For Quick Alerts
ALLOW NOTIFICATIONS  
For Daily Alerts

ಮಹಿಳೆಯರು ವಯಾಗ್ರ ಬಳಸಬಹುದೇ? ಇದರಿಂದ ಮಹಿಳೆಯರಿಗೆ ಅಡ್ಡಪರಿಣಾಮ ಉಂಟಾಗುವುದೇ?

|

ವಯಾಗ್ರ ಪುರುಷರು ಬಳಸುತ್ತಾರೆ,ಆದರೆ ಮಹಿಳೆಯರು ಇದನ್ನು ಬಳಸಬಹುದಾ? ಯಾವ ಸಂದರ್ಭದಲ್ಲಿ ವಯಾಗ್ರ ಬಳಸುವಂತೆ ವೈದ್ಯರು ಸೂಚಿಸುತ್ತಾರೆ, ಮಹಿಳೆಯರು ವಯಾಗ್ರ ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮಗಳೇನು ಎಂದು ನೋಡೋಣ ಬನ್ನಿ:

ಪುರುಷರ ಸಾಮರ್ಥ್ಯ ಹೆಚ್ಚಿಸುವ ಬ್ಲೂ ಪಿಲ್ಸ್‌ ಮಹಿಳೆಯರೂ ಬಳಸಬಹುದೇ?

ವಯಾಗ್ರ ಪುರುಷರು ಮಾತ್ರ ಬಳಸಬೇಕೆ? ಮಹಿಳೆಯರು ಬಳಸಿದರೆ ಏನಾಗುತ್ತೆ? ಈ ವಯಾಗ್ರ ಮಹಿಳೆಯರು ಬಳಸುವುದರಿಂದ ಅವರಲ್ಲಿ ಲೈಂಗಿಕ ತೊಂದರೆಗಳನ್ನು ಹೋಗಲಾಡಿಸಬಹುದೇ ಈ ಬಗೆಯ ಪ್ರಶ್ನೆ ಹಲವರಲ್ಲಿರುತ್ತದೆ. ಕೆಲವರು ಇಂಥ ಗುಪ್ತ ಸಮಸ್ಯೆ ಬಗ್ಗೆ ಬೇರೆಯವರ ಬಳಿ ಕೇಳಲಾಗದೆ ಸುಮ್ಮನಾಗುತ್ತಾರೆ, ಇನ್ನು ಕೆಲವರು ಲೈಂಗಿಕ ತಜ್ಞರ ಬಳಿ ಸಲಹೆ ಪಡೆದುಕೊಳ್ಳುತ್ತಾರೆ.

ಮಹಿಳೆಯರಿಗೆ ವಯಾಗ್ರ : ಯಾರು ಮಾತ್ರ ಬಳಸಬಹುದು?

ಮಹಿಳೆಯರಿಗೆ ವಯಾಗ್ರ : ಯಾರು ಮಾತ್ರ ಬಳಸಬಹುದು?

ಮಹಿಳೆಯರು ವಯಾಗ್ರ ಬಳಸಲು FDA ಅನುಮತಿ ನೀಡಿಲ್ಲ, ಆದರೆ ಕೆಲವೇ ಕೆಲವು ಮಹಿಳೆಯರಿಗೆ ಲೈಂಗಿಕ ತಜ್ಞರು ವಯಾಗ್ರ ತೆಗೆದುಕೊಳ್ಳಲು ಸೂಚಿಸುತ್ತಾರೆ. ಶೀಘ್ರ ಸ್ಖಲನ ಅಥವಾ ಕಡಿಮೆ ಸ್ಖಲನದ ಸಮಸ್ಯೆ ಇರುವವರಿಗೆ ವಯಾಗ್ರ ನೀಡಲಾಗುವುದು. ಕೆಲವು ಮಹಿಳೆಯರಿಗೆ ಲೈಂಗಿಕ ಸುಖ ಅನುಭವಿಸಲು ಸಾಧ್ಯವಿಲ್ಲ, ತಜ್ಞರ ಪ್ರಕಾರ ಇದಕ್ಕೆ ಪ್ರಮುಖ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಕೆಲವೊಂದು ಆರೋಗ್ಯ ಸಮಸ್ಯೆ ಅಥವಾ ಹಾರ್ಮೋನ್‌ಗಳ ಬದಲಾವಣೆಯಿಂದ ಈ ರೀತಿಯಾಗುವುದು.

ವಯಾಗ್ರ ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುವುದೇ?

ವಯಾಗ್ರ ಗುಪ್ತಾಂಗಕ್ಕೆ ರಕ್ತ ಸಂಚಾರ ಹೆಚ್ಚಿಸುವ ಕಾರ್ಯ ಮಾಡುತ್ತದೆ, ಇದರಿಂದಾಗಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ, ಆದರೆ ಲೈಂಗಿಕ ಆಸಕ್ತಿ ಕಡಿಮೆ ಇರುವ ಮಹಿಳೆಯರಿಗೆ ಇದು ಪರಿಣಾಮಕಾರಿಯಲ್ಲ.

