For Quick Alerts
ALLOW NOTIFICATIONS  
For Daily Alerts

ಅಂಧತ್ವ or ಕುರುಡುತನ ಎಂದರೇನು? ಇಲ್ಲಿದೆ ಲಕ್ಷಣಗಳು, ಕಾರಣಗಳು, ಚಿಕಿತ್ಸೆ ಮತ್ತು ತಡೆಯುವುದು ಹೇಗೆ

|

ಕಣ್ಣಿನ ದೃಷ್ಟಿ ಕಳೆದುಕೊಂಡು ನಡಸುವಂತಹ ಜೀವನವು ತುಂಬಾ ಯಾತನಮಯವಾಗಿರುವುದು. ಯಾವುದೇ ವಸ್ತುಗಳನ್ನು ನೋಡಲು ಸಾಧ್ಯವಾಗದೆ, ತುಂಬಾ ಕಷ್ಟಪಡಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ, ದೈನಂದಿನ ಜೀವನದಲ್ಲೂ ಇದು ಪರಿಣಾಮ ಬೀರುವುದು. ಕೆಲವೊಂದು ಸಂದರ್ಭದಲ್ಲಿ ಬೇರೆಯವರ ನೆರವು ಪಡೆಯಬೇಕಾಗುತ್ತದೆ. ಬಾಲ್ಯದಿಂದಲೇ ಅಂಧತ್ವ ಬಂದಿದ್ದರೆ ಆಗ ಆ ವ್ಯಕ್ತಿಯು ಅದಕ್ಕೆ ಹೊಂದಿಕೊಂಡು ತನ್ನ ಕೆಲಸ ಕಾರ್ಯಗಳನ್ನು ಮಾಡುವಷ್ಟು ಸಮರ್ಥನಾಗಿರುತ್ತಾನೆ/ಳೆ. ಆದರೆ ಸರಿಯಾಗಿದ್ದ ಕಣ್ಣುಗಳು ಒಂದೇ ಸಲ ದೃಷ್ಟಿ ಕಳೆದುಕೊಂಡರೆ ಆಗ ಖಂಡಿತವಾಗಿಯೂ ಜೀವನ ನರಕವಾಗುವುದು. ಇಂತಹ ಪರಿಸ್ಥಿತಿಗೆ ಹೊಂದಿಕೊಳ್ಳಲು ವರ್ಷಗಳೇ ಬೇಕಾಗುವುದು.

Blindness

ಅಂಧತ್ವ ಎಂದರೆ ಯಾವುದೇ ವಸ್ತುಗಳನ್ನು ನೋಡಲು ಸಾಧ್ಯವಾಗದೆ ಇರುವುದು. ಅಂಶಿಕ ದೃಷ್ಟಿದೋಷವಿದ್ದರೆ ಆಗ ಸ್ವಲ್ಪ ಮಟ್ಟಿಗೆ ನೋಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ದೃಷ್ಟಿಯು ಮಂಜಿನಂತೆ ಇರಬಹುದು ಅಥವಾ ಕೆಲವೊಂದು ಆಕೃತಿಗಳನ್ನು ಗುರುತಿಸಲು ಆಗದೆ ಇರಬಹುದು. ಸಂಪೂರ್ಣ ಅಂಧತ್ವೆಂದರೆ ಏನು ಕಾಣದು.

ವೈಜ್ಞಾನಿಕವಾಗಿ ಅಂಧತ್ವದ ವ್ಯಾಖ್ಯಾನವು ತುಂಬಾ ಭಿನ್ನವಾಗಿದೆ. ಅದೇನೆಂದರೆ ಸಾಮಾನ್ಯ ವ್ಯಕ್ತಿಯ ಸುಮಾರು 200 ಅಡಿ ದೂರದಿಂದ ನೋಡಬಹುದಾದ ವಸ್ತುವನ್ನು ಅಂಧತ್ವ ಇರುವ ವ್ಯಕ್ತಿಯು 20 ಅಡಿಯಿಂದ ನೋಡುವುದು ಕಾನೂನುಬದ್ಧ ಅಂಧತ್ವ ಎನ್ನಲಾಗುತ್ತದೆ.

