For Quick Alerts
ALLOW NOTIFICATIONS  
For Daily Alerts

ಆಯುಸ್ಸು ವೃದ್ಧಿಗೆ ದಿನಾ 2 ಬಗೆ ಹಣ್ಣು 3ಬಗೆ ತರಕಾರಿ ಸೇವಿಸಿ: ಅಧ್ಯಯನ

|

ಈಗ ಎಲ್ಲರೂ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಿದ್ದಾರೆ, ಆರೋಗ್ಯವಾಗಿರಲು ಏನು ಮಾಡಬೇಕು, ಯಾವ ರೀತಿಯ ಆಹಾರಶೈಲಿ ರೂಢಿಸಿಕೊಳ್ಳಬೇಕು ಇವೆಲ್ಲಾ ತಿಳಿದುಕೊಳ್ಳಲು ಬಯಸುತ್ತಿದ್ದಾರೆ.

ಕೋವಿಡ್‌ 19 ಅಲೆ ಹೆಚ್ಚಾಗಿರುವ ಈ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಗೆ-ಬಗೆಯ ತರಕಾರಿ ಮತ್ತು ಹಣ್ಣುಗಳನ್ನು ನಿತ್ಯದ ಆಹಾರಕ್ರಮದಲ್ಲಿ ಸೇರಿಸಿ ಎಂದು ವೈದ್ಯರು ಕೂಡ ಸಲಹೆ ನೀಡುತ್ತಿದ್ದಾರೆ.
ಹಾರ್ವಾಡ್‌ನಲ್ಲಿ ಸಂಶೋಧನೆಯೊಂದು ತರಕಾರಿ ಮತ್ತು ಹಣ್ಣುಗಳ ಮಿಶ್ರಣ ಆರೋಗ್ಯವನ್ನು ವೃದ್ಧಿಸುತ್ತೆ ಹಾಗೂ ಆಯುಸ್ಸು ವೃದ್ಧಿಸುತ್ತೆ ಎಂದು ಹೇಳಿದೆ.

ಏನು ತಿನ್ನುತ್ತೇವೆ ಎನ್ನುವುದಕ್ಕಿಂತ ಏನನ್ನು ಸೇರಿಸಿ ತಿನ್ನುತ್ತೇವೆ ಎನ್ನುವುದು ಮುಖ್ಯವಾಗಿದೆ ಎಂದು ಈ ಸಂಶೋಧನೆ ಹೇಳಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ತಿಳಿಯೋಣ:

2021ರಲ್ಲಿ ನಡೆಸಿದ ಅಧ್ಯಯನ

2021ರಲ್ಲಿ ನಡೆಸಿದ ಅಧ್ಯಯನ

ಅಮೆರಿಕನ್ ಹೆಲ್ತ್‌ ಅಸೋಷಿಯೇಷನ್ ಮಾರ್ಚ್‌ 2021ರಲ್ಲಿ ಒಂದು ಅಧ್ಯಯನ ವರದಿ ನೀಡಿತ್ತು. ಇದರ ಪ್ರಕಾರ ಹಣ್ಣು ಮತ್ತು ತರಕಾರಿ ತಿನ್ನುವುದರಿಂದ ಸಾವಿನ ಸಂಖ್ಯೆ ಕುಗ್ಗಿಸಬಹುದು ಎಂದು ಹೇಳಿದೆ. ತುಂಬಾ ತಿನ್ನುವುದಕ್ಕಿಂತ ಏನು ತಿನ್ನುತ್ತೇವೆ ಎಂಬುವುದು ಮುಖ್ಯವಾಗಿದೆ ಎಂದು ಹೇಳಿದೆ.

ಹಾರ್ವರ್ಡ್‌ನ ಟಿ ಹೆಚ್‌ ಚಾನ್ ಸ್ಕೂಲ್ ಆಫ್‌ ಪಬ್ಲಿಕ್‌ ಹೆಲ್ತ್‌ನಲ್ಲಿ ಸಂಶೋಧನೆ ಮಾಡಿದ ಡಾ. ವಾಂಗ್ ( M.D., Sc.D.) ಸರಿಯಾದ ಆಹಾರಶೈಲಿಯಿಂದ ದೀರ್ಘಕಾಲದ ಆಹಾರ ಸಮಸ್ಯೆಯನ್ನು ಕೂಡ ತಡೆಗಟ್ಟಬಹುದು ಎಂದಿದ್ದಾರೆ.

ಎಲ್ಲಾ ಬಗೆಯ ಹಣ್ಣು, ತರಕಾರಿಗಳು ಒಂದೇ ರೀತಿಯಲ್ಲ

ಎಲ್ಲಾ ಬಗೆಯ ಹಣ್ಣು, ತರಕಾರಿಗಳು ಒಂದೇ ರೀತಿಯಲ್ಲ

ಡಾ. ವಾಂಗ್‌ ಎಲ್ಲಾ ಬಗೆಯ ಹಣ್ಣು ಅಥವಾ ತರಕಾರಿಗಳೂ ಒಂದೇ ರೀತಿಯಲ್ಲ ಯಾವ ಹಣ್ಣು, ತರಕಾರಿ ಒಳ್ಳೆಯದು, ಯಾವ ಬಗೆಯ ಆಹಾರಗಳನ್ನು ಮಿತಿಯಲ್ಲಿ ತಿನ್ನಬೇಕು ಎಂಬುವುದನ್ನು ಕೂಡ ವಿವರಿಸಿದ್ದಾರೆ. ವಾರದಲ್ಲಿ 5 ದಿನ ಈ ರೀತಿಯ ಆಹಾರ ಶೈಲಿ ಅನುಸರಿಸಿದರೂ ಒಳ್ಳೆಯ ಗುಣ ಪಡೆಯಬಹುದೆಂದು ಹೇಳಿದ್ದಾರೆ. ದಿನಾ 2 ಬಗೆಯ ಹಣ್ಣುಗಳು 3 ಬಗೆಯ ತರಕಾರಿಗಳು ನಿಮ್ಮ ಆಹಾರಕ್ರಮದಲ್ಲಿ ಇರಲಿ.

