February 23 Horoscope: ಆಪ್ತರೊಬ್ಬರಿಂದ ನಿಮಗೆ ಉತ್ತಮ ಸಲಹೆ ಸಿಗಲಿದೆ!

ವೈದಿಕ ಶಾಸ್ತ್ರದ ಪ್ರಕಾರ ಫೆಬ್ರವರಿ 23 (February 23 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ನಿಮಗಿಂದು ಬಹಳ ಶ್ರಮದಾಯಕ ದಿನ ಯಾರಿಂದಾದರು ಪಡೆದ ವಸ್ತುವನ್ನು ಹಿಂದಿರುಗಿಸಲು ಮರೆಯಬೇಡಿ. ಆಪ್ತರೊಬ್ಬರಿಂದ ಹಣಕಾಸು ಮರಳಿಸುವ ಕರೆ ಬರಬಹುದು. ಯಾವುದೇ ಸವಾಲುಗಳ ಎದುರಿಸಲು ನೀವು ಸಿದ್ದರಾಗಿ.

ವೃಷಭ ರಾಶಿ

ವೃಷಭ‍ ರಾಶಿಯವರು ಈ ದಿನ ಪ್ರಯಾಣಗಳ ಮಾಡುತ್ತೀರಿ. ನಿಮ್ಮ ಅನೇಕ ಕೆಲಸಗಳನ್ನು ಸಮಯದೊಳಗೆ ಮಾಡಿ ಮುಗಿಸುವುದು ಉತ್ತಮ. ಅನೇಕರಿಗೆ ಇಂದು ಪ್ರಯಾಣದಲ್ಲಿ ಕಳೆಯುವುದರಿಂದ ಆಯಾಸ ಅಥವಾ ಹಣಕಾಸಿನ ಸಮಸ್ಯೆಯೂ ಬರಬಹುದು.

February-23-2025-daily-horoscope-prediction-f

ಮಿಥುನ ರಾಶಿ

ಮಿಥುನ ರಾಶಿಯ ಜನರಲ್ಲಿ ಈ ದಿನವು ಬಹಳ ಸಮಸ್ಯೆಗಳ ತರಬಹುದು. ಅದರಲ್ಲೂ ನಿಮ್ಮ ಕೃಷಿ ಸಂಬಂಧಿತ ಚಟುವಟಿಕೆ ಹಾಗೂ ಹೊಸ ಜವಾಬ್ದಾರಿಯಲ್ಲಿ ಅಡ್ಡಿಗಳು ಎದುರಾಗಬಹುದು. ದಾಂಪತ್ಯ ಸಂಬಂಧ ಮುನಿಸು, ಮಕ್ಕಳ ಅನಾರೋಗ್ಯ ನಿಮಗೆ ಚಿಂತೆ ತರಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಜನರಲ್ಲಿ ಈ ದಿನವು ಸವಾಲುಗಳಿಂದ ತುಂಬಿರಬಹುದು. ಯಾರಿಗೂ ಹಣಕಾಸಿನ ನೆರವು ನೀಡುವ ಮೊದಲು ಆಲೋಚಿಸುವುದು ಉತ್ತಮ. ದೂರ ಪ್ರಯಾಣಗಳು ನಿಮ್ಮ ಬಹು ಸಮಯದ ಆಸೆಯನ್ನು ಈಡೇರಿಸಬಹುದು. ಬಹಳಷ್ಟು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶಗಳು ಸಿಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಇಂದು ಅನುಕೂಲಕರ. ನಿಮ್ಮ ಬಹುದಿನದ ಹಣಕಾಸಿನ ಬಯಕೆ ಈಡೇರಬಹುದು. ದೇವಾಲಯ ಭೇಟಿ ಅಥವಾ ಪ್ರವಾಸದ ದಿನ ಖಚಿತವಾಗುವುದು. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಗೆ ಮುಂದಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಅನುಕೂಲಕರ ದಿನ. ನೀವು ಮಾಡಬೇಕಿದ್ದ ಕೆಲಸಗಳನ್ನು ಶ್ರದ್ಧೆಯಿಂದ ಮುಗಿಸುವುದು ಬಹಳ ಉತ್ತಮ. ದಿನದ ಪ್ರಯಾಣಗಳನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಿ. ಮನೆಯ ಆಸ್ತಿ ಸಂಬಂಧಿತ ವಿಚಾರವಾಗಿ ಮೂರನೇ ವ್ಯಕ್ತಿಯೊಂದಿಗೆ ಚರ್ಚಿಸಬೇಡಿ.