ನಿಮಗೆ ಯಾವುದೇ ದೃಷ್ಟಿದೋಷ ಕಂಡುಬಂದರೆ ಆಗ ತಕ್ಷಣವೇ ಹೋಗಿ ವೈದ್ಯಕೀಯ ನೆರವು ಪಡೆಯಿರಿ. ನಿಮ್ಮ ದೃಷ್ಟಿಗಳು ಮರಳಿ ಬರುವುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತುಕೊಳ್ಳಬೇಡಿ. ಅಂಧತ್ವಕ್ಕೆ ಕಾರಣ ತಿಳಿದುಕೊಂಡು ತಕ್ಷಣವೇ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯು ಶಸ್ತ್ರಚಿಕಿತ್ಸೆ ಅಥವಾ ಔಷಧಿ ಆಗಿರಬಹುದು.

ಅಂಧತ್ವದ ಲಕ್ಷಣಗಳು ಏನು?

ಅಂಧತ್ವದ ಲಕ್ಷಣಗಳು ಏನು?

ಕಣ್ಣಿನ ದೃಷ್ಟಿ ಇಲ್ಲದೆ ಇರುವುದನ್ನು ಅಂಧತ್ವ ಎಂದು ಕರೆಯುವರು. ಅಂಧ ವ್ಯಕ್ತಿಯು ಯಾವುದನ್ನೂ ನೋಡಲು ಸಾಧ್ಯವಿಲ್ಲ. ಅಂಧತ್ವವೆಂದರೆ ಎರಡು ಕಣ್ಣುಗಳಲ್ಲಿ ಬೆಳಕು ಕೂಡ ಕಾಣದೆ ಇರುವುದು. ಕೇವಲ ಅಂಧಕಾರ ಮಾತ್ರ ಆವರಿಸಿರುವುದು. ಅಂಧ ಮತ್ತು ಅಂಧತ್ವವನ್ನು ವಿವಿಧ ರೀತಿಯಿಂದ ತಿರುಚಿಕೊಂಡು ಕಣ್ಣಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಅಂಧತ್ವ ಎಂದರೆ ಒಂದು ಅಥವಾ ಎರಡು ಕಣ್ಣುಗಳಲ್ಲಿ ತೀವ್ರ ರೀತಿಯಾಗಿ ದೃಷ್ಟಿಯು ಇಲ್ಲದೆ ಇರುವುದು. ಅಂಶಿಕವಾಗಿ ನೀವು ಅಂಧತ್ವಕ್ಕೆ ಒಳಗಾಗಿದ್ದರೆ ಆಗ ಕೆಲವೊಂದು ಲಕ್ಷಣಗಳು ನಿಮ್ಮ ಅನುಭವಕ್ಕೆ ಬರುವುದು.

* ಮೋಡ ಕವಿದಂತಹ ದೃಷ್ಟಿ

* ಆಕೃತಿಗಳನ್ನು ಗುರುತಿಸಲು ಆಗದೆ ಇರುವುದು

* ಕೇವಲ ನೆರಳು ಕಾಣುವುದು

* ರಾತ್ರಿ ವೇಳೆ ಕಣ್ಣು ಕಾಣದಿರುವುದು

ಶಿಶುಗಳಲ್ಲಿ ಅಂಧತ್ವದ ಲಕ್ಷಣಗಳು

ಶಿಶುಗಳಲ್ಲಿ ಅಂಧತ್ವದ ಲಕ್ಷಣಗಳು

ಭ್ರೂಣದಲ್ಲಿ ಇರುವಾಗಲೇ ಮಗುವಿನ ಕಣ್ಣಿನ ದೃಷ್ಟಿಯು ಬೆಳೆಯಲು ಆರಂಭವಾಗುವುದು. ಆದರೆ ಎರಡು ವರ್ಷ ವಯಸ್ಸಿನ ತನಕ ಇದು ಸಂಪೂರ್ಣವಾಗಿ ಬೆಳೆಯುವುದಿಲ್ಲ.

