For Quick Alerts
ALLOW NOTIFICATIONS  
For Daily Alerts

Health tips: ಹೃದ್ರೋಗ, ಬಿಪಿ ನಿಯಂತ್ರಿಸುತ್ತದೆ ಸೋಂಪಿನ ಚಹಾ

|

ನಾವು ನಿತ್ಯ ಎಷ್ಟೇ ಆರೋಗ್ಯದ ಕಾಳಜಿ ಮಾಡಿದರೂ ಹೊರಗಿನ ರುಚಿಕರ ತಿಂಡಿಗಳು ನಮ್ಮನ್ನು ಸುಮ್ಮನಿರಲು ಬಿಡುವುದೇ ಇಲ್ಲ. ಎಷ್ಟೇ ಕಠಿಣ ಡಯಟ್‌ ಇದ್ದರೂ ಕೆಲವೊಮ್ಮ ಹೊರಗಿನ ತಿಂಡಿ ಸೇವಿಸಿಯೇ ಬಿಡುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ದಷ್ಪರಿಣಾಮ ಬೀರುತ್ತದೆ. ಅದರಲ್ಲೂ ಬಹುತೇಕರನ್ನು ಕಾಡುವ ಮಧುಮೇಹ ಮತ್ತು ರಕ್ತದೊತ್ತಡದಂಥ ಸಮಸ್ಯೆಗಳಿರುವವರಿಗೆ ಇದು ಹಚ್ಚು ಪರಿಣಾಮ ಬೀರುತ್ತದೆ.

123

ರಕ್ತದೊತ್ತಡ ಇರುವವರಂತೂ ತಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲೇಬೇಕು. ಏಕೆಂದರೆ ರಕ್ತದೊತ್ತಡವು ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ. ಈ ಹಿನ್ನೆಲೆ ನಾವಿಂದು ರಕ್ತದೊತ್ತಡ ಇರುವವರು ಆರೋಗ್ಯ ಕಾಳಜಿಗಾಗಿ ನಿತ್ಯ ಸೇವಿಸಬಹುದಾದ ರುಚಿಕರ ಆರೋಗ್ಯ ಸೋಂಪಿನ ಚಹಾದ ಬಗ್ಗೆ, ಅದರಲ್ಲಿರುವ ಪೌಷ್ಟಿಕಾಂಶಗಳು, ಸೋಂಪಿನ ಚಹಾ ಮಾಡುವ ವಿಧಾನದ ಬಗ್ಗೆ ತಿಳಿಸಿಕೊಡಲಿದ್ದೇವೆ:

ಸೋಂಪಿನಲ್ಲಿರುವ ಪೌಷ್ಟಿಕಾಂಶಗಳು
ಫೈಬರ್, ಕಬ್ಬಿಣ, ಸೆಲೆನಿಯಮ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ, ಇ, ಕೆ, ಸತು ಸೇರಿದಂತೆ ಮುಂತಾದ ಅಗತ್ಯ ಪೋಷಕಾಂಶಗಳು ಸೋಂಪಿನಲ್ಲಿದೆ. ಇದು ವಿವಿಧ ರೀತಿಯ ಕಾಯಿಲೆಗಳಿಗೆ ಪ್ರಯೋಜನಕಾರಿಯಾಗಿದೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಇದರಲ್ಲಿರುವ ಫೈಬರ್ ಅಂಶ ಸಹಾಯಕವಾಗಿದೆ.
ದೇಹದಲ್ಲಿನ ಸೋಡಿಯಂ ಅನ್ನು ಸಮತೋಲನಗೊಳಿಸುವಲ್ಲಿ ಪೊಟ್ಯಾಸಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ, ಸೋಂಪಿನ ಸೇವನೆಯು ಅಧಿಕ ಬಿಪಿ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ನೀವು ಅಧಿಕ ಬಿಪಿ ರೋಗಿಗಳಾಗಿದ್ದರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸಿದರೆ, ಪ್ರತಿದಿನ ಫೆನ್ನೆಲ್ ಟೀ ಕುಡಿಯಿರಿ.

ಫೆನ್ನೆಲ್ ಚಹಾ ತಯಾರಿಸುವುದು ಹೇಗೆ?
ಬೇಕಾಗುವ ಪದಾರ್ಥಗಳು
* ಸೋಂಪು ಅರ್ಧ ಚಮಚ
* ನೀರು ಒಂದು ಲೋಟ
* ದಾಲ್ಚಿನ್ನಿ ಸ್ವಲ್ಪ
* ಜೇನುತುಪ್ಪ

ತಯಾರಿಸುವ ವಿಧಾನ
* ಒಂದೂವರೆ ಕಪ್ ನೀರಿನಲ್ಲಿ ಅರ್ಧ ಚಮಚ ಸೋಂಪನ್ನು ಬೆರೆಸಿ ಚೆನ್ನಾಗಿ ಕುದಿಸಿ. ನಂತರ ರುಚಿಗೆ ದಾಲ್ಚಿನ್ನಿಯನ್ನು ಬೆರೆಸಿ. ಚಹಾ ಚೆನ್ನಾಗಿ ಕುದಿದ ನಂತರ ಚಹಾವನ್ನು ಫಿಲ್ಟರ್ ಮಾಡಿ. ಈಗ ಸಿಹಿಗಾಗಿ ಜೇನುತುಪ್ಪ ಬೆರೆಸಿ ಬಿಸಿ ಬಿಸಿ ಸೋಂಪಿನ ಟೀ ಕುಡಿಯಿರಿ.

English summary

Drink fennel tea everyday to control High BP in Kannada

Here we are discussing about Drink fennel tea everyday to control High BP in Kannada. Read more.
Story first published: Monday, December 12, 2022, 21:05 [IST]
X
Desktop Bottom Promotion