For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಲವಂಗ ಹಾಕಿದ ಬಿಸಿನೀರನ್ನು ಕುಡಿದರೆ ಸಿಗುವುದು ಈ ಆರೋಗ್ಯಕರ ಲಾಭಗಳು

|

ಆರೋಗ್ಯವನ್ನು ಕಾಪಾಡಿಕೊಳ್ಳವುದು ಒಂದು ಪ್ರಕ್ರಿಯೆ. ಆರೊಗ್ಯವನ್ನು ಕೇವಲ ಒಂದು ದಿನದಲ್ಲಿ ಸರಿಯಾಗಿಡಲು ಸಾಧ್ಯವಿಲ್ಲ. ಪ್ರತಿದಿನ, ಪ್ರತಿಕ್ಷಣ ನಡೆಸುವ ಅನೇಕ ಸಣ್ಣ ವಿಷಯಗಳು ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತವೆ. ಉದಾಹರಣೆಗೆ, ದಿನಕ್ಕೆ ಒಂದರಿಂದ ಎರಡು ಲೀಟರ್ ನೀರು ಕುಡಿಯುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಅದೇ ಸಮಯದಲ್ಲಿ, ಅಲೋವೆರಾ ಅಥವಾ ನೆಲ್ಲಿಕಾಯಿ ಜ್ಯೂಸ್ ಅನ್ನು ಬೆಳಿಗ್ಗೆ ಸೇವಿಸುವುದರಿಂದ ರೋಗಗಳಿಂದ ನೀವು ದೂರವಿರಬಹುದು. ಇದೇ ಸಾಲಿಗೆ ಸೇರುತ್ತೆ ಲವಂಗ.

ಹೌದು, ಮಲಗುವ ಮುನ್ನ ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸುವುದರಿಂದ ನೀವು ಆರೋಗ್ಯವಾಗಿರುತ್ತೀರಿ. ಇದು ವಿಟಮಿನ್ ಇ, ವಿಟಮಿನ್ ಸಿ, ಫೋಲೇಟ್, ರಿಬೋಫ್ಲಾವಿನ್, ವಿಟಮಿನ್ ಎ, ಥಯಾಮಿನ್, ವಿಟಮಿನ್ ಡಿ, ಒಮೆಗಾ 3 ಕೊಬ್ಬಿನಾಮ್ಲಗಳಂತಹ ಇತರ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದ್ದರಿಂದ ಈ ಲೇಖನದಲ್ಲಿ ಅದರ ಪ್ರಯೋಜನಗಳನ್ನು ವಿವರಿಸಲಾಗಿದೆ.

ಬೆಚ್ಚಗಿನ ನೀರಿನ ಜೊತೆ ಲವಂಗವನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳನ್ನು ಈ ಕೆಳಗೆ ವಿವರಿಸಲಾಗಿದೆ:

ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಹೇಗೆ ಸೇವಿಸುವುದು?:

ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಹೇಗೆ ಸೇವಿಸುವುದು?:

ಒಂದು ಪಾತ್ರೆಯಲ್ಲಿ ನೀರನ್ನು ಕಾಯಿಸಿ. ಅದು ಉಗುರು ಬೆಚ್ಚಗಾಗುವ ವೇಳೆಗೆ ಅದಕ್ಕೆ ಎರಡು ಲವಂಗವನ್ನು ಸೇರಿಸಿ. ಆ ನೀರನ್ನು ಕೆಳಗಿಳಿಸಿ ತಕ್ಷಣ ಕುಡಿದು, ನಂತರ ಮಲಗಿ.

ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೆಂದರೆ:

ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೆಂದರೆ:

ಜೀರ್ಣಕ್ರಿಯಗೆ ಸಹಕಾರಿ:

ಮಲಗುವ ಮುನ್ನ ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸುವುದರಿಂದ ಮಲಬದ್ಧತೆ, ಅತಿಸಾರ, ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಬಹುದು, ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಉತ್ತಮ ಜೀಣಾಂಗವ್ಯವಸ್ಥೆಯನ್ನು ಕಾಪಾಡಿಕೊಳ್ಳುತ್ತದೆ.

