For Quick Alerts
ALLOW NOTIFICATIONS  
For Daily Alerts

ಈ ಜೂನ್‌ನಲ್ಲಿ ಹೆಚ್ಚಾಗಲಿದೆ ಕೊರೊನಾ: ಕರ್ನಾಟಕ ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್‌

|

ಭಾರತದಲ್ಲೀಗ ಕೊರೊನಾ ನಾಲ್ಕನೇ ಅಲೆಯ ಆತಂಕ ಶುರುವಾಗಿದೆ. ದಿನೇ ದಿನೇ ಕೇಸ್‌ಗಳು ಶೇ.90ರಷ್ಟು ವೇಗದಲ್ಲಿ ಹರಡುತ್ತಿದೆ, ಈಗ ಕೊರೊನಾ ಹರಡುವುದನ್ನು ತಡೆಗಟ್ಟಗಳು ಆಯಾ ರಾಜ್ಯ ಸರ್ಕಾರಗಳು ಮುಂದಾಗಿವೆ. ಕರ್ನಾಟಕ ಕೂಡ ಈ ಕುರಿತು ಕಟ್ಟುನಿಟ್ಟಿನ ಎಚ್ಚರವಹಿಸಲು ಮುಂದಾಗಿದೆ. ಅದರಲ್ಲೂ ಹೊರ ದೇಶದಿಂದ ಬರುವವರ ಮೇಲೆ ನಿಗಾ ಇಡಲು ಮುಂದಾಗಿದೆ. ಅವರ ಕಾಂಟ್ಯಾಕ್ಟ್ ನಂಬರ್ ಹಾಗೂ ವಿಳಾಸ ತೆಗೆದುಕೊಂಡು ಅವರ ಆರೋಗ್ಯದ ಮೇಲೆ ನಿಗಾ ಇಡುತ್ತಿದೆ.

ಕರ್ನಾಟಕದಲ್ಲಿ ಜನರ ಸುರಕ್ಷತೆಗೆ ಏನೆಲ್ಲಾ ಕ್ರಮ ಕೈಗೊಂಡಿದೆ, ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್‌ ಹೇಳಿರುವುದೇನು ಎಂದು ನೋಡೋಣ ಬನ್ನಿ:

ಜೂನ್‌ನಲ್ಲಿ ಹೆಚ್ಚಾಗಲಿದೆ ಕೊರೊನಾ

ಜೂನ್‌ನಲ್ಲಿ ಹೆಚ್ಚಾಗಲಿದೆ ಕೊರೊನಾ

ಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್‌ ತಜ್ಞರ ಸಮಿತಿಯ ಸಲಹೆಯ ಬಳಿಕ ಕೊರೊನಾ ಬಗ್ಗೆ ಮಾತನಾಡಿದ್ದಾರೆ. ಕೊರೊನಾ ನಾಲ್ಕನೇ ಅಲೆ ಭಾರತದಲ್ಲಿ ಜೂನ್‌ನಲ್ಲಿ ಹೆಚ್ಚಾಗಲಿದೆ ಇದರ ಪ್ರಬಾವ ಅಕ್ಟೋಬರ್‌ವರೆಗೆ ಇರಲಿದೆ. ಆದ್ದರಿಂದ ಜನರು ಮುನ್ನೆಚ್ಚರಿಕೆವಹಿಸಬೇಕೆಂದು ಹೇಳಿದ್ದಾರೆ.

IIT ಕಾನ್ಪುರ್ ಅಧ್ಯಯನ ಈ ಮೊದಲೇ ಎಚ್ಚರಿಸಿತ್ತು

IIT ಕಾನ್ಪುರ್ ಅಧ್ಯಯನ ಈ ಮೊದಲೇ ಎಚ್ಚರಿಸಿತ್ತು

IIT ಕಾನ್ಪುರ್ ಅಧ್ಯಯನ ವರದಿಯೂ ಈ ಹಿಂದೆಯೇ ಜೂನ್‌ ಕೊನೆಯ ವಾರದಲ್ಲಿ ಭಾರತದಲ್ಲಿ ಕೊರೊನಾ ನಾಲ್ಕನೇ ಅಲೆ ಬರಲಿದೆ ಎಂದು ಹೇಳಿತ್ತು. ಆದರೆ ಈಗ ತಿಂಗಳ ಮುಂಚೆಯೇ ಬಂದಿದೆ. ಇದರ ಪ್ರಭಾವ ಅಕ್ಟೋಬರ್‌ವರೆಗೆ ಇರಲಿದೆ.