6-8 ವಾರಗಳ ಅವಧಿಯಲ್ಲಿ ಮಗು ತನ್ನ ದೃಷ್ಟಿಯನ್ನು ಒಂದು ವಸ್ತುವಿನ ಮೇಲಿಟ್ಟು ಅದರ ಚಲನೆ ತಿಳಿಯಬಲ್ಲದು. 4 ತಿಂಗಳ ಅವಧಿಯಲ್ಲಿ ಮಗುವಿನ ಕಣ್ಣು ಸಂಪೂರ್ಣವಾಗಿ ಸಂಯೋಜಿತವಾಗಿರುವುದು ಮತ್ತು ಒಳಗಿನ ಹಾಗೂ ಒಳಗಿನ ಭಾಗಕ್ಕೆ ಇದು ತಿರುಗಿರಬಾರದು.

ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಣ್ಣಿನ ದೃಷ್ಟಿಯ ಲಕ್ಷಣಗಳು:

* ನಿರಂತರವಾಗಿ ಕಣ್ಣುಗಳನ್ನು ಉಜ್ಜಿಕೊಳ್ಳುವುದು

* ಬೆಳಕಿಗೆ ತುಂಬಾ ಸೂಕ್ಷ್ಮತೆ ಪ್ರದರ್ಶಿಸುವುದು

* ಕಳಪೆ ದೃಷ್ಟಿ

* ಕಣ್ಣು ಕೆಂಪಾಗುವುದು

* ಕಣ್ಣುಗಳಿಂದ ನಿರಂತರ ನೀರು ಬರುವುದು

* ಕಪ್ಪು ಕಣ್ಣಗೊಂಬೆ ಭಾಗದಲ್ಲಿ ಬಿಳಿ ಇರುವುದು

* ದೃಶ್ಯವನ್ನು ಹಿಂಬಾಲಿಸಲು ಅಥವಾ ಯಾವುದೇ ವಸ್ತುವಿನ ಚಲನೆ ಹಿಂಬಾಲಿಸಲು ವಿಫಲವಾಗುವುದು.

* ಅಸಾಮಾನ್ಯ ಕಣ್ಣಿನ ಸಂಯೋಜನೆ ಅಥವಾ ಆರು ತಿಂಗಳ ಬಳಿಕ ಚಲನೆ

ಅಂಧತ್ವಕ್ಕೆ ಕಾರಣಗಳು ಏನು?

ಅಂಧತ್ವಕ್ಕೆ ಕಾರಣಗಳು ಏನು?

ದೇಶದ ಸಾಮಾಜಿಕ ಸ್ಥಿತಿಗತಿಗಳನ್ನು ಕೂಡ ಅಂಧತ್ವದ ಅಧ್ಯಯನಗಳಲ್ಲಿ ಬಳಸಿಕೊಳ್ಳಲಾಗಿದೆ. ಅಭಿವೃದ್ಧಿ ಹೊಂದಿರುವಂತಹ ದೇಶಗಳಲ್ಲಿ ಅಂಧತ್ವಕ್ಕೆ ಕೆಲವೊಂದು ಕಾರಣಗಳೆಂದರೆ ಮಧುಮೇಹವು ತೀವ್ರವಾಗಿರುವುದು, ಅಕ್ಷಿಪಟಲದ ಅವನತಿ, ಗ್ಲೂಕೋಮಾ ಮತ್ತು ಆಘಾತಕಾರಿ ಗಾಯಗಳು. ಶೇ.90ರಷ್ಟು ಪ್ರಮಾಣದಲ್ಲಿ ಬದುಕುತ್ತಿರುವ ವಿಶ್ವದ ಮೂರನೇ ರಾಷ್ಟ್ರದಲ್ಲಿ ಅಂಧತ್ವಕ್ಕೆ ಸೋಂಕು, ಕಣ್ಣಿನ ಪೊರೆ, ಗ್ಲೂಕೋಮಾ, ಗಾಯ ಮತ್ತು ದೃಷ್ಟಿ ದೋಷದ ವೇಳೆ ಕನ್ನಡಕ ಧರಿಸದೆ ಇರುವುದು ಪ್ರಮುಖ ಕಾರಣಗಳು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕನ್ನಡಕ ಧರಿಸುವಂತಹ ಜನರಿಗೆ ಅಂಧತ್ವ ಶಬ್ಧವನ್ನು ಬಳಕೆ ಮಾಡಲಾಗುವುದಿಲ್ಲ.

