For Quick Alerts
ALLOW NOTIFICATIONS  
For Daily Alerts

ಬೆವರುವುದರಿಂದ ಆರೋಗ್ಯ, ಸೌಂದರ್ಯ ಎರಡೂ ವೃದ್ಧಿ!

|

ಬಿಸಿಲಿನ ಬೇಗೆ ಹೆಚ್ಚಾದಾಗ ಅಥವಾ ಏನಾದರೂ ಕೆಲಸ ಮಾಡುವಾಗ ಬೆವರುವುದು ಸಾಮಾನ್ಯವಾಗಿದೆ ಇದರ ದುರ್ಗಂಧ ಕೆಲವೊಮ್ಮೆ ನಿಮ್ಮನ್ನು ಮುಜುಗರಕ್ಕೆ ತಳ್ಳುವುದು ಸುಳ್ಳಲ್ಲ. ಆದರೆ, ಈ ಬೆವರಿನಿಂದ ನಿಮ್ಮ ಆರೋಗ್ಯಕ್ಕೆ ಪ್ರಯೋಜನವಿದೆ ಎಂದರೆ ಆಶ್ಚರ್ಯ ಪಡುತ್ತೀರಾ?

ಹೌದು, ನಮ್ಮ ದೇಹವು ದಿನಕ್ಕೆ ಉತ್ಪಾದಿಸುವ ಸುಮಾರು 1 ಲೀಟರ್ ಬೆವರು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ನಮಗೆ ಆರೋಗ್ಯಕರವಾಗಿ ಕಾಣುವ ಚರ್ಮವನ್ನು ನೀಡುತ್ತದೆ. ಬೆವರುವುದು ದೇಹ ಮತ್ತು ಚರ್ಮವು ಅತಿಯಾಗಿ ಬಿಸಿಯಾಗದಂತೆ ರಕ್ಷಿಸುವ ಮಾರ್ಗವಾಗಿದೆ. ಬೆವರುವುದರಿಂದ ದೇಹದಲ್ಲಿ ರಕ್ತ ಸಂಚಾರವೂ ಹೆಚ್ಚುತ್ತದೆ. ಇಂತಹ ಹತ್ತುಹಲವು ಪ್ರಯೋಜನಗಳು ಇದರಿಂದ ಲಭ್ಯವಿವೆ. ಅವುಗಳಾವುವು ನೋಡೋಣ ಬನ್ನಿ.

ಬೆವರುವಿಕೆಯಿಂದ ಆಗುವ ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಎಂಡಾರ್ಫಿನ್ ಗಳನ್ನು ವರ್ಧಿಸುವುದು:

1. ಎಂಡಾರ್ಫಿನ್ ಗಳನ್ನು ವರ್ಧಿಸುವುದು:

ತೀವ್ರವಾದ ವ್ಯಾಯಾಮ ಅಥವಾ ಬಿಸಿಲಿನಲ್ಲಿ ಚುರುಕಾದ ನಡಿಗೆಯ ಸಮಯದಲ್ಲಿ ಬೆವರುವಿಕೆ ಸಂಭವಿಸುತ್ತದೆ. ದೈಹಿಕ ಚಟುವಟಿಕೆಯ ಸಮಯದಲ್ಲಿ ಸ್ವಾಭಾವಿಕವಾಗಿ ಬಿಡುಗಡೆಯಾಗುವ ಬೆವರು ಎಂಡಾರ್ಫಿನ್ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಸಂತೋಷದ ಹಾರ್ಮೋನ್ ಆಗಿದೆ. ಬಯಾಲಜಿ ಲೆಟರ್ಸ್ ಜರ್ನಲ್‌ನಲ್ಲಿ ಪ್ರಕಟವಾದ 2009 ರ ಅಧ್ಯಯನವು ಗುಂಪಿನಲ್ಲಿ ಮಾಡುವ ವ್ಯಾಯಾಮಗಳು ವಾಸ್ತವವಾಗಿ ಎಂಡಾರ್ಫಿನ್ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಏಕಾಂಗಿಯಾಗಿ ತರಬೇತಿ ನೀಡುವವರಿಗಿಂತ ಒಟ್ಟಿಗೆ ಕೆಲಸ ಮಾಡುವವರಿಗೆ ದುಃಖ ಕಡಿಮೆಯಾಗುತ್ತದೆ ಎಂದು ಕಂಡುಹಿಡಿದಿದೆ. ಜುಂಬಾ ಅಥವಾ ಯೋಗದಂತಹ ಗುಂಪು ವ್ಯಾಯಾಮದ ಸಮಯದಲ್ಲಿ ಬೆವರುವುದು ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸಲು ಸಹಾಯ ಮಾಡುತ್ತದೆ.

