For Quick Alerts
ALLOW NOTIFICATIONS  
For Daily Alerts

ಬಾಸ್ಮತಿ ಅಕ್ಕಿಯಲ್ಲಿದೆ ಕ್ಯಾನ್ಸರ್ ಅಪಾಯ ತಗ್ಗಿಸುವ ಶಕ್ತಿ! ಇಂತಹ ಹತ್ತುಹಲವು ಪ್ರಯೋಜನಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

|

ಬಾಸ್ಮತಿ ಅಕ್ಕಿ ಯಾರಿಗೆ ಇಷ್ಟ ಇಲ್ಲ ಹೇಳಿ? ಪರಿಮಳಯುಕ್ತವಾದ, ಉದ್ದವಾದ ಅನ್ನದಿಂದ ಬಿರಿಯಾನಿ, ಪಲಾವ್ ಮಾಡಿದರೆ, ಸವಿಯದವರೇ ಇಲ್ಲ. ಇಂತಹ ಬಾಸ್ಪತಿ ಅಕ್ಕಿಯಲ್ಲಿ ನೀವು ಊಹಿಸಿರದಂತಹ ಆರೋಗ್ಯ ಪ್ರಯೋಜನಗಳಿವೆ. ಈ ಅಕ್ಕಿಯಲ್ಲಿರುವ ಅಗಾಧ ಪೌಷ್ಟಿಕಾಂಶಗಳಿಂದ ಕ್ಯಾನ್ಸರ್ ನಂತಹ ಅಪಾಯವನ್ನು ಕಡಿಮೆಮಾಡಬಹುದು. ಹಾಗಾದರೆ ಬನ್ನಿ ಈ ಬಾಸ್ಮತಿ ಅಕ್ಕಿಯಲ್ಲಿ ಎಷ್ಟು ವಿಧಗಳಿವೆ? ಅದರಿಂದ ಸಿಗುವ ಆರೋಗ್ಯ ಲಾಭಗಳೇನು? ಎಂಬುದನ್ನು ಸವಿವರವಾಗಿ ನೋಡೋಣ.

ಬಾಸ್ಪತಿ ಅಕ್ಕಿಯ ವಿಧಗಳು, ಅದರಲ್ಲಿರುವ ಪೋಷಕಾಂಶಗಳು ಹಾಗೂ ಅದರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ;

ಬಾಸ್ಮತಿ ಅಕ್ಕಿಯ ವಿಧಗಳು :

ಬಾಸ್ಮತಿ ಅಕ್ಕಿಯ ವಿಧಗಳು :

ಸುಮಾರು 29 ವಿಧದ ಬಾಸ್ಮತಿ ಅಕ್ಕಿಯನ್ನು ಗುರುತಿಸಲಾಗಿದ್ದು, ಪ್ರತಿಯೊಂದು ತನ್ನದೇ ಆದ ವಿಶಿಷ್ಟ ಗುಣಗಳು, ರುಚಿ, ವಿನ್ಯಾಸ, ನೋಟ ಮತ್ತು ಪೌಷ್ಟಿಕಾಂಶದ ಅಂಶಗಳಿವೆ. ಬಾಸ್ಮತಿ ಅಕ್ಕಿಯ ಕೆಲವು ಪ್ರಮುಖ ವಿಧಗಳು:

ಪೂಸಾ ಬಾಸ್ಮತಿ 1121:

ಇದನ್ನು ಮುಚಲ್ ಬಾಸ್ಮತಿ ಎಂದೂ ಕರೆಯುತ್ತಾರೆ, ಇದು ಹೆಚ್ಚು ಬಳಸುವ ಬಾಸ್ಮತಿ ಅಕ್ಕಿಯಲ್ಲಿ ಒಂದಾಗಿದೆ. ಇದು ಉದ್ದವಾದ ತುದಿಯನ್ನು ಹೊಂದಿದ್ದು, ಅನ್ನು ಮೃದುವಾಗಿ ರುಚಿಯಾಗಿರುತ್ತದೆ. ಈ ಅಕ್ಕಿಯನ್ನು ಹೆಚ್ಚಾಗಿ ಬಿರಿಯಾನಿ ತಯಾರಿಸಲು ಬಳಸಲಾಗುತ್ತದೆ.

