For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಮೊಸರು ಅಥವಾ ಹಾಲು? ಯಾವುದು ಉತ್ತಮ?

|

ತೂಕ ಇಳಿಸಿಕೊಳ್ಳಲು ಇಂದಿನ ದಿನಗಳಲ್ಲಿ ವ್ಯಾಯಾಮ, ಔಷಧಿ ಇತ್ಯಾದಿ ಹಲವಾರು ವಿಧಗಳನ್ನು ಪ್ರಯೋಗಿಸುವರು. ಆಹಾರ ಪಥ್ಯದೊಂದಿಗೆ ವ್ಯಾಯಾಮ ಮಾಡುತ್ತಲಿದ್ದರೆ ಆಗ ತೂಕ ಇಳಿಕೆ ಮಾಡಬಹುದು. ಆದರೆ ಕೆಲವರು ಸರಿಯಾಗಿ ವ್ಯಾಯಾಮ ಮಾಡಿದ ಬಳಿಕ ಆಹಾರದಲ್ಲಿ ಯಾವುದೇ ನಿಯಂತ್ರಣ ಇಟ್ಟುಕೊಳ್ಳದ ಕಾರಣ ಮತ್ತೆ ಹಿಂದಿನ ಸ್ಥಿತಿಗೆ ಮರಳುವರು. ಹೀಗಾಗಿ ಪ್ರತಿಯೊಬ್ಬರಿಗೂ ದೇಹದಲ್ಲಿ ಅತಿಯಾಗಿ ಬೆಳೆದಿರುವ ತೂಕ ಇಳಿಸಿಕೊಳ್ಳಲು ಸಾಧ್ಯವಾಗದು. ಆದರೆ ಕೆಲವು ಆಹಾರ ಪದಾರ್ಥಗಳನ್ನು ಬಳಸಿಕೊಂಡು ತೂಕ ಇಳಿಸಿಕೊಳ್ಲಬಹುದು. ಇದರಲ್ಲಿ ಮುಖ್ಯವಾಗಿ ಮೊಸರು ಹಾಗೂ ಹಾಲು, ಇದರಲ್ಲಿ ತೂಕ ಇಳಿಸಲು ಯಾವುದು ಒಳ್ಳೆಯದು ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯುವ.

weight loss

ಹಾಲು ಮತ್ತು ಮೊಸರಿನಲ್ಲಿ ನಮ್ಮ ದೇಹಕ್ಕೆ ಯಾವುದು ಒಳ್ಳೆಯದು ಎನ್ನುವ ಬಗ್ಗೆ ನಮಗೆ ತುಂಬಾ ಅಚ್ಚರಿಯಾಗುತ್ತದೆ. ನಮ್ಮ ದೇಹಕ್ಕೆ ಹಾಲು ಹಾಗೂ ಮೊಸರು ಎರಡೂ ಒಳ್ಳೆಯದು ಎಂದು ಹಿರಿಯರು ಹೇಳಿದ್ದಾರೆ. ಆದರೆ ಇಂಟರ್ನೆಟ್ ನಲ್ಲಿ ನಡೆಸಿರುವ ಹುಡುಕಾಟದ ಪ್ರಕಾರ ಕೇವಲ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಹಾಲಿನಿಂದ ತಯಾರಿಸಿರುವ ಸ್ಮೂಥಿ ಒಳ್ಳೆಯದೇ ಅಥವಾ ಮೊಸರು ಒಳ್ಳೆಯದೇ ಎನ್ನುವ ಮತ್ತೊಂದು ಪ್ರಶ್ನೆಯು ಸಾಕಷ್ಟು ಗೊಂದಲಕ್ಕೆ ಎಡೆಮಾಡಿ ಕೊಡುವುದು. ನಿಮಗೆ ಆರೋಗ್ಯ ಮತ್ತು ತೂಕ ಇಳಿಸಿಕೊಳ್ಳುವ ಗುರಿ ಇದ್ದರೆ ಆಗ ನೀವು ಮೊಸರಿನ ಸ್ಮೂಥಿ ಬಳಸಿಕೊಳ್ಳುವುದು ತುಂಬಾ ಸೂಕ್ತ. ಇಲ್ಲಿ ಐದು ಕಾರಣಗಳನ್ನು ನಾವು ನಿಮಗೆ ತಿಳಿಸುತ್ತೇವೆ.

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ಮೊಸರಿನಲ್ಲಿ ಇರುವಂತಹ ಬ್ಯಾಕ್ಟೀರಿಯಾವು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿರಲಿದೆ. ಇದೇ ಕಾರಣದಿಂದಾಗಿ ನಾವು ಅನಾರೋಗ್ಯಕ್ಕೆ ಒಳಗಾದ ವೇಳೆ ಮೊಸರು ಹಾಗೂ ಅನ್ನ ಸೇವಿಸಲು ಹೇಳುವರು. ಹಾಲನ್ನು ದೂರಿವಿರಿಸಲಾಗುವುದು. ಮೊಸರಿನಿಂದ ಮಾಡಿರುವಂತಹ ಹಣ್ಣಿನ ಸ್ಮೂಥಿಯು ವ್ಯಾಯಾಮದ ಬಳಿಕ ಸೇವನೆಗೆ ಇದು ಅತ್ಯುತ್ತಮವಾಗಿರುವುದು.