2. ದೇಹವನ್ನು ನಿರ್ವಿಷಗೊಳಿಸುವುದು:

2. ದೇಹವನ್ನು ನಿರ್ವಿಷಗೊಳಿಸುವುದು:

ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಬೆವರುವಿಕೆ. ಬೆವರುವಿಕೆಯು ಆಲ್ಕೋಹಾಲ್, ಕೊಲೆಸ್ಟ್ರಾಲ್ ಮತ್ತು ಉಪ್ಪಿನ ಪದಾರ್ಥಗಳನ್ನು ದೇಹದಿಂದ ಹೊರಹಾಕಬಹುದು. ದೇಹವು ಬೆವರನ್ನು ವಾಹಕವಾಗಿ ಬಳಸುವ ಮೂಲಕ ವಿಷವನ್ನು ಬಿಡುಗಡೆ ಮಾಡುತ್ತದೆ. ಬೆವರು ದೇಹವನ್ನು ಕಲ್ಮಶಗಳಿಂದ ಶುದ್ಧೀಕರಿಸುತ್ತದೆ, ಈ ಮೂಲಕ ತ್ವಚೆಯ ರಂಧ್ರ ಮುಚ್ಚಿ, ಮೊಡವೆಗಳು ಮತ್ತು ಕಲೆಗಳಿಂದ ಚರ್ಮವನ್ನು ರಕ್ಷಿಸುತ್ತದೆ.

ಆರ್ಕೈವ್ಸ್ ಆಫ್ ಎನ್ವಿರಾನ್ಮೆಂಟಲ್ ಅಂಡ್ ಕಲುಮಿನೇಷನ್ ಟಾಕ್ಸಿಕಾಲಜಿ ಜರ್ನಲ್‌ನಲ್ಲಿ ಪ್ರಕಟವಾದ 2011 ರ ಅಧ್ಯಯನವು ಬೆವರಿನ ಮೂಲಕ ಅನೇಕ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ ಎಂದು ಕಂಡುಹಿಡಿದಿದೆ. ಪ್ರೇರಿತ ಬೆವರುವಿಕೆಯು ಮಾನವ ದೇಹದಿಂದ ಅನೇಕ ವಿಷಕಾರಿ ಅಂಶಗಳನ್ನು ಹೊರಹಾಕಲು ಸಂಭಾವ್ಯ ವಿಧಾನವಾಗಿದೆ. ಬೆವರಿನ ಪರೀಕ್ಷೆಯು ರಕ್ತ ಅಥವಾ ಮೂತ್ರ ಪರೀಕ್ಷೆಗಿಂತ ಹೆಚ್ಚಾಗಿ ಮಾನವರಲ್ಲಿ ವಿಷಕಾರಿ ಅಂಶಗಳ ಮೇಲ್ವಿಚಾರಣೆಗೆ ಉತ್ತಮ ವಿಧಾನವೆಂದು ಪರಿಗಣಿಸಬಹುದು ಎಂದು ಸಂಶೋಧಕರು ನಂಬಿದ್ದಾರೆ.

