Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್‌ನಲ್ಲಿ ಸೂರ್ಯ-ಕೇತು ಸಮನ್ವಯ ಚಲನೆ: ಮೂರು ರಾಶಿಯವರ ಬದುಕಲ್ಲಿ ಅದೃಷ್ಟ!
ಜ್ಯೋತಿಷ್ಯದ ಪ್ರಕಾರ ಗ್ರಹಗಳ ಸ್ಥಾನಗಳು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದು ಹಲವು ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಹಾಗೆ ಪ್ರತಿಯೊಂದು ಗ್ರಹದ ಚಲನೆಯು ದೊಡ್ಡ ವಿದ್ಯಮಾನಗಳಿಗೆ ಕಾರಣವಾಗುವುದು ಸಹ ನೋಡಬಹುದು. ಗ್ರಹಗಳ ಕೇಂದ್ರಬಿಂದುವಾದ ಸೂರ್ಯನ ಚಲನೆ ಕೂಡ ಎಲ್ಲಾ ಗ್ರಹಗಳು ಸೇರಿ ರಾಶಿಗಳಲ್ಲಿನ ಬದಲಾವಣೆಗಳಿಗೆ ಕಾರಣವಾಗಲಿದೆ.
ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಈ ಸೂರ್ಯ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಪ್ರಸ್ತುತ ಸೂರ್ಯ ಕುಂಭ ರಾಶಿಯಲ್ಲಿ ಪ್ರಯಾಣಿಸುತ್ತಿದ್ದಾನೆ. ಆದ್ರೆ ಮಾರ್ಚ್‌ನಲ್ಲಿ ಮೀನ ರಾಶಿಗೆ ಚಲಿಸಲಿದ್ದಾನೆ. ಮೀನ ರಾಶಿಯು ಗುರುವಿನಿಂದ ಆಳಲ್ಪಡುವಂತಹ ಗ್ರಹವಾಗಿದೆ. ಇದು ಹಲವು ರೀತಿಯ ಪ್ರಯೋಜನಗಳ ತರುವುದು ನೋಡಬಹುದು.

ಸೂರ್ಯ ಮಾರ್ಚ್‌ನಲ್ಲಿ ಮೀನ ರಾಶಿ ಪ್ರವೇಶಿಸಿ ಏಪ್ರಿಲ್ 14ರ ವರೆಗೂ ಅಲ್ಲಿಯೇ ಇರಲಿದ್ದಾನೆ. ಇದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಲಿದ್ದೇವೆ. ಹಾಗೆ ಮೀನ ರಾಶಿಯಲ್ಲಿದ್ದಾಗ ಸೂರ್ಯನು ಕೇತುವಿನ ಸಂಯೋಗವಾಗುತ್ತಾನೆ. ಸೂರ್ಯ ಹಾಗೂ ಕೇತು ಪರಸ್ಪರ 180 ಡಿಗ್ರಿ ಕೋನದಲ್ಲಿ ಚಲಿಸುವುದರಿಂದ ಸಮಸಪ್ತಕ ಯೋಗ ರೂಪುಗೊಳ್ಳಲಿದೆ.
