For Quick Alerts
ALLOW NOTIFICATIONS  
For Daily Alerts

ಆಸ್ಪತ್ರೆಯ ನರಕ ಬೇಡ ಅಂದ್ರೆ ದಿನಾ 4 ಬಾದಾಮಿ ತಿನ್ನಿ

|

ಅತೀ ಅಧಿಕ ಪೋಷಕಾಂಶಗಳನ್ನು ಹೊಂದಿರುವ ಡ್ರೈಪ್ರೂಟ್ಸ್‌ಗಳಲ್ಲಿ ಬಾದಾಮಿ ಸಹ ಪ್ರಮುಖವಾದದ್ದು. ಇದು ದೇಹ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.
ಹೊಳೆಯುವ ಕೂದಲು, ಉತ್ತಮ ಜೀರ್ಣಕ್ರಿಯೆ ಮತ್ತು ನಯವಾದ ಚರ್ಮ ಬೇಕು ಎನ್ನುವವರು ಇಂದಿನಿಂದಲೇ ಬಾದಾಮಿ ಸೇವನೆಯನ್ನು ಆರಂಭಿಸಿ. ಏಕೆಂದರೆ ಇದರ ಆರೋಗ್ಯ ಪ್ರಯೋಜನಗಳನ್ನು ನೀವು ತಿಳಿದರೆ ಅಚ್ಚರಿಪಡಬೇಕಾದೀತು.

almond benefits

ಸೌಂದರ್ಯಕ್ಕೆ ಮಾತ್ರ ಸೀಮಿತವಾಗದೇ ದೈಹಿಕ ಆರೋಗ್ಯಕ್ಕೂ ಬಾದಾಮಿ ಅತ್ಯಪಕಾರಿಯಾಗಿದೆ. ಇಷ್ಟು ಸಣ್ಣ ಬೀಜದಲ್ಲಿ ಎಷ್ಟೆಲ್ಲಾ ಅಗಾಧ ಪೌಷ್ಟಿಕಾಶ ತುಂಬಿದೆ ಎಂದರೆ ನೀವು ಊಹಿಸಲೂ ಅಸಾಧ್ಯ ಎನಿಸಬಹುದು. ಹಾಗಿದ್ದರೆ ಬಾದಾಮಿ ಸೇವನೆ ನಮ್ಮ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಮುಂದೆ ಲೇಖನದಲ್ಲಿ ನೋಡೋಣ:

ಬಾದಾಮಿಯಲ್ಲಿರುವ ಪೌಷ್ಟಿಕಾಂಶ

ಬಾದಾಮಿಯಲ್ಲಿರುವ ಪೌಷ್ಟಿಕಾಂಶ

  • ಬಾದಾಮಿಯಲ್ಲಿ ಶೇ. 16.5ರಷ್ಟು ಪ್ರೋಟೀನ್
  • ಶೇಕಡಾ 41ರಷ್ಟು ಎಣ್ಣೆಯ ಅಂಶ
  • ವಿಟಮಿನ್‌ ಇ
  • ಫೋಲೇಟ್‌
  • ಬಯೋಟಿನ್‌ (ವಿಟಮಿನ್‌ ಬಿ7)
  • ಸೆಲೆನಿಯಂ
  • ಜಿಂಕ್‌
  • ಕ್ಯಾಲ್ಸಿಯಂ
  • ಮೆಗ್ನಿಶಿಯಂ
  • ವಿಟಮಿನ್‌ ಬಿ
  • ಜೀರ್ಣಕ್ರಿಯೆಗೆ ಸಹಾಯ