3. ಕಿಡ್ನಿ ಸ್ಟೋನ್ ಅಪಾಯ ಕಡಿಮೆ ಮಾಡುವುದು:

3. ಕಿಡ್ನಿ ಸ್ಟೋನ್ ಅಪಾಯ ಕಡಿಮೆ ಮಾಡುವುದು:

ಬೆವರುವಿಕೆ ಉಪ್ಪನ್ನು ಹೊರಹಾಕಲು ಮತ್ತು ನಿಮ್ಮ ಮೂಳೆಗಳಲ್ಲಿ ಕ್ಯಾಲ್ಸಿಯಂ ಅನ್ನು ಉಳಿಸಿಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ. ಇದು ಮೂತ್ರಪಿಂಡಗಳು ಮತ್ತು ಮೂತ್ರದಲ್ಲಿ ಉಪ್ಪು ಮತ್ತು ಕ್ಯಾಲ್ಸಿಯಂನ ಶೇಖರಣೆಯನ್ನು ಮಿತಿಗೊಳಿಸುತ್ತದೆ. ಈ ಮೂಲಕ ಮೂತ್ರಪಿಂಡದಲ್ಲಿ ಕಲ್ಲು ಹುಟ್ಟಿಕೊಳ್ಳುವ ಅಪಾಯ ಕಡಿಮೆ ಮಾಡುವುದು. ಹೆಚ್ಚು ಬೆವರುವ ಜನರು ಹೆಚ್ಚು ನೀರು ಮತ್ತು ದ್ರವವನ್ನು ಕುಡಿಯುವುದು ಸಾಮಾನ್ಯ. ಇದು ಮೂತ್ರಪಿಂಡದ ಕಲ್ಲುಗಳಿಗೆ ಮತ್ತೊಂದು ತಡೆಗಟ್ಟುವ ವಿಧಾನವಾಗಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ 2013 ರ ಅಮೇರಿಕನ್ ಯುರೊಲಾಜಿಕಲ್ ಅಸೋಸಿಯೇಷನ್ ​​​​ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾದ ಅಧ್ಯಯನವು ವಾರಕ್ಕೆ ಒಂದೆರಡು ಗಂಟೆಗಳ ಕಾಲ ನಡೆಯುವುದು ಸಹ ಮೂತ್ರಪಿಂಡದ ಕಲ್ಲುಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ.

4. ಕಾಯಿಲೆಗಳಿಂದ ರಕ್ಷಿಸುವುದು:

4. ಕಾಯಿಲೆಗಳಿಂದ ರಕ್ಷಿಸುವುದು:

ಬೆವರು ಕ್ಷಯರೋಗ ಸೂಕ್ಷ್ಮಜೀವಿಗಳಿಂದ ಮತ್ತು ಇತರ ಅಪಾಯಕಾರಿ ರೋಗಕಾರಕಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ವೈರಸ್‌ಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಪರಿಣಾಮಕಾರಿಯಾದ ಆಂಟಿಮೈಕ್ರೊಬಿಯಲ್ ಪೆಪ್ಟೈಡ್‌ಗಳನ್ನು ಒಳಗೊಂಡಿದೆ. ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ 2013 ರ ಅಧ್ಯಯನವು ಕ್ಷಯರೋಗ ಸೂಕ್ಷ್ಮಜೀವಿಗಳನ್ನು ಮಾತ್ರವಲ್ಲದೇ ಇತರ ಅಪಾಯಕಾರಿ ದೋಷಗಳ ವಿರುದ್ಧ ಹೋರಾಡಲು ಬೆವರುವಿಕೆ ಹೆಚ್ಚು ಪರಿಣಾಮಕಾರಿ ಸಾಧನವಾಗಿದೆ ಎಂದು ಸಾಬೀತುಪಡಿಸಿದೆ. ಈ ನೈಸರ್ಗಿಕ ಪದಾರ್ಥಗಳು ಸಾಂಪ್ರದಾಯಿಕ ಪ್ರತಿಜೀವಕಗಳಿಗಿಂತ ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧಕರು ನಂಬುತ್ತಾರೆ.

