For Quick Alerts
ALLOW NOTIFICATIONS  
For Daily Alerts

ಬಾಳೆಕಾಯಿಗಳ ಆರೋಗ್ಯ ಲಾಭಗಳ ಬಗ್ಗೆ ಗೊತ್ತೇ?

|

ನಮ್ಮ ಆರೋಗ್ಯ ವೃದ್ಧಿಯಲ್ಲಿ ಹಣ್ಣುಗಳ ಪಾತ್ರ ಬಹಳಷ್ಟಿದೆ. ಕೇವಲ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟ ಅಚ್ಚುಕಟ್ಟಾಗಿ ಮಾಡಿ ಮಲಗಿದರೆ ನಮ್ಮ ದೇಹದ ಅಂಗಾಂಗಗಳಿಗೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳು ಕೆಲವೊಮ್ಮೆ ಲಭ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಹಣ್ಣುಗಳ ಸೇವನೆ ಅತಿ ಮುಖ್ಯವಾಗುತ್ತದೆ. ಉಪವಾಸ ಮಾಡುವ ಸಮಯದಲ್ಲಿ ಹಣ್ಣುಗಳ ಸೇವನೆಯಿಂದ ನಮ್ಮ ದೇಹಕ್ಕೆ ಉಂಟಾಗುವ ಲಾಭಗಳನ್ನು ನೆನೆಸಿಕೊಂಡರೆ ಹಣ್ಣುಗಳ ಪಾತ್ರ ಎಷ್ಟಿದೆಯೆಂದು ನಿಮಗೆ ಅರಿವಿಗೆ ಬರುತ್ತದೆ.

Green Banana

ಮಾರುಕಟ್ಟೆಗಳಲ್ಲಿ ಲಭ್ಯವಿರುವ ಹಲವಾರು ಜಾತಿಯ ಹಣ್ಣುಗಳಲ್ಲಿ ಬಾಳೆ ಹಣ್ಣು ಎಲ್ಲೆಲ್ಲೂ ಹೆಚ್ಚಾಗಿ ಕಾಣಸಿಗುತ್ತದೆ ಮತ್ತು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಬಾಳೆಹಣ್ಣುಗಳಲ್ಲೂ ಸಹ ಹಲವಾರು ಪ್ರಭೇಧಗಳಿವೆ. ಪಚ್ಚ ಬಾಳೆ, ಚುಕ್ಕಿ ಬಾಳೆ, ಪುಟ್ಟ ಬಾಳೆ, ಕೆಂಪು ಬಾಳೆ, ಹಸಿರು ಬಾಳೆ ಇತ್ಯಾದಿ. ಒಂದೊಂದು ಜಾತಿಯ ಬಾಳೆ ಹಣ್ಣುಗಳಲ್ಲಿ ಒಂದೊಂದು ಬಗೆಯ ಆರೋಗ್ಯ ಪ್ರಯೋಜನಗಳು ನಮ್ಮ ದೇಹಕ್ಕೆ ಲಭ್ಯವಾಗುತ್ತವೆ. ಇಂದು ಈ ಲೇಖನದಲ್ಲಿ ಹಸಿರು ಬಾಳೆಹಣ್ಣುಗಳ ಕುರಿತಾದ ಸಮಗ್ರ ಮಾಹಿತಿ ಲಭ್ಯವಿದೆ.
ಹಳದಿ ಬಾಳೆಹಣ್ಣಿಗೂ ಹಸಿರು ಬಾಳೆಹಣ್ಣಿಗೂ ಇರುವ ವ್ಯತ್ಯಾಸಗಳು : -

ಹಳದಿ ಬಾಳೆಹಣ್ಣಿಗೂ ಹಸಿರು ಬಾಳೆಹಣ್ಣಿಗೂ ಇರುವ ವ್ಯತ್ಯಾಸಗಳು : -

• ಹಳದಿ ಮತ್ತು ಹಸಿರು ಬಾಳೆಹಣ್ಣುಗಳು ತಮ್ಮ ರುಚಿ ಗಾತ್ರ ಮತ್ತು ಬಣ್ಣಗಳಲ್ಲಿ ವ್ಯತ್ಯಾಸ ಹೊಂದಿರುತ್ತವೆ. ಜೊತೆಗೆ ತಮ್ಮಲ್ಲಿನ ಪೌಷ್ಟಿಕಾಂಶಗಳಲ್ಲಿ ಸಹ ಬೇರೆ ವೈಶಿಷ್ಟ್ಯಗಳನ್ನು ಪಡೆದಿರುತ್ತವೆ.

