For Quick Alerts
ALLOW NOTIFICATIONS  
For Daily Alerts

ಸಣ್ಣ ವಯಸ್ಸಿನಲ್ಲಿ ಸೆಕ್ಸ್‌ನಲ್ಲಿ ಭಾಗಿಯಾದರೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ನೋಡಿ...

|

ಅತೀ ಸಣ್ಣ ವಯಸ್ಸಿನಲ್ಲಿ ಹುಡುಗಿಯರು ಸೆಕ್ಸ್ ನಲ್ಲಿ ಭಾಗಿಯಾದರೆ ಅದರಿಂದ ಹಲವಾರು ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ. ಯಾಕೆಂದರೆ ಸಣ್ಣ ವಯಸ್ಸಿನಲ್ಲಿ ಗರ್ಭ ಧರಿಸಿದರೆ ಅದರಿಂದ ದೈಹಿಕವಾಗಿ ಹಲವಾರು ಬದಲಾವಣೆಗಳು ಆಗಬಹುದು. ಇದು ಮಾನಸಿಕವಾಗಿ ಹುಡುಗಿಯ ಮೇಲೆ ಪರಿಣಾಮ ಬೀರಬಹುದು. ಇಷ್ಟು ಮಾತ್ರವಲ್ಲದೆ ಭವಿಷ್ಯದಲ್ಲಿ ಕೂಡ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಸೆಕ್ಸ್ ನಲ್ಲಿ ಭಾಗಿಯಾದರೆ ಗರ್ಭಕಂಠದ ಕ್ಯಾನ್ಸರ್ ಗೆ ತುತ್ತಾಗುವಂತಹ ಸಾಧ್ಯತೆಯು ಇಮ್ಮಡಿಯಾಗುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

What Are the Risks of Having Sex at a Young Age?

ತುಂಬಾ ಸಣ್ಣ ವಯಸ್ಸಿನಲ್ಲಿ ಸೆಕ್ಸ್ ನಲ್ಲಿ ಭಾಗಿಯಾದರೆ ಆಗ ಕಾಯಿಲೆಗಳು ಬರುವಂತಹ ಅಪಾಯವು ಅತಿಯಾಗಿ ಇರುವುದು ಎಂದು ಅಧ್ಯಯನ ತಿಳಿಸಿದೆ ಮತ್ತು ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಸೆಕ್ಸ್ ನಲ್ಲಿ ಭಾಗಿಯಾಗಬಾರದು ಎಂದು ಎಚ್ಚರಿಕೆ ಕೂಡ ನೀಡಿದೆ. ಇಂಗ್ಲೆಂಡ್ ನಲ್ಲಿ ಮಹಿಳೆಯರು 25ರ ಹರೆಯದ ತನಕ ಎನ್ ಎಚ್ ಎಸ್ ಸ್ಕ್ರೀನಿಂಗ್ ಗೆ ಅರ್ಹತೆ ಪಡೆಯುವುದಿಲ್ಲ. ಲೈಂಗಿಕವಾಗಿ ಹರಡುವಂತಹ ಎಚ್ ಪಿವಿ ಎನ್ನುವ ವೈರಸ್ ಗರ್ಭಕಂಠದ ಸೋಂಕು ಉಂಟು ಮಾಡುವುದು. ಇದರಿಂದ 15ರ ಹರೆಯದಲ್ಲಿ ಹುಡುಗಿಯರು ಸೆಕ್ಸ್ ನಲ್ಲಿ ಭಾಗಿಯಾದರೂ ಅವರು ಪರೀಕ್ಷೆ ಮಾಡುವಾಗ ಇನ್ನು ಹತ್ತು ವರ್ಷ ಕಳೆದಿರುವುದು.

ಭಾವನಾತ್ಮಕವಾಗಿ ಹಾನಿಯಾಗುವುದು

ಭಾವನಾತ್ಮಕವಾಗಿ ಹಾನಿಯಾಗುವುದು

ಸಣ್ಣ ವಯಸ್ಸಿನಲ್ಲಿ ಸೆಕ್ಸ್ ಸಂಬಂಧಿಸಿದ ವಿಚಾರ ತಿಳಿಯುವುದು, ಹಸ್ತಮೈಥುನ ಮತ್ತು ಯಾವುದೇ ಬೆದರಿಕೆ ಇಲ್ಲದೆ ಸ್ವಯಂ ಆಗಿ ಅದರ ಸುಖ ಪಡೆಯುವುದರಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ನಕಾರಾತ್ಮಕವಾದ ಪರಿಣಾಮ ಬೀರುವುದಿಲ್ಲ. ಆದರೆ ಸಣ್ಣ ವಯಸ್ಸಿನಲ್ಲಿ ಭೀತಿಯಿಂದ ಕೂಡಿರುವಂತಹ ಲೈಂಗಿಕ ಅನುಭವಗಳು ಆಗಿದ್ದರೆ,ಉದಾಹರಣೆಗೆ ದೊಡ್ಡ ವಯಸ್ಸಿನವರಿಂದ ಲೈಂಗಿಕ ದೌರ್ಜನ್ಯ, ನಾಚಿಕೆ, ಶಿಕ್ಷೆ ಅಥವಾ ಅತ್ಯಾಚಾರದಂತಹ ಘಟನೆಗಳು ನಡೆದಿದ್ದರೆ ಆಗ ಇದರಿಂದಾಗಿ ಭವಿಷ್ಯದಲ್ಲಿ ಅದು ಲೈಂಗಿಕ ಸಮಸ್ಯೆಗೆ ಕಾರಣವಾಗಬಹುದು.