ಕಣ್ಣಿನ ಕೆಲವು ರೋಗಗಳು ಮತ್ತು ಪರಿಸ್ಥಿತಿ ಅಂಧತ್ವ ಉಂಟು ಮಾಡಬಹುದು

ಕಣ್ಣಿನ ಕೆಲವು ರೋಗಗಳು ಮತ್ತು ಪರಿಸ್ಥಿತಿ ಅಂಧತ್ವ ಉಂಟು ಮಾಡಬಹುದು

ಗ್ಲೂಕೋಮಾ ಎನ್ನುವುದು ಒಂದು ಭಿನ್ನ ಕಣ್ಣಿನ ಪರಿಸ್ಥಿತಿಯಾಗಿದ್ದು, ಇದು ಆಪ್ಟಿಕ್ ನರಗಳಿಗೆ ಹಾನಿ ಮಾಡುವುದು. ಈ ನರಗಳು ಕಣ್ಣಿನಿಂದ ಮೆದುಳಿಗೆ ದೃಶ್ಯ ಮಾಹಿತಿ ಸಾಗಿಸುವುದು.

ಅಕ್ಷಿಪಟಲದ ಅವನತಿಯು ನಿಮ್ಮ ಕಣ್ಣಿನ ಒಂದು ಭಾಗಕ್ಕೆ ಹಾನಿ ಉಂಟು ಮಾಡುವುದು. ಇದರಿಂದ ಸರಿಯಾಗಿ ನೋಡಲು ಆಗದು. ಇದು ಹೆಚ್ಚಾಗಿ ವಯಸ್ಸಾದವರಲ್ಲಿ ಕಂಡುಬರುವುದು. ಕಣ್ಣಿನ ಪೊರೆಯು ದೃಷ್ಟಿ ಮಂಜಾಗುವಂತೆ ಮಾಡುವುದು. ಇದು ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುವುದು. ಕಣ್ಣುಗಳಲ್ಲಿ ವಿವರವಾಗಿ ಏನನ್ನೂ ನೋಡಲು ಆಗದು ಮತ್ತು ಇದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯು ಇದೆ.

ಕಣ್ಣಿನ ನರಗಳ ಉರಿಯೂತವು ಒಂದು ರೀತಿಯ ಉರಿಯೂತವಾಗಿದ್ದು, ಇದರಿಂದ ತಾತ್ಕಾಲಿಕ ಅಥವಾ ಶಾಶ್ವತ ಅಂಧತ್ವ ಬರಬಹುದು. ರೆಟಿನೈಟಿಸ್ ಪಿಗ್ಮೆಂಟೋಸಾ ಎನ್ನುವುದು ಅಕ್ಷಿಪಟಲಕ್ಕೆ ಆಗುವ ಹಾನಿಯಾಗಿದೆ. ಇದು ತುಂಬಾ ಅಪರೂಪದ ಸಂದರ್ಭದಲ್ಲಿ ಅಂಧತ್ವ ಉಂಟು ಮಾಡುವುದು. ಅಕ್ಷಿಪಟಲ ಮತ್ತು ಕಣ್ಣಿನ ನರಗಳಿಗೆ ಗಡ್ಡೆಗಳು ಹಾನಿ ಮಾಡಿದರೆ ಆಗ ಅಂಧತ್ವ ಉಂಟಾಗುತ್ತದೆ. ಮಧುಮೇಹ ಅಥವಾ ಪಾರ್ಶ್ವವಾಯು ಪೀಡಿತರಾಗಿದ್ದರೆ ಆಗ ಅಂಧತ್ವವು ತುಂಬಾ ಕ್ಲಿಷ್ಟವಾಗಿರುವುದು.

ಅಂಧತ್ವಕ್ಕೆ ಇತರ ಕೆಲವು ಕಾರಣಗಳು

ಜನನ ದೋಷಗಳು

ಕಣ್ಣಿನ ಗಾಯ

ಕಣ್ಣಿನ ಶಸ್ತ್ರಚಿಕಿತ್ಸೆಯಿಂದ ತೊಂದರೆ

ಅಂಧತ್ವದ ಲಕ್ಷಣ ಮತ್ತು ಚಿಹ್ನೆಗಳು ಯಾವುವು?