ತುಲಾ ರಾಶಿ

ತುಲಾ ರಾಶಿಯ ಜನರು ಈ ದಿನದಂದು ಪ್ರಯಾಣಗಳ ಮಾಡುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗದ ಸ್ಥಳದಲ್ಲಿನ ಒತ್ತಡವು ನಿಮಗೆ ಚಿಂತಿಸುವಂತೆ ಮಾಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಲ್ಲಿ ನೆಮ್ಮದಿಯ ದಿನ. ಬಹು ಸಮಯದ ಶ್ರಮಕ್ಕೆ ಪ್ರತಿಫಲ ನೋಡಬಹುದು. ನಿಮಗೆ ಹೊರಗಿನವರಿಂದ ಬರುವ ಕರೆಗಳು ಸಮಸ್ಯೆಯ ತರಬಹುದು. ಮನೆಗಾಗಿ ಮಾಡುವ ಖರ್ಚುಗಳು ಸಂತಸಕ್ಕೆ ಕಾರಣವಾಗಲಿದೆ.

ಧನು ರಾಶಿ

ಧನು ರಾಶಿಯ ಜನರಲ್ಲಿ ಈ ದಿನವು ಬಹಳ ಅನುಕೂಲಕರ. ನಿಮ್ಮ ಬಹಳ ಸಮಯದ ಖರ್ಚುಗಳಿಂದ ಮುಕ್ತಿ ಪಡೆಯುತ್ತೀರಿ, ಆಪ್ತರ ಬಳಿ ಹೇಳಿಕೊಳ್ಳುವ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆ ಹೆಚ್ಚು. ನಿಮ್ಮಲ್ಲಿ ಹಣಕಾಸಿನ ಅನುಕೂಲವಿದೆ.

ಮಕರ ರಾಶಿ

ಮಕರ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗುತ್ತದೆ. ನಿಮ್ಮ ಹಲವು ಕೆಲಸಗಳನ್ನು ಬದಿಗೊತ್ತಿ ಈ ಪ್ರಯಾಣಗಳ ಮಾಡುವಿರಿ. ಆಪ್ತರ ಸಲಹೆಯಂತೆ ವ್ಯವಹಾರದಲ್ಲಿ ಮುಂದುವರೆಯುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ, ನಿಮ್ಮ ಹಲವು ಇಷ್ಟದ ಕೆಲಸದಲ್ಲಿ ಭಾಗಿಯಾಗುತ್ತೀರಿ. ಹಳೆಯ ಸ್ನೇಹಿತರ ಭೇಟಿ ಸಂಭವವಿದೆ. ಅನೇಕ ಕೆಲಸದಲ್ಲಿ ಶುಭವಾಗುವ ಸಮಯವಿದು. ವ್ಯಪಾರದಲ್ಲಿ ಲಾಭವಿದೆ. ವಿವಾಹ ಕುರಿತಾದ ವಿಚಾರದಲ್ಲಿ ಧನಾತ್ಮಕ ವಿಚಾರವಾಗಲಿದೆ.

ಮೀನ ರಾಶಿ

ಮೀನ ರಾಶಿ ಜನರಿಗೆ ಇಂದು ಪ್ರಯಾಣಗಳಲ್ಲಿ ಭಾಗಿಯಾಗುವ ದಿನ. ನಿಮ್ಮ ಎಲ್ಲಾ ಹಣಕಾಸಿನ ವಿಚಾರವನ್ನು ಆಪ್ತರೊಬ್ಬರಿಗೆ ಹೇಳಿಕೊಳ್ಳುವುದು ಸಲಹೆ ಪಡೆಯಲು ನೆರವಾಗಲಿದೆ. ಕೋರ್ಟ್ ಸಂಬಂಧಿತ ವಿಚಾರಗಳಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ.

English summary

February-23-2025-daily-horoscope-prediction-for-12-zodiac-signs-in-kannada

Here is Horoscope Today, 23 February Horoscope: Daily Horoscope Prediction For 12 Zodiac signs In Kannada
Story first published: Monday, February 23, 2026, 5:00 [IST]
X
Desktop Bottom Promotion