ಕೋವಿಡ್‌ 19 ಜೊತೆ ಬದುಕಲು ಕಲಿಯಬೇಕಾಗಿದೆ

ಕೋವಿಡ್‌ 19 ಜೊತೆ ಬದುಕಲು ಕಲಿಯಬೇಕಾಗಿದೆ

ಕೊರೊನಾ ಈಗ ಹೊಸತಲ್ಲ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕು ಬಂದು ಹೋಗುತ್ತಿರುವುದನ್ನು ನೋಡಿದ್ದೇವೆ ಹಾಗೂ ಅದು ಬೀರಿರುವ ದುಷ್ಪಾರಿಣಾಮ ನೋಡಿದ್ದೇವೆ. ಕೊರೊನಾ ತಡೆಗಟ್ಟಲು ಜನರು ಮುಖ್ಯವಾಗಿ ಮಾಡಬೇಕಾಗಿರುವುದು ಮುನ್ನೆಚ್ಚರಿಕೆವಹಿಸುವುದು. ಹೌದು ಜಾಗ್ರತೆಯಿಂದ ಕೊರೊನಾವನ್ನು ತಡೆಟ್ಟಬಹುದಾಗಿದೆ. ಆದ್ದರಿಂದ ಮತ್ತೆ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಹಾಗೇ ಮಾಡಿದರೆ ಲಾಕ್‌ಡೌನ್, ಆರ್ಥಿಕ ನಷ್ಟಗಳನ್ನು ತಡೆಗಟ್ಟಬಹುದು.

ಮತ್ತೆ ಮಾಸ್ಕ್‌ ಕಡ್ಡಾಯಗೊಳಿಸಿದೆ

ಮತ್ತೆ ಮಾಸ್ಕ್‌ ಕಡ್ಡಾಯಗೊಳಿಸಿದೆ

ರಾಜ್ಯ ಸರ್ಕಾರವು ಮತ್ತೆ ಮಾಸ್ಕ್‌ ಕಡ್ಡಾಯಗೊಳಿಸಿದೆ. ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಅದರಲ್ಲೂ ಡಬಲ್ ಮಾಸ್ಕ್ ಧರಿಸುವುದು ಒಳ್ಳೆಯದು. ಜೊತೆಗೆ ಕೈಗಳಿಗೆ ಸ್ಯಾನಿಟೈಸರ್ ಬಳಸಿ.

ಕೊರೊನಾ ಲಕ್ಷಣಗಳು ಕಂಡು ಬಂದರೆ ಐಸೋಲೇಟ್‌ ಆಗಿ

ಕೊರೊನಾ ಲಕ್ಷಣಗಳು ಕಂಡು ಬಂದರೆ ಐಸೋಲೇಟ್‌ ಆಗಿ

ಕೊರೊನಾ ಲಕ್ಷಣಗಳು ಕಂಡು ಬಂದ ತಕ್ಷಣ ಸುಮ್ಮನೆ ತಿರುಗಾಡಬೇಡಿ, ನಿಮ್ಮ ಆರೋಗ್ಯ ಜೊತೆಗೆ ಇತರರ ಆರೋಗ್ಯ ಅಪಾಯಕ್ಕೆ ದೂಡಬೇಡಿ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಪ್ರತ್ಯೇಕವಾಗಿ ಹಾಗೂ ಚಿಕಿತ್ಸೆ ಮಾಡಿಸಿ. ರೋಗ ಲಕ್ಷಣಗಳು ಗಂಭೀರವಾಗುವ ಮೊದಲೇ ಚಿಕಿತ್ಸೆ ಪಡೆಯಿರಿ.

English summary

Covid 4th Wave To Go Peak in Karnataka in June Says Health Minister Dr K Sudhakar

Covid 4th Wave To Go Peak in Karnataka in June Says Health Minister Dr K Sudhakar, Read on..
Story first published: Friday, April 29, 2022, 9:13 [IST]
X
Desktop Bottom Promotion