    ಜೀರ್ಣಕ್ರಿಯೆಗೆ ಸಹಾಯ

    ಬಾದಾಮಿ ನಾರಿನ ಉತ್ತಮ ಮೂಲವಾಗಿದೆ. ದಿನಕ್ಕೆ ಬೆರಳೆಣಿಕೆಯಷ್ಟು ಬಾದಾಮಿ ತಿನ್ನುವುದು ಅಥವಾ ಒಂದು ಲೋಟ ಬಾದಾಮಿ ಹಾಲನ್ನು ಕುಡಿಯುವುದರಿಂದ ನಿಮ್ಮ ಜಠರಗರುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಬಾದಾಮಿ ನಿಮ್ಮ ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಹೆಚ್ಚು ಉತ್ಪತಿಯಾಗಲು ಸಹ ಉತ್ತೇಜಿಸುತ್ತದೆ. ಇದು ನಿಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ಅನಾರೋಗ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

    ಆರೋಗ್ಯಕರ ಚರ್ಮಕ್ಕೆ

    ಆರೋಗ್ಯಕರ ಚರ್ಮಕ್ಕೆ

    ನಿಮ್ಮದು ಶುಷ್ಕ ಚರ್ಮವಾಗಿದ್ದರೆ ಬಾದಾಮಿಯ ಲೇಪನ ಅಥವಾ ಬಾದಾಮಿ ಇರುವ ಕೆನೆ ಅಥವಾ ಲೋಷನ್ ಉತ್ತರವಾಗಿರಬಹುದು. ಬಾದಾಮಿ ತ್ವಚೆಗೆ ಆರೋಗ್ಯಕರ ಕೊಬ್ಬನ್ನು ಒದಗಿಸುತ್ತದೆ, ಮತ್ತ ಇದು ಚರ್ಮವನ್ನು ಪೂರಕವಾಗಿಡಲು ಸಹಾಯ ಮಾಡುತ್ತದೆ. ಬಾದಾಮಿ ನಿಮ್ಮ ದೇಹಕ್ಕೆ ವಿಟಮಿನ್ ಎ ಮತ್ತು ಇ ಅಂಶವನ್ನು ಪೂರೈಸುವ ಮೂಲಕ ಹೊಳೆಯುವ ಚರ್ಮವನ್ನು ನೀಡುತ್ತದೆ.

    ಹೃದ್ರೋಗದಿಂದ ರಕ್ಷಿಸುತ್ತದೆ

    ಹೃದ್ರೋಗದಿಂದ ರಕ್ಷಿಸುತ್ತದೆ

    ನಿಮಗೆ ಹೊಳೆಯುವ ಚರ್ಮವನ್ನು ನೀಡುವುದರ ಜೊತೆಗೆ, ಬಾದಾಮಿಯಲ್ಲಿರುವ ವಿಟಮಿನ್ ಇ ನಿಮ್ಮ ಹೃದಯಕ್ಕೂ ಸಹಾಯ ಮಾಡುತ್ತದೆ. ಜರ್ನಲ್ ಆಫ್ ನ್ಯೂಟ್ರಿಷನ್‌ ನಡೆಸಿದ ಅಧ್ಯಯನದ ಪ್ರಕಾರ ವಿಟಮಿನ್ ಇ ಅಧಿಕವಾಗಿರುವ ಆಹಾರವು ಕಡಿಮೆ ಪ್ರಮಾಣದ ಹೃದ್ರೋಗದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದೆ.