• ಬಾಳೆಕಾಯಿಯಲ್ಲಿ ಕಾಯಿಯಿಂದ ಹಣ್ಣಿಗೆ ತಿರುಗಿದಾಗ ಅದರ ಬಣ್ಣ ಹಸಿರಿನಿಂದ ಹಳದಿಯಾಗುತ್ತದೆ.

• ಹಳದಿ ಬಾಳೆಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ತಿನ್ನಲು ಸಿಹಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಹಸಿರು ಬಾಳೆಹಣ್ಣು ರುಚಿಯಲ್ಲಿ ಸ್ವಲ್ಪ ಕಹಿ ಇರುತ್ತದೆ.

• ಹಳದಿ ಬಾಳೆಹಣ್ಣು ಹಣ್ಣಾದಂತೆ ಬಾಳೆಹಣ್ಣಿನ ಸಿಪ್ಪೆ ಸಹ ಮೆತ್ತಗಾಗುತ್ತದೆ. ಆದರೆ ಹಸಿರು ಬಾಳೆಹಣ್ಣಿನ ಸಿಪ್ಪೆ ದೃಢವಾಗಿರುತ್ತದೆ ಮತ್ತು ಒಳಗಿನ ಹಣ್ಣು ಮೇಣದಂತೆ ಗಟ್ಟಿಯಾಗಿರುತ್ತದೆ.

• ಬಾಳೆಕಾಯಿಯಲ್ಲಿ ಹೆಚ್ಚಿನ ಮಟ್ಟದ ನಾರಿನ ಅಂಶ ಮತ್ತು ಪ್ರತಿರೋಧಕ ಸ್ಟಾರ್ಚ್ ಅಂಶವಿರುತ್ತದೆ. ಆದರೆ ಹಳದಿ ಬಾಳೆಹಣ್ಣಿನಲ್ಲಿ ಇದೇ ಅಂಶಗಳು ಸಕ್ಕರೆ ಅಂಶಗಳಾಗಿ ಬದಲಾಗಿರುತ್ತವೆ.

ಹಸಿರು ಬಾಳೆಹಣ್ಣಿನಲ್ಲಿರುವ ಪೌಷ್ಟಿಕ ಸತ್ವಗಳನ್ನು ನೋಡುವುದಾದರೆ....

ಹಸಿರು ಬಾಳೆಹಣ್ಣಿನಲ್ಲಿರುವ ಪೌಷ್ಟಿಕ ಸತ್ವಗಳನ್ನು ನೋಡುವುದಾದರೆ....

ಹಸಿರು ಬಾಳೆಹಣ್ಣಿಗೂ ಹಳದಿ ಬಾಳೆಹಣ್ಣಿಗೂ ಪೌಷ್ಟಿಕ ಸತ್ವಗಳಲ್ಲಿ ಕೆಲವೊಂದು ವ್ಯತ್ಯಾಸವಿದ್ದು, ಇವುಗಳು ಸ್ಥಳೀಯ ಉತ್ಪತ್ತಿ, ಹಣ್ಣಾಗುವ ಹಂತ ಮತ್ತು ಬೆಳವಣಿಗೆಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ. ಒಂದು ಮಧ್ಯಮ ಗಾತ್ರದ ಹಸಿರು ಬಾಳೆಹಣ್ಣಿನಲ್ಲಿ 2 ರಿಂದ 3 ಗ್ರಾಂ ನಾರಿನ ಅಂಶವಿದ್ದು ಸುಮಾರು ಶೇಕಡ 80 % ಕಾರ್ಬೋಹೈಡ್ರೇಟ್ ಅಂಶವಿರುತ್ತದೆ. ಇದರ ಜೊತೆಗೆ ಪ್ರತಿರೋಧಕ ಸ್ಟಾರ್ಚ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳಿರುತ್ತವೆ.

