For Quick Alerts
ALLOW NOTIFICATIONS  
For Daily Alerts

ಕೋವಿಡ್ 19: ರೋಗ ನಿರೋಧಕ ಸಾಮಾರ್ಥ್ಯ ಹೆಚ್ಚಲು FSSAI ಸೂಚಿಸಿದ ಆಹಾರಗಳು

|

ಕೊರೊನಾವೈರಸ್ ಇದು ಬಂದಾಗಿನಿಂದ ಜನರ ಜೀವನಶೈಲಿ, ಆಹಾರಶೈಲಿ ಬದಲಾಗಿದೆ. ಜನರು ಆಹಾರದ ವಿಚಾರದಲ್ಲಿ ತುಂಬಾ ಎಚ್ಚರಿಕೆವಹಿಸುತ್ತಿದ್ದಾರೆ, ಅದರಲ್ಲೂ ಇಮ್ಯೂನಿಟಿ ಬೂಸ್ಟ್ ಅಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

Covid 19 Immunity Boost Foods Recomnended By FSSAI

ಇನ್ನು ಭಾರತದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕೂಡ ವಿಟಮಿನ್ ಸಿ ಇರುವ ಆಹಾರಗಳನ್ನು ತಿನ್ನುವಂತೆ ಸಲಹೆ ನೀಡಿದೆ. ವಿಟಮಿನ್‌ ಸಿ ಆಹಾರಗಳು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ವಿಟಮಿನ್ ಸಿ ಅಧಿಕವಿರುವ ಆಹಾರಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ತ್ವಚೆ ಕೂಡ ಸುಂದರವಾಗಿರುತ್ತದೆ ಎಂದು ಟ್ವೀಟ್‌ ಮಾಡಿರುವ FSSAI ಯಾವೆಲ್ಲಾ ಆಹಾರಗಳನ್ನು ತಿನ್ನಬೇಕು ಎಂಬ ಪಟ್ಟಿ ನೀಡಿದೆ ನೋಡಿ:

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿಯಲ್ಲಿ ಅನೇಕ ಆರೋಗ್ಯವರ್ಧಕ ಗುಣಗಳಿವೆ. ನೆಲ್ಲಿಕಾಯಿ ತಿನ್ನುವುದರಿಂದ ರಕ್ತ ಶುದ್ಧವಾಗುವುದು, ಅಲ್ಲದೆ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುವುದು ಎಂದು 2020ರಲ್ಲಿ Contemporary Clinical Trials Communications ಜರ್ನಲ್‌ನಲ್ಲಿ ಪ್ರಕಟವಾದ ವರದಿ ಹೇಳಿದೆ.

ದಿನದಲ್ಲಿ ಒಂದು ನೆಲ್ಲಿಕಾಯಿ ತಿನ್ನಿ ಅಥವಾ ಆಮ್ಲ ಜ್ಯೂಸ್‌ ಕೂಡ ಕುಡಿಯಬಹುದು. ನೆಲ್ಲಿಕಾಯಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆಯಾಗುವುದು.

 ಕಿತ್ತಳೆ:

ಕಿತ್ತಳೆ:

ಕಿತ್ತಳೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಪ್ರಮಾಣ ಕಡಿಮೆಯಿದ್ದು, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಇದರಲ್ಲಿ ನಾರಿನಂಶ, ವಿಟಮಿನ್ಸ್, ಫೋಲೆಟ್, ಪೊಟಾಷ್ಯಿಯಂ ಅಧಿಕವಿದೆ. ಕಿತ್ತಳೆಯಲ್ಲಿರುವ ವಿಟಮಿನ್‌ ಸಿ ದೇಹವನ್ನು ಇತರ ರೋಗಗಳಿಂದ ರಕ್ಷಣೆ ಮಾಡುತ್ತದೆ.

ಕಿತ್ತಳೆಯನ್ನು ಹಾಗೇ ತಿನ್ನಿ, ಇಲ್ಲಾ ಜ್ಯೂಸ್‌ ಮಾಡಿ ಕುಡಿಯಬಹುದು.

