹೃದಯದ ಆರೋಗ್ಯ ಹೇಗಿದೆ ಎಂದು ಆವರು ತಿಳಿದುಕೊಳ್ಳಬಹುದು. ಇಸಿಜಿ ಮತ್ತು ಇಸಿಎಚ್ (ಎಕೋಕಾರ್ಡಿಯೋಗ್ರಫಿ) ರೂಪದಲ್ಲಿ ರಕ್ತ ಪರೀಕ್ಷೆಗಳು ಮತ್ತು ನಿರ್ದಿಷ್ಟ ಹೃದಯ ಪರೀಕ್ಷೆಗಳನ್ನು ನಡೆಸಬೇಕು. ಈ ಮೂಲಕ ಮುಂದೆ ಉಂಟಾಗಭುದಾದ, ಸದ್ಯ ಇರುವ ಸಮಸ್ಯೆಗಳನ್ನು ಅಥವಾ ಅಸ್ಥಿರ ನಿಯತಾಂಕಗಳು ಹೃದಯಾಘಾತದ ಅಪಾಯಕಾರಿ ಅಂಶಗಳನ್ನು ಕಂಡುಹಿಡಿಯಬಹುದಾಗಿದೆ. ಈ ಮೂಲಕ ಜಿಮ್ ನಲಿ ಹೃದಯಾಘಾತಕ್ಕೊಳಗಾಗಬಹುದಾದ ಸಮಸ್ಯೆಯನ್ನು ದೂರ ಮಾಡಬಹುದಾಗಿದೆ.

3. ಎಕೋಕಾರ್ಡಿಯೋಗ್ರಫಿ

3. ಎಕೋಕಾರ್ಡಿಯೋಗ್ರಫಿ

ಇದು ಹೃದಯದ ಒಟ್ಟಾರೆ ರಚನೆ ಅಥವಾ ಒಟ್ಟಾರೆ ಪಂಪಿಂಗ್ ಅಥವಾ ಕಾರ್ಯಗಳ ಬಗ್ಗೆ ಮತ್ತು ಕವಾಟಗಳು ಹೇಗೆ ಕೆಲಸ ಮಾಡುತ್ತಿವೆ ಮತ್ತು ಯಾವುದೇ ಜನ್ಮಜಾತ ಹೃದಯ ಕಾಯಿಲೆ ಇದ್ದಲ್ಲಿ ಒಬ್ಬರು ಇರಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ. ಸರಳವಾದ ಎಕೋಕಾರ್ಡಿಯೋಗ್ರಾಫಿಕ್ ಪರೀಕ್ಷೆಗಳನ್ನು ಮಾಡುವ ಮೂಲಕ ನಮ್ಮ ಹೃದಯದ ಪರಿಸ್ಥಿತಿಗಳನ್ನು ತಿಳಿದುಕೊಳ್ಳಬಹುದು.

4. ಟ್ರೆಡ್ ಮಿಲ್ ಪರೀಕ್ಷೆ!

ಈ ಪರೀಕ್ಷೆಯನ್ನು ಟ್ರೆಡ್‌ಮಿಲ್ ಪರೀಕ್ಷೆ ಅಥವಾ ಒತ್ತಡದ ಪ್ರತಿಧ್ವನಿ ಪರೀಕ್ಷೆ ಎಂದು ಕೂಡ ಕರೆಯುತ್ತಾರೆ. ಇಲ್ಲಿ ರೋಗಿಯನ್ನು ಟ್ರೆಡ್‌ಮಿಲ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಅದೇ ಸಮಯದಲ್ಲಿ ಅವನ ಇಸಿಜಿಯನ್ನು ದಾಖಲಿಸಲಾಗುತ್ತದೆ. ಗರಿಷ್ಠ ವ್ಯಾಯಾಮ ಅಥವಾ ಗರಿಷ್ಠ ಒತ್ತಡದಲ್ಲಿ ಹೃದಯವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಹಿಡಿಯಲು ಇದು ಸಹಾಯ ಮಾಡುತ್ತದೆ.

5. ಹೃದಯ ಸಮಸ್ಯೆಗಳಿಂದ ದೂರವಿರಲು ನಿಮ್ಮ ಆಹಾರಕ್ರಮವನ್ನು ಗಮನದಲ್ಲಿರಿಸಿ

5. ಹೃದಯ ಸಮಸ್ಯೆಗಳಿಂದ ದೂರವಿರಲು ನಿಮ್ಮ ಆಹಾರಕ್ರಮವನ್ನು ಗಮನದಲ್ಲಿರಿಸಿ

ಆಹಾರದ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಜಿಮ್‌ಗಳಿಗೆ ಹೋಗುವ ಯುವಜನರಲ್ಲಿ ಸಪ್ಲಿಮೆಂಟ್‌ಗಳ ಬದಲಿಗೆ ನೈಸರ್ಗಿಕ ಉತ್ಪನ್ನಗಳನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಹೃದಯ ಸ್ನೇಹಿ ಆಹಾರಗಳತ್ತ ಜಿಮ್ ಗೆ ಹೋಗುವ ಜನರು ಗಮನ ಹರಿಸಬೇಕು.

ಆರೋಗ್ಯಕರ ಹೃದಯಕ್ಕೆ ಆಹಾರ ಕ್ರಮಗಳನ್ನು ಪಾಲಿಸಿ

*ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸಬೇಡಿ

*ಕಾರ್ಬೋಹೈಡ್ರೇಟ್ ಯುಕ್ತ ಆಹಾರವನ್ನು ಸೇವಿಸಿ

* ಹೆಚ್ಚು ಪ್ರೋಟೀನ್, ಫೈಬರ್, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ

*ಕರಿದ ಪದಾರ್ಥಗಳು ಮತ್ತು ಪ್ಯಾಕ್ ಮಾಡಿದ ಆಹಾರಗಳಾದ ನಮ್ಕೀನ್ ಮತ್ತು ಬಿಸ್ಕತ್ತುಗಳಿಂದ ದೂರವಿರಿ

*ಇನ್ನು ಜಿಮ್ ಗೆ ಹೋಗುವ ವ್ಯಕ್ತಿಗಳು ಒಳ್ಳೆಯ ಎಣ್ಣೆಯಿಂದ ತಯಾರಿಸಿದ ಆಹಾರ ಸೇವಿಸಬೇಕು. ಅಂದರೆ ಆಲಿವ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆ. ಸಸ್ಯಜನ್ಯ ಎಣ್ಣೆ ಅಥವಾ ತಾಳೆ ಎಣ್ಣೆ ಬಳಕೆ ಮಾಡಬೇಕು.

English summary

Heart attacks at gym : Things You Must Keep In Mind Before You Workout Hard in Kannada

Heart attacks at gym : why should not work hard in gym, how you get to know you are working hard read on
X
Desktop Bottom Promotion