Most Read: ಕಿಸ್ಸಿಂಗ್‌ನಿಂದಲೂ ಇಂತಹ ಖತರ್ನಾಕ್ ಕಾಯಿಲೆಗಳು ಹರಡಬಹುದಂತೆ!

ಗರ್ಭಧಾರಣೆಯ ಅಪಾಯ

ಗರ್ಭಧಾರಣೆಯ ಅಪಾಯ

ಮಕ್ಕಳು ಅಶ್ಲೀಲವಾಗಿರುವಂತಹ ಅಂಶಗಳನ್ನು ನೋಡಿದರೆ ಮತ್ತು ಸೆಕ್ಸ್ ನಲ್ಲಿ ಭಾಗಿಯಾದರೆ ಆಗ ಅವರು ತುಂಬಾ ಅಪಾಯಕಾರಿ ಸೆಕ್ಸ್ ನಲ್ಲಿ ಭಾಗಿಯಾಗುವಂತಹ ಅಪಾಯವು ಅತಿಯಾಗಿರುವುದು. 13ರ ಹರೆಯದಲ್ಲಿ ಸೆಕ್ಸ್ ನಲ್ಲಿ ಭಾಗಿಯಾಗುವಂತಹ ಮಕ್ಕಳು ಬಹು ಸಂಗಾತಿಗಳನ್ನು ಹೊಂದಿ ಅಸುರಕ್ಷಿತ ಸೆಕ್ಸ್ ನಲ್ಲಿ ಭಾಗಿಯಾಗುವ ಮತ್ತು ಡ್ರಗ್ಸ್ ಹಾಗೂ ಆಲ್ಕೋಹಾಲ್ ಗೆ ದಾಸರಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಹೇಳಿವೆ. ಶೇ.66ರಷ್ಟು ಬಾಲಕರು ಹಾಗೂ ಶೇ.40ರಷ್ಟು ಹುಡುಗಿಯರು ತಾನು ಮಾಧ್ಯಮಗಳಲ್ಲಿ ನೋಡಿರುವಂತಹದ್ದನ್ನು ನೈಜ ಜೀವನದಲ್ಲಿ ಅನುಭವಿಸಲು ಬಯಸುವರು. ಇದರಿಂದಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಲೈಂಗಿಕ ರೋಗಗಳು ಮತ್ತು ಬೇಡದ ಗರ್ಭಧಾರಣೆ ಸಂಭವ ಇರುವುದು.

ಈ ನಡವಳಿಕೆಯು ಬರಲು ಕಾರಣವೇನು?

ಈ ನಡವಳಿಕೆಯು ಬರಲು ಕಾರಣವೇನು?

ಮಧ್ಯಪಾನ, ಡ್ರಗ್ಸ್ ಬಳಕೆ ಅಥವಾ ಹಿಂಸೆಗೆ ಪ್ರಚೋದಿಸುವಂತಹ ಸಿನಿಮಾ ಅಥವಾ ಸಂಗೀತ ಕೇಳುವಂತಹ ಸಣ್ಣ ವಯಸ್ಸಿನವರು ಇಂತಹ ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗುವರು ಎಂದು ಅಧ್ಯಯನಗಳು ಹೇಳಿವೆ. ಹದಿಹರೆಯದವರಲ್ಲಿ ಸಿನಿಮಾಗಳು ಲೈಂಗಿಕ ಮನೋಭಾವ ಮತ್ತು ನಡವಳಿಕೆಗೆ ಪ್ರೇರಣೆಯಾಗುವುದು ಎಂದು 2012ರಲ್ಲಿ ನಡೆಸಿರುವಂತಹ ಅಧ್ಯಯನವೊಂದು ವರದಿ ಮಾಡಿದೆ. ಸಿನಿಮಾಗಳಲ್ಲಿ ಇರುವಂತಹ ಲೈಂಗಿಕ ಅಂಶಗಳನ್ನು ಹದಿಹರೆಯದವರು ಹೆಚ್ಚು ನೋಡಿದಂತೆ ಅವರು ಸೆಕ್ಸ್ ನಲ್ಲಿ ಬೇಗನೆ ಭಾಗಿಯಾಗುವ ಸಾಧ್ಯತೆಗಳು ಇರುವುದು ಮತ್ತು ಇದರಿಂದ ಅವರು ಸಾಮಾನ್ಯ ಮತ್ತು ಅಸುರಕ್ಷಿತ ಸೆಕ್ಸ್ ಗೆ ಒಳಗಾಗುವರು.

ಸಿನಿಮಾ!

ಸಿನಿಮಾ!