ಇನ್ನು 100 ಗ್ರಾಂ ತೂಕವುಳ್ಳ ಹಸಿರು ಅಥವಾ ಹಳದಿ ಬಾಳೆಹಣ್ಣಿನಲ್ಲಿ ಈ ಕೆಳಕಂಡ ಪೌಷ್ಟಿಕ ಸತ್ವಗಳನ್ನು ಗಮನಿಸಬಹುದು : -

• ನಾರಿನ ಅಂಶ -------> 2.6 ಗ್ರಾಂ

• ಕಾರ್ಬೋಹೈಡ್ರೇಟ್ ಅಂಶ -------> 22.84 ಗ್ರಾಂ

• ಪೊಟ್ಯಾಶಿಯಂ ಅಂಶ --------> 358 ಗ್ರಾಂ

• ಕ್ಯಾಲ್ಸಿಯಂ ಅಂಶ -------> 5 ಗ್ರಾಂ

• ಮೆಗ್ನೀಷಿಯಂ ಅಂಶ -------> 27 ಗ್ರಾಂ

• ಲ್ಯೂಟೀನ್ ಮತ್ತು ಜಿಕ್ಸನ್ಥಿನ್ -----> 22 ಮೈಕ್ರೊಗ್ರಾಮ್

• ಫೋಲೇಟ್ ------> 20 ಮೈಕ್ರೊಗ್ರಾಮ್

• ವಿಟಮಿನ್ ' ಸಿ ' ಅಂಶ -------> 8.7 ಮಿಲಿ ಗ್ರಾಂ

ಈ ಎಲ್ಲಾ ಪೌಷ್ಟಿಕ ಸತ್ವಗಳ ಜೊತೆಗೆ ಪ್ರತಿರೋಧಕ ಸ್ಟಾರ್ಚ್, ಇನ್ನಿತರ ಖನಿಜಾಂಶಗಳು ಮನುಷ್ಯನ ಆರೋಗ್ಯಕ್ಕೆ ಬಹಳಷ್ಟು ಉತ್ತಮ ಪ್ರಯೋಜನಗಳನ್ನು ಒದಗಿಸಿಕೊಡುತ್ತವೆ.

ಹಾಗಾದರೆ ಬಾಳೆಕಾಯಿ ತಿನ್ನುವುದರಿಂದ ಮನುಷ್ಯನಿಗೆ ಏನೆಲ್ಲ ಉಪಯೋಗವಾಗುತ್ತದೆ ಎಂಬುದನ್ನು ಈಗ ನೋಡೋಣ.

1. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ : -

1. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ : -

ಸರಳವಾಗಿ ಹೇಳಬೇಕೆಂದರೆ ಹಿರಿಯರ ಮಾತಿನಂತೆ ಊಟ ಮಾಡಿದ ನಂತರ ಒಂದು ಬಾಳೆಹಣ್ಣು ತಿನ್ನುವುದು ಎಲ್ಲರಿಗೂ ರೂಢಿಯಲ್ಲಿ ಬೆಳೆದುಬಂದಿದೆ. ಇದಕ್ಕೆ ಕಾರಣ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಲೀ ಎಂದು ಹಳದಿ ಬಾಳೆಹಣ್ಣು ಈ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಆದರೆ ಬಾಳೆಕಾಯಿಗಳು ತಮ್ಮಲ್ಲಿನ ಹೆಚ್ಚಿನ ನಾರಿನ ಅಂಶದಿಂದ ಮಲಬದ್ಧತೆಯ ರೋಗಲಕ್ಷಣಗಳು ಸೇರಿದಂತೆ ಇರಿಟೇಬಲ್ ಬೋವಲ್ ಸಿಂಡ್ರೋಮ್ ( ಐಬಿಎಸ್ ) ಸಮಸ್ಯೆಯನ್ನು ಮತ್ತು ಇನ್ನಿತರ ಕರುಳಿಗೆ ಸಂಬಂಧಪಟ್ಟ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ.