ಯಾವ ಬಗೆಯ ಹಣ್ಣು, ತರಕಾರಿ ಸೇವಿಸಬೇಕು

ಯಾವ ಬಗೆಯ ಹಣ್ಣು, ತರಕಾರಿ ಸೇವಿಸಬೇಕು

* ಹಸಿರು ತರಕಾರಿ, ಸೊಪ್ಪು

* ಬೀಟಾ ಕೆರೋಟಿನ್ ಅಧಿಕವಿರುವ ಆಹಾರ

* ಸಿಟ್ರಿಸ್‌ ಹಣ್ಣುಗಳು ಹಾಗೂ ಬೆರ್ರಿ ಹಣ್ಣುಗಳು

ಯಾವುದನ್ನು ಆ 5 ದಿನ ತೆಗೆದುಕೊಳ್ಳದಿರುವುದು ಒಳ್ಳೆಯದು

ಯಾವುದನ್ನು ಆ 5 ದಿನ ತೆಗೆದುಕೊಳ್ಳದಿರುವುದು ಒಳ್ಳೆಯದು

*ಪಿಷ್ಠ ಅಧಿಕವಿರುವ ಆಹಾರ ಅಂದ್ರೆ ಬಟಾಣಿ, ಜೋಳ, ಆಲೂಗಡ್ಡೆ

* ಹಣ್ಣಿನ ಜ್ಯೂಸ್

ಇವುಗಳನ್ನು ಅಧಿಕ ಬಳಸಬೇಡಿ.

ಈ ಅಧ್ಯಯನ ಹೇಗೆ ನಡೆಸಲಾಯಿತು

* 1984-2014ರ ಒಳಗಿನ ಪುರುಷ ಹಾಗೂ ಮಹಿಳೆಯರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಯಿತು.

ದಿನದಲ್ಲಿ ಎಷ್ಟು ಬಾರಿ ತಿನ್ನಬೇಕು

ದಿನದಲ್ಲಿ ಎಷ್ಟು ಬಾರಿ ತಿನ್ನಬೇಕು

ಹಣ್ಣು ಹಾಗೂ ತರಕಾರಿ ಇವುಗಳನ್ನು ದಿನದಲ್ಲಿ 5 ಬಾರಿಯಂತೆ ಸೇವಿಸಿ, ಅದಕ್ಕಿಂತ ಅಧಿಕ ತಿಂದರೆ ಹೆಚ್ಚಿನ ಪ್ರಯೋಜನವೇನು ಸಿಗಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ನಟ್ಸ್ ತುಂಬಾ ಒಳ್ಳೆಯದು

ನಟ್ಸ್ ತುಂಬಾ ಒಳ್ಳೆಯದು

ನಟ್ಸ್ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬಾದಾಮಿ, ಗೋಡಂಬಿ, ಪಿಸ್ತಾ ಇವೆಲ್ಲಾ ಕಾಯಿಲೆಗಳನ್ನು ತಡೆಗಟ್ಟುವುದರ ಜೊತೆಗೆ ಆರೋಗ್ಯ ವೃದ್ಧಿಸುತ್ತೆ.

ಮೆಡಿರೇರಿಯನ್ ಡಯಟ್ ಕೂಡ ಆಯುಸ್ಸು ವೃದ್ಧಿಸುತ್ತೆ

ಮೆಡಿರೇರಿಯನ್ ಡಯಟ್ ಕೂಡ ಆಯುಸ್ಸು ವೃದ್ಧಿಸುತ್ತೆ

ಆರೋಗ್ಯಕರ ಆಹಾರಕ್ರಮ ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್, ಮತ್ತತರ ಆರೋಗ್ಯ ಸಮಸ್ಯೆ ತಡೆಗಟ್ಟುವಲ್ಲಿ ಸಹಕಾರಿ ಎಂಬುವುದು ತಿಳಿದು ಬಂದಿದೆ. ಯಾರು ತಮ್ಮ ಆಹಾರಕ್ರಮದಲ್ಲಿ ಆಲೀವ್ ಎಣ್ಣೆ, ನಟ್ಸ್, ಬೀನ್ಸ್, ಮೀನು, ಹಣ್ಣುಗಳು, ತರಕಾರಿ, ವೈನ್ ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾರೋ ಅವರ ಆಹಾರ ಉತ್ತಮವಾಗಿರುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಮೆಡಿಟೇರಿಯನ್ ಡಯಟ್‌ ಪಾಲಿಸುವವರ ಆಯುಸ್ಸು ಅಧಿಕ ಎಂಬುವುದು ಕೂಡ ಸಂಶೋಧನೆಯಿಂದ ತಿಳಿದು ಬಂದಿದೆ.

ಆರೋಗ್ಯಕರ ಆಹಾರ ಪಾಲಿಸಿ, ಆರೋಗ್ಯವಾಗಿರಿ.

English summary

Eating 2 Fruits, 3 Vegetables Per Day Linked To Longevity: Harvard study

Eating 2 fruits, 3 vegetables per day linked to longevity: Harvard study, Read on,
X
Desktop Bottom Promotion