    ಮಂದ ಕೂದಲಿಗೆ ಹೊಳಪು ನೀಡುವ ಬಾದಾಮಿ

    ಮಂದ ಕೂದಲಿಗೆ ಹೊಳಪು ನೀಡುವ ಬಾದಾಮಿ

    ನಿಮ್ಮ ಕೂದಲು ಹೆಚ್ಚು ಶುಷ್ಕವಾಗಿದ್ದರೆ ಅಥವಾ ಚಳಿಗಾಲದಲ್ಲಿ ಹೆಚ್ಚು ಒಣಗುತ್ತಿದ್ದರೆ ಇಂದೇ ಬಾದಾಮಿ ಎಣ್ಣೆಯಿಂದ ಕೂದಲನ್ನು ಮಸಾಜ್‌ ಮಾಡಿ. ಇದರ ಆರೋಗ್ಯಕರ ಕೊಬ್ಬಿನಾಮ್ಲಗಳು ಕೂದಲನ್ನು ಬಲಪಡಿಸಲು ಮತ್ತು ಕೂದಲ ವಿನ್ಯಾಸವನ್ನು ಸಹಜ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಇದರಲ್ಲಿರುವ ಕೊಬ್ಬುಗಳನ್ನು ನಿಮ್ಮ ಕೂದಲು ಹೀರಿಕೊಳ್ಳುತ್ತವೆ, ನಂತರ ಪ್ರತಿ ಎಳೆಯನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.

    ಕಡಿಮೆ ಕೊಲೆಸ್ಟ್ರಾಲ್

    ಕಡಿಮೆ ಕೊಲೆಸ್ಟ್ರಾಲ್

    ನಿಮ್ಮ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಬಾದಾಮಿ ಅತ್ಯುತ್ತಮ ಆಹಾರವಾಗಿದೆ. ಬಾದಾಮಿ ತಿನ್ನುವುದರಿಂದ ಎಲ್‌ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಇನ್ನೂ ತ್ವರಿತವಾಗಿ ಅಥವಾ ಅನುಕೂಲಕ್ಕಾಗಿ ಲಘು ಆಹಾರ ಮತ್ತು ಯಂತ್ರ ಸಿದ್ಧಪಡಿಸಿದ ಆಹಾರಗಳನ್ನು ಎಂದಿಗೂ ಅವಲಂಬಿಸಬೇಡಿ. ಪ್ರಯಾಣದ ವೇಳೆ ಬಾದಾಮಿ ಸೇವನೆ ಬಹಳ ಸುಲಭ ಉಪಾಯ ಮತ್ತು ಆರೋಗ್ಯಕರ.

    ಮಧುಮೇಹ ಅಪಾಯ ಕಡಿಮೆ ಮಾಡುತ್ತದೆ

    ಮಧುಮೇಹ ಅಪಾಯ ಕಡಿಮೆ ಮಾಡುತ್ತದೆ

    ನಿಮ್ಮ ಬೆಳಗಿನ ಉಪಾಹಾರದಲ್ಲಿ ಕಡ್ಡಾಯವಾಗಿ ಬಾದಾಮಿ ಇರಲಿ. ಇದರಿಂದಲೇ ನಿಮ್ಮ ದಿನವನ್ನು ಪ್ರಾರಂಭಿಸಿ. ಬಾದಾಮಿಗಳಲ್ಲಿನ ಪ್ರೋಟೀನ್ ಮತ್ತು ಕೊಬ್ಬಿನ ಅಂಶವು ಅಧಿಕ ರಕ್ತದೊತ್ತಡ ಸಮಸ್ಯೆ ಮತ್ತು ಮಧುಮೇಹದಂಥ ಮಾರಕ ಸಮಸ್ಯೆ ಬರುವಂಥ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿದೆ.

    ನಿಮ್ಮನ್ನು ಪೂರ್ಣವಾಗಿ ಇರಿಸಿ

    ನಿಮ್ಮನ್ನು ಪೂರ್ಣವಾಗಿ ಇರಿಸಿ

    ಬೆಳಗನ ತಿಂಡಿಗೆ ಬಾದಾಮಿ ಸೇವಸಿದಲ್ಲಿ ಹೆಚ್ಚಿನ ಸಮಸ್ಯೆ ನಿಮಗೇ ಹಸಿವೇ ಎನಿಸುವುದಿಲ್ಲ. ಕಾರಣ ಇದರಲ್ಲಿ ಸಸ್ಯ ಪ್ರೋಟೀನ್ ಅಧಿಕವಾಗಿದ್ದು ಮಧ್ಯಾಹ್ನದವರೆಗೆ ನಿಮ್ಮನ್ನು ಪೂರ್ಣವಾಗಿ ತೃಪ್ತಿಪಡಿಸುತ್ತದೆ. ಕ್ಯಾಲ್ಸಿಯಂ, ವಿಟಮಿನ್ ಇ, ರಂಜಕ ಮತ್ತು ಪೋಷಕಾಂಶಗಳ ಸಂಪತ್ತಿನ ಆರೋಗ್ಯಕರ ಮೂಲವೂ ಬಾದಾಮಿಯಾಗಿದೆ.