ಮೆನೋಪಾಸ್‌ ಬಳಿಕ ಕುಗ್ಗುವ ಲೈಂಗಿಕ ಆಸಕ್ತಿ

ಮಹಿಳೆಯರಲ್ಲಿ ಮೆನೋಪಾಸ್ ಬಳಿಕ ಹಾರ್ಮೋನ್‌ಗಳ ಬದಲಾವಣೆಯಿಂದ ಲೈಂಗಿಕ ಆಸಕ್ತಿ ಹೆಚ್ಚುವುದು. ಇದಲ್ಲದೆ ಎನಾದರೂ ಆರೋಗ್ಯ ಸಮಸ್ಯೆಯಿದ್ದರೆ ಕೂಡ ಲೈಂಗಿಕ ಆಸಕ್ತಿ ಕಡಿಮೆಯಾಗುವುದು.

ವಯಾಗ್ರ ತೆಗೆದುಕೊಳ್ಳುವುದರಿಂದ ಉಂಟಾಗುವ ಅಡ್ಡಪರಿಣಾಮಗಳು

ವಯಾಗ್ರ ತೆಗೆದುಕೊಳ್ಳುವುದರಿಂದ ಉಂಟಾಗುವ ಅಡ್ಡಪರಿಣಾಮಗಳು

* ಸುಸ್ತು

* ಸರಿಯಾಗಿ ನಿದ್ದೆ ಬರುವುದಿಲ್ಲ

* ವಾಂತಿ ಬಂದಂತೆ ಅನಿಸುವುದು

* ಬಾಯಿ ಒಣಗುವುದು

* ಸುಸ್ತು

* ರಕ್ತದೊತ್ತಡ ತುಂಬಾ ಕಡಿಮೆಯಾಗುವುದು

* ಕೆಲವೊಮ್ಮೆ ಪ್ರಜ್ಞೆ ತಪ್ಪಿ ಬೀಳುವುದು

ಅದ್ದರಿಂದ ಮಹಿಳೆಯರಿಗೆ ವಯಾಗ್ರ ಅಷ್ಟು ಸುರಕ್ಷವಲ್ಲ ಎಂದು FDA ಹೇಳಿದೆ.

ಮಹಿಳೆಯರ ಲೈಂಗಿಕ ತೊಂದರೆಗಳನ್ನು ಹೇಗೆ ಬಗೆಹರಿಸಬಹುದು?

ಮಹಿಳೆಯರ ಲೈಂಗಿಕ ತೊಂದರೆಗಳನ್ನು ಹೇಗೆ ಬಗೆಹರಿಸಬಹುದು?

ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾದರೆ ಅನೇಕ ವಿಧಾನಗಳಿಂದ ಚಿಕಿತ್ಸೆ ನೀಡಲಾಗುವುದು

1. ಮಾನಸಿಕ ಸ್ಥಿತಿ ಹಾಗೂ ಪರಿಸರ

ಮಹಿಳೆಯರಲ್ಲಿ ಯಾವುದೇ ರೀತಿಯ ಬೇಸರ ಅಥವಾ ಖಿನ್ನತೆ ಇದ್ದರೆ ನಿಧಾನಕ್ಕೆ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಇದರಿಂದ ಶೀಘ್ರ ಸ್ಖಲನ ಉಂಟಾಗುವುದು. ಅಲ್ಲದೆ ಗಂಡ-ಹೆಂಡತಿ ನಡುವೆ ಪ್ರತಿನಿತ್ಯ ಜಗಳವಿದ್ದರೆ ಕೂಡ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಈ ಬಗೆಯ ಸಮಸ್ಯೆಯಿಂದ ಲೈಂಗಿಕ ಆಸಕ್ತಿ ಕಡಿಮೆಯಾದರೆ ಕೌನ್ಸಿಲಿಂಗ್ ನೀಡುವ ಮೂಲಕ ಗಂಡ-ಹೆಂಡತಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಲಾಗುವುದು.

ಹಾರ್ಮೋನ್‌ ಚಿಕಿತ್ಸೆ

ಇನ್ನು ಕೆಲವರಿಗೆ ಹಾರ್ಮೋನ್‌ಗಳ ಬದಲಾವಣೆಯಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುವುದು. ಆಗ ಓರಲ್ ಹಾರ್ಮೋನ್‌ ಪಿಲ್ಸ್ ಅಥವಾ ಜನನೇಂದ್ರೀಯಕ್ಕೆ ಹಚ್ಚಲು ಕ್ರೀಮ್ ಇವುಗಳ ಮೂಲಕ ಲೈಂಗಿಕ ಆಸಕ್ತಿ ಹೆಚ್ಚುವಂತೆ ಮಾಡಲಾಗುವುದು.