ಅಂಧತ್ವದ ಲಕ್ಷಣ ಮತ್ತು ಚಿಹ್ನೆಗಳು ಯಾವುವು?

ಅಂಧತ್ವದ ಸಾಮಾನ್ಯ ಲಕ್ಷಣಗಳು ದೃಷ್ಟಿ ಸರಿಯಾಗಿ ಇಲ್ಲದೆ ಇರುವುದು. ಸಾಮಾನ್ಯವಾಗಿ ಒಂದೇ ರೀತಿಯ ದೃಷ್ಟಿದೋಷವಿದ್ದರೂ ಅವರಲ್ಲಿನ ಲಕ್ಷಣಗಳು ಮಾತ್ರ ತುಂಬಾ ಭಿನ್ನವಾಗಿ ಇರಬಹುದು. ಒಬ್ಬ ವ್ಯಕ್ತಿಯ ಜನ್ಮತಃ ಅಂಧತ್ವ ಹೊಂದಿದ್ದರೆ ಆಗ ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿಲ್ಲ. ಆದರೆ ಕಣ್ಣಿನ ದೃಷ್ಟಿ ಸರಿಯಿದ್ದು, ಒಮ್ಮೆಲೇ ಅದನ್ನು ಕಳಕೊಂಡರೆ ಆಗ ಖಂಡಿತವಾಗಿಯೂ ಇದನ್ನು ನಿಭಾಯಿಸಲು ಸ್ವಲ್ಪ ಮಟ್ಟಿಗೆ ಕಷ್ಟವಾಗಬಹುದು. ಎಲ್ಲಾ ರೀತಿಯ ವ್ಯವಸ್ಥೆಯು ಇಂತಹ ಜನರಿಗೆ ಸಿಗುವುದು ಮತ್ತು ಅವರ ಮಾನಸಿಕ ಸ್ಥೈರ್ಯವು ಇದನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹಠಾತ್ ಆಗಿ ಅಥವಾ ಕೆಲವು ವರ್ಷಗಳಲ್ಲಿ ಕಣ್ಣಿನ ದೃಷ್ಟಿ ಸಂಪೂರ್ಣ ಕಳೆದುಕೊಂಡ ವ್ಯಕ್ತಿಗಳಲ್ಲಿ ಕಣ್ಣ ದೃಷ್ಟಿ ಕಳಕೊಂಡಿರುವುದಕ್ಕೆ ಹೊಂದಿಕೊಳ್ಳುವುದು ತುಂಬಾ ಕಷ್ಟವಾಗುವುದು.

ಯಾರಿಗೆಲ್ಲಾ ಅಂಧತ್ವದ ಅಪಾಯವಿರುವುದು?

ಯಾರಿಗೆಲ್ಲಾ ಅಂಧತ್ವದ ಅಪಾಯವಿರುವುದು?

* ಕಣ್ಣಿನ ಕಾಯಿಲೆ ಇರುವ ಜನರು. ಅಕ್ಷಿಪಟಲದ ಅವನತಿ ಮತ್ತು ಗ್ಲೂಕೋಮಾ ಇತ್ಯಾದಿ.

* ಮಧುಮೇಹ ಇರುವ ಜನರು

* ಪಾರ್ಶ್ವವಾಯುವಿಗೆ ತುತ್ತಾದವರು

* ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದವರು

* ಚೂಪಾದ ವಸ್ತುಗಳೊಂದಿಗೆ ಕೆಲಸ ಮಾಡುವವರು

* ವಿಷಕಾರಿ ರಾಸಾಯನಿಕಗಳ ಬಳಕೆ ಮಾಡುವವರು.

* ಅಕಾಲಿಕ ಹೆರಿಗೆಯಾದ ಮಗು

ಅಂಧತ್ವವನ್ನು ಪತ್ತೆ ಮಾಡುವುದು ಹೇಗೆ?