ಮೊಡವೆಗಳ ನಿವಾರಣೆ:

ಮೊಡವೆಗಳ ನಿವಾರಣೆ:

ಲವಂಗವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ ಜೊತೆಗೆ ಜೀವಿರೋಧಿ ಗುಣಗಳನ್ನು ಹೊಂದಿದೆ. ಇದು ಮೊಡವೆಗಳನ್ನು ತಡೆಯಲು ಸಹಾಯ ಮಾಡುವ ಒಂದು ರೀತಿಯ ಸ್ಯಾಲಿಸಿಲೇಟ್ ಅನ್ನು ಹೊಂದಿರುತ್ತದೆ. ಆದ್ದರಿಂದ ಈ ನೀರನ್ನು ಸೇವಿಸುವುದರಿಂದ ಮೊಡವೆಗಳನ್ನು ತಡೆಯಬಹುದು.

ಹಲ್ಲುನೋವಿನ ಶಮನಕಾರಿ:

ಹಲ್ಲುನೋವಿನ ಶಮನಕಾರಿ:

ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸುವುದರಿಂದ ಹಲ್ಲುನೋವು ನಿವಾರಣೆಯಾಗುತ್ತದೆ. ಹಲ್ಲುನೋವಿಗೆ ನಿಮ್ಮ ಹಲ್ಲುಗಳ ಮೇಲೆ ಲವಂಗವನ್ನು ಸಹ ನೀವು ಇರಿಸಬಹುದು. ಇದರಿಂದಲೂ ನಿಮ್ಮ ಹಲ್ಲುನೋವು ಶಮನವಾಗುತ್ತದೆ.

ಗಂಟಲುನೋವು ಕಡಿಮೆ ಮಾಡುತ್ತದೆ:

ಗಂಟಲುನೋವು ಕಡಿಮೆ ಮಾಡುತ್ತದೆ:

ನೋಯುತ್ತಿರುವ ಗಂಟಲು ಮತ್ತು ನೋವನ್ನು ನಿವಾರಿಸಲು ಲವಂಗ ಸಹಾಯ ಮಾಡುತ್ತದೆ. ಕೈ ಮತ್ತು ಕಾಲುಗಳ ನಡುಕದಿಂದ ಬಳಲುತ್ತಿರುವ ಜನರು ರಾತ್ರಿಯಲ್ಲಿ ಮಲಗುವ ಮುನ್ನ 1-2 ಲವಂಗವನ್ನು ತೆಗೆದುಕೊಳ್ಳುವುದರಿಂದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ರೋಗನಿರೋಧಕ ಶಕ್ತಿ ವೃದ್ಧಿ:

ರೋಗನಿರೋಧಕ ಶಕ್ತಿ ವೃದ್ಧಿ:

ಲವಂಗವನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಇಂತಹ ಕೋವಿಡ್ ಸಮಯದಲ್ಲಿ ಇದು ಹೆಚ್ಚು ಮುಖ್ಯವಾಗಿದೆ. ಕೆಮ್ಮು, ಶೀತ, ವೈರಲ್ ಸೋಂಕು, ಬ್ರಾಂಕೈಟಿಸ್, ಸೈನಸ್ ಮತ್ತು ಆಸ್ತಮಾವನ್ನು ತೊಡೆದುಹಾಕಲು ಲವಂಗ ನಿಮಗೆ ಸಹಾಯ ಮಾಡುತ್ತದೆ.

English summary

Health Benefits of Eating 2 Cloves with Water in Kannada

Here we talking about Health Benefits of Eating 2 Cloves with Water in Kannada, read on
Story first published: Tuesday, April 20, 2021, 8:45 [IST]
X
Desktop Bottom Promotion