ಔಷಧಗಳು

ಲೈಂಗಿಕ ತಜ್ಞರನ್ನು ಭೇಟಿಯಾದಾಗ ಅವರು ನಿಮಗೆ ಕೆಲವೊಂದು ಔಷಧಗಳನ್ನು ಸೂಚಿಸುತ್ತಾರೆ, ಅವುಗಳನ್ನು ತೆಗೆದುಕೊಂಡರೆ ಲೈಂಗಿಕ ಸಮಸ್ಯೆ ಕಡಿಮೆಯಾಗುವುದು.

ಲೈಂಗಿಕ ಆಸಕ್ತಿ ಕುಗ್ಗುವುದನ್ನು ತಡೆಗಟ್ಟಬಹುದೇ?

ಲೈಂಗಿಕ ಆಸಕ್ತಿ ಕುಗ್ಗುವುದನ್ನು ತಡೆಗಟ್ಟಬಹುದೇ?

* ಮದ್ಯಸೇವನೆ ಮಾಡಬಾರದು

* ಆರೋಗ್ಯಕರ ಆಹಾರ ಸೇವಿಸಬೇಕು

* ಪ್ರತಿದಿನ ವ್ಯಾಯಾಮ ಮಾಡಿ

* ಆರೋಗ್ಯಕರ ಮೈ ತೂಕ ಹೊಂದಿ.

* ಅಗ್ಯತಬಿದ್ದರೆ ತಜ್ಞರ ಸಲಹೆ ಪಡೆಯಿರಿ.

ಲೈಂಗಿಕ ನಿರಾಸಕ್ತಿ ಶಾಶ್ವತ ಸಮಸ್ಯೆಯೇ?

ಲೈಂಗಿಕ ನಿರಾಸಕ್ತಿ ಶಾಶ್ವತ ಸಮಸ್ಯೆಯೇ?

ಕೆಲವು ಮಹಿಳೆಯರಿಗೆ ಲೈಂಗಿಕ ನಿರಾಸಕ್ತಿ ಕೆಲವು ಸಮಯದವರೆಗೆ ಮಾತ್ರ ಇರುವುದು, ಅಂದರೆ ಹಾರ್ಮೋನ್‌ಗಳ ಬದಲಾವಣೆಯಾದಾಗ ಲೈಂಗಿಕ ನಿರಾಸಕ್ತಿ ಉಂಟಾಗುವುದು. ಅಂದರೆ ಹೆರಿಗೆಯ ಬಳಿಕ ಅಥವಾ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಸ್ವಲ್ಪ ಸಮಯದವರೆಗೆ ಲೈಂಗಿಕ ನಿರಾಸಕ್ತಿ ಉಂಟಾಗುವುದು, ನಂತರ ಸರಿಯಾಗುವುದು. ಆದರೆ ಮೆನೋಪಾಸ್‌ ಬಳಿಕ ಲೈಂಗಿಕ ನಿರಾಸಕ್ತಿ ಉಂಟಾದರೆ ಅದು ಹಾಗೇ ಉಳಿಯುವುದು, ಇಂಥ ಸಂದರ್ಭದಲ್ಲಿ ಲೈಂಗಿಕ ತಜ್ಞರನ್ನು ಭೇಟಿಯಾಗಿ.'

ಗಂಡ-ಹೆಂಡತಿ ಬಾಂಧವ್ಯ ಗಟ್ಟಿಯಾಗಿಯಾಗಲು ಲೈಂಗಿಕ ತೃಪ್ತಿ ಮುಖ್ಯ

ದಾಂಪತ್ಯ ಜೀವನದಲ್ಲಿ ಲೈಂಗಿಕ ತೃಪ್ತಿ ತುಂಬಾನೇ ಮುಖ್ಯ. ಲೈಂಗಿಕ ತೃಪ್ತಿ ಇಲ್ಲದಿದ್ದರೆ ಅನೈತಿಕ ಸಂಬಂಧ, ಗಂಡ-ಹೆಂಡತಿ ನಡುವೆ ವಿರಸ ಈ ಬಗೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ನಿಮ್ಮಲ್ಲಿ ನಾನಾ ಕಾರಣಗಳಿಂದ ಲೈಂಗಿಕ ಆಸಕ್ತಿ ಕಡಿಮೆಯಾಗಿದೆ ಎಂದನಿಸಿದರೆ ಸೂಕ್ತ ಚಿಕಿತ್ಸೆ ಪಡೆಯಿರಿ, ಇದರಿಂದ ಸಂಸಾರದಲ್ಲಿ ಕಳೆದು ಹೋದ ಮಧುರ ಕ್ಷಣಗಳನ್ನು ಮತ್ತೆ ಪಡೆಯಬಹುದು.

English summary

Can women take viagra? Know the side effects of the little blue pill in kannada

viagra for women: Can women can take viagra, what are the side affects, read on..
Story first published: Monday, January 16, 2023, 15:26 [IST]
X
Desktop Bottom Promotion