ಪಪ್ಪಾಯಿ:

ಪಪ್ಪಾಯಿ:

ಕಿತ್ತಳೆಯಷ್ಟೇ ಪಪ್ಪಾಯಿ ಕೂಡ ತುಂಬಾ ಆರೋಗ್ಯಕರ. ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ, ಇನ್ನು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಪಪ್ಪಾಯಿ ತಿನ್ನುವುದರಿಂದ ತ್ವಚೆ ಕೂಡ ಚೆನ್ನಾಗಿರುತ್ತದೆ. ಬೆಳಗ್ಗೆ ಒಂದು ಬೌಲ್ ಪಪ್ಪಾಯಿ ಹಣ್ಣು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.

 ಕ್ಯಾಪ್ಸಿಕಂ

ಕ್ಯಾಪ್ಸಿಕಂ

ಕ್ಯಾಪ್ಸಿಕಂನಲ್ಲಿ ವಿಟಮಿನ್ ಸಿ ಅಧಿಕವಿದೆ, ಅಲ್ಲದೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ಕ್ಯಾಪ್ಸಿಕಂ, ವಿಟಮಿನ್ ಇ, ವಿಟಮನ್ ಎ, ನಾರಿನಂಶ, ಖನಿಜಾಂಶ, ಫೋಲೆಟ್, ಪೊಟಾಷ್ಯಿಯಂ ಅಂಶವಿದೆ. ಕ್ಯಾಪ್ಸಿಕಂ ರಕ್ತಹೀನತೆ ತಡೆಗಟ್ಟುತ್ತದೆ, ಅಲ್ಲದೆ ಇದರಲ್ಲಿ ವಿಟಮಿನ್‌ ಸಿ ಇದ್ದು, ಇದು ಆಹಾರದಲ್ಲಿರುವ ಕಬ್ಬಿಣದಂಶ ನಮ್ಮ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

 ಸೀಬೆಕಾಯಿ

ಸೀಬೆಕಾಯಿ

ನಿಮ್ಮ ಆಹಾರದಲ್ಲಿ ಸೀಬೆಕಾಯಿ ತಪ್ಪದೇ ಸೇರಿಸಿ, ಏಕೆಂದರೆ ಸೀಬೆಕಾಯಿ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವಲ್ಲಿ ತುಂಬಾನೇ ಸಹಕಾರಿ, ಅಲ್ಲದೆ ಹೊಟ್ಟೆ ಸಂಬಂಧಿಸಿ ಸಮಸ್ಯೆಗಳನ್ನು ತಡೆಗಟ್ಟುತ್ತದೆ, ಹೃದಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಪೊಟಾಷ್ಯಿಯಂ ಹಾಗೂ ನಾರಿನಂಶವಿದೆ. ಆದ್ದರಿಂದ ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಕೂಡ ಸೀಬೆಕಾಯಿ ಪರಿಣಾಮಕಾರಿಯಾಗಿದೆ.

 ನಿಂಬೆಹಣ್ಣು

ನಿಂಬೆಹಣ್ಣು

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯುವ ಅಭ್ಯಾಸ ತುಂಬಾನೇ ಒಳ್ಳೆಯದು. ಇದರಿಂದ ತೂಕ ನಿಯಂತ್ರಣವಾಗುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ನಿಂಬೆರಸ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೆ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ತಡಗಟ್ಟುವಲ್ಲಿಯೂ ಸಹಕಾರಿ. ನಿಂಬೆರಸ ದೇಹದಲ್ಲಿ pH ಪ್ರಮಾಣ ನಿಯಂತ್ರಣದಲ್ಲಿಡುತ್ತದೆ.

English summary

FSSAI Recommended Foods to Boost Immunity Against Covid-19

FSSAI has suggested to include vitamin c foods in your diet and recommended these foods, read on.
Story first published: Monday, August 3, 2020, 15:48 [IST]
X
Desktop Bottom Promotion