ಹಸಿರು ಬಾಳೆಹಣ್ಣಿನಲ್ಲಿರುವ ಪೌಷ್ಟಿಕ ಸತ್ವಗಳು ಮಲವನ್ನು ಒಂದೇ ಕಡೆ ಶೇಖರಣೆ ಮಾಡಿ ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತವೆ. ಇದರಿಂದ ಸರಾಗವಾಗಿ ಮನುಷ್ಯನ ದೇಹದಲ್ಲಿ ಜೀರ್ಣಕ್ರಿಯೆ ನಡೆದು ಮಲಬದ್ಧತೆಯ ಸಮಸ್ಯೆ ಇಲ್ಲವಾಗುತ್ತದೆ. ಕರುಳಿನ ಕ್ಯಾನ್ಸರ್ ವಿಷಯದಲ್ಲಿ ಕೂಡ ಇದು ಅತ್ಯಂತ ಒಳ್ಳೆಯ ಪರಿಣಾಮ ಬೀರುತ್ತದೆ.

ಕರುಳಿನಲ್ಲಿ ಅತ್ಯಂತ ಸಂಕೀರ್ಣ ಕಾರ್ಬೋಹೈಡ್ರೇಟ್ ಅಂಶಗಳಿಂದ ಮಾಡಲ್ಪಟ್ಟ ಪ್ರತಿರೋಧಕ ಸ್ಟಾರ್ಚ್ ಅಂಶಗಳನ್ನು ತುಂಡರಿಸಿ ಕರುಳಿನಲ್ಲಿ ವಾಸವಿರುವ ಮನುಷ್ಯನಿಗೆ ಉಪಯೋಗವಾಗುವ ಸೂಕ್ಷ್ಮಣುಗಳಿಗೆ ಪ್ರೀಬಯೋಟಿಕ್ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತದೆ. ಕರುಳಿನಲ್ಲಿ ವಾಸವಿರುವ ಬ್ಯಾಕ್ಟೀರಿಯಗಳು ಈ ಫೈಬರ್ ಅಂಶವನ್ನು ಉಪಯೋಗಿಸಿಕೊಂಡು ಮನುಷ್ಯನ ದೇಹಕ್ಕೆ ಉಪಯೋಗವಾಗುವ ಪೌಷ್ಟಿಕಾಂಶ ಗಳನ್ನಾಗಿ ಪರಿವರ್ತನೆ ಮಾಡುತ್ತವೆ ಉದಾಹರಣೆಗೆ ಶಾರ್ಟ್ ಚೈನ್ ಫ್ಯಾಟಿ ಆಸಿಡ್ ಗಳಾದ ಬ್ಯೂಟಿರೇಟ್

ಬಾಳೆಕಾಯಿಗಳು ಬೇಧಿ ಮತ್ತು ಮಲಬದ್ಧತೆಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ. ಸಂಶೋಧನೆಗಳು ನಡೆಸಿದ ಅಧ್ಯಯನದಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುವ ವಿಪರೀತ ಭೇಧಿ ಸಮಸ್ಯೆಗೆ ಹಸಿರು ಬಾಳೆ ಹಣ್ಣುಗಳು ಔಷಧಿಯ ರೀತಿ ಕೆಲಸ ಮಾಡಿ ಬೇಧಿ ತಟ್ಟನೆ ನಿಲ್ಲುವಂತೆ ಮಾಡುತ್ತವೆ. ಕೆಲವೊಂದು ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಬಾಳೆಕಾಯಿಗಳು ಹೊಟ್ಟೆಯಲ್ಲಿನ ಅಲ್ಸರ್ ಸಮಸ್ಯೆಗೆ ಚಿಕಿತ್ಸೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತವೆ ಎಂಬ ಅಂಶ ಬೆಳಕಿಗೆ ಬಂದಿದೆ.

2. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು : -

2. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು : -

ಯಾವುದೇ ಹಣ್ಣುಗಳು ಅದರಲ್ಲೂ ವಿಶೇಷವಾಗಿ ಇಲ್ಲಿನ ಬಾಳೆಕಾಯಿಗಳು ತಮ್ಮಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ವನ್ನು ಹೊಂದಿರುತ್ತವೆ ಅಂದರೆ ಸರಿಸುಮಾರು 30. ಆದ್ದರಿಂದ ಅವುಗಳನ್ನು ತಿನ್ನುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸುಲಭವಾಗಿ ಮನುಷ್ಯ ತನ್ನ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿರ್ವಹಣೆ ಮಾಡಬಹುದು.

ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶ ಎಂದರೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿರುವ ಯಾವುದೇ ಆಹಾರಗಳು ತಮ್ಮಲ್ಲಿನ ಸಕ್ಕರೆ ಅಂಶಗಳನ್ನು ದೇಹದ ರಕ್ತ ಸಂಚಾರದಲ್ಲಿ ನಿಧಾನವಾಗಿ ಬಿಡುಗಡೆಗೊಳಿಸುತ್ತವೆ.

ಮನುಷ್ಯನ ದೇಹದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗುವ ಸಕ್ಕರೆ ಮಟ್ಟ ಮಧುಮೇಹದ ಸಮಸ್ಯೆಯನ್ನು ಹೆಚ್ಚು ಮಾಡಿ ದೇಹದಲ್ಲಿ ಇನ್ನಿತರ ಮೆಟಬಾಲಿಕ್ ಪ್ರಕ್ರಿಯೆಗಳ ತೊಂದರೆಗೆ ಕಾರಣವಾಗಿ ಹೃದಯ ರಕ್ತನಾಳದ ಕಾಯಿಲೆಯನ್ನು ತಂದೊಡ್ಡುತ್ತದೆ. ಹಾಗಾಗಿ ಮಧುಮೇಹ ಹೊಂದಿರುವ ರೋಗಿಗಳಿಗೆ ವೈದ್ಯರು ಹಳದಿ ಬಣ್ಣಕ್ಕಿಂತಲೂ ಸಾಧ್ಯವಾದಷ್ಟು ಹಸಿರು ಬಣ್ಣದ ಬಾಳೆ ಹಣ್ಣುಗಳನ್ನು ತಿನ್ನಲು ಸೂಚಿಸುತ್ತಾರೆ.

ಹಸಿರು ಬಾಳೆಹಣ್ಣಿನಲ್ಲಿ ಇರುವ ಪೆಕ್ಟಿನ್ ಮತ್ತು ಪ್ರತಿರೋಧಕ ಸ್ಟಾರ್ಚ್ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ಸರಿಯಾಗಿ ನಿಯಂತ್ರಣ ಮಾಡುವುದರಲ್ಲಿ ತಮ್ಮ ಮೇಲುಗೈ ಸಾಧಿಸಿವೆ. ಇದು ಮಧುಮೇಹ ಹೊಂದಿರುವವರಿಗೆ ವಿಶೇಷವಾಗಿ ಇನ್ಸುಲಿನ್ ಮೆಟಬಾಲಿಸಂ ಪ್ರಕ್ರಿಯೆಯನ್ನು ಸುಲಭ ಮಾಡಿಕೊಡುತ್ತದೆ.

ಈ ವಿಷಯವಾಗಿ ನಡೆಸಿದ ಇನ್ನೊಂದು ಅಧ್ಯಯನದಲ್ಲಿ ಬಾಳೆಕಾಯಿಗಳು ಮತ್ತು ಅವುಗಳ ಆಹಾರ ಪದಾರ್ಥಗಳು ಅಂದರೆ ಬಾಳೆಕಾಯಿ ಹಿಟ್ಟು ಅಥವಾ ಸ್ಟಾರ್ಚ್ ಮನುಷ್ಯನ ದೇಹದ ಇನ್ಸುಲಿನ್ ಸೂಕ್ಷ್ಮತೆಯನ್ನು ಅಭಿವೃದ್ಧಿಗೊಳಿಸುತ್ತದೆ.

