For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19: ಔಷಧಿಯಿಲ್ಲದೆಯೇ ಶ್ವಾಸಕೋಶದ ಆರೋಗ್ಯ ಹೆಚ್ಚಿಸಲು ಟಿಪ್ಸ್

|

ಶ್ವಾಸಕೋಶ ಎಂದರೆ ಮಾನವನ ಉಸಿರಾಟದ ಮುಖ್ಯ ಅಂಗವಾಗಿದೆ. ಸುಲಭವಾಗಿ ಹೇಳಬೇಕಾದರೆ ಮನುಷ್ಯ ದೇಹಕ್ಕೆ ಆಮ್ಲಜನಕ ತೆಗೆದುಕೊಂಡು ಇಂಗಾಲದ ಡೈ ಆಕ್ಸೈಡ್ ಹೊರಗೆ ಬಿಡುವ ಜವಾಬ್ದಾರಿ ಶ್ವಾಸಕೋಶದ್ದು. ಮನುಷ್ಯ ತುಂಬಾ ವರ್ಷ ಚೆನ್ನಾಗಿ ಬದುಕಬೇಕಂದ್ರೆ ಆತನ ಶ್ವಾಸಕೋಶ ಆರೋಗ್ಯವಾಗಿರಬೇಕು. ಶ್ವಾಸಕೋಶದಲ್ಲಿ ಏರುಪೇರಾದರೆ ಆತನ ಆರೋಗ್ಯದಲ್ಲೂ ಏರುಪೇರಾಗುತ್ತದೆ. ಆದರೆ ಇಂದು ದೇಶಾದ್ಯಂತ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಪೆಟ್ರೋಲ್-ಡೀಸೆಲ್ ಬಳಕೆಯಿಂದ ಗಾಳಿಯಲ್ಲಿ ಮಾಲಿನ್ಯ ಹೆಚ್ಚಿದೆ. ಅದ್ರಲ್ಲೂ ರಾಷ್ಟ್ರರಾಜಧಾನಿ ದೆಹಲಿಯಂತಹ ಪ್ರದೇಶದಲ್ಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಹೆಚ್ಚಿಗೆ ಸುಡುತ್ತಿರುವುದರಿಂದ ವಾಯುಮಾಲಿನ್ಯ ಎಂಬುದು ಪ್ರಮುಖ ದೊಡ್ಡ ಸಮಸ್ಯೆಯಾಗಿ ಮಾರ್ಪಾಟಾಗಿದೆ. ಮಿತಿ ಮೀರುತ್ತಿರುವ ವಾಯುಮಾಲಿನ್ಯದಿಂದ ಶ್ವಾಸಕೋಶ ಹಾಗೂ ಉಸಿರಾಟ ಸಂಬಂಧಿ ಕಾಯಿಲೆಗಳು ಕಾಮನ್ ಆಗಿವೆ. ಇನ್ನು ಕೊರೊನಾ ಸೋಂಕಿನ ಬಗ್ಗೆ ಮಾತನಾಡುವುದಾದರೆ, ಕೊರೊನಾ ವೈರಸ್ ಮನುಷ್ಯನ ಶ್ವಾಸಕೋಶದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಆತನ ಶ್ವಾಸಕೋಶವನ್ನು ಹಾಳುಗೆಡುವುತ್ತಿದೆ.

ಶ್ವಾಸಕೋಶ ಸರಿ ಇಲ್ಲದಿದ್ದರೆ ಏನಾಗುತ್ತದೆ?

ಶ್ವಾಸಕೋಶ ಸರಿ ಇಲ್ಲದಿದ್ದರೆ ಏನಾಗುತ್ತದೆ?