ಆರೋಗ್ಯಕಾರಿ ಹೊಟ್ಟೆಗಾಗಿ

ಆರೋಗ್ಯಕಾರಿ ಹೊಟ್ಟೆಗಾಗಿ

ಆಹಾರ ಕ್ರಮದಲ್ಲಿ ಹೆಚ್ಚಾಗಿ ಸಂಸ್ಕರಿತ ಆಹಾರ ಸೇವನೆ ಮಾಡುವ ಕಾರಣದಿಂದಾಗಿ ಹೊಟ್ಟೆಯ ಸಮಸ್ಯೆಗಳು ಕಂಡುಬರುವುದು ಹೆಚ್ಚು. ಮೊಸರಿನ ಸ್ಮೂಥಿಗೆ ಪಾಲಕದಂತಹ ತರಕಾರಿ ಹಾಕಿಕೊಳ್ಳುವುದು ಹೊಟ್ಟೆಗೆ ತುಂಬಾ ಒಳ್ಳೆಯದು. ಇದನ್ನು ಎರಡು ದಿನಕ್ಕೊಮ್ಮೆ ಸೇವಿಸಬೇಕು.

Most Read: ದೇಹದ ತೂಕ ಇಳಿಸಿಕೊಳ್ಳಲು ಬಯಸುವಿರಾ? ಅನ್ನ ಸೇವಿಸುವಾಗ ಈ ಸಂಗತಿಗಳು ನೆನಪಿರಲಿ

ಹಾಲು ಮತ್ತು ಹಣ್ಣುಗಳು ಜತೆಯಾಗಿ ಸರಿ ಹೊಂದಿಬರಲ್ಲ

ಹಾಲು ಮತ್ತು ಹಣ್ಣುಗಳು ಜತೆಯಾಗಿ ಸರಿ ಹೊಂದಿಬರಲ್ಲ

ಹಾಲು ನಿಮ್ಮ ದೇಹಕ್ಕೆ ಕೆಟ್ಟದು ಎಂದು ಹೇಳುತ್ತಿಲ್ಲ. ಆದರೆ ಹಣ್ಣುಗಳು ಮತ್ತು ತರಕಾರಿಗಳ ಜತೆಗೆ ಹಾಲನ್ನು ಸೇರಿಸಿಕೊಂಡಾಗ ಅದು ಒಳ್ಳೆಯದಲ್ಲ. ನೀವು ಹಾಲಿನೊಂದಿಗೆ ಪಪ್ಪಾಯಿ ಸೇವನೆ ಮಾಡಿದರೆ ಅದರಿಂದ ಹೊಟ್ಟೆಯಲ್ಲಿ ತಳಮಳ ಶುರುವಾಗಬಹುದು. ಹಾಲನ್ನು ಹಾಗೆ ಸೇವಿಸಿದರೆ ಒಳ್ಳೆಯದು. ಇತರ ವಸ್ತುಗಳೊಂದಿಗೆ ಅದರ ಸೇವನೆ ಮಾಡಿದರೆ ಅದು ಸರಿ ಹೊಂದಿ ಬರಲ್ಲ.

ಮೊಸರು ಪ್ರೊಬಯೊಟಿಕ್

ಮೊಸರು ಪ್ರೊಬಯೊಟಿಕ್

ಜೀರ್ಣಕ್ರಿಯೆ ವ್ಯವಸ್ಥೆಗೆ ಪ್ರೊಬಯೊಟಿಕ್ ಅತೀ ಅಗತ್ಯವಾಗಿ ಬೇಕು. ಮೊಸರು ತುಂಬಾ ಅಗ್ಗ ಮತ್ತು ಸುಲಭವಾಗಿ ಸಿಗುವಂತಹ ಪ್ರೊಬಯೊಟಿಕ್ ಆಗಿದೆ. ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿ ಇಡಬೇಕು ಎಂದಾದರೆ ಆಗ ನೀವು ಮೊಸರಿನ ಸ್ಮೂಥಿಯನ್ನು ತಯಾರಿಸಿಕೊಂಡು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

Most Read: ಕೆಮ್ಮು ಹಾಗೂ ಎದೆಯಲ್ಲಿ ಕಫ ಹೆಚ್ಚಾಗಿದ್ದರೆ- ಒಂದು ಗ್ಲಾಸ್ ಅನಾನಸ್ ಜ್ಯೂಸ್ ಕುಡಿಯಿರಿ

ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಿಗೆ ಅತ್ಯುತ್ತಮ

ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಿಗೆ ಅತ್ಯುತ್ತಮ

ಲ್ಯಾಕ್ಟೋಸ್ ಅಸಹಿಷ್ಣುತೆ ಇರುವಂತಹ ಜನರಿಗೆ ದೊಡ್ಡ ಸಮಸ್ಯೆಯೆಂದರೆ ಅವರಿಗೆ ಆಹಾರದ ಆಯ್ಕೆಯು ತುಂಬಾ ಕಡಿಮೆ ಆಗಿರುವುದು. ಸ್ಮೂಥಿಯನ್ನು ಸೋಯಾ ಮೊಸರು, ಗ್ರೀಕ್ ಮೊಸರು ಅಥವಾ ಬಾದಾಮಿ ಮೊಸರಿನಿಂದ ತಯಾರಿಸಿಕೊಳ್ಳಬಹುದು. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಜನರಿಗೆ ಇದರಿಂದ ನೆರವಾಗುವುದು ಮತ್ತು ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಕೂಡ ಇದರಿಂದ ಲಭ್ಯವಾಗುವುದು.

English summary

Which is better for weight loss: Curd or milk?

We have often wondered about this question, which is better for our body, curd or milk? While our grandparents would have told us to have both, Google may tell us to have only one. What further complicates this question is whether a smoothie made out of milk is healthier than the yoghurt one or vice versa. Well, research suggests that yoghurt smoothie is a better option to go for if health and weight loss are your aims.
X
Desktop Bottom Promotion