3. ತೂಕ ಕಡಿಮೆ ಮಾಡುತ್ತದೆ : -

3. ತೂಕ ಕಡಿಮೆ ಮಾಡುತ್ತದೆ : -

ಮೊದಲೇ ಹೇಳಿದಂತೆ ಬಾಳೆಕಾಯಿಗಳು ತಮ್ಮಲ್ಲಿ ಅತಿಹೆಚ್ಚಿನ ಫೈಬರ್ ಮತ್ತು ಪ್ರತಿರೋಧಕ ಸ್ಟಾರ್ಚ್ ಅಂಶವನ್ನು ಹೊಂದಿವೆ. ಈ ಕಾರಣದಿಂದ ಬಾಳೆಕಾಯಿ ಸೇವನೆಯ ನಂತರ ಹೊಟ್ಟೆ ಹಸಿವು ದೂರವಾಗುತ್ತದೆ. ಹೆಚ್ಚಿನ ಸಮಯದವರೆಗೂ ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ಇದರಿಂದ ದೇಹದ ತೂಕ ತಾನಾಗಿಯೇ ತಗ್ಗುತ್ತದೆ.

ಬಾಳೆಕಾಯಿ ಗಳಲ್ಲಿ ಕಂಡುಬರುವ ಪೆಕ್ಟಿನ್ ಅಂಶ ಹೊಟ್ಟೆ ತುಂಬುವಂತೆ ಮಾಡಿ ದೀರ್ಘಕಾಲ ಹಸಿ ವಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ನಾರಿನ ಅಂಶ ಊಟ ಮಾಡಿದಷ್ಟು ಹೊಟ್ಟೆಗೆ ತೃಪ್ತಿ ಕೊಡುತ್ತದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಊಟ ಮಾಡುವ ಅವಶ್ಯಕತೆ ಇರುವುದಿಲ್ಲ. ಮನುಷ್ಯನ ದೇಹ ದಿನದ ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲೋರಿಗಳನ್ನು ಸ್ವೀಕರಿಸುತ್ತಾ ಹೋದರೆ ದೇಹದ ತೂಕ ಹೆಚ್ಚಾಗಲು ಪ್ರಾರಂಭವಾಗುತ್ತದೆ.

ಬಾಳೆಕಾಯಿಗಳಲ್ಲಿ ಅಡಕವಾಗಿರುವ ನಾರಿನ ಅಂಶ ಮನುಷ್ಯನಿಗೆ ಬೊಜ್ಜು ಬರದಂತೆ ನೋಡಿಕೊಳ್ಳುತ್ತದೆ. ಪ್ರತಿರೋಧಕ ಸ್ಟಾರ್ಚ್ ಅಂಶ ದೇಹದ ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಯಾವುದಾದರೂ ಮಸಾಲೆಭರಿತ ಆಹಾರಗಳನ್ನು ಅಥವಾ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸಿದ ಸಮಯದಲ್ಲಿ ಬಾಳೆಕಾಯಿಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಂಡರೆ ಜೀರ್ಣ ಪ್ರಕ್ರಿಯೆಯಲ್ಲಿ ಉಂಟಾಗುವ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡಿ ಬೊಜ್ಜಿನ ಸಮಸ್ಯೆಯನ್ನು ಇಲ್ಲದಂತೆ ಮಾಡಿಕೊಳ್ಳಬಹುದು.

ಹಸಿರು ಬಾಳೆ ಹಣ್ಣಿನ ಹಿಟ್ಟು ಹೊಟ್ಟೆ ಹಸಿವನ್ನು ತಗ್ಗಿಸಿ ಗ್ಲುಕೋಸ್ ಹೋಮಿಯೋಸ್ಟಾಸಿಸ್ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಹಸಿರು ಬಾಳೆಹಣ್ಣಿನ ಹಿಟ್ಟಿನಲ್ಲಿ ಕಡಿಮೆ ಪ್ರಮಾಣದ ಘರೆಲಿನ್ ( ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವ ಹಾರ್ಮೋನ್ ) ಅಂಶಗಳಿದ್ದು ದೇಹದಲ್ಲಿ ಇನ್ಸುಲಿನ್ ಮಟ್ಟಗಳನ್ನು ನಿಯಂತ್ರಿಸುವಂತ ಗುಣ ಲಕ್ಷಣವಿದೆ.