ಶ್ವಾಸಕೋಶ ಸರಿ ಇಲ್ಲದಿದ್ದರೆ ನಮ್ಮ ದೇಹದೊಳಗೆ ಸಮಸ್ಯೆ ಉಲ್ಬಣಿಸುತ್ತದೆ. ಎದೆ ಬಿಗಿತ, ಉಸಿರುಗಟ್ಟುವಿಕೆ, ಉಬ್ಬಸ, ಟಿಬಿ, ಲಂಗ್ ಕ್ಯಾನ್ಸರ್, ನಿರಂತರ ಕೆಮ್ಮು ಮುಂತಾದ ರೋಗಗಳನ್ನು ಉಂಟುಮಾಡುತ್ತದೆ. ಇದು ದೇಹದಲ್ಲಿನ ರೋಗನಿರೋಧಕತೆ ಕಡಿಮೆ ಮಾಡುವುದಲ್ಲದೆ ರೋಗಿಯ ಸಾವಿಗೂ ಪ್ರಮುಖ ಕಾರಣವಾಗಲಿದೆ. ಭಾರತದಲ್ಲಿ, ಸಿಒಪಿಡಿ (Chrobic lung inflammation and emphysema) ಕಾರಣದಿಂದ ಐದು ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಈ ರೋಗದ ಕಾರಣದಿಂದ ಅಮೆರಿಕ ಮತ್ತು ಯುರೋಪಿನಲ್ಲಿ ಸಾಯುತ್ತಿರುವ ಜನರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆ. 2016 ರ ವರ್ಷದಲ್ಲಿ 57 ಮಿಲಿಯನ್ ಗಿಂತ ಹೆಚ್ಚು ಜನರು ಇದರಿಂದ ಬಳಲುತ್ತಿದ್ದರೆಂದು ಅಂದಾಜಿಸಲಾಗಿದೆ, ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ರೋಗಗಳಲ್ಲಿ ಸಿಒಪಿಡಿ ಒಂದಾಗಿದೆ. ಹಾಗಾದ್ರೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳದೆ ನಮ್ಮ ಶ್ವಾಸಕೋಶ್ವದ ಆರೋಗ್ಯವನ್ನು ಕಾಪಾಡುವುದು ಹೇಗೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

1. ಧೂಮಪಾನ ಬಿಟ್ಟುಬಿಡಿ!

1. ಧೂಮಪಾನ ಬಿಟ್ಟುಬಿಡಿ!

ಶ್ವಾಸಕೋಶಕ್ಕೆ ಮೊದಲ ಅಪಾಯ ತಂದಿಡುವ ಸಾಧನ ಅಂದರೆ ಅದು ಧೂಮಪಾನ. ಹೌದು, ಧೂಮಪಾನ ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜಾಸ್ತಿ ಧೂಮಪಾನ ಮಾಡಿದಂತೆ ಸಿಒಪಿಡಿ (Chrobic lung inflammation and emphysema)ಯಂತಹ ಭೀಕರ ರೋಗ ನಮ್ಮನ್ನು ಆವರಿಸಬಹುದು. ಅಲ್ಲದೇ ಶ್ವಾಸಕೋಶ ಕ್ಯಾನ್ಸರ್ ಕೂಡ ಸಂಭವಿಸಬಹುದು. ಸಿಗರೇಟ್, ಗಾಂಜಾ, ಬೀಡಿ ಸೇರಿ ಯಾವುದೇ ರೀತಿಯ ಧೂಮಪಾನವಾದರೂ ಆತನ ಶ್ವಾಸಕೋಶದ ಮೇಲೆ ಗಂಭೀರ ಆರೋಗ್ಯ ಪರಿಣಾಮ ಬೀರುತ್ತದೆ. ಇದರಿಂದ ಪ್ರಾಣಕ್ಕೂ ಕುತ್ತು ಬರಬಹುದು.

2. ಮನೆಯನ್ನು ಸ್ವಚ್ಚವಾಗಿರಿಸಿ!

2. ಮನೆಯನ್ನು ಸ್ವಚ್ಚವಾಗಿರಿಸಿ!