ಅಂಧತ್ವವನ್ನು ಪತ್ತೆ ಮಾಡುವುದು ಹೇಗೆ?

ಪ್ರತೀ ಕಣ್ಣನ್ನು ಪ್ರತ್ಯೇಕವಾಗಿ ಪರೀಕ್ಷೆ ಮಾಡುವ ಮೂಲಕ, ದೃಷ್ಟಿ ಸೂಕ್ಷ್ಮತೆ ಅಳೆಯುವುದು ಮತ್ತು ಬಾಹ್ಯ ದೃಷ್ಟಿಯಿಂದ ಇದನ್ನು ಪರೀಕ್ಷಿಸಬಹುದು. ಕೆಲವು ಜನರಿಗೆ ಒಂದು ಕಣ್ಣು(ಏಕಪಕ್ಷೀಯ ಕುರುಡುತನ) ಅಥವಾ ಎರಡು ಕಣ್ಣುಗಳು(ದ್ವಿಪಕ್ಷೀಯ ಕುರುಡುತನ) ಅಂಧತ್ವ ಬರಬಹುದು. ಇತಿಹಾಸದ ದಾಖಲೆಗಳಿಂದ ಕೆಲವೊಂದು ಅಂಧತ್ವವನ್ನು ಪತ್ತೆ ಮಾಡಲು ಸಹಕಾರಿ ಆಗಿದೆ. ದೀರ್ಘಕಾಲಿಕ ಕುರುಡುತನ ಮತ್ತು ಹಠಾತ್ ಆಗಿ ಬರುವಂತಹ ಕುರುಡುತನಕ್ಕೆ ಕಾರಣಗಳು ತುಂಬಾ ಭಿನ್ನವಾಗಿ ಇರುವುದು. ತಾತ್ಕಾಲಿಕ ಕುರುಡುತನ ಮತ್ತು ಶಾಶ್ವತ ಕುರುಡುತನದ ಮಧ್ಯೆ ತುಂಬಾ ವ್ಯತ್ಯಾಸವಿದೆ. ನೇತ್ರಶಾಸ್ತ್ರಜ್ಞರು ಇದನ್ನು ಪರೀಕ್ಷೆ ಮಾಡಿಕೊಂಡು ಕುರುಡುತನಕ್ಕೆ ಕಾರಣ ತಿಳಿಯುವರು.

ಕಣ್ಣಿನ ಪರೀಕ್ಷೆಗಳು

* ದೃಷ್ಟಿಯ ಸ್ಪಷ್ಟತೆ

* ಕಣ್ಣಿನ ಸ್ನಾಯುಗಳ ಕಾರ್ಯನಿರ್ವಹಣೆ

* ಕಣ್ಣಗೊಂಬೆಯು ಬೆಳಕಿಗೆ ಹೇಗೆ ಪ್ರತಿಕ್ರಿಯಿಸುವುದು

* ಸಣ್ಣ ಲ್ಯಾಂಪ್ ಬಳಸಿಕೊಂಡು ಕಣ್ಣಿನ ಸಾಮಾನ್ಯ ಆರೋಗ್ಯವನ್ನು ಪರೀಕ್ಷೆ.

ಇದು ಕಡಿಮೆ-ಶಕ್ತಿಯ ಮೈಕ್ರೋಸ್ಕೋಪ್ ಅನ್ನು ಹೆಚ್ಚಿನ-ತೀವ್ರತೆಯ ಬೆಳಕಿನೊಂದಿಗೆ ಜೋಡಿಸಲಾಗಿದೆ.

ಅಂಧತ್ವಕ್ಕೆ ಚಿಕಿತ್ಸೆ ಏನು?

ಅಂಧತ್ವಕ್ಕೆ ಚಿಕಿತ್ಸೆ ಏನು?