ಪೂಸಾ ಬಾಸ್ಮತಿ - 1:

ಪೂಸಾ ಬಾಸ್ಮತಿ 1 ಉದ್ದವಾಗಿದ್ದು, ಆಹ್ಲಾದಕರ ಪರಿಮಳವನ್ನು ಹೊಂದಿದೆ. ಬೇಯಿಸಿದಾಗ ಸಾಮಾನ್ಯ ಗಾತ್ರಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗುವ ಈ ಅಕ್ಕಿ ಸುಲಭವಾಗಿ ಜೀರ್ಣವಾಗುತ್ತದೆ.

ರಣಬೀರ್ ಬಾಸ್ಮತಿ:

ಈ ವಿಧವು ಬಹಳ ಜನಪ್ರಿಯವಾಗಿದ್ದು, ಇದನ್ನು ಜಮ್ಮು -ಕಾಶ್ಮೀರ ಮತ್ತು ಡೆಹ್ರಾಡೂನ್ ಪ್ರದೇಶಗಳಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಇದರ ಅನ್ನ ಉತ್ತಮ ಸುವಾಸನೆ ಮತ್ತು ರುಚಿಯನ್ನು ಹೊಂದಿರುತ್ತವೆ.

ಬಾಸುಮತಿ 386 :

ಬಾಸ್ಮತಿ 386 ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೀಮಿಯಂ ವಿಧವಾಗಿದೆ. ಇದನ್ನು ಬೇಯಿಸಿದಾಗ ಇರುವ ಉದ್ದಕ್ಕಿಂತ ಎರಡು ಪಟ್ಟು ದೊಡ್ಡದಾಗುತ್ತದೆ.

ತಾರೋರಿ ಬಾಸ್ಮತಿ:

ತಾರೋರಿ ಬಾಸ್ಮತಿಯನ್ನು ಕರ್ನಲ್ ಲೋಕಲ್ ಎಂದೂ ಕರೆಯುತ್ತಾರೆ, ಇದು ತಾರೋರಿ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯುವ ಅಕ್ಕಿಯಾಗಿದೆ. 1933 ರಿಂದ ಬೆಳೆಯಲಾಗುತ್ತಿರುವ ಅತ್ಯಂತ ಹಳೆಯ ಬಾಸುಮತಿ ಅಕ್ಕಿಯೆಂದು ನಂಬಲಾಗಿದೆ. ಇದನ್ನು ಸಾಮಾನ್ಯವಾಗಿ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ.

ಬಾಸುಮತಿ 217 :

ಬಾಸ್ಮತಿ 217 ಭಾರತದಲ್ಲಿ ಲಭ್ಯವಿರುವ ಹೊಸ ಪ್ರಕಾರ. ಅದರ ವಿಶಿಷ್ಟ ರುಚಿ ಮತ್ತು ಶ್ರೀಮಂತ ಸುವಾಸನೆಗಾಗಿ ಇದು ಬಹಳ ಮೌಲ್ಯಯುತವಾಗಿದೆ. ಧಾನ್ಯಗಳು ಹೆಚ್ಚು ಉದ್ದ ಮತ್ತು ಸೂಪರ್ಫೈನ್ ಆಗಿದ್ದು ರುಚಿಯಾದ ಬಿರಿಯಾನಿ ಮತ್ತು ಇತರ ಖಾದ್ಯಗಳನ್ನು ತಯಾರಿಸಲು ಉತ್ತಮವಾಗಿದೆ.

ಬಾಸ್ಮತಿ ಅಕ್ಕಿಯ ಪೌಷ್ಟಿಕಾಂಶಗಳು:

ಬಾಸ್ಮತಿ ಅಕ್ಕಿಯ ಪೌಷ್ಟಿಕಾಂಶಗಳು:

ಪರಿಮಳಯುಕ್ತ ಬಾಸ್ಮತಿ ಅಕ್ಕಿ ಎರಡು ವಿಧದಲ್ಲಿ ಲಭ್ಯವಿದ್ದು, ಕಂದು ಮತ್ತು ಬಿಳಿ ಬಣ್ಣದಲ್ಲಿರುತ್ತದೆ. ಕಂದು ಬಣ್ಣದ ಬಾಸ್ಮತಿ ಅಕ್ಕಿಯು ಹೊರಗಿನ ಹೊಟ್ಟು ಪದರವನ್ನು ಉಳಿಸಿಕೊಂಡಿರುವುದರಿಂದ ಹೆಚ್ಚಿನ ಫೈಬರ್ ಹೊಂದಿರುತ್ತದೆ. ಬಿಳಿ ಬಣ್ಣದಲ್ಲಿ ಇದನ್ನು ಸಂಸ್ಕರಿಸಿ ಹೊಟ್ಟು ತೆಗೆಯಲಾಗುತ್ತದೆ.

