For Quick Alerts
ALLOW NOTIFICATIONS  
For Daily Alerts

ಪ್ರತಿನಿತ್ಯ ನಿಂಬೆನೀರು ಕುಡಿಯುವುದು ಆರೋಗ್ಯಕ್ಕೆ ಒಳಿತಲ್ಲ

|

ತೂಕ ಇಳಿಸುವ ಹಲವಾರು ದಾರಿಗಳಲ್ಲಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯುವುದು ಸಹ ಒಂದು. ಇದು ಆರೋಗ್ಯಕರವೂ ಹೌದು. ಆದರೆ, ಈ ತ್ವರಿತ ಪಾನೀಯವನ್ನು ಪ್ರತಿದಿನ ಸೇವಿಸಿದರೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಎಂಬುದು ತಿಳಿದಿದೆಯೇ? ಹೌದು, ಅತಿಯಾದರೆ, ಅಮೃತವೂ ವಿಷವೆಂಬಂತೆ, ನಿಂಬೆಹಣ್ಣಿನಲ್ಲಿರುವ ಆಮ್ಲವು ಅಗತ್ಯಕ್ಕಿಂತ ಹೆಚ್ಚು ದೇಹ ಸೇರಿದರೆ, ನಾನಾ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಪರೋಕ್ಷವಾಗಿ ದೇಹಕ್ಕೆ ಹಾನಿಮಾಡುತ್ತವೆ. ಹಾಗಾದರೆ, ನಿಂಬೆ ನೀರಿನ ಅಡ್ಡಪರಿಣಾಮಗಳನ್ನು ನೋಡೋಣ.

ಪ್ರತಿದಿನ ನಿಂಬೆ ನೀರನ್ನು ಸೇವಿಸುವುದರಿಂದ ಆಗುವ ಅಡ್ಡಪರಿಣಾಮಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹಲ್ಲಿನ ಸಮಸ್ಯೆ:

ಹಲ್ಲಿನ ಸಮಸ್ಯೆ:

ಪ್ರತಿನಿತ್ಯ ನಿಂಬೆ ನೀರನ್ನು ಕುಡಿಯುವುದರಿಂದ ಹಲ್ಲಿನ ದಂತಕವಚಕ್ಕೆ ಹಾನಿಯಾಗುತ್ತದೆ ಮತ್ತು ಹಲ್ಲಿನ ಕೊಳೆಯುವಿಕೆಗೆ ಕಾರಣವಾಗಬಹುದು. ಇದಕ್ಕೆ ಕಾರಣ ನಿಂಬೆ ರಸದಲ್ಲಿ ಇರುವ ಆಮ್ಲ. ಈ ಮೂಲಕ ಹಲ್ಲುಗಳ ಹಾನಿಗೆ ನಿಂಬೆ ನೀರು ಕಾರಣವಾಗುತ್ತದೆ.

ವಾಕರಿಕೆ ಮತ್ತು ಎದೆಯುರಿ:

ವಾಕರಿಕೆ ಮತ್ತು ಎದೆಯುರಿ:

ಹೆಚ್ಚು ನಿಂಬೆ ನೀರನ್ನು ಕುಡಿಯುವುದು ಎದೆಯುರಿ ಮತ್ತು ವಾಕರಿಕೆಗೆ ಕಾರಣವಾಗಬಹುದು. ನಿಂಬೆಯಲ್ಲಿ ಆಮ್ಲಗಳ ಉಪಸ್ಥಿತಿಯಿಂದಾಗಿ ಇದು ಕೂಡ ಸಂಭವಿಸುತ್ತದೆ.

ಹೊಟ್ಟೆನೋವು:

ಹೊಟ್ಟೆನೋವು:

ನಿಂಬೆ ನೀರು, ಹೆಚ್ಚಿನ ಪ್ರಮಾಣದಲ್ಲಿ ಮತ್ತು ನಿಯಮಿತವಾಗಿ ಸೇವಿಸಿದರೆ, ನಿಮ್ಮ ಹೊಟ್ಟೆಗೆ ಕಷ್ಟವಾಗಬಹುದು. ಇದು ನಿಮಗೆ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡಬಹುದು ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಗಳಿದ್ದರೆ, ಅದನ್ನು ಇನ್ನಷ್ಟು ಹದಗೆಡಿಸಬಹುದು.