* ಕನ್ನಡಕ

* ಕಾಂಟೆಕ್ಟ್ ಲೆನ್ಸ್

* ಶಸ್ತ್ರಚಿಕಿತ್ಸೆ

* ಔಷಧಿ

ಅಂಶಿಕವಾಗಿ ಇರುವಂತಹ ದೃಷ್ಟಿದೋಷವನ್ನು ಸರಿಪಡಿಸಲು ಆಗದೆ ಇದ್ದರೆ ಆಗ ವೈದ್ಯರು, ದೃಷ್ಟಿ ಕಡಿಮೆ ಇದ್ದರೂ ಹೇಗೆ ಇದನ್ನು ನಿಭಾಯಿಸುವುದು ಎಂದು ಹೇಳುವರು. ಉದಾಹರಣೆಗೆ, ಓದಲು ನೀವು ಭೂತಗನ್ನಡಿ ಬಳಸಬಹುದು ಮತ್ತು ಕಂಪ್ಯೂಟರ್ ನಲ್ಲಿ ಅಕ್ಷರಗಳ ಗಾತ್ರ ಹೆಚ್ಚಿಸಬಹುದು ಮತ್ತು ಆಡಿಯೋ ವಾಚ್ ಮತ್ತು ಆಡಿಯೋ ಪುಸ್ತಕಗಳನ್ನು ಬಳಸಬಹುದು.

ಸಂಪೂರ್ಣ ಅಂಧತ್ವ ಕಾಣಿಸಿಕೊಂಡರೆ ಆಗ ಜೀವನವನ್ನು ಹೊಸ ರೀತಿಯಲ್ಲಿ ಆರಂಭಿಸಬೇಕು ಮತ್ತು ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ ನೀವು ಬ್ರೈಲಿ ಲಿಪಿ ಓದುವುದು ಹೇಗೆ ಎಂದು ತಿಳಿಯಿರಿ.

ಅಂಧತ್ವ ಬರುವುದನ್ನು ತಡೆಯವುದು ಹೇಗೆ?

ಅಂಧತ್ವ ಬರುವುದನ್ನು ತಡೆಯವುದು ಹೇಗೆ?

ಕಣ್ಣಿನ ಕಾಯಿಲೆಗಳನ್ನು ಪತ್ತೆ ಮಾಡಿ ಮತ್ತು ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಿರಿ. ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ. ಯಾವುದೇ ರೀತಿಯ ಕಣ್ಣಿನ ಸಮಸ್ಯೆಯಾದ ಗ್ಲೂಕೋಮಾ ಕಂಡುಬಂದರೆ ಆಗ ನೀವು ಅಂಧತ್ವ ನಿವಾರಣೆ ಮಾಡಬಹುದು.

ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದನ್ನು ತಡೆಯಲು ಮಕ್ಕಳ ಕಣ್ಣಿನ ಪರೀಕ್ಷೆಯನ್ನು ನಿಗದಿತವಾಗಿ ಈ ಸಮಯದಲ್ಲಿ ಮಾಡಿಸಬೇಕು.

* 6 ತಿಂಗಳ ಅವಧಿ

* 3 ವರ್ಷದ ಅವಧಿ.

* 6-17 ವರ್ಷದ ವಯಸ್ಸಿನಲ್ಲಿ.

ನೀವು ಪರೀಕ್ಷೆ ಮಾಡಿಕೊಳ್ಳುವ ವೇಳೆ ಯಾವುದೇ ರೀತಿಯ ಲಕ್ಷಣಗಳು ಕಂಡುಬಂದರೆ ಆಗ ಕಣ್ಣಿನ ವೈದ್ಯರೊಂದಿಗೆ ನೀವು ಪರೀಕ್ಷೆ ಮಾಡಿಕೊಳ್ಳುವುದು ಅತೀ ಅಗತ್ಯ.

English summary

Blindness: signs, symptoms, causes, diagnose and prevention

Blindness is the inability to see anything, including light. If you’re partially blind, you have limited vision. For example, you may have blurry vision or the inability to distinguish the shapes of objects. Complete blindness means you can’t see at all. Legal blindness refers to vision that’s highly compromised. What a person with regular vision can see from 200 feet away, a legally blind person can see from only 20 feet away. Seek medical attention right away if you suddenly lose the ability to see. Have someone bring you to the emergency room for treatment. Don’t wait for your vision to return. Depending on the cause of your blindness, immediate treatment may increase your chances for restoring your vision. Treatment may involve surgery or medication.
X
Desktop Bottom Promotion