ಪರಿಮಳಯುಕ್ತ ಬಾಸ್ಮತಿ ಅಕ್ಕಿಯಲ್ಲಿ ವಿಟಮಿನ್, ಖನಿಜಾಂಶ, ಫೈಬರ್, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕನಿಷ್ಟ ಕೊಬ್ಬು ಇದ್ದು ಇದು ಆರೋಗ್ಯಕರ ಆಹಾರ ಕ್ರಮಕ್ಕೆ ಹೊಂದಿಕೊಳ್ಳಲು ಸೂಕ್ತ ಆಹಾರವಾಗಿದೆ. ಇವುಗಳಲ್ಲದೆ, ಬಾಸ್ಮತಿ ಅಕ್ಕಿಯು ತಾಮ್ರ, ಸತು, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಶಿಯಂ, ವಿಟಮಿನ್ ಬಿ 1, ಬಿ 6, ಇ, ಕೆ ಮತ್ತು ಪ್ಯಾಂಟೊಥೆನಿಕ್ ಆಮ್ಲಗಳಂತಹ ಅಸಂಖ್ಯಾತ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ. ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಾಗಿವೆ.

ಒಂದು ಕಪ್ ಬಾಸ್ಪತಿ ಅನ್ನದಲ್ಲಿರುವ ಪೋಷಕಾಂಶಗಳು:

ಕ್ಯಾಲೋರಿಗಳು: 210

ಪ್ರೋಟೀನ್: 4.4 ಗ್ರಾಂ

ಕೊಬ್ಬು: 0.5 ಗ್ರಾಂ

ಕಾರ್ಬೋಹೈಡ್ರೇಟ್ಗಳು: 45.6 ಗ್ರಾಂ

ಫೈಬರ್: 0.7 ಗ್ರಾಂ

ಸೋಡಿಯಂ: 399 ಮಿಗ್ರಾಂ

ಆಯುರ್ವೇದದಲ್ಲಿ ಬಾಸ್ಮತಿ ಅಕ್ಕಿಗೆ ಯಾಕೆ ಮಹತ್ವ ಹೆಚ್ಚು?:

ಆಯುರ್ವೇದದಲ್ಲಿ ಬಾಸ್ಮತಿ ಅಕ್ಕಿಗೆ ಯಾಕೆ ಮಹತ್ವ ಹೆಚ್ಚು?:

ಆಯುರ್ವೇದ ನಿಯಮಗಳ ಪ್ರಕಾರ, ಬಾಸ್ಮತಿ ಅಕ್ಕಿಯನ್ನು ವಾತ, ಪಿತ್ತ ಹಾಗೂ ಕಫ ಎಂಬ ಮೂರು ದೋಷಗಳನ್ನು ಸಮತೋಲನಗೊಳಿಸಲು ಬಳಸಲಾಗುತ್ತದೆ. ನಾವು ತಿನ್ನುವ ಪ್ರತಿಯೊಂದು ರೀತಿಯ ಆಹಾರದಲ್ಲಿ ಈ ಮೂರು ದೋಷಗಳನ್ನು ಸಮತೋಲಗೊಳಿಸುವ ಶಕ್ತಿ ಇದ್ದರೆ ಒಳ್ಳೆಯದು. ಆದರೆ ಅಂತಹ ಆಹಾರ ಸಿಗುವುದು ಅಪರೂಪ. ಅದಕ್ಕಾಗಿಯೇ ಬಾಸ್ಮತಿ ಅಕ್ಕಿಗೆ ಹೆಚ್ಚಿನ ಬೆಲೆ ಇರುವುದು. ಇದು ಈ ಮೂರು ದೋಷಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುವುದು. ಆದರೆ ಹೆಚ್ಚು ಸೇವಿಸಿದರೆ, ಕಫ ದೋಷವನ್ನು ಹೆಚ್ಚಿಸಬಹುದು.