ನಾವು ಮನೆಯಲ್ಲೇ ಹೆಚ್ಚಾಗಿರುವ ಕಾರಣ ದೇಹದೊಳಕ್ಕೆ ಹೆಚ್ಚಿಗಿನ ಗಾಳಿ ನಾವು ಮನೆಯಲ್ಲೇ ತೆಗೆದುಕೊಳ್ಳುತ್ತೇವೆ. ಮನೆ ಸ್ವಚ್ಚವಾಗಿರದೆ ಮಾಲಿನ್ಯದಿಂದ ತುಂಬಿದ್ದರೆ ನಮ್ಮ ದೇಹಕ್ಕೆ ಮಾಲಿನ್ಯ ತುಂಬಿದ ಗಾಳಿ ಹೋಗುತ್ತದೆ. ಇದರಿಂದ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮನೆಯಲ್ಲಿ ಪ್ಲಾಸ್ಟಿಕ್ ಹೊತ್ತಿಸುವುದು, ಕಟ್ಟಿಗೆಯಲ್ಲಿ ಅಡುಗೆ ಮಾಡುವುದು, ಕ್ಯಾಂಡಲ್ ಬಳಕೆ, ಸೀಮೆ ಎಣ್ಣೆ ಚಿಮಣಿ, ಮನೆಯಲ್ಲಿ ಹೆಚ್ಚಿನ ಸಮಯ ಏರ್ ಫ್ರೆಷ್ನರ್ ಬಳಕೆ ಮಾಡುವುದರಿಂದ ಮಾಲಿನ ಉಂಟಾಗುತ್ತದೆ. ಹೀಗಾಗಿ ಮನೆಯೊಳಗೆ ಇಂತಹ ವಸ್ತುಗಳ ಬಳಕೆ ಬಿಟ್ಟುಬಿಡಿ. ಈ ಮೂಲಕ ನಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

3. ಉಸಿರಾಟದ ವ್ಯಾಯಾಮ!

3. ಉಸಿರಾಟದ ವ್ಯಾಯಾಮ!

ಉಸಿರಾಟಕ್ಕೆ ಸಂಬಂಧಪಟ್ಟ ವ್ಯಾಯಾಮ ಮಾಡುವುದು ಒಳ್ಳೆಯದು. ದಿನ ನಿತ್ಯದ ವ್ಯಾಯಾಮದ ಜೊತೆಗೆ ಉಸಿರಾಟದ ವ್ಯಾಯಾಮವನ್ನು ಸೇರಿಸಿ ಇದರಿಂದ ಹೃದಯದ ಆರೋಗ್ಯ ಹಾಗೂ ಶ್ವಾಸಕೋಶದ ಆರೋಗ್ಯ ಉತ್ತಮವಾಗಿರುತ್ತದೆ. ಹೃದಯ ಹಾಗೂ ಶ್ವಾಸಕೋಶ ಅಣ್ಣ ತಮ್ಮ ಇದ್ದ ಹಾಗೇ. ಹೀಗಾಗಿ ಎರಡನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಇನ್ನು ಉಸಿರಾಟದ ವ್ಯಾಯಾಮಗಳು ಶ್ವಾಸಕೋಶಕ್ಕೆ ಗಾಳಿಯನ್ನು ದೀರ್ಘವಾಗಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ ಬ್ರೀಥ್ ಇನ್ ಬ್ರೀಥ್ ಔಟ್ ವ್ಯಾಯಾಮ, ಪ್ರಾಣಯಮಗಳನ್ನು ಮಾಡಿಕೊಳ್ಳಬಹುದು.

4. ಹೆಚ್ಚು ನೀರು ಕುಡಿಯಿರಿ!

4. ಹೆಚ್ಚು ನೀರು ಕುಡಿಯಿರಿ!

ಹೆಚ್ಚೆಚ್ಚು ನೀರನ್ನು ಕುಡಿಯುವ ಮೂಲಕ ನಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ನೀರು ನಮ್ಮ ಶ್ವಾಸಕೋಶವನ್ನು ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೇ ನಮ್ಮ ಶ್ವಾಸಕೋಶದಲ್ಲಿರುವ ಕಲುಶಿತವನ್ನು ಹೊರಗೆ ಹಾಕುವ ಶಕ್ತಿಯನ್ನು ನೀರು ಹೊಂದಿದೆ. ನೀರನ್ನು ಹೆಚ್ಚು ಹೆಚ್ಚು ಕುಡಿಯಿರಿ. ಅದರಲ್ಲೂ ಬಿಸಿ ನೀರು ಕುಡಿದರೆ ಇನ್ನು ಉತ್ತಮ.