ಸಿನಿಮಾದಲ್ಲಿ ಲೈಂಗಿಕ ಅಂಶಗಳನ್ನು ವೀಕ್ಷಿಸುವಂತಹ ಹುಡುಗರು ತಾವು ಇದನ್ನು ನೋಡಿದ ಎರಡು ವರ್ಷಗಳ ಒಳಗಡೆ ಮುಖ ಮೈಥುನ ಅಥವಾ ಲೈಂಕಿಕ ಕ್ರಿಯೆಯಲ್ಲಿ ಭಾಗಿಯಾಗುವಂತಹ ಸಾಧ್ಯತೆಯು ಇತರ ಹುಡುಗರಗಿಂತ ಹೆಚ್ಚಾಗಿರುವುದು ಎಂದು ಇನ್ನೊಂದು ಅಧ್ಯಯನವು ಹೇಳಿದೆ. ಸಿನಿಮಾದಲ್ಲಿ ಲೈಂಗಿಕ ಅಂಶಗಳನ್ನು ನೋಡುವಂತಹ ಹದಿಹರೆಯದ ಹುಡುಗಿಯರು ಮುಖ ಮೈಥುನದಲ್ಲಿ ಭಾಗಿಯಾಗುವ ಸಾಧ್ಯತೆಯು ಎರಡು ಪಟ್ಟು ಮತ್ತು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ಸಾಧ್ಯತೆಯು ಒಂದುವರೆ ಪಟ್ಟು ಹೆಚ್ಚಾಗಿರುವುದು ಎಂದು ಅಧ್ಯಯನಗಳು ತಿಳಿಸಿವೆ. ಲೈಂಗಿಕವಾಗಿ ಪ್ರೇರಣೆ ನೀಡುವಂತಹ ಸಂಗೀತ ಆಲಿಸುವಂತಹ ಸಣ್ಣ ವಯಸ್ಸಿನ ಮಕ್ಕಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯು ಇತರ ಮಕ್ಕಳಿಗಿಂತ ಅಧಿಕವಾಗಿರುವುದು ಎಂದು ಅಧ್ಯಯನಗಳು ಹೇಳಿವೆ.

Most Read: ಜ್ಯೋತಿಷ್ಯಶಾಸ್ತ್ರ: ನಿಮಗೆ ಸರ್ಕಾರಿ ಕೆಲ್ಸ ಬೇಕಂದ್ರೆ ತಪ್ಪದೇ ಹೀಗೆ ಮಾಡಿ...

ಮಾಧ್ಯಮಗಳಲ್ಲಿ ಲೈಂಗಿಕ ಅಂಶ

ಮಾಧ್ಯಮಗಳಲ್ಲಿ ಲೈಂಗಿಕ ಅಂಶ

ಮಾಧ್ಯಮಗಳಲ್ಲಿ ಲೈಂಗಿಕ ಅಂಶಗಳನ್ನು ನೋಡಿದ ಬಳಿಕ ಹದಿಹರೆಯದವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಯಾಕೆ? ಕೆಲವೊಂದು ಪುಸ್ತಕಗಳು ಹಾಗೂ ಸಿನಿಮಾಗಳನ್ನು ತೋರಿಸಿ ಶೈಕ್ಷಣಿಕವಾಗಿ ಮಕ್ಕಳು ಅದರಿಂದ ಕೆಲವೊಂದು ಅಂಶಗಳನ್ನು ಕಲಿಯಲಿ ಎಂದು ನಾವು ಬಯಸುತ್ತೇವೆ. ಅದೇ ರೀತಿಯಾಗಿ ಸಿನಿಮಾದಲ್ಲಿ ಇರುವಂತಹ ಲೈಂಗಿಕ ಅಂಶಗಳು ಕೂಡ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುವುದು. ಮಾಧ್ಯಮಗಳಲ್ಲಿ ಬರುವಂತಹ ಸಂದೇಶದಿಂದ ಲೈಂಗಿಕ ಅನುಭವವು ತುಂಬಾ ಸಾಮಾನ್ಯ, ಅಸುರಕ್ಷಿತ ಮತ್ತು ಪರಿಣಾಮವಿಲ್ಲದ ಎಂದು ಲೈಂಗಿಕ ಪ್ರೇರಣೆ ನೀಡುವುದು. ಇದರಿಂದಾಗಿ ಮಕ್ಕಳು ಭಾವನಾತ್ಮಕ, ಸಾಮಾಜಿಕ ಅಥವಾ ಬೌದ್ಧಿಕವಾಗಿ ತಯಾರಾಗುವ ಮೊದಲೇ ಮಕ್ಕಳು ಲೈಂಗಿಕ ಚಟುವಟಿಕೆಗಳಲ್ಲ ತೊಡಗುವರು.

English summary

What Are the Risks of Having Sex at a Young Age?

Women double the risk of developing cervical cancer if they have sex at an early age, warn researchers. A study shows they are at greater risk from the disease by becoming sexually active at a young age, prompting campaigners to repeat calls for the screening age limit to be lowered.
X
Desktop Bottom Promotion