    ಬಯಕೆಗಳನ್ನು ನಿವಾರಿಸಲು ಬಾದಾಮಿ

    ಬಯಕೆಗಳನ್ನು ನಿವಾರಿಸಲು ಬಾದಾಮಿ

    ಬೆಳಗಿನ ತಿಂಡಿಯ ನಂತರ ಅಥವಾ ಮಧ್ಯಾಹ್ನದ ಊಟದ ನಂತರ ಇತರೆ ಕರಿದ ಅಥವಾ ಚಾಕೋಲೆಟ್ಸ್‌ ತಿನ್ನುವ ಅಭ್ಯಾಸ ನಿಮಗಿದ್ದರೆ ಇದಕ್ಕೆ ಬದಲಾಗಿ ಬಾದಾಮಿ ಬೀಜವನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಬಾದಾಮಿ ಬೀಜವನ್ನು ಸಹ ಹುರಿದು ರುಚಿಕರವಾಗಿ ತಿನ್ನಬಹುದು. ಆದರೆ ಇತರೆ ಜಂಕ್‌ ಫುಡ್‌ಗಳಿಗೆ ಬದಲಾಗಿ ಬಾದಾಮಿ ಸಾಕಷ್ಟು ಆರೋಗ್ಯ ಹೊಂದಿರುವುದರಿಂದ ಇದರ ಸೇವನೆ ಪ್ರಯೋಜನಕಾರಿ.

    ಆರೋಗ್ಯಕರ ಕೋಶಗಳನ್ನು ಉತ್ತೇಜಿಸುತ್ತದೆ

    ಆರೋಗ್ಯಕರ ಕೋಶಗಳನ್ನು ಉತ್ತೇಜಿಸುತ್ತದೆ

    ಬಾದಾಮಿ ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್‌ಗಳಿಂದ ತುಂಬಿರುತ್ತದೆ, ಇದರಲ್ಲಿ ಉರಿಯೂತ ನಿರೋಧಕಗಳೂ ಸಮೃದ್ಧವಾಗಿದೆ. ಈ ಸಸ್ಯ ಸಂಯುಕ್ತಗಳು ನಿಮ್ಮ ತ್ವಚೆಯ ಕೋಶಗಳನ್ನು ಆಕ್ಸಿಡೀಕರಣಗೊಳಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವುದರಿಂದ ರಕ್ಷಿಸುತ್ತದೆ.

    ಕಡಿಮೆ ರಕ್ತದೊತ್ತಡ

    ಕಡಿಮೆ ರಕ್ತದೊತ್ತಡ

    ಬಾದಾಮಿಲ್ಲಿ ಮೆಗ್ನೀಶಿಯಂ ಸಮೃದ್ಧವಾಗಿದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ರಕ್ತದಲ್ಲಿ ಕಡಿಮೆ ಮೆಗ್ನೀಶಿಯಂ ಅಂಶ ಇರುವುದು ಅಧಿಕ ರಕ್ತದೊತ್ತಡಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಆದ್ದರಿಂದ ಬಾದಾಮಿಯಂಥ ಮೆಗ್ನೀಶಿಯಂ ಭರಿತ ಆಹಾರ ಸೇವನೆ ರಕ್ತದೊತ್ತಡ ನಿಂತ್ರಿಸುತ್ತದೆ.

English summary

health benefits of almonds

Here we are discussing about health benefits of almonds. If you're looking for shiny hair, better digestion, and smooth skin, check out the health benefits of almonds. These little nuts may just be the perfect food.Read more.
X
Desktop Bottom Promotion