ಆಗಾಗ್ಗೆ ಮೂತ್ರ ವಿಸರ್ಜನೆ:

ಆಗಾಗ್ಗೆ ಮೂತ್ರ ವಿಸರ್ಜನೆ:

ನಿಂಬೆ ರಸವು ಆಸ್ಕೋರ್ಬಿಕ್ ಆಮ್ಲ ಅಥವಾ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವುದರಿಂದ ಮೂತ್ರವರ್ಧಕವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಇದು ಮೂತ್ರಪಿಂಡದಲ್ಲಿ ಮೂತ್ರದ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಆದ್ದರಿಂದ ದೇಹವು ಹೆಚ್ಚುವರಿ ಉಪ್ಪು ಮತ್ತು ದ್ರವಗಳನ್ನು ತ್ವರಿತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ, ಇದು ಆಗಾಗ್ಗೆ ಮೂತ್ರ ವಿಸರ್ಜನೆಯಾಗಲು ಕಾರಣವಾಗುತ್ತದೆ.

ಮೂಳೆಗೆ ಹಾನಿ:

ಮೂಳೆಗೆ ಹಾನಿ:

ನಿಂಬೆಯ ಆಮ್ಲೀಯ ಗುಣವು ಮೂಳೆಗಳಿಗೆ ಹಾನಿಕಾರಕವಾಗಿದೆ. ಆದ್ದರಿಂದ, ನಿಂಬೆಹಣ್ಣನ್ನು ಅಥವಾ ನಿಂಬೆ ನೀರನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಬೇಕು. ಕಾಲಾನಂತರದಲ್ಲಿ ಇದು ಮೂಳೆಸವೆತವನ್ನು ಉಂಟುಮಾಡುತ್ತದೆ.

ಕಬ್ಬಿಣದ ಮಟ್ಟ ಹೆಚ್ಚಳ:

ಕಬ್ಬಿಣದ ಮಟ್ಟ ಹೆಚ್ಚಳ:

ನಿಂಬೆಯಲ್ಲಿ ವಿಟಮಿನ್-ಸಿ ಇದ್ದು, ಇದು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಆದರೆ ವಿಟಮಿನ್-ಸಿ ಯ ಅತಿಯಾದ ಪ್ರಮಾಣದಿಂದಾಗಿ, ದೇಹದಲ್ಲಿ ಕಬ್ಬಿಣದ ಮಟ್ಟವು ಹೆಚ್ಚಾಗಬಹುದು, ಇದು ಹಾನಿಕಾರಕವಾಗಿದೆ.

ಕ್ಯಾಂಕರ್ ಹುಣ್ಣನ್ನು ಉಲ್ಬಣಗೊಳಿಸಬಹುದು:

ಕ್ಯಾಂಕರ್ ಹುಣ್ಣನ್ನು ಉಲ್ಬಣಗೊಳಿಸಬಹುದು:

ಕ್ಯಾಂಕರ್ ಹುಣ್ಣುಗಳು ಬಾಯಿ ಹುಣ್ಣುಗಳ ಒಂದು ರೂಪ. ಇವು ಬಾಯಿಯೊಳಗೆ ಉಂಟಾಗುವ ಹುಣ್ಣುಗಳು ಮತ್ತು ಇವು ಹೆಚ್ಚು ನೋವಿನಿಂದ ಕೂಡಿರುತ್ತವೆ. ಸಿಟ್ರಿಕ್ ಆಮ್ಲವು ಬಾಯಿಯ ಹುಣ್ಣುಗಳನ್ನು ಇನ್ನಷ್ಟು ಪ್ರಚೋದಿಸುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ನಿಮ್ಮ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದ್ದರಿಂದ, ನಿಮಗೆ ಬಾಯಿ ಹುಣ್ಣು ಆಗಿದ್ದರೆ ನಿಂಬೆಹಣ್ಣುಗಳನ್ನು ಸೇವಿಸದೇ ಇರುವುದು ಒಳಿತು.

ಆದ್ದರಿಂದ, ನಿಂಬೆ ನೀರಿನ ಯಾವುದೇ ಹಾನಿಯಾಗದಂತೆ ಅದರ ಪ್ರಯೋಜನಗಳನ್ನು ಆನಂದಿಸಲು ಬಯಸಿದರೆ, ನೀವು ಅದನ್ನು ಮಿತವಾಗಿ ಕುಡಿಯುವುದು ಮುಖ್ಯ.

English summary

Disadvantages of Drinking Lemon Water Daily in Kannada

Here we talking about Disadvantages of drinking lemon water daily in Kannada, read on
Story first published: Thursday, January 6, 2022, 17:34 [IST]
X
Desktop Bottom Promotion