ಬಾಸ್ಮತಿ ಅಕ್ಕಿಯನ್ನು ಸಾತ್ವಿಕ ಅಥವಾ ಶುದ್ಧವೆಂದು ಪರಿಗಣಿಸಲಾಗುತ್ತದೆ, ಇದು ಮನಸ್ಸು ಮತ್ತು ದೇಹವನ್ನು ಸಮತೋಲನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಆಯುರ್ವೇದದ ಪ್ರಕಾರ, ಬಾಸ್ಮತಿ ಅಕ್ಕಿಯು ದೇಹದ ಅಂಗಾಂಶಗಳನ್ನು ನಿರ್ಮಿಸಲು ಉತ್ತಮವಾಗಿದೆ. ಇದು ಹೆಚ್ಚು ಪೌಷ್ಟಿಕವಾಗಿದ್ದು, ಜೀರ್ಣಿಸಿಕೊಳ್ಳಲು ಸುಲಭ ಮತ್ತು ಅನಾರೋಗ್ಯದ ಸಮಯದಲ್ಲಿ ಆರಾಮದಾಯಕ ಆಹಾರವಾಗಿ ಕಾರ್ಯನಿರ್ವಹಿಸುತ್ತದೆ.

ಬಾಸ್ಮತಿ ಅಕ್ಕಿಯ ಗ್ಲೈಸೆಮಿಕ್ ಸೂಚ್ಯಂಕ:

ಬಾಸ್ಮತಿ ಅಕ್ಕಿಯ ಗ್ಲೈಸೆಮಿಕ್ ಸೂಚ್ಯಂಕ:

ಗ್ಲೈಸೆಮಿಕ್ ಸೂಚ್ಯಂಕವು (ಜಿಐ) ಒಂದು ನಿರ್ದಿಷ್ಟ ಆಹಾರವನ್ನು ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಎಷ್ಟು ಬೇಗನೆ ಏರುತ್ತದೆ ಎಂಬುದರ ಅಳತೆಯಾಗಿದೆ. ಹೆಚ್ಚಿನ ಜಿಐ ಆಹಾರವನ್ನು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಮಧುಮೇಹ , ಹೃದ್ರೋಗ ಮತ್ತು ಬೊಜ್ಜಿನಂತಹ ಸಮಸ್ಯೆಗಳು ಹೆಚ್ಚಾಗುತ್ತದೆ. ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶದ ವಿಮರ್ಶಾತ್ಮಕ ವಿಮರ್ಶೆಗಳು ಹೇಳುವಂತೆ ಬಾಸ್ಮತಿ ಅಕ್ಕಿಯ ಗ್ಲೈಸೆಮಿಕ್ ಸೂಚ್ಯಂಕವು 50 ರಿಂದ 58 ರ ನಡುವೆ ಇರುತ್ತದೆ, ಇದು ಮಧ್ಯಮ ಗ್ಲೈಸೆಮಿಕ್ ಸೂಚ್ಯಂಕದ ಆಹಾರವಾಗಿದೆ. ಇದಲ್ಲದೆ, ಕಂದು ಬಾಸ್ಮತಿ ಅಕ್ಕಿ ಇನ್ನೂ ಕಡಿಮೆ ಜಿಐ ಸೂಚಿಯನ್ನು ಹೊಂದಿದೆ. ಇತರ ಅಕ್ಕಿಗಳು ಗ್ಲೈಸಮಿಕ್ ಸೂಚ್ಯಂಕದಲ್ಲಿ ಹೆಚ್ಚು ಸೂಚಿಯನ್ನು ಹೊಂದಿರುತ್ತದೆ ಎಂಬುದನ್ನು ಗಮನಿಸಬೇಕು.

ಬಾಸುಮತಿ ಅಕ್ಕಿಯ ಆರೋಗ್ಯ ಪ್ರಯೋಜನಗಳು:

ಬಾಸುಮತಿ ಅಕ್ಕಿಯ ಆರೋಗ್ಯ ಪ್ರಯೋಜನಗಳು:

ಮಧುಮೇಹವನ್ನು ನಿರ್ವಹಿಸುವುದು:

ಬಾಸ್ಮತಿ ಅಕ್ಕಿಯಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್‌ಗಳಿದ್ದು, ಜೊತೆಗೆ ಫೈಬರ್ ಹೊಂದಿರುವುದರಿಂದ ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಹೆಚ್ಚಳವನ್ನು ಸುಗಮಗೊಳಿಸುತ್ತದೆ. ಡಯಾಬಿಟಿಕ್ ಅಸೋಸಿಯೇಶನ್ ಆಫ್ ಕೆನಡಾದ ಪ್ರಕಾರ, ಬಾಸ್ಮತಿ ಅಕ್ಕಿಯು ಇತರ ಅಕ್ಕಿ ತಳಿಗಳಿಗಿಂತ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಮಧುಮೇಹ ಇರುವವರಿಗೆ ಉತ್ತಮವಾಗಿದೆ. ಇವುಗಳಲ್ಲದೆ, ಹೆಚ್ಚು ಪ್ರಮಾಣದ ಫೈಬರ್, ಅಮೈಲೇಸ್ ಮತ್ತು ಪ್ರೋಟೀನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಹೃದಯಕ್ಕೆ ಆರೋಗ್ಯಕರ:

ಹೃದಯಕ್ಕೆ ಆರೋಗ್ಯಕರ:

ಬಾಸ್ಮತಿ ಅಕ್ಕಿಯಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳು ಹಾಗೂ ಸೋಡಿಯಂ ಕಡಿಮೆ ಇರುವುದರಿಂದ ಇದು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಆರೋಗ್ಯಕರ ಆಯ್ಕೆಯಾಗಿದೆ. ಇದಲ್ಲದೆ, ಉತ್ತಮ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಮಟ್ಟವನ್ನು ಸುಧಾರಿಸುವ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಇದು ಹೃದಯ ನಾಳಗಳಲ್ಲಿ ಕೊಬ್ಬಿನ ಶೇಖರಣೆಯನ್ನು ತಡೆದು, ಹೃದಯ ಸ್ನಾಯುವಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ.

ಕ್ಯಾನ್ಸರ್ ತಡೆಯುವುದು:

ಕ್ಯಾನ್ಸರ್ ತಡೆಯುವುದು:

ಬಾಸ್ಮತಿ ಅಕ್ಕಿಯಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿರುವ ಫೈಬರ್ ಪ್ರಮಾಣ ಇತರ ಅನೇಕ ಧಾನ್ಯಗಳಿಗಿಂತ 20% ಹೆಚ್ಚಿದೆ. ನಾರಿನಂಶವಿರುವ ಆಹಾರ ಸೇವನೆಯು ಕರುಳಿನ ಕಾರ್ಯವನ್ನು ನಿಯಂತ್ರಿಸುತ್ತದೆ. ಇದರ ಜೊತೆಯಲ್ಲಿ, ಕಂದು ಬಾಸ್ಮತಿ ಅಕ್ಕಿಯ ಸೇವನೆಯು ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಏಕೆಂದರೆ ಫೈಬರ್ಗಳು ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುವುದು.

ತೂಕವನ್ನು ನಿರ್ವಹಿಸುವುದು:

ತೂಕವನ್ನು ನಿರ್ವಹಿಸುವುದು:

ಅಕ್ಕಿಯಿಂದ ತಯಾರಾದ ಆಹಾರ, ತೂಕ ಹೆಚ್ಚಾಗಲು ಪ್ರಮುಖ ಕಾರಣ ಎಂಬ ನಂಬಿಕೆಯಿದೆ. ಆದರೆ ಬಾಸ್ಮತಿ ಅಕ್ಕಿ ನಂಬಲಾಗದಷ್ಟು ಜನರಿಗೆ ಅಧಿಕ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಇದರಲ್ಲಿರುವ ನಾರಿನ ಸಮೃದ್ಧತೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಸಿ, ಹೊಟ್ಟೆ ತುಂಬಿದಂತೆ ಇಡುತ್ತದೆ. ಇದರ ಹೊರತಾಗಿ, ಇದರಲ್ಲಿ ಹೆಚ್ಚಿನ ಪ್ರಮಾಣದ ಅಮಿಲೋಸ್ ಇದ್ದು, ಇದು ತೂಕ ನಷ್ಟವನ್ನು ವೇಗಗೊಳಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುವುದು:

ಬಾಸ್ಮತಿ ಅಕ್ಕಿಯಲ್ಲಿ ಅಧಿಕ ಪ್ರಮಾಣದಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ರಕ್ತನಾಳಗಳನ್ನು ಸಡಿಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಜೊತೆಗೆ ಎಲ್ಲಾ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಬಾಸ್ಮತಿ ಅಕ್ಕಿಯನ್ನು ನಿಯಮಿತವಾಗಿ ಸೇರಿಸುವುದರಿಂದ ಅಧಿಕ ರಕ್ತದೊತ್ತಡ ಇರುವವರಿಗೆ ಹೆಚ್ಚು ಸಹಾಯ ಆಗುವುದು.