5. ತ್ವಚೆಗೆ ಉತ್ತಮ:

5. ತ್ವಚೆಗೆ ಉತ್ತಮ:

ಬೆವರಿದಾಗ ನಿಮ್ಮ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಇದರಿಂದ ಅವುಗಳೊಳಗಿನ ಕೊಳೆಯನ್ನು ಹೊರಹಾಕಲು ಸಹಾಯ ಆಗುತ್ತವೆ. ಈ ಚರ್ಮದ ಪ್ರಯೋಜನಗಳು ಸೌಮ್ಯ ಅಥವಾ ಮಧ್ಯಮ ಬೆವರುವಿಕೆಗೆ ಮಾತ್ರ ಅನ್ವಯಿಸುತ್ತವೆ. ಅಧಿಕ ಬೆವರುವಿಕೆ, ಔಪಚಾರಿಕವಾಗಿ ಹೈಪರ್ಹೈಡ್ರೋಸಿಸ್ ಎಂದು ಕರೆಯಲ್ಪಡುತ್ತದೆ, ಇದು ಚರ್ಮದ ಸೋಂಕುಗಳಿಗೆ ಕಾರಣವಾಗಬಹುದು. ಹೈಪರ್ಹೈಡ್ರೋಸಿಸ್ ಹೊಂದಿರುವ ಜನರಲ್ಲಿ ಎಸ್ಜಿಮಾ ಮತ್ತು ದದ್ದುಗಳು ಹೆಚ್ಚಾಗಿ ಸಂಭವಿಸುತ್ತವೆ. ವಿಪರೀತವಾಗಿ ಬೆವರುವುದನ್ನು ತಪ್ಪಿಸಲು, ಕೆಫೀನ್ ಸೇವನೆ ತಪ್ಪಿಸಿ.

FAQ's
  • ಬೆವರುವಿಕೆ ನಿಮಗೆ ಸ್ಪಷ್ಟವಾದ ಚರ್ಮವನ್ನು ನೀಡುತ್ತದೆಯೇ?

    ಬೆವರು ನೈಸರ್ಗಿಕ ಮತ್ತು ಅಗತ್ಯವಾದ ದೈಹಿಕ ಕಾರ್ಯವಾಗಿದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಜೊತೆಗೆ ತ್ವಚೆಯ ರಂಧ್ರಗಳನ್ನು ತೆರೆಯಲು ಕಾರಣವಾಗುತ್ತದೆ, ಇದು ಅವುಗಳನ್ನು ಉಸಿರಾಡಲು ಮತ್ತು ಕೊಳಕು ಮತ್ತು ಎಣ್ಣೆಯನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಮೊಡವೆ ಉಂಟುಮಾಡುವ ಏಜೆಂಟ್‌ಗಳನ್ನು ನೈಸರ್ಗಿಕವಾಗಿ ತೆಗೆದುಹಾಕುತ್ತದೆ .

     

  • ಬೆವರಿದ ನಂತರ ಮುಖವನ್ನು ತೊಳೆಯಬೇಕೇ?

    ನಿಮ್ಮ ವ್ಯಾಯಾಮದ ನಂತರ, ಮುಖದ ರಂಧ್ರಗಳು ಮುಚ್ಚಿಹೋಗದಂತೆ ತಡೆಯಲು ಬೆವರು ಮತ್ತು ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸಲು ನಿಮ್ಮ ಮುಖವನ್ನು ತೊಳೆಯಬೇಕು. ನಿಮ್ಮ ವ್ಯಾಯಾಮವನ್ನು ಪೂರ್ಣಗೊಳಿಸಿದ 15 ನಿಮಿಷಗಳಲ್ಲಿ ಇದನ್ನು ಮಾಡಿ. ವ್ಯಾಯಾಮದ ನಂತರ ಬೆವರನ್ನು ಹಾಗೆಯೇ ಬಿಡುವುದು ಕಿರಿಕಿರಿ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಏಕೆಂದರೆ ಬೆವರು ಉಪ್ಪನ್ನು ಹೊಂದಿರುತ್ತದೆ.

English summary

Health and Beauty Benefits of Sweating in Kannada

Here we talking about Health and beauty benefits of sweating in kannada, read on
Story first published: Tuesday, January 4, 2022, 16:02 [IST]
X
Desktop Bottom Promotion