ಈ ಯೋಗದ ಪ್ರಭಾವವು ಎಲ್ಲಾ ರಾಶಿಗಳ ಮೇಲೆಯೂ ಉಂಟಾಗುವುದು ನೋಡಬಹುದು. ಸಾಮಾನ್ಯವಾಗಿ 12 ರಾಶಿಗಳ ಪೈಕಿ ಸೂರ್ಯ, ಕೇತುವಿನ ಪ್ರಭಾವಕ್ಕೆ ಒಳಗಾಗುವಂತಹ ಕೆಲ ರಾಶಿಗಳ ಮೇಲೆ ಈ ಪ್ರಭಾವ ಹೆಚ್ಚಾಗಿರಲಿದೆ. ಹಾಗಾದ್ರೆ ಸೂರ್ಯನ ಈ ಚಲನೆಯಿಂದ ಹಾಗೆ ಸಮಸಪ್ತಕ ಯೋಗದಿಂದ ಯಾರಿಗೆಲ್ಲಾ ಶುಭದಾಯಕ ಯಾರ ದಿನಗಳು ಉತ್ತಮವಾಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕುಂಭ ರಾಶಿ
ಸೂರ್ಯ ಕೇತು ರೂಪಿಸಿದ ಸಂಸಪ್ತಕ ಯೋಗವು ಕುಂಭ ರಾಶಿಯವರಿಗೆ ಶುಭ ತರಲಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸರಿದಾರಿಗೆ ಬರಲಿದೆ. ಹಲವು ವಿಚಾರಗಳಲ್ಲಿ ನಿಮ್ಮ ನಿಲುವು ಸರಿಯಾಗಿರಲಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಯಶಸ್ವಿಯಾಗುತ್ತವೆ. ವೃತ್ತಿಪರವಾಗಿ ನಿಮಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಕೆಲಸ ಮಾಡುವವರಿಗೆ ಪ್ರಗತಿಗೆ ಅವಕಾಶಗಳು ಸಿಗುತ್ತವೆ. ನಿಮ್ಮ ಹಣಕಾಸಿನ ವ್ಯವಹಾರವಾರವು ಬಹಳ ನೆಮ್ಮದಿಯಿಂದ ಅಥವಾ ಸುಲಭವಾಗಿ ಕೈ ಹಿಡಿಯಲಿದೆ. ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ಚರ್ಚೆಗಳು ಫಲಪ್ರದವಾಗಲಿದೆ. ನಿಮ್ಮ ವಾಹನ ಖರೀದಿ ಅಥವಾ ಮಾರಾಟ ಸಂಬಂಧಿತ ಅಡ್ಡಿಗಳಿಂದ ನಿವಾರಣೆಗಳಿವೆ.
ತುಲಾ ರಾಶಿ
ಸೂರ್ಯ ಕೇತು ರೂಪಿಸುವ ಸಮಸಪ್ತಕ ಯೋಗವು ತುಲಾ ರಾಶಿಯವರಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಅನಗತ್ಯ ವೆಚ್ಚಗಳು ಕಡಿಮೆಯಾಗುತ್ತವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ದೀರ್ಘಾವಧಿಯ ಆಸೆಗಳು ಈಡೇರುತ್ತವೆ. ವೃತ್ತಿಪರವಾಗಿ ಇದು ಅದ್ಭುತವಾಗಿರುತ್ತದೆ. ಹೊಸ ಉದ್ಯೋಗಗಳು ನಿಮ್ಮ ದಾರಿಗೆ ಬರುತ್ತವೆ. ಉದ್ಯಮಿಗಳು ಅನಿರೀಕ್ಷಿತ ಉತ್ತಮ ಲಾಭವನ್ನು ಪಡೆಯುತ್ತಾರೆ. ಸ್ವಂತ ಉದ್ಯೋಗ ಕಟ್ಟಿಕೊಳ್ಳುವ ಕನಸು ಹೊಂದಿರುವ ಮಂದಿ ಈ ಸಮಯದಲ್ಲಿ ದೊಡ್ಡ ಹೆಜ್ಜೆ ಇಡಲಿದ್ದಾರೆ.
ವೃಶ್ಚಿಕ ರಾಶಿ
ಸೂರ್ಯ ಮತ್ತು ಕೇತು ರೂಪಿಸುವ ಸಮಸಪ್ತಕ ಯೋಗವು ನಿಮ್ಮ ಅದೃಷ್ಟಕರ ದಿನಗಳ ತರಬಹುದು. ವೃತ್ತಿ ಜೀವನಕ್ಕೆ ಸಂಬಂಧಿಸಿದ ಹಲವು ವಿಚಾರದಲ್ಲಿ ಈ ಸಮಯವು ಅದೃಷ್ಟ ತರಲಿದೆ. ವ್ಯಾಪಾರದಲ್ಲಿ ಲಾಭವಿದೆ. ಕೆಲಸ ಮಾಡುವವರು ತಮ್ಮ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುತ್ತಾರೆ. ಪ್ರತಿಯೊಂದು ಕೆಲಸದಲ್ಲೂ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ. ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆ ಇದೆ. ಉಳಿತಾಯದ ಹಣವನ್ನು ಮುಖ್ಯ ಕೆಲಸಕ್ಕೆ ಬಳಸುವಿರಿ. ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ಮಂದಿಗೆ ಈ ಸಮಯವು ಅದೃಷ್ಟಕರವಾಗಲಿದೆ.



Click it and Unblock the Notifications