ಬಾಸ್ಮತಿ ಅಕ್ಕಿಯ ಪಾಕವಿಧಾನ:

ಬಾಸ್ಮತಿ ಅಕ್ಕಿಯ ಪಾಕವಿಧಾನ:

ಬಾಸ್ಮತಿ ಅಕ್ಕಿ ಖೀರ್:

ಬೇಕಾಗುವ ಪದಾರ್ಥಗಳು:

½ ಕಪ್ ನೆನೆಸಿದ, ಬಾಸ್ಮತಿ ಅಕ್ಕಿ

1-ಲೀಟರ್ ಕೆನೆ ಹಾಲು

6-8 ಕೇಸರಿ ಎಳೆ

10 ಗೋಡಂಬಿ

2 ಚಮಚ ಒಣದ್ರಾಕ್ಷಿ

1 ಚಮಚ ಕತ್ತರಿಸಿದ, ಬಾದಾಮಿ

¼ ಕಪ್ ಸಕ್ಕರೆ

1 ಚಮಚ ಏಲಕ್ಕಿ ಪುಡಿ

ಸ್ವಲ್ಪ ಕತ್ತರಿಸಿದ ಪಿಸ್ತಾ

1 ಚಮಚ ತುಪ್ಪ

ವಿಧಾನ:

  • ಬಾಣಲೆಯಲ್ಲಿ ತುಪ್ಪ ಹಾಕಿ, ಗೋಡಂಬಿ, ಒಣದ್ರಾಕ್ಷಿಗಳನ್ನು ಹುರಿದು ಪಕ್ಕದಲ್ಲಿಡಿ.
  • ಮತ್ತೊಂದು ಪ್ಯಾನ್‌ನಲ್ಲಿ ಹಾಲನ್ನು ಕುದಿಸಿ, ಅಕ್ಕಿಯನ್ನು ತರಿತರಿಯಾಗಿ ಪುಡಿಮಾಡಿ, ಕುದಿಯುವ ಹಾಲಿಗೆ ಸೇರಿಸಿ, ಬೇಯಿಸಿ.
  • ಅದಕ್ಕೆ ಕೇಸರಿ ಎಳೆಗಳು, ಸಕ್ಕರೆ ಸೇರಿಸಿ, ಅನ್ನ ಬೇಯುವವರೆಗೂ ಬೇಯಿಸಿ. ತಳ ಹಿಡಿಯದಂತೆ ಬೆರೆಸುತ್ತಿರಿ. ಕೊನೆಯಲ್ಲಿ, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
  • ಕೊನೆಯದಾಗಿ ಹುರಿದ ಬೀಜಗಳು ಮತ್ತು ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾಗಳಿಂದ ಅಲಂಕರಿಸಿ.
  • ಬಾಸ್ಮತಿ ಅಕ್ಕಿಯ ಅಡ್ಡ ಪರಿಣಾಮಗಳು:

    ಬಾಸ್ಮತಿ ಅಕ್ಕಿ ಅದರ ಶ್ರೀಮಂತ ಬಣ್ಣ ಮತ್ತು ಪರಿಮಳಕ್ಕಾಗಿ ಹೆಚ್ಚು ಮೌಲ್ಯಯುತವಾಗಿದೆ. ಇದನ್ನು ಸೇವಿಸುವುದರಿಂದ ಯಾವುದೇ ನಿರ್ದಿಷ್ಟ ಅಡ್ಡ ಪರಿಣಾಮವಿಲ್ಲ, ಆದರೆ, ನೀವು ಪಾಲಿಶ್ ಮಾಡಿದ ಅಕ್ಕಿಯನ್ನು ಖರೀದಿಸಿದ್ದರೆ, ಸಂಸ್ಕರಣ ಪ್ರಕ್ರಿಯೆಯಿಂದಾಗಿ ಸ್ವಲ್ಪ ಪ್ರಮಾಣದ ಪೌಷ್ಟಿಕಾಂಶದ ಕುಸಿತ ಉಂಟಾಗಿರುತ್ತದೆ. ಅವುಗಳಲ್ಲಿ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು , ಕಬ್ಬಿಣ, ವಿಟಮಿನ್ ಇ ಮತ್ತು ಪ್ರೋಟೀನ್‌ ಮುಖ್ಯವಾದ ಪೋಷಕಾಂಶಗಳಾಗಿವೆ.

English summary

Basmati Rice: Types, Nutrition, Health Benefits, Recipes And Side Effects in Kannada

Here we talking about Basmati Rice: Types, Nutrition, Health Benefits, Recipes And Side Effects in Kannada, read on
X
Desktop Bottom Promotion