For Quick Alerts
ALLOW NOTIFICATIONS  
For Daily Alerts

ಮಹಿಳೆಯರನ್ನು ಕಾಡುವ ಅಂಡಾಶಯ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಿವು

|

ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ನಂತರ ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಎಂದರೆ ಅದು ಅಂಡಾಶಯದ ಕ್ಯಾನ್ಸರ್ ಆಗಿದೆ. ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ ಗೆಡ್ಡೆ ಬೆಳೆಯಲು ಕಾರಣವಾಗುವುದು.

ಕುಟುಂಬದ ಇತಿಹಾಸ, ತಡವಾಗಿ ಮುಟ್ಟುನಿಲ್ಲುವುದು ಅಥವಾ ಸ್ತನ ಕ್ಯಾನ್ಸರ್ ಇತಿಹಾಸ ಹೊಂದಿರುವ ಕುಟುಂಬಗಳು ಮತ್ತು ಮಧುಮೇಹ ರೋಗಿಗಳು ಈ ಕ್ಯಾನ್ಸರ್ ಗೆ ತುತ್ತಾಗುವ ಸಾದ್ಯತೆ ಹೆಚ್ಚು. ರಕ್ತದಲ್ಲಿ ಇನ್ಸುಲಿನ್ ಹೆಚ್ಚಳದಿಂದಾಗಿ ಮಧುಮೇಹದಿಂದ ಬಳಲುತ್ತಿರುವ ಮಹಿಳೆಯರು ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಹಲವಾರು ಅಧ್ಯಯನಗಳು ಹೇಳಿವೆ.

ಈ ಅಂಡಾಶಯದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳನ್ನು ಗುರುತಿಸಿದರೆ, ಅದನ್ನು ನಿರ್ವಹಿಸಲು ಸುಲಭವಾಗುವುದು. ಅವುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಿಬ್ಬೊಟ್ಟೆ ಉಬ್ಬುವುದು:

ಕಿಬ್ಬೊಟ್ಟೆ ಉಬ್ಬುವುದು:

ತಿಂಗಳ ಮುಟ್ಟಿನ ಸಮಯದಲ್ಲಿ ಮಹಿಳೆಯರು ಹೊಟ್ಟೆ ಉಬ್ಬುವಿಕೆ ಅನುಭವಿಸುವುದು ಸಾಮಾನ್ಯ ಆದರೆ ನಿರಂತರ ಉಬ್ಬುವುದು ಅಥವಾ ಹೊಟ್ಟೆ ತುಂಬಿದ ಭಾವನೆ ಆತಂಕಕ್ಕೆ ಕಾರಣವಾಗಬಹುದು. ಮೂರು ವಾರಗಳವರೆಗೆ ಯಾವುದೇ ನಿರಂತರ ಹೊಟ್ಟೆ ಉಬ್ಬುವಿಕೆ ಅಥವಾ ಊತ ಕಂಡುಬಂದರೆ ತಕ್ಷಣವೇ ಪರಿಹರಿಸಬೇಕು, ವೈದ್ಯರ ಬಳಿ ಹೋಗಬೇಕು.

ಮಲಬದ್ಧತೆ:

ಮಲಬದ್ಧತೆ:

ಕರುಳಿನ ಚಲನೆಯಲ್ಲಿನ ಬದಲಾವಣೆ ಅಂಡಾಶಯದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಗೆಡ್ಡೆಯು ಕರುಳಿನ ಮೇಲೆ ಒತ್ತಡವನ್ನುಂಟುಮಾಡುತ್ತದೆ, ಇದರಿಂದಾಗಿ ಮಲಬದ್ಧತೆಯ ಸಮಸ್ಯೆ ಉಂಟಾಗುವುದು.

ಆಯಾಸ:

ಆಯಾಸ:

ಏನಾದರೂ ಕೆಲಸ ಮಾಡಿದರೆ ಆಯಾಸ ಮಾಮೂಲಿ, ಆದರೆ ಏನೂ ಕೆಲಸ ಮಾಡದೇ ಕೇವಲ ನಡೆದರೇ ಅಥವಾ ದೈನಂದಿನ ಕೆಲಸಗಳನ್ನಷ್ಟೇ ಮಾಡಿದರೆ ಹೆಚ್ಚು ಆಯಾಸವಾಗುತ್ತಿದೆ ಎಂದರೆ ಒಮ್ಮೆ ವೈದ್ಯರ ಬಳಿ ತಪಾಸಣೆ ಮಾಡಿಸವುದು ಉತ್ತಮ, ಏಕೆಂದರೆ ಇದು ಕೂಡ ಅಂಡಾಶಯದ ಕ್ಯಾನ್ಸರ್ ಇರುವ ಸೂಚನೆಯಿರಬಹುದು.

ಹಸಿವಿನ ಕೊರತೆ:

ಹಸಿವಿನ ಕೊರತೆ:

ಕ್ಯಾನ್ಸರ್ ಆರಂಭಿಕ ಹಂತಗಳಲ್ಲಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದಾಗ ವ್ಯಕ್ತಿ ತಿನ್ನಲು ಹಿಂದೇಟು ಹಾಕುವುದನ್ನು ಗಮನಿಸಬಹುದು. ಅವರಿಗೆ ಹಸಿವಾಗದೇ ಇರಬಹುದು. ಹಸಿವಿನ ಕೊರತೆಯೂ ಸಹ ಅಂಡಾಶಯದ ಕ್ಯಾನನ್ಸರ್ ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.

ಹೆಚ್ಚು ಮೂತ್ರ ವಿಸರ್ಜನೆ:

ಹೆಚ್ಚು ಮೂತ್ರ ವಿಸರ್ಜನೆ:

ಅಂಡಾಶಯದಲ್ಲಿ ರೂಪುಗೊಂಡ ಗೆಡ್ಡೆ ಅಂಗಾಂಶಗಳು ಮೂತ್ರಕೋಶದ ಮೇಲೆ ಹೆಚ್ಚು ಒತ್ತಡವನ್ನು ಹಾಕಬಹುದು. ಇದು ಹೆಚ್ಚು ಮೂತ್ರ ವಿಸರ್ಜಿಸುವ ಪ್ರಚೋದನೆಗೆ ಒಳಪಡುವಂತೆ ಮಾಡುವುದು. ಆದ್ದರಿಂದ ಹೆಚ್ಚು ಮೂತ್ರ ವಿಸರ್ಜನೆ ಅಥವಾ ಪದೇ ಪದೇ ಮುತ್ರ ವಿಸರ್ಜನೆಯಾಗುತ್ತಿದ್ದರೂ ನಿರ್ಲಕ್ಷ್ಯ ಮಾಡಬಾರದು.

ಈ ರೋಗಲಕ್ಷಣಗಳು, ಗಂಭೀರವಾಗಿಲ್ಲವಾದರೂ, ಅವರು ದೀರ್ಘಕಾಲದವರೆಗೆ ಇದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

English summary

Early Warning Signs of Ovarian Cancer in Kannada

Here we talking about Early Warning Signs of Ovarian Cancer in Kannada, read on
X
Desktop Bottom Promotion