ಒಂದು ಅಧ್ಯಯನ ತನ್ನ ವರದಿಯಲ್ಲಿ ಹೀಗೆ ಹೇಳಿದೆ. ಏನೆಂದರೆ ಯಾವ ಮಹಿಳೆಯರು ತಮ್ಮ ದೇಹದ ತೂಕವನ್ನು ಹೆಚ್ಚಾಗಿ ಹೊಂದಿದ್ದರೋ ಅವರಲ್ಲಿ ಹಸಿರು ಬಾಳೆ ಹಣ್ಣಿನ ಹಿಟ್ಟನ್ನು ನಿತ್ಯ ನಿಯಮಿತವಾಗಿ ಸೇವಿಸುತ್ತಾ ಬಂದ ಮೇಲೆ ಲಿಪಿಡ್ ಪ್ರೊಫೈಲ್ ಮತ್ತು ದೇಹದ ಹಲವಾರು ಆರೋಗ್ಯಕರ ಅಂಶಗಳು ಉತ್ತಮಗೊಂಡಿದ್ದು ಕಂಡುಬಂದಿದೆ. ಉರಿಯೂತದ ಸಮಸ್ಯೆ ಹೊಂದಿರುವವರು ಹಸಿರು ಬಾಳೆ ಹಿಟ್ಟನ್ನು ಸೇವಿಸಬಹುದು ಏಕೆಂದರೆ ಇದರಲ್ಲಿ ಉರಿಯೂತದ ವಿರುದ್ಧ ಹೋರಾಡುವ ಗುಣಲಕ್ಷಣಗಳಿವೆ.

4. ಹೃದಯ ರಕ್ತನಾಳದ ಆರೋಗ್ಯವನ್ನು ಬಲಪಡಿಸುತ್ತದೆ : -

4. ಹೃದಯ ರಕ್ತನಾಳದ ಆರೋಗ್ಯವನ್ನು ಬಲಪಡಿಸುತ್ತದೆ : -

ಅಲ್ಲಿ ಉಂಟಾಗುವ ಮೆಟಬಾಲಿಕ್ ಅಸ್ವಸ್ಥತೆ ಗಳಿಂದ ಹೃದಯ ರಕ್ತನಾಳದ ಕಾಯಿಲೆಗಳು ಮನುಷ್ಯನನ್ನು ಕಿತ್ತು ತಿನ್ನುತ್ತವೆ. ಇದಕ್ಕೆ ಜೊತೆಯಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳು ಅಂದರೆ ಬೊಜ್ಜು ಮಧುಮೇಹ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮನುಷ್ಯನ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ.

ಹಸಿಯಾದ ಬಾಳೆಕಾಯಿಗಳಲ್ಲಿ ಪ್ರತಿರೋಧಕ ಸ್ಟಾರ್ಚ್ ಅಂಶ ಬಹಳಷ್ಟಿದೆ ಪ್ರಾಣಿಗಳ ಅಧ್ಯಯನ ನಡೆಸಿದ ಸಂಶೋಧನೆಯೊಂದು ಪ್ರತಿರೋಧಕ ಸ್ಟಾರ್ಚ್ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಗುಣಲಕ್ಷಣ ಪಡೆದಿದೆ ಎಂದು ಹೇಳಿದೆ ಕಡಿಮೆ ಕೊಲೆಸ್ಟ್ರಾಲ್ ಮಟ್ಟ ಹೊಂದಿರುವ ವ್ಯಕ್ತಿಗೆ ಹೃದಯಕ್ಕೆ ಮತ್ತು ಹೃದಯ ರಕ್ತನಾಳಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ತೀರಾ ಕಡಿಮೆ ಇರುತ್ತವೆ.

ಇನ್ನು ಮಧುಮೇಹದ ಸಮಸ್ಯೆ ಎದುರಿಸುತ್ತಿರುವವರಿಗೆ ಮೇಲೆ ಹೇಳಿದಂತೆ ಬಾಳೆಕಾಯಿಗಳು ಅವರ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ತಗ್ಗಿಸುತ್ತವೆ. ಆದ್ದರಿಂದ ವೈದ್ಯರ ಸೂಚನೆ ಪಡೆದು ಅವರು ನಿಗದಿಪಡಿಸಿದಂತೆ ಮಧುಮೇಹಿಗಳು ಹಸಿರು ಬಾಳೆ ಹಣ್ಣು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬಹುದು.