5. ಒಳಾಂಗಣ ಗಿಡಗಳು ಇರಲಿ

5. ಒಳಾಂಗಣ ಗಿಡಗಳು ಇರಲಿ

ಮನೆಯಲ್ಲಿ ಮತ್ತು ಕಚೇರಿಯಲ್ಲಿ ಗಿಡಗಳನ್ನು ಇರಿಸಿಕೊಳ್ಳಿ. ಇವುಗಳಿಂದ ಮನೆ ಸುಂದರವಾಗಿ ಇರುವುದರ ಜೊತೆಗೆ ನಿಮಗೆ ಸೇವಿಸಲು ಉತ್ತಮ ಗಾಳಿ ಸಹ ದೊರೆಯುತ್ತದೆ. ಮನೆಯಲ್ಲಿ ಉತ್ತಮ ಆಕ್ಸಿಜನ್ ಸಿಗುವ ಪಾಟ್ ಗಳನ್ನು ಇರಿಸಿ ಇದರಿಂದ ನಿಮಗೆ ಆಮ್ಲಜನಕ ಸಿಗುತ್ತದೆ. ಈ ಮೂಲಕ ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿ ಇಡಬಹುದು.

6. ವಾಯು ಮಾಲಿನ್ಯ!

6. ವಾಯು ಮಾಲಿನ್ಯ!

ಮಹಾನಗರಗಳಲ್ಲಿ ವಾಸ ಮಾಡುವವರು ದಿನದ ಬಹುಪಾಲು ಮಾಲಿನ್ಯದಲ್ಲಿಯೇ ಬದುಕುತ್ತಾರೆ. ಅದರಲ್ಲೂ ವಾಹನ ಸವಾರರು ಮಾಲಿನ್ಯವನ್ನೆ ಉಸಿರಾಡುತ್ತಾರೆ. ಅದಕ್ಕಾಗಿ ಮಾಸ್ಕ್ ಧರಿಸಿ ಹೊರಗೆ ಹೋಗಿ, ವಾಹನ ಚಲಾಯಿಸುವಾಗ ಮಾಸ್ಕ್ ಧರಿಸಿ. ನಿಮ್ಮ ಮನೆ ಕಾರ್ಖಾನೆಗಳ ಪಕ್ಕ ಇದ್ದಲ್ಲಿ, ನೀವು ಯಾವಾಗಲು ಕಾರ್ಖಾನೆಗಳು ಹೊರ ಬಿಡುವ ಹೊಗೆಯನ್ನು ಸೇವಿಸಬಹುದು. ಗಿಡ ಮತ್ತು ಮರಗಳು ಹೆಚ್ಚಾಗಿರುವ ಕಡೆ ಮನೆಯನ್ನು ಮಾಡಿಕೊಳ್ಳಿ.

ಈ ರೀತಿ ನೀವು ಪಾಲಿಸಿದರೆ ಖಂಡಿತವಾಗಿಯೂ ನಿಮ್ಮ ಶ್ವಾಸಕೋಶ ಆರೋಗ್ಯವಾಗಿರುತ್ತದೆ. ಅಲ್ಲದೇ ನಿಮ್ಮ ಶ್ವಾಸಕೋಶ ಶಕ್ತಿ ಹಾಗೂ ಸದೃಢವಾಗುತ್ತದೆ ಈ ಮೂಲಕ ಯಾವುದೇ ರೋಗಗಳು ನಿಮ್ಮ ಶ್ವಾಸಕೋಶಕ್ಕೆ ಅಂಟುವುದಿಲ್ಲ.

English summary

COVID-19: How To Keep Your Lungs Healthy Without Medicines in Kannada

COVID-19: Here are tips to keep Lungs healthy without medicines Read on...
X
Desktop Bottom Promotion