ಬಾಳೆಕಾಯಿ ಗಳಲ್ಲಿ ಪಟಾಕಿ ವಂಶ ಹೇರಳವಾಗಿದ್ದು ಇದು ದೇಹದಲ್ಲಿ ರಕ್ತಸಂಚಾರವನ್ನು ಸುಗಮಗೊಳಿಸಿ ದೇಹದ ಅತಿಯಾದ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿ ಸಾಮಾನ್ಯ ಮಟ್ಟಕ್ಕೆ ತರುತ್ತದೆ ಹಲವಾರು ಮಂದಿಗೆ ಬಾಳೆಕಾಯಿಗಳು ಆರೋಗ್ಯಕ್ಕೆ ಬಹಳಷ್ಟು ಸಹಕಾರಿ ಎಂದು ಸಾಬೀತಾಗಿದೆ ಆದರೂ ಕೆಲವರು ಅವುಗಳನ್ನು ಸೇವಿಸಲು ಅನರ್ಹರಾಗಿರುತ್ತಾರೆ.

ಬಾಳೆಕಾಯಿಗಳ ಸೇವನೆಯಿಂದ ಅಡ್ಡ ಪರಿಣಾಮಗಳಿವೆಯೇ?

ಬಾಳೆಕಾಯಿಗಳ ಸೇವನೆಯಿಂದ ಅಡ್ಡ ಪರಿಣಾಮಗಳಿವೆಯೇ?

ಬಾಳೆಕಾಯಿಗಳು ತಿನ್ನಲು ಸುರಕ್ಷಿತ ಎಂದು ಹಲವಾರು ಸಂಶೋಧನೆಗಳು ಹೇಳಿದೆ ಆದರೂ ಕೆಲವರು ಆರೋಗ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ,

ಯಾರಿಗೆ ಹೊಟ್ಟೆಯಲ್ಲಿ ಅಲರ್ಜಿ ಸಮಸ್ಯೆ ಇದ್ದು ಹೊಸದಾಗಿ ಏನೇ ಆಹಾರ ತಿಂದರೂ ಜೀರ್ಣವಾಗದೆ ವಾಕರಿಕೆ, ವಾಂತಿಯಂತಹ ಸಮಸ್ಯೆಯನ್ನು ಎದುರಿಸುತ್ತಾರೋ ಅಂತಹವರು ಹಸಿರು ಬಾಳೆ ಹಣ್ಣುಗಳಿಂದ ದೂರವಿದ್ದರೆ ಒಳ್ಳೆಯದು. ಏಕೆಂದರೆ ಇವರಿಗೆ ಹಸಿರು ಬಾಳೆ ಹಣ್ಣುಗಳನ್ನು ತಿನ್ನುವುದರಿಂದ ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿ ಹೊಟ್ಟೆ ಉಬ್ಬರಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಬಾಳೆಕಾಯಿಗಳು ದೇಹ ಸೇರಿದ ನಂತರ ಒಂದೇ ಬಗೆಯ ಪ್ರೋಟೀನ್ ಅಂಶಗಳನ್ನು ಹೆಚ್ಚಾಗಿ ಉತ್ಪಾದನೆ ಮಾಡುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲೇಟೆಕ್ಸ್ ಫ್ರೂಟ್ ಸಿಂಡ್ರೋಮ್ ಎಂದು ಕರೆಯುತ್ತಾರೆ

ಆದರೆ ಕೆಲವೊಂದು ಪ್ರಕರಣಗಳಲ್ಲಿ ಹಣ್ಣುಗಳಿಗೆ ಅಲರ್ಜಿ ಹೊಂದಿರುವವರಿಗೆ ಬಾಳೆಕಾಯಿಗಳು ಅಲರ್ಜಿ ಪರಿಣಾಮಗಳನ್ನು ತಗ್ಗಿಸುತ್ತವೆ ಎಂಬ ಮಾತಿದೆ.

English summary

Green Banana Nutrition Facts and Health Benefits

Here are green banana health benefits and nutrition facts, read on